ತುಮಕೂರು | ಮನ-ಮನೆಗೂ ಸಂವಿಧಾನ ಕಾರ್ಯಕ್ರಮಕ್ಕೆ ಚಾಲನೆ

Date:

ದೇಶದಲ್ಲಿ ಸಮಾನತೆ, ಸ್ವಾತಂತ್ರ್ಯ ಬಾತೃತ್ವದ ಮಾನವ ಘನತೆ ಹಾಗೂ ಸಾಮಾಜಿಕ ನ್ಯಾಯವನ್ನು ಒಳಗೊಂಡ ಆಶಯಗಳನ್ನು ಸಂವಿಧಾನ ಹೊಂದಿದ್ದು ಈ ಆಶಯವನ್ನು ತುಮಕೂರಿನಲ್ಲಿ ಜನರ ಮನ-ಮನೆಗಳಿಗೆ ತಲುಪಿಸುವ ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನು ಗಟ್ಟಿ ಮಾಡಲು ಹೊರಟಿರುವುದು ಶ್ಲಾಘನೀಯ ಎಂದು ಹಿರಿಯ ಸಿವಿಲ್ ನ್ಯಾಯದೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ  ನೂರುನ್ನಿಸಾ ತಿಳಿಸಿದರು

ತುಮಕೂರು ನಗರದ ಬಾಪೂಜಿ ರವೀಂದ್ರ ಕಲಾನಿಕೇತನ ಕಾಲೇಜಿನಲ್ಲಿ  ತುಮಕೂರು ಪ್ರಗತಿಪರ ಸಂಘಟನೆಗಳ ಒಕ್ಕೂಟ, ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಸಂವಿಧಾನ ಸ್ನೇಹಿ ಬಳಗ ಬೆಂಗಳೂರು ಸಹಯೋಗದಲ್ಲಿ ನಡೆದ ಮನ-ಮನೆಗೂ ಸಂವಿಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 

ಭಾರತೀಯರಿಗೆ ನಾಗರೀಕ ಹಕ್ಕುಗಳ ಶ್ರೇಷ್ಠತೆಯನ್ನು ನಮ್ಮ ಸಂವಿಧಾನ ನೀಡುವ ಮೂಲಕ ಶಕ್ತಿಯನ್ನು ನೀಡಿದೆ, ಮುಟ್ಟಿಸಿಕೊಳ್ಳದಂತಹ ಇತಿಹಾಸ ಇರುವ ಜನರನ್ನು ಇಂದು ಸಂವಿಧಾನ ಅಪ್ಪಿಕೊಳ್ಳುವಂತೆ ಮಾಡಿದೆ, ಸಂವಿಧಾನ ಕೆಳಸ್ಥರದ ಸಮಾಜದಲ್ಲಿ ಬಹಳಷ್ಟು ಬದಲಾವಣೆಯನ್ನು ತಂದಿದೆ. ಹಲವಾರು ವಿಷಯಗಳಿಂದ ಮಹಿಳೆಯರ ಸಮಸ್ಯೆಗಳು ಅಸ್ಪೃಶ್ಯತೆ ನಿವಾರಣೆ ಮೇಲೆ ಬೆಳಕು ಚೆಲ್ಲಿದೆ ಸ್ತ್ರಿಯರ ಅಸ್ಮಿತೆಯಾದ ಮುಟ್ಟನ್ನು ಕೀಳಾಗಿ ನೋಡುವ ಸಮಾಜದ ಅನಾಗರೀಕತೆಯನ್ನು ಹೋಗಲಾಡಿಸಿ ಸಂವಿಧಾನ ನಾಗರೀಕ ಸಮಾಜ ಕಟ್ಟಲು ಪ್ರೇರೇಪಣೆಯಾಗಿದೆ. ಆಧುನಿಕ ಕಾಲದಲ್ಲಿಯು ಗೊಲ್ಲರಹಟ್ಟಿಯಲ್ಲಿ ಮಹಿಳೆಯರ ಪರಿಸ್ಥಿತಿ ಭಯಾನಕವಾಗಿದೆ. ಸಂವಿಧಾನದ ಮೂಲಕ ಕಾನೂನು ಜಾರಿ ಮಾಡಿ ಸಮಾನತೆಯನ್ನು ಸಾಧಿಸಲು ಶ್ರೇಣಿಕರಣ ವ್ಯವಸ್ಥೆಯ ಅಸಮಾನತೆಯನ್ನು ನಿವಾರಣೆ ಮಾಡಲು 75 ವರ್ಷಗಳು ಕಳೆದಿದೆ, ಎಲ್ಲಾ ಧರ್ಮಗಳಲ್ಲಿ ಮನಷ್ಯರನ್ನು ಪ್ರೀತಿಯಿಂದ ಗೌರವಿಸಬೇಕೆಂಬ ಭೋದನೆಯನ್ನು ಮಾಡಿದೆ ಹಾಗಾಗಿ ಸಂವಿಧಾನ ಸಾರ್ಥಕತೆಯಾಗಬೇಕಾದರೆ ಕಟ್ಟಕಡೆಯ ವ್ಯಕ್ತಿಯು ಸಂವಿಧಾನ ಶಿಕ್ಷಣ ಪಡೆಯಬೇಕು ಎಂದರು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1002393939

ಸಾಮಾಜಿಕ ಹೋರಾಟಗಾರ ಮತ್ತು ಅಂಕಣಕಾರ ಆದ ಶಿವಸುಂದರ್  ಮಾತನಾಡಿ ನವೆಂಬರ್ 26ಕ್ಕೆ ಸಂವಿಧಾನ ಅರ್ಪಣೆಯಾಗಿ 75 ವರ್ಷ ಆಗುತ್ತಿದೆ ಸಂವಿಧಾನ ಎಲ್ಲರಿಗೂ ಒಂದೇ ಮತದ ಹಕ್ಕನ್ನು ನೀಡಿದೆ ಪ್ರಜಾತಂತ್ರ ಬರೀ ವೋಟ್ ಅಲ್ಲ. ದೇಶದಲ್ಲಿರುವ ಜನರಿಗೆ ತೀರ್ಮಾನಿಸುವ ಅಧಿಕಾರ ನೀಡುವುದಾಗಿದೆ ಆದರೆ ಈ ಅಧಿಕಾರ ಇಂದು ಯಾವ ಸಂವಿಧಾನವನ್ನು ದ್ವೇಷಿಸುವವರ ಕೈಯಲ್ಲಿ ಸಿಕ್ಕಿರುವುದು ವಿಪರ್ಯಾಸವಾಗಿದೆ. ಏಕೆಂದರೆ ಇಂದು ಮನ-ಮನೆಗೂ ಧ್ವೇಷ ಬಿತ್ತುವ ಸಂದರ್ಭದಲ್ಲಿ ಸಾಮಾನ್ಯ ಜನರ ಮನಕ್ಕೆ ಮತ್ತು ಮನೆಗೆ ಸಂವಿಧಾನ ತಲುಪಿಸಲು ಹೊರಟಿರುವುದು ವಿಶೇಷ ಯಾವ ಜನರಿಗೆ ಸಂವಿಧಾನದ ಅಗತ್ಯವಿದೆಯೇ ಆ ಜನರ ಜೊತೆಯಲ್ಲಿದ್ದಾಗ ಮಾತ್ರ ಶಕ್ತಿ ಹೆಚ್ಚಾಗುತ್ತದೆ. ಸ್ಲಂ ಇರದ ಭಾರತ ಎಲ್ಲರಿಗೂ ಅವಕಾಶ ನೀಡುವ ಭಾರತ, ಸಮಾನ ಶಿಕ್ಷಣ ನೀಡುವ ಭಾರತ, ನಮ್ಮ ಕನಸ್ಸಾಗಬೇಕು, ಬಡತನ ಇರುವ ಕಡೆ ಜಾತಿಯಿರುವ ಕಡೆ ಪ್ರಜಾಪ್ರಭುತ್ವ ಇರುವುದಿಲ್ಲ, ಮನುಸ್ಮೃತಿ ಜಾತಿ ವ್ಯವಸ್ಥೆಯಲ್ಲಿ ಭಾರತದ ಆಡಳಿತ ವ್ಯವಸ್ಥೆ ಮಾಡುತ್ತಿದೆ, ಹುಟ್ಟಿನ ಮೇಲೆ ಮನುಸ್ಮೃತಿ ಅಧಿಕಾರ ನೀಡಿದರೇ ನಮ್ಮ ಸಂವಿಧಾನ ಜನರ ಭವಿಷ್ಯವನ್ನು ತೀರ್ಮಾನಿಸುತ್ತದೆ. ಎಲ್ಲರಿಗೂ ಅವಕಾಶವನ್ನು ಕಲ್ಪಿಸುವುದು ಸರ್ಕಾರಗಳು ಮಾಡಬೇಕಿದೆ ಇದು ಸಂವಿಧಾನದ ಆಶಯವು ಸಹ ಆಗಿದೆ ಎಂದರು

ಸಂವಿಧಾನವನ್ನು ವಿರೋಧಿಸುವವರು ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ ನಮ್ಮನ್ನು ದೈನೇಸಿ ಸ್ಥಿತಿಯಲ್ಲಿಟ್ಟರೆ ನಾವು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಲು ಸಾಧ್ಯವಾಗಲ್ಲ, ನಮ್ಮ ದೇಶದ ವಿದ್ಯೇ ತೀರ್ಮಾನಿಸುವ ಅಧಿಕಾರವನ್ನು ಜನರಿಗೆ ಕೆಲವೊಂದು ಗ್ಯಾರಂಟಿಗಳನ್ನು ಸಂವಿಧಾನ ನೀಡಿದೆ ಆದರೆ ಇತ್ತೀಚೆಗೆ ಸಕರ್ಾರಗಳು ನೆಪ ಮಾತ್ರಕ್ಕೆ ಗ್ಯಾರಂಟಿಗಳನ್ನು ನೀಡಿ ಜನರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಹೊರಟಿರುವುದು. ಜನಕಲ್ಯಾಣಕ್ಕೆ ವಿರುದ್ಧವಾಗಿದೆ. ನವೆಂಬರ್ 26ರಿಂದ ಡಿಸೆಂಬರ್ 6 ರವರೆಗೆ ಆರ್ಎಸ್ಎಸ್ ಸಂವಿಧಾನ ಸಮ್ಮಾನ್ ಅಭಿಯಾನ ಮಾಡಲು ಹೊರಟಿರುವುದು ದೃತರಾಷ್ಟ್ರ ಆಲಿಂಗನವಾಗಿದ್ದು ಈ ದೇಶಕ್ಕೆ ಸನಾತನ ಬ್ರಾಹ್ಮಣವಾದವನ್ನು ಪ್ರತಿಪಾಧನೆ ಮಾಡಲು ಹೋರಟಿರುವ ಆರ್.ಎಸ್.ಎಸ್ ಬಗ್ಗೆ ಎಚ್ಚರವಾಗಿರಬೇಕು 5 ದಿನದಕ್ಕೆ ಮಾತ್ರ ನಮ್ಮ ಅಭಿಯಾನ ಆಗದೇ ವರ್ಷಪೂರ್ತಿ ಸಂವಿಧಾನ ಜನಾಂದೋಲನವನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎಂದರು.

1002393747

ಹಿರಿಯ ಹೋರಾಟಗಾರ ಕೆ.ದೊರೈರಾಜ್ ಮಾತನಾಡಿ ನಾವು ಪ್ರತೀ ಮನ-ಮನೆಗೂ ಸಂವಿಧಾನವನ್ನು ತೆಗೆದುಕೊಂಡು ಹೋಗಬೇಕೆಂದರೆ ಧ್ವೇಷವನ್ನು ಅಳಿಸಲು ಪ್ರೀತಿಯಿಂದ ಒಬ್ಬೋರಿಗೊಬ್ಬರು ಮಾತನಾಡಿಕೊಳ್ಳುವಂತಹ ವಾತಾವರಣವನ್ನು ದೇಶದಲ್ಲಿ ನಿರ್ಮಿಸಬೇಕು ಎಂದರು

ವೇದಿಕೆಯಲ್ಲಿ ಮುಖ್ಯಭಾಷಣಕ್ಕೆ ಪ್ರತಿಕ್ರಿಯಿಸಿ ಡಾ.ಅರುಂಧತ್ತಿ, ಎಐಟಿಸಿಯ ಗಿರೀಶ್, ಎಐಎಂಎಸ್ಎಸ್ ನ ಕಲ್ಯಾಣಿ, ಸಾವಿತ್ರಿ ಬಾಯಿಪುಲೆ ಸಂಘಟನೆಯ ಅನುಪಮಾ, ದಸಂಸದ ಕೃಷ್ಣಪ್ಪ ಮೆಲ್ಲದಮಡು, ಪಿಎನ್ ರಾಮಯ್ಯ, ಚೋಳೂರ್ಶಿವನಂಜಪ್ಪ, ಭರತ್ ಮೆಲ್ಲದಮಡು, ವಕೀಲರಾದ ಶಿವಣ್ಣ,  ಎಪಿಸಿಆರ್ ನ ತಾಜುದ್ದೀನ್ ಷರೀಫ್ ಮಾತನಾಡಿದರು.

ಅಶ್ವಿನಿಬೋದ್ ಸಂವಿಧಾನ ಪೀಠಿಕೆಯನ್ನು ಪ್ರಸ್ತಾವಿಕವಾಗಿ ಪೂರ್ಣರವಿಶಂಕರ್, ಸ್ವಾಗತವನ್ನು ಅರುಣ್, ನಿರೂಪಣೆಯನ್ನು ತಿರುಮಲಯ್ಯ, ವಂದನಾರ್ಪಣೆಯನ್ನು ಎ.ನರಸಿಂಹಮೂರ್ತಿ ನೆರವೇರಿಸಿದರು, ಕಾರ್ಯಕ್ರಮಕ್ಕೆ ಶುಭ ಕೋರಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಡಾ.ಬಾಲಗುರುಮೂರ್ತಿ ಶುಭಕೋರಿದರು.

 ಸಂವಿಧಾನ ಸ್ನೇಹಿ ಬಳಗದ ವಿನಯ್ ಶ್ರೀನಿವಾಸ್ ಮನ-ಮನೆಗೂ ಸಂವಿಧಾನ ತರಬೇತುದಾರರಾದ ಮೇಘರಾಮದಾಸ್, ವಿನೀತಕುಮಾರ್, ವೆಂಕಟೇಶ್, ಶಿವುಕುಮಾರ್, ತುಮಕೂರು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು, ತುಮಕೂರು ಸ್ಲಂ ಸಮಿತಿಯ ಪದಾಧಿಕಾರಿಗಳು, ನಿವೇಶನ ರಹಿತ ಹೋರಾಟ ಸಮಿತಿಯ ಪದಾಧಿಕಾರಿಗಳು ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...