ತುಮಕೂರು | ಭಾರತದಲ್ಲಿ ಅಲ್ಪಸಂಖ್ಯಾತರ ʼಸಾಂವಿಧಾನಿಕ ಹಕ್ಕುಗಳು – ದಾಳಿಗಳುʼ ಕುರಿತ ವಿಚಾರ ಸಂಕಿರಣ

Date:

ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕುಗಳ ಮೇಲೆ ಅಳುವ ಸರ್ಕಾರಗಳೇ ಧಮನಕ್ಕೆ ನಿಂತಿವೆ. ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಹರಡಿ ಒಂದು ರಾಜ್ಯಾಧಿಕಾರ ಹಿಡಿಯುವ ಪಕ್ಷದ ನಡೆಯನ್ನು ಜನತೆ ಗಮನಿಸಬೆಕು. ಸಂವಿಧಾನಿಕ ಹುದ್ದೆಯಲ್ಲಿರುವ ದೇಶದ ಪ್ರಧಾನ ಮಂತ್ರಿಗಳೇ ಸುಳ್ಳುಗಳನ್ನು ಆಡುವ ಮೂಲಕ ದ್ವೇಷ ಭಾವನೆಯನ್ನು ಹೆಚ್ಚಿಸುತ್ತಿದ್ದಾರೆ ಎಂದು ಹಿರಿಯ ಕಾರ್ಮಿಕ ನಾಯಕ, ಜೀವ ವಿಮಾ ನೌಕರರ ಸಂಘಟನೆ ರಾಷ್ಟ್ರೀಯ ಮಾಜಿ ಅಧ್ಯಕ್ಷ ಅಮಾನುಲ್ಲಾ ಖಾನ್ ಕಳವಳ ವ್ಯಕ್ತಪಡಿಸಿದರು.

ಅಂತ್ರರಾಷ್ಟ್ರೀಯ ಅಲ್ಪಸಂಖ್ಯಾತರ ಹಕ್ಕುಗಳ ದಿನಾಚರಣೆಯ ಅಂಗವಾಗಿ ತುಮಕೂರು ಜಿಲ್ಲೆಯ ಇನ್ಸಾಪ್ ಸಂಘಟನೆ ವತಿಯಿಂದ ಸರ್ಕಾರಿ ಅಸ್ವತ್ರೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ʼಭಾರತದಲ್ಲಿ ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕುಗಳು– ದಾಳಿಗಳುʼ ಎಂಬ ವಿಷಯ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

“ಸಂಘಟಿತರಾಗಿ ಪ್ರಶ್ನೆ ಮಾಡುವ ಮತ್ತು ಪ್ರಜಾಪ್ರಭುತ್ವದಲ್ಲಿ ನಮಗೆ ಅಗುತ್ತಿರುವ ಅನ್ಯಾಯಗಳ ಬಗ್ಗೆ ಧ್ವನಿ ಎತ್ತಿ ನ್ಯಾಯ ಪಡೆಯುವುದು ಅಗತ್ಯ. ಈ ಕೆಲಸದಲ್ಲಿ ಎಲ್ಲ ಮಾನವೀಯತೆಯುಳ್ಳ ಮನಸ್ಸುಗಳು ಒಂದಾಗಬೇಕು. ಅಲ್ಪಸಂಖ್ಯಾತರಲ್ಲಿ ಮುಸ್ಲಿಮರ ಅಭಿವೃದ್ದಿಗೆ ಇರುವ ಅವಕಾಶವನ್ನು ಬಳಸಲು ಬಿಡುತ್ತಿಲ್ಲ. ಭಾರತೀಯ ಮುಸ್ಲಿಮರ ಬಗ್ಗೆ ಹಲವು ಸುಳ್ಳುಗಳನ್ನು ಹರಿಬಿಡಲಾಗಿದೆ. ಸಮಾಜ ಸತ್ಯವನ್ನು ಅರಿಯುವುದು ಅಗತ್ಯ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪಿಯುಸಿಎಲ್ ಅಧ್ಯಕ್ಷರು ಹಾಗೂ ಪ್ರಗತಿಪರ ಚಿಂತಕ ಪ್ರೊ. ಕೆ ದೊರೈರಾಜು ಅವರು ವಿಚಾರ ಸಂಕಿರಣದಲ್ಲಿ ಪ್ರತಿಕ್ರಿಯೆ ನೀಡಿ ಮಾತನಾಡಿ, “ಅಲ್ವಸಂಖ್ಯಾತರು, ದಲಿತರ ಜೀವನದ ಪರಿಸ್ಥಿತಿ ಕಷ್ಟದಲ್ಲಿದೆ. ರಾಜಕೀಯ ಸಿದ್ದಾಂತವಿಲ್ಲದ ಕೇವಲ ದ್ವೇಷ, ವಿರೋಧ ಮತ್ತು ಹಿಂಸೆಯ ನೆಲೆಯಲ್ಲಿ ಅಧಿಕಾರ ಹಿಡಿಯುತ್ತಿರುವ ದುಃಸ್ಥಿತಿಯಿದೆ. ಗೆಲ್ಲುವುದನ್ನು, ನಂತರದಲ್ಲಿ ಸುಲಿಗೆ ಮಾಡುವುದನ್ನು ಕೆಲವರು ಕರಗತ ಮಾಡಿಕೊಂಡಿದ್ದಾರೆ” ಎಂದು ಹೇಳಿದರು.

“ಸಂವಿಧಾನದ ಹಕ್ಕು ಪಡೆಯಲು ಎಲ್ಲರೂ ಮಾನವೀಯ ಗುಣವುಳ್ಳವರು. ಶೋಷಿತರು ಐಕ್ಯತೆಯಿಂದ ಸಂಘಟಿತರಾಗಿ ಮುಂದೆ ಸಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಘನತೆಯ ಬದುಕು ನೀಡಬೇಕಾದ ಸರ್ಕಾರಗಳು ಕೋಮುವಾದಿ – ಸರ್ವಾಧಿಕಾರದ ನಡೆಗಳ ಮೂಲಕ ಜನತೆಯ ಲೂಟಿಗೆ ಇಳಿದಿವೆ. ಇಂತಹ ಸಂದರ್ಭದಲ್ಲಿ ನಮ್ಮ ಐಕ್ಯ ಚಳುವಳಿಗಳೇ ನಮಗೆ ದಾರಿಯಾಗಬೇಕು” ಎಂದರು.

ಸ್ಲಂ ಜನಾಂದೋಲದ ಮಹಿಳಾ ಸಂಚಾಲಕಿ ಅನುಪಮಾ ಮಾತನಾಡಿ, “ದ್ವೇಷ ಭಾಷಣ ಬೆಂಬಲಿಸುವ ವಿಕೃತಿಯನ್ನು ನಾವು ಕಾಣುತ್ತಿದ್ದೆವೆ. ಇದು ಸರಿಯಲ್ಲ. ಸಹಬಾಳ್ವೆ- ಸಹ ಜೀವನ ನಾಗರಿಕ ಸಮಾಜದಲ್ಲಿ ಅಗತ್ಯವಾಗಿದೆ” ಎಂದರು.

ಮಾಜಿ ಸಿಂಡಿಕೇಟ್ ಸದಸ್ಯ ಕೆ. ನಯಾಜ್ ಅಹಮದ್ ಮಾತನಾಡಿ, “ನಿತ್ಯವೂ ಧರ್ಮಾಧಾರಿತ ದಾಳಿಗಳು ಹೆಚ್ಚುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವಂತೆ ಶೋಷಿತರ ಮೇಲಿನ ದಾಳಿ -ದಬ್ಬಾಳಿಕೆಗಳು ನಡೆಯುತ್ತಿವೆ. ದಮನಿತರೆಲ್ಲರ ಐಕ್ಯ ಚಳವಳಿಯೊಂದೇ ನಮ್ಮ ಮುಂದಿರುವ ದಾರಿ” ಎಂದು ಹೇಳಿದರು.

ವಿಚಾರ ಸಂಕಿರಣದಲ್ಲಿ ಎಪಿಸಿಆರ್‌ ತಾಜುದ್ದಿನ್‌ ಶರೀಪ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎನ್ ಕೆ ಸುಬ್ರಮಣ್ಯ, ಮಹಿಳಾ ನಾಯಕಿ ತಾಹೇರಾ ಕುಲ್ ಸುಂ, ಅಪ್ಸರ್ ಪಾಷ, ವಕ್ಫ್‌ಬೋರ್ಡ್‌ ಮಾಜಿ ಅಧ್ಯಕ್ಷ ಸಮಿಉಲ್ಲಾ ಶರೀಫ್ ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸೈಯದ್ ಮುಜೀಬ್, “ಭಾರತೀಯ ಅಲ್ಪಸಂಖ್ಯಾತರಲ್ಲಿ ಮುಸ್ಲಿಮರನ್ನು ಒಂದು ಪಕ್ಷ ದ್ವೇಷಿಸಿದರೆ, ಮತ್ತೊಂದು ಪಕ್ಷ ವೋಟ್ ಬ್ಯಾಂಕ್ ಅಗಿ ಬಳಸಿದೆ. ದೇಶ ಒಟ್ಟಾರೆ ಅಭಿವೃದ್ದಿ ಹೊಂದಬೇಕಾದಲ್ಲಿ ಶೇ.20ರಷ್ಟಿರುವ ಅಲ್ಪಸಂಖ್ಯಾತರ ಅಭಿವೃದ್ಧಿಯೂ ಅತ್ಯಗತ್ಯ” ಎಂದರು.‌

ಈ ಸುದ್ದಿ ಓದಿದ್ದೀರಾ? ಉಡುಪಿ | ಸ್ವಾತಂತ್ರ್ಯ ನಂತರವೂ ಅಸ್ತಿತ್ವ ಕಾಪಾಡಿಕೊಂಡ “ಬಾಬು ಸಂಸ್ಕೃತಿ” !

ವಿಚಾರ ಸಂಕಿರಣದಲ್ಲಿ ಸಮಾನ ಬದುಕುವ ಅವಕಾಶ, ಸಮಬಾಳು-ಸಮಪಾಲು, ತಾರತಮ್ಯವಿಲ್ಲ ನಡೆಗಳು, ಸ್ವಾಭಾವಿಕ ನ್ಯಾಯ, ಇದನ್ನು ಪರಿಪಾಲಿಸಲು ಒತ್ತಾಯಿಸುವ ಮಾತುಗಳು ಮತ್ತು ಸಾಂವಿಧಾನಿಕ ವಿರೋಧಿ ಗುಂಪುಗಳು ತಾವೇ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದಂತೆ ವರ್ತಿಸುವ ಅವರುಗಳೇ ಕಾನೂನು ಕೈಗೆತ್ತಿಕೊಂಡು ತಾವೇ ಶಿಕ್ಷಿಸುವ ಪುಂಡಾಟಿಕೆಯನ್ನು ತಡೆಯುವಂತೆ ಸರ್ಕಾರಗಳಿಗೆ ಒತ್ತಾಯಿಸಲಾಯಿತು.

ಅರಂಭದಲ್ಲಿ ಇನ್ಸಾಫ್ ಸಂಚಾಲಕ ವಸೀಂ ಅಕ್ರಂ ಅವರು ಸ್ವಾಗತಿಸಿದರು. ಅಬ್ದುಲ್ ಮುನಾಫ್ ಪಸ್ತಾವಿಕ ನುಡಿ ಮತ್ತು‌ ಕೊನೆಯಲ್ಲಿ ಇಬ್ರಾಹಿಂ ಕಲೀಲ್ ಅವರು ವಂದಿಸಿದರು. ಸಂಚಾಲಕರಾದ ರಫೀಕ್ ಪಾಷ, ಇಮ್ತಿಯಾಜ್, ಶಹತಾಜ್, ಗುಲ್ಜಾರ್ ಬಾನು, ಅಲ್ಲಾಬಕಾಷ್ ತಿಪಟೂರು, ಬಿ. ಉಮೇಶ್, ಶಾಹಿದ್ ಅಪ್ರೀದಿ, ಶಫಿ, ಜಬಿನಾ ಖಾತೋನ್ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...