ತುಮಕೂರು | ಮತಗಳ್ಳತನ ಕುರಿತಾಗಿ ರಾಹುಲ್ ಗಾಂಧಿ ಮಾಡಿರುವ ಆರೋಪದಲ್ಲಿ ಸತ್ಯಾಂಶವಿದೆ : ಎಂಎಲ್ ಸಿ ರಮೇಶ್ ಬಾಬು

Date:

ಇಂದಿನ ಚುನಾವಣೆ ವ್ಯವಸ್ಥೆ ನೋಡುತ್ತಿದ್ದರೆ ನಮ್ಮಂತಹವರು ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದ ಅವರು ಮತಗಳ್ಳತನ ಕುರಿತಾಗಿ ರಾಹುಲ್ ಗಾಂಧಿ ಅವರು ಮಾಡಿರುವ ಆರೋಪದಲ್ಲಿ ಸತ್ಯಾಂಶವಿದೆ ಎಂದು ವಿಧಾನ ಪರಿಷತ್ ನೂತನ ಸದಸ್ಯ ರಮೇಶ್ ಬಾಬು ಹೇಳಿದರು 

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ವಿಧಾನ ಪರಿಷತ್ ನೂತನ ಸದಸ್ಯ ರಮೇಶ್ ಬಾಬು ಅವರೊಂದಿಗೆ ಸಂವಾದ ನಡೆಸಲಾಯಿತು. ಸಂವಾದ ಸಭೆಯಲ್ಲಿ ಮಾತನಾಡಿದ ರಮೇಶ್ ಬಾಬು ಅವರು, ಎಲ್ಲೋ ಕುಳಿತು ಮತದಾರರ ಪಟ್ಟಿಯಲ್ಲಿ ಪರಿಷ್ಕರಣೆ ಮಾಡಿ ಹೆಸರು ಡಿಲೀಟ್ ಹಾಗೂ ವರ್ಗಾವಣೆ ಮಾಡುತ್ತಾರೆಂದರೆ ಏನರ್ಥ. ಇದನ್ನು ಜವಾಬ್ದಾರಿ ಯುತ ಸ್ಥಾನದಲ್ಲಿದ್ದು ನಾವು ಪ್ರಶ್ನಿಸಬಾರದೇ? ಅಷ್ಟಕ್ಕೂ ಚುನಾವಣೆ ಆಯೋಗವನ್ನು ಪ್ರಶ್ನಿಸಿದರೆ ಬಿಜೆಪಿ ಯವರು ಏಕೆ ಸಿಡಿಮಿಡಿಗೊಳ್ಳುತ್ತಿದ್ದಾರೆ ಅರ್ಥವಾಗುತ್ತಿಲ್ಲ. ಇಂದು ಸಾಂವಿಧಾನಿಕ ಸಂಸ್ಥೆ ಗಳು ರಾಜಕೀಕರಣಗೊಳ್ಳುತ್ತಿರುವುದಕ್ಕೆ ಸ್ಪಷ್ಟ ನಿರ್ದರ್ಶನ ಎಂದರು. 

ಶೈಕ್ಷಣಿಕ ಸಾಮಾಜಿಕ ಸಮೀಕ್ಷೆ ಬಗ್ಗೆ ಅನಗತ್ಯ ಗುಲ್ಲೆಬ್ಬಿಸಲಾಗುತ್ತಿದೆ ಎಂದು ಪ್ರಶ್ನೆ ಯೊಂದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಬಾಬು ಅವರು ಅರ್ಹ ಫಲಾನುಭವಿಗಳಿಗೆ ಯೋಜನೆ ಗಳನ್ನು ತಲುಪಿಸಲು ಗಣತಿ ಸಮೀಕ್ಷೆ ಅತ್ಯಾವಶ್ಯಕ ಎಂದು ಪ್ರತಿಪಾದಿಸಿದರು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

 ಮೇಲ್ಮನೆಗೆ , ಎರಡನೇ ಬಾರಿಗೆ ಆಯ್ಕೆ ಯಾಗುವ ಅವಕಾಶ ದೊರೆತಿದ್ದು, ಚಿಂತಕರ ಚಾವಡಿಯಲ್ಲಿ ಜನಸಾಮಾನ್ಯರ ಧ್ವನಿ ಯಾಗಿ ಸಾಮಾಜಿಕ ನ್ಯಾಯ ಸಂವಿಧಾನದ ಪರವಾಗಿ ಕಾರ್ಯನಿರ್ವಹಿಸುವೆ. ನನ್ನ ಅವಧಿ ಹತ್ತು ತಿಂಗಳಾದರೂ ಸ್ಥಾನದ ಘನತೆ ಎತ್ತಿ ಹಿಡಿಯುವಂತೆ ಕಾರ್ಯನಿರ್ವಹಿಸುವೆ ಎಂದರು. 

 ಚಾರಿತ್ರಿಕ ಇತಿಹಾಸದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೂಲ ನನ್ನದು ಎನ್ನುವುದಕ್ಕೆ ಹೆಮ್ಮೆಪಡುತ್ತೇನೆ. ಪಿಯುಸಿ ಅನುತ್ತೀರ್ಣ ನಾಗಿ ಪತ್ರಿಕೋದ್ಯಮ ಸರ್ಟಿಫಿಕೇಟ್ ಕೋರ್ಸ್ ನೊಂದಿಗೆ ಪತ್ರಿಕಾ ರಂಗ ಪ್ರವೇಶಿಸಿದೆ. ಸುಮಾರು ಹದಿನೆಂಟು ಪತ್ರಿಕೆ ಏಜೆಂಟರಾಗಿ ವರದಿಗಾರನಾಗಿ ಕಾರ್ಯನಿರ್ವಹಿಸಿದೆ. ಲಂಕೇಶ್ ಪತ್ರಿಕೆ ನನ್ನ ಮೇಲೆ ಬಹಳ ಪ್ರಭಾವ ಬೀರಿತು. ಈ ವೇಳೆ ಎಲ್‌ಎಲ್ ಬಿ ಪೂರೈಸಿ ವಕೀಲ ವೃತ್ತಿಯನ್ನು ಆಯ್ಕೆ ಮಾಡಿಕೊಂಡು 98-99ರಲ್ಲಿ ಬೆಂಗಳೂರಿಗೆ ಸ್ಥಳಾಂತರಗೊಂಡೆ. ಅಲ್ಲಿ ದೊಡ್ಡ ರಾಜಕೀಯ ನಾಯಕರ ಸಂಪರ್ಕ ದೊರೆತು ಜೆಡಿಎಸ್ ನಿಂದ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಅಭ್ಯರ್ಥಿ ಯಾಗಿ ಸ್ಪರ್ಧಿಸಿ ಗೆಲವು ಸಾಧಿಸಿದೆ. ಆದರೆ ಪಕ್ಷದಿಂದ ಹೊರಹೋಗುವ ಸ್ಥಿತಿ ನಿರ್ಮಾಣವಾಯಿತು. ನಮ್ಮ ತತ್ವ ಸಿದ್ಧಾಂತಕ್ಕೆ ಒಪ್ಪಿ ಗೆ ಯಾಗುವ ಪಕ್ಷವೆಂದು ಕಾಂಗ್ರೆಸ್ ಸೇರ್ಪಡೆ ಗೊಂಡೆ. ಪಕ್ಷದ ವಕ್ತಾರನಾಗಿ ನನ್ನ ಸೇವೆ ಗುರುತಿಸಿ ಸಿಎಂ, ಡಿಸಿಎಂ ಹಾಗೂ ಪಕ್ಷದ ವರಿಷ್ಠರು ನನಗೆ ಮೇಲ್ಮನೆ ಗೆ ನಾಮ ನಿರ್ದೇಶನ ವಾಗುವ ಅವಕಾಶ ಕಲ್ಪಿಸಿದರು ಎಂದು ತಮ್ಮ ಜೀವನಯಾನದ ವೃತ್ತಾಂತ ವಿವರಿಸಿದರು. 

 ಯೂಟ್ಯೂಬ್ ವಾಹಿನಿಗಳಿಗೆ ಪರವಾನಗಿ ಅವಶ್ಯಕ ಎಂಬ ಸಿಎಂ ನಿಲುವನ್ನು ಸಮರ್ಥಿಸಿಕೊಂಡ ರಮೇಶ್ ಬಾಬು ಅವರು ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಮಾಧ್ಯಮಕ್ಕೆ ವಿಶೇಷವಿಲ್ಲ. ಇದರ ಹೆಸರಲ್ಲಿ ಚಾರಿತ್ರ್ಯ  ವಧೆಯಾಗಬಾರದು ಅಷ್ಟೇ ಎಂದರು. 

 ಜಿಲ್ಲೆಯಲ್ಲಿ ಮರಳಿ ಗಣಿಗಾರಿಕೆ ಚಟುವಟಿಕೆ ಗಳಿಗೆ ಆಸ್ಪದವಾಗಬಾರದು ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತುವುದಾಗಿ ತಿಳಿಸಿದರು. 

 ಸಂಘದ ಅಧ್ಯಕ್ಷ  ಚಿ. ನಿ. ಪುರುಷೋತ್ತಮ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಮೇಶ್ ಬಾಬು ಅವರು ಜೀವನ ಸಾಧನೆ ಯನ್ನು ಸಂಕ್ಷಿಪ್ತ ವಾಗಿ ವಿವರಿಸಿ ಹಿಂದೆ ಅವರು ಪತ್ರಕರ್ತ ರಾಗಿ ಎರಡು ಬಾರಿ ಮೇಲ್ಮನೆ ಪ್ರವೇಶಿಸುವ ಅವಕಾಶ ಪಡೆದಿರುವುದು ನಾವೆಲ್ಲ ಹೆಮ್ಮೆ ಪಡುವ ಸಂಗತಿ ಎಂದರು. 

ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಇ. ರಘುರಾಮ್ ಸ್ವಾಗತಿಸಿದರು. ಸಂಘದ ಪರವಾಗಿ ರಮೇಶ್ ಬಾಬು ಅವರನ್ನು ಅಭಿನಂದಿಸಲಾಯಿತು. ರಾಷ್ಟ್ರೀಯ ಮಂಡಳಿ ಸದಸ್ಯ ಟಿ. ಎನ್. ಮಧುಕರ್, ಸಂಘದ ನಿರ್ದೇಶಕ ರುಗಳು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...