ತುಮಕೂರು | ಸಿದ್ಧಾರ್ಥದಲ್ಲಿ ಚಿತ್ರ ಬಿಡಿಸುವ ಸ್ಫರ್ಧೆ ವಿಜೇಯತ ಮಕ್ಕಳಿಗೆ ಬಹುಮಾನ ವಿತರಣೆ

Date:

ತುಮಕೂರು ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶಿಕ್ಷಣ ಭೀಷ್ಮ ಡಾ.ಹೆಚ್.ಎಂ.ಗಂಗಾಧರಯ್ಯನವರ 37ನೇ ಪುಣ್ಯ ಸ್ಮರಣೆ ಅಂಗವಾಗಿ ಶಾಲಾ ಮಕ್ಕಳಿಗೆ ನಡೆದ 37 ನೇ ವರ್ಷದ “ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ”ಯ ಸಮಗ್ರ ಪ್ರಶಸ್ತಿಯನ್ನು ಮುರಾರ್ಜಿ ದೇಸಾಯಿ ರೆಸಿಡೆನ್ಸಿಯಲ್ ಶಾಲೆ ಪಡೆದುಕೊಂಡಿದೆ. 

ಸ್ಪರ್ಧೆಯಲ್ಲಿ ಮೂರು ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆಯುವುದರ ಮೂಲಕ ಮುರಾರ್ಜಿ ದೇಸಾಯಿ ರೆಸಿಡೆನ್ಸಿಯಲ್ ಶಾಲೆ ಚಾಂಪಿಯನ್ ಪ್ರಶಸ್ತಿಯನ್ನು ಪಡೆದರೆ, ತುಮಕೂರು ನಗರದ ಆಚಾರ್ಯ ವಿದ್ಯಾಪೀಠ ಶಾಲೆ ಅತಿ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ಸ್ವರ್ಧೆಯಲ್ಲಿ ಪ್ರಶಸ್ತಿಯನ್ನು ಗಳಿಸಿತು. ಮಕ್ಕಳಲ್ಲಿರುವ ಚಿತ್ರಕಲೆಯನ್ನು ಪ್ರೋತ್ಸಾಹಿಸುವ ಹಿನ್ನೆಯಲ್ಲಿ ಸ್ವರ್ಧೆಯನ್ನು 1988ರಿಂದ ನಿರಂತರವಾಗಿ ಹಮ್ಮಿಕೊಂಡು ಬರಲಾಗುತ್ತಿದೆ. ತುಮಕೂರು ಜಿಲ್ಲೆ ಮತ್ತು ನಗರದ 52 ಶಾಲೆಗಳಿಂದ ಸುಮಾರು 5469 ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಚಿತ್ರ ಬಿಡಿಸುವ ಸ್ಪರ್ಧೆ 5 ವಿಭಾಗವಾರು ನಡೆದಿದ್ದು, ಅವುಗಳಲ್ಲಿ ವಿಜೇತರಾದವರ ವಿವರ ಇಂತಿದೆ.

ಎ ವಿಭಾಗದಲ್ಲಿ ನರ್ಸರಿಯಿಂದ ಯಕೆಜಿ ಪ್ರಥಮ- ಐರಾ ಹೂರೇನ್ ಖಾನ್, ಟೋಡ್ಲರ್ ಕ್ಯಾಸ್ಟೆಲ್ ಪೂರ್ವ ಪ್ರಾಥಮಿಕ ಶಾಲೆ. ದ್ವೀತೀಯ-ಗಹನ್ ಅಚಿಂತ್ಯ ಟಿವಿಎಸ್ ಅಕಾಡೆಮಿ.ತೃತೀಯ-ಜ್ಞಾನಿತಾ ಜಿ ಚೇತನ ವಿದ್ಯಾ ಮಂದಿರ ಮತ್ತು ಸಮಾಧಾನಕರ ಬಹುಮಾನವನ್ನು ಬೆನಕ ಕೌತುಬ.ಆರ್., (ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಸ್ಕೂಲ್) ಜುನೈನಾ ರಿಮ್ಶಾ (ಎಸ್ ಆರ್ ವಿದ್ಯಾ ಕೇಂದ್ರ ಶಾಲೆ) ಅವರು ಪಡೆದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬಿ ವಿಭಾಗದಲ್ಲಿ 1ನೇ ತರಗತಿಯಿಂದ 4ನೇ ತರಗತಿಯ ತನಕ: ಪ್ರಥಮ -ಲಿಕಿತ್ ಗೌಡ ಎಸ್ ಎಸ್ ಜಿಆರ್ ಶಾಲೆದ್ವೀತೀಯ -ಯುಕ್ತ ಸಿ ವಿ ಚೇತನ ವಿದ್ಯಾ ಮಂದಿರತೃತೀಯ -ವರ್ಣ ದೀಪ್ತಾ ಟಿವಿಎಸ್ ಅಕಾಡೆಮಿ ಮತ್ತು ಮತ್ತು ಸಮಾಧಾನಕರ ಬಹುಮಾನವನ್ನು ಫಾತಿಮಾ ಜೋಹ್ರಾ (ವರಿನ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್) ಹಾಗೂ ಧನ್ವಿತಾ ಎ ಯು (ಆಚಾರ್ಯ ವಿದ್ಯಾಪೀಠ ಶಾಲೆ) ಅವರು ಪಡೆದಿದ್ದಾರೆ.

ಸಿ ವಿಭಾಗದಲ್ಲಿ 5ನೇ ತರಗತಿಯಿಂದ 7ನೇ ತರಗತಿವರೆಗೆ:ಪ್ರಥಮ-ಸನ್ನಿಧಿ ಕೆ ಎಸ್ -ವರಿನ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ದ್ವೀತೀಯ-ಆಕಾಶ ಎಸ್ ಜಿ -ಮೊರಾರ್ಜಿ ದೇಸಾಯಿ ವಸತಿ ಶಾಲೆತೃತೀಯ -ಭಾಷಿಣಿ ಎಸ್- ಆಚಾರ್ಯ ವಿದ್ಯಾಪೀಠ ಶಾಲೆ ಮತ್ತು ಮತ್ತು ಸಮಾಧಾನಕರ ಬಹುಮಾನವನ್ನುಮೊಹಮ್ಮದ್ ಜೊಹೈಬ್ (ಫ್ಲೋರಾ ಇಂಗ್ಲಿಷ್ ಶಾಲೆ) ಮತ್ತು ಸ್ನೇಹಾ ಟಿ ಎನ್ (ಚೇತನ ವಿದ್ಯಾ ಮಂದಿರ) ಅವರು ಪಡೆದಿದ್ದಾರೆ.

1002532043

ಡಿ. ವಿಭಾಗದಲ್ಲಿ 8ನೇ ತರಗತಿಯಿಂದ 10ನೇ ತರಗತಿಯವರೆಗೆ ವರ್ಗ: ಪ್ರಥಮ : ಮದನ್ ಎನ್ ಪಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಬಿಕ್ಕೆಗುಡ್ಡದ್ವೀತೀಯ-ಚೇತನ್ ಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಬಿಕ್ಕೆಗುಡ್ಡತೃತೀಯ -ನಮ್ರತಾ ಎಸ್ ಅಂಕಿತ ಪ್ರಾಥಮಿಕ ಮತ್ತು ಪ್ರೌಢಶಾಲೆ ಕೌಶಿಕ್ ನಾಯಕ ಯು (ವರಿನ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ ) ಹಾಗೂ ಗೌತಮ್ ಟಿ ಪಿ (ಆಚಾರ್ಯ ವಿದ್ಯಾಪೀಠ ಶಾಲೆ) ಅವರುಗಳು ಕ್ರಮವಾಗಿ ಸಮಧಾನಕರ ಬಹುಮಾನವಾಗಿ ಪಡೆದುಕೊಂಡರು.ಹಾಗೂ ಇ ವಿಭಾಗದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು (ಎಸ್‌ಎಸ್‌ಐಟಿ ವಿದ್ಯಾರ್ಥಿಗಳಿಗೆ ಮಾತ್ರ)ಪ್ರಥಮ-ಉಮೇಶ್ ನಾಯ್ಕ್ ಎಸ್ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ದ್ವಿತೀಯ -ಚಂದ್ರಶೇಖರ್ ಎಸ್ ಡೇಟಾ ಸೈನ್ಸ್

ತೃತೀಯ -ತೇಜಸ್ವಿನಿ ಎಸ್ ಟೆಲಿಕಮ್ಯುನಿಕೇಷನ್ ಇಂಜಿನಿಯರಿಂಗ್ ಮತ್ತು ತೃಪ್ತಿ ಆರ್ (ಇ&ಸಿ ವಿಭಾಗ) ಮತ್ತು ತನ್ಮಯಿ ಆರ್ (ಸೈಬರ್ ಭದ್ರತೆ) ಅವರುಗಳು ಕ್ರಮವಾಗಿ ಸಮಧಾನಕರ ಬಹುಮಾನವಾಗಿ ಪಡೆದುಕೊಂಡರು.

ಇದೇ ಮೊದಲ ಬಾರಿಗೆ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಧ್ಯಾಪಕರಿಗೆ ಏರ್ಪಡಿಸಲಾದ ಸ್ವರ್ಧೆಯಲ್ಲಿ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಸಂದ್ಯ ವಿ ಅವರು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ಶಾಲೆಗಳ ಒರ್ವ ವಿದ್ಯಾರ್ಥಿಗೆ ಸಮಾಧಾನಕರ ಬಹುಮಾನ ಮತ್ತು ಪ್ರಮಾಣ ಪತ್ರ ಹಾಗೂ ಫಲಕ ನೀಡಲಾಯಿತು.

1002532045

ಚಿಣ್ಣರಲ್ಲೂ ಕಲಾಸಿರಿವಂತಿಕೆ: ಬಹುಮಾನ ಮತ್ತು ಪ್ರಶಸ್ತಿ ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡಿದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ ಎಸ್ ರವಿಪ್ರಕಾಶ ಅವರು ಚಿಣ್ಣರಲ್ಲೂ ಚಿತ್ರ ಕಲಾಸಿರಿವಂತಿಕೆ ಇರುತ್ತದೆ, ಅವರಲ್ಲಿರುವ ಕಲೆಗಳನ್ನು ಅನಾವರಣ ಮಾಡಲು ಪೋಷಕರು ಮುಂದಾಗಿರಬೇಕು ಎಂದರು.

ಇದು ಕೇವಲ ಚಿತ್ರ ಬಿಡಿಸುವುದಲ್ಲ. ಬದಲಿಗೆ ಸಾಮಾಜಿಕ ವಿಷಯಗಳು ಮತ್ತು ಆಧ್ಯಾತ್ಮಿಕ ವಿಷಯಗಳಂತಹ ವೈವಿಧ್ಯಮಯ ಚಿತ್ರಕಲೆಗಳ ಮೂಲಕ ಮನಸ್ಸಿನ ತುಡಿತವನ್ನು ಅಭಿವ್ಯಕ್ತಿಪಡಿಸುವ ಒಂದು ದೊಡ್ಡ ಕಲಾ ಲೋಕವನ್ನು ಮಕ್ಕಳು ಕಟ್ಟಿಕೊಡುವ ಮೂಲಕ ಸ್ವರ್ಧೆಯಲ್ಲಿಗಮನ ಸೆಲೆದಿದ್ದಾರೆ ಎಂದು ಅವರು ಹೇಳಿದರು.

1002532044

ಡೀನ್ (ಶೈಕ್ಷಣಿಕ) ಡಾ.ರೇಣುಕಾ ಲತಾ ಮಾತನಾಡಿ, ಕಲೆಯ ಮೂಲಕ ವ್ಯಕ್ತಪಡಿಸುವ ಸೃಜನಾತ್ಮಕ ಶಕ್ತಿ, ಭಾವನೆಗಳು ಮತ್ತು ಸಂಸ್ಕೃತಿಯನ್ನು ಸೂಚಿಸುತ್ತದೆ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಾಯ ಮಾಡುತ್ತದೆ ಹಾಗೂ ಅವರ ಜೀವನಕ್ಕೆ ಪೂರಕ ಅಂಶವಾಗಿದೆ ಎಂದರು.

ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಹಾಗೂ ಸ್ಪರ್ಧೆಯ ಸಂಚಾಲಕರಾದ ಡಾ.ಸಹನಾ ಟಿ.ಎಸ್. ಸಹ ಸಂಯೋಜಕರಾದ ಡಾ.ಶಿವರಾಜು ಜಿ.ಡಿ, ಡೀನ್ ಡಾ.ರಾಜಾನಾಯಕ್, ಸ್ಪರ್ಧೆಯ ಆಯೋಜನಾ ವಿವಿಧ ಸಮಿತಿ ಸಂಚಾಲಕರಾದ ಡಾ.ಸೌಜನ್ಯ, ಡಾ.ಪ್ರದೀಪ್, ಡಾ.ಸುಪ್ರಿಯಾ,ಡಾ.ಅಕ್ಷಯ್, ಪ್ರೊ. ಪ್ರವೀಣ್, ಸಿವಿಲ್ ವಿಭಾಗದ ಅಧ್ಯಾಪಕರು ಮತ್ತು ವಿವಿಧ ಶಾಲೆಗಳ ಶಿಕ್ಷಕರು, ಬಹುಮಾನ ವಿಜೇತ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಹಾಯಕ ಪ್ರಾಧ್ಯಾಪಕರಾದ ಗುರುಪ್ರಸಾದ ಕಾರ್ಯಕ್ರಮ ನಿರೂಪಿಸಿದರೆ ಡಾ. ಉಷಾ ಶಿವರಾಜ್ ಅವರು ವರದಿ ಮಂಡಿಸಿದರು. 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...