ತುಮಕೂರು | ಸಹಕಾರ ಸಂಘಬೇಡ, ನೇರ ಪಾವತಿಗೆ ಮುನಿಸಿಪಲ್ ಕಾರ್ಮಿಕರ ಒತ್ತಾಯ

Date:

ಎಲ್ಲಾ ಮುನಿಸಿಪಲ್ ಗುತ್ತಿಗೆ, ಹೋರ ಗುತ್ತಿಗೆ ಕಾರ್ಮಿಕರ ಸೇವೆಗಳ ಖಾಯಂಮಾತಿಗಾಗಿ ,ಖಾಯಂಗೊಳಿಸುವ ತನಕ ನೇರ ಪಾವತಿಯಡಿಯಲ್ಲಿ ಸಮಾನ ಕೇಲಸಕ್ಕೆ ಸಮಾನ ವೇತನ ನೀಡಲು 2026-27 ಸಾಲಿನ ಬಜೆಟ್‌ನಲ್ಲಿ ಕ್ರಮ ವಹಿಸಲು ಒತ್ತಾಯಿಸಿ  ತುಮಕೂರು ಮಹಾ ನಗರ ಪಾಲಿಕೆಯ  ಕಸದ ವಾಹನ ಚಾಲಕರು ಸಹಾಯಕರು ಲೋಡರ‍್ಸ್.&ಕ್ಲೀನರ‍್ಸ ಸಂಘ, ಪೌರ ಕಾರ್ಮಿಕರ ಸಂಘ ಸಿಐಟಿಯು ನೇತೃತ್ವದಲ್ಲಿ ಮಹಾ ನಗರ ಪಾಲಿಕೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. 

ರಾಜ್ಯದ ಎಲ್ಲಾ ಮುನಿಸಿಪಾಲಿಟಿ,ಮಹಾ ನಗರ ಪಾಲಿಕೆಗಳಲ್ಲಿ ನೇರ ಪಾವತಿ , ಗುತ್ತಿಗೆ ಪೌರಕಾರ್ಮಿಕರು, ದಿನಗೂಲಿ ಕಸದ ವಾಹನ ಚಾಲಕರು, ಸಹಾಯಕರು, ಕ್ಲಿನರ‍್ಗಳು, ಒಳಚರಂಡಿ ಸ್ವಚ್ಛತಾ , ಪಾರ್ಕ್, ಸ್ಮಶಾಣ, ಘನ ತ್ಯಾಜ್ಯವಿಲೆವಾರಿ ಘಟಕ, ಶೌಚಾಲಯಗಳಲ್ಲಿ ಕಾರ್ಮಿಕರು, ಯು.ಜಿ.ಡಿ ನೀರು ಸಂಸ್ಕರಣಾ ಘಟಕದ ಕಾರ್ಮಿಕರನ್ನು , ನೀರು ಸರಬರಾಜು ನೌಕರರ, ಕಂಪ್ಯೂಟರ್ ಅಪರೇರ‍್ಗಳು ನಡುವೆ ತಾರತಮ್ಯ ಮಾಡದೆ ಒಂದೇ ಬಾರಿಗೆ ಖಾಯಂಗೊಳಿಸಲು ಮುನಿಸಿಪಲ್ ನೌಕರರು ದಶಕಗಳಿಂದ ಒತ್ತಾಯಿಸುತ್ತಲೆ ಬಂದಿದ್ದರು ಯಾವುದೆ ಕ್ರಮವಹಿಸಿದೆ ಮುನಿಸಿಪಲ್ ಕಾರ್ಮಿಕರನ್ನು ವಿಭಜಿಸುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು. 

ರಾಜ್ಯದಲ್ಲಿ ಬಾಕಿ ಇರುವ ಕನಿಷ್ಟ ವೇತನವನ್ನು ಈ ತಕ್ಷಣವೆ ಪರಿಷ್ಕರಣೆಗೆ ಒಳ ಪಡಿಸಿ ಮಾಸಿಕ ಕನಿಷ್ಟ ವೇತನ ರೂ 36000 , ತುಟ್ಟಿಭತ್ಯೆ ಅಂಕ ಒಂದಕ್ಕೆ 5 ಪೈಸೆ ಮತ್ತು 6 ತಿಂಗಳಿಗೆ ಒಮ್ಮೆ ತುಟ್ಟಿ ಭತ್ಯೆ ಜಾರಿಗೆ ಕ್ರಮ ವಹಿಸಬೇಕು 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಹಿಳಾ ಪೌರಕಾರ್ಮಿಕರಿಗೆ ಶೌಚಾಲಯ, ಕುಡಿಯುವ ನೀರು, ಹೆರಿಗೆ ಭತ್ಯೆ, ಹೆರಿಗೆ ರಜೆ, ಬಾಲವಾಡಿ, ವಿಶ್ರಾಂತಿ ಗೃಹದಂತಹ ಅತ್ಯವಶ್ಯಕ ಮೂಲಭೂತ ಸೌಲಭ್ಯಗಳನ್ನು ಕಡ್ಡಾಯವಾಗಿ ರಾಜ್ಯದ ಎಲ್ಲಾ ಕಡೆ ನೀಡಲೇಬೇಕು ಎಂಬ ಸರ್ಕಾರಿ ಅದೇಶವನ್ನು ಕೂಡಲೇ ಹೊರಡಿಸಬೇಕು ಎಂದು ಒತ್ತಾಯಿಸಿದರು

ಪೌರಕಾರ್ಮಿಕರಿಗಾಗಿ ಜಾರಿ ಮಾಡಿರುವ ಗೃಹ ಭಾಗ್ಯ ಯೋಜನೆಯನ್ನು ಕೇವಲ ಖಾಯಂ ಪೌರಕಾರ್ಮಿಕರಿಗೆ ಸೀಮಿತ ಮಾಡದೆ, ಎಲ್ಲಾರನ್ನು ಪರಿಗಣಿಸಬೇಕು. ಮಕ್ಕಳು ಶಾಲೆ ಕಾಲೇಜುಗಳಲ್ಲಿಯೂ ವ್ಯಾಸಂಗ ಮಾಡಲು ಹಣ ಕಾಸಿನ ನೆರವು ನೀಡಬೇಕು. ಮುನಿಸಿಪಲ್ ಕಾರ್ಮಿಕರಿಗೆ ಇತರೆ ಕೆಲಸಗಳಿಗೆ ನಿಯೋಜಿಸಬಾರದು, ಎಲ್ಲಾ ಮುನಿಸಿಪಲ್ ಗುತ್ತಿಗೆ- ಹೋರ ಗುತ್ತಿಗೆ ಕಾರ್ಮಿಕರಿಗೆ ತಿಂಗಳ 5 ನೇತಾರಿಕೀನ ಒಳಗೆ ಸಂಬಳ ನೀಡಬೇಕು. ಕಾರ್ಮಿಕ ಕಾನೂನುಗಳ ಅನ್ವಯ 8 ಗಂಟೆ ಕೆಲಸ, ಸಂಬಳದ ಚೀಟಿ, ವಾರದ ರಜೆ, ಹಬ್ಬದ ರಜೆ,ಉಪಧನ ಸಂಬಂಧ ಸ್ಪಷ್ಟವಾದ ಅದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು. 

ಪ್ರತಿಭಟನೆಯಲ್ಲಿ ಸಿಐಟಿಯು ಸೈಯದ್ ಮುಜೀಬ್, ಎನ್.ಕೆ. ಸುಬ್ರಮಣ್ಯ, ಕಸದ ವಾಹನ ಚಾಲಕರ & ಇತರ ಸಂಘ ಪ್ರಧಾನ ಕಾರ್ಯದರ್ಶಿ ಮಾರುತಿ, ಖಜಾಂಚಿ, ಮಂಜುನಾಥ್ , ಶ್ರೀನಿವಾಸ್, ತುಮಕೂರು ಪೌರ ಕಾರ್ಮಿಕರ ಸಂಘ,.ರಿ ಮಂಜುನಾಥ್, ಕುಮಾರ್ , ಅಂಜನಿ ಮತ್ತಿತರರು ಮಾತನಾಡಿದರು.

ಮನವಿ ಸ್ವಿಕರಿಸಿದ ಆರೋಗ್ಯಧಿಕಾರಿಗಳಾದ ಡಾ. ಯೋಗಿಶ್ ನೀತಿ ನಿರೂಪಕ ಪ್ರಶ್ನೆಗಳನ್ನು ಸರ್ಕಾರಕ ಕಳುಹಿಸುವುದಾಗಿ , ಮತ್ತು ಇಲ್ಲೆ ಇತ್ಯಾರ್ಥಕ್ಕೆ ಸಾಧ್ಯತೆ ಇರುವ ಪ್ರಶ್ನೆಗಳನ್ನು ಸಭೆ ನಡೆಸಿ ಪರಿಹಾರ ಮಾಡುವುದಾಗಿ ತಿಳಿಸಿದರು. 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...