ತುಮಕೂರು | ಮರೀಚಿಕೆಯಾದ ಮೂಲಸೌಕರ್ಯ, ಚುನಾವಣೆ ಬಂದಾಗ ನೆನಪಾಗುವ ವಾರ್ಡ್‌

Date:

ಮೂಲಸೌಕರ್ಯಗಳಿಂದ ವಂಚಿತವಾಗಿರುವ ತುಮಕೂರು ಮಹಾನಗರ ಪಾಲಿಕೆಯ 11ನೇ ವಾರ್ಡ್‌ಗೆ ಭೇಟಿ ನೀಡಿರುವ ನೈಜ ಹೋರಾಟಗಾರರ ವೇದಿಕೆ ಕಾರ್ಯಕರ್ತರು ಪ್ರದೇಶದ ದುಸ್ಥಿತಿಯ ಕಂಡು ತುಮಕೂರು ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಮಾಡಲು ಇವರ ಮತ ಬೇಕು. ವಿಧಾನಸಭಾ
ಸದಸ್ಯರನ್ನು ಆಯ್ಕೆ ಮಾಡಲು ಇವರ ಮತ ಬೇಕು. ಅಷ್ಟೇ ಏಕೆ? ತುಮಕೂರು ಮಹಾನಗರ ಪಾಲಿಕೆಯ 11ನೇ ವಾರ್ಡಿಗೆ ಕಾರ್ಪೊರೇಟರ್ ಆಯ್ಕೆ ಮಾಡಲೂ ಇವರ ಮತ ಬೇಕು. ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳಿಗೂ ಇವರು ಬೇಕು. ಆದರೆ ನಾಗರಿಕ ಸಮಾಜದಲ್ಲಿ ಬದುಕುತ್ತಿರುವ ನಮಗೆಲ್ಲರಿಗೂ ಇವರು ಬೇಡದಂತಾಗಿದೆ” ಎಂದು ಬೆಂಗಳೂರಿನ ನೈಜ ಹೋರಾಟಗಾರರ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.

“ಇವರು ಈ ದೇಶದ ನಾಗರಿಕರು. ಇವರ ಬಳಿ ಆಧಾರ್ ಪತ್ರವಿದೆ, ರೇಷನ್ ಕಾರ್ಡ್ ಇದೆ, ಚುನಾವಣೆ ಗುರುತಿನ ಚೀಟಿಯೂ ಇದೆ. ಆದರೆ, ಮೂಲ ಸೌಕರ್ಯವಿಲ್ಲ. ಶೌಚಾಲಯ ಇಲ್ಲ, ಶುದ್ಧ ಕುಡಿಯುವ ನೀರು ಇಲ್ಲ, ಅಂಗನವಾಡಿ ಇಲ್ಲ, ರಸ್ತೆ ಇಲ್ಲ, ವಿದ್ಯುತ್ ದೀಪ ಇಲ್ಲ, ಶಾಲೆಯ ಮಾತು ಬಹು ದೂರ. ಆದರೆ ಇವರೆಲ್ಲ ನಮ್ಮ ದೇಶದ ನಾಗರಿಕರು” ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮೂಲಸೌಕರ್ಯ ಮರೀಚಿಕೆ

“ಕೂಗಳತೆಯ ದೂರದಲ್ಲಿ ಲೋಕಸಭಾ ಸದಸ್ಯ ಎಂ ಪಿ ಬಸವರಾಜ್ ಅವರ ಮನೆ ಇದ್ದರೂ ಈ ವಾರ್ಡ್‌ ನಿವಾಸಿಗರು ಸೌಕರ್ಯಗಳ ಕೊರತೆಯ ನಡುವೆ ಬದುಕಬೇಕಾಗಿರುವುದು ವಿಪರ್ಯಾಸ. ಇಲ್ಲಿನ ವಿಧಾನಸಭಾ ಸದಸ್ಯ ಜ್ಯೋತಿ ಗಣೇಶ್ ಅವರ ಹುಟ್ಟೂರು ಗಂಗಸಂದ್ರ” ಎಂದು ಅವರು ತಿಳಿಸಿದರು.

ಮೂಲಸೌಕರ್ಯ ಮರೀಚಿಕೆ 3

“ಇಲ್ಲಿ ಏಳು ಗುಡಿಸಲುಗಳು ಮಾತ್ರ ಇವೆ. ಎರಡನೇ ತಲೆಮಾರಿನ ಜನರು ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅಂದರೆ ಸುಮಾರು 50 ವರ್ಷಗಳಿಗೂ ಹೆಚ್ಚು ಕಾಲದಿಂದ ಇದೇ ಸ್ಥಳದಲ್ಲಿ ನೆಲೆಸಿದ್ದಾರೆ. ಬಲಾಢ್ಯರು ಕೆರೆ ಅಂಗಳವನ್ನು ಅತಿಕ್ರಮಿಸಿ ವಸತಿ ಸಂಕೀರ್ಣ ಕಟ್ಟಿದರೆ ಕಾನೂನು ಅನ್ವಯಿಸುವುದಿಲ್ಲ. ರಿಯಲ್ ಎಸ್ಟೇಟ್ ಮಾಫಿಯಾದವರು ಕೆರೆ ಒತ್ತುವರಿ ಮಾಡಿ ಬಡಾವಣೆ ನಿರ್ಮಿಸಿದರೆ ಕಾನೂನು ಅನ್ವಯಿಸುವುದಿಲ್ಲ. ಇಂತಹ ಬಲಾಢ್ಯರಿಗೆ ಆಡಳಿತದ ಸಂಪೂರ್ಣ ಸಹಕಾರ ಇದೆ” ಎಂದು ಆರೋಪಿಸಿದರು.

ಮೂಲಸೌಕರ್ಯ ಮರೀಚಿಕೆ

“ಧ್ವನಿ ಇಲ್ಲದ, ತುಳಿತಕ್ಕೊಳಗಾದ, ದೀನ ದುರ್ಬಲರಿಗೆ ಮಾತ್ರ ಈ ದೇಶದ ಕಾನೂನು ಅನ್ವಯವಾಗುತ್ತದೆ. ಧ್ವನಿ ಇಲ್ಲದವರ ಧ್ವನಿಯಾಗಿ ನೈಜ್ಯ ಹೋರಾಟಗಾರರ ವೇದಿಕೆಯ ಸದಸ್ಯರು ಕಾರ್ಯನಿರ್ವಹಿಸುತ್ತಿದ್ದು, ನಾಗರಿಕ ಸಮಾಜದಲ್ಲಿ ಬದುಕುತ್ತಿರುವ ನಾವೆಲ್ಲರೂ, ಪಣತೊಟ್ಟು ಇಂತಹ ಕುಟುಂಬಗಳನ್ನು ಮುಖ್ಯ ವಾಹಿನಿಗೆ ತರಲು ಕೆಲಸ ಮಾಡಬೇಕಿದೆ” ಎಂದು ಅವರು ಹೇಳಿದರು.

ಮೂಲಸೌಕರ್ಯ ಮರೀಚಿಕೆ 4

ಇಲ್ಲಿನ ನಿವಾಸಿಗಳಿಗೆ ಕೂಡಲೇ ತುಮಕೂರು ಮಹಾನಗರ ಪಾಲಿಕೆ ಮತ್ತು ತುಮಕೂರು ಜಿಲ್ಲಾಡಳಿತ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ನೀಡಿ ಮುಖ್ಯವಾಹಿನಿಗೆ ತರುವಲ್ಲಿ ಶೀಘ್ರ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು. “ಈ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದು ದೂರು ದಾಖಲಿಸಲಾಗುವುದು” ಎಂದು ತಿಳಿಸಿದರು.

“ಇಂತಹ ಗುಡಿಸಿಲಿನಿಂದಲೂ ಬಡತನಕ್ಕೆ ಸವಾಲು ಒಡ್ಡಿ ಕಷ್ಟಪಟ್ಟು ಓದಿದ ಯುವತಿಯೊಬ್ಬಳು ಎಸ್‌ಎಸ್‌ಎಲ್‌ಸಿ ಮುಗಿಸಿ ಡಿಪ್ಲೋಮಾ ಓದುತ್ತಿದ್ದಾಳೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು” ಎಂದು ವೇದಿಕೆಯ ಮುಖಂಡರು ಹೇಳಿದರು.

ಈ ಸುದ್ದಿ ಓದಿದ್ದೀರಾ? ಕರ್ನಾಟಕದ ಆನೆ, ಕೇರಳದ ಆನೆ ಅಂತ ಯಾವುದೂ ಇಲ್ಲ: ಸಚಿವ ಈಶ್ವರ್‌ ಖಂಡ್ರೆ

ಹಂದ್ರಾಳ ನಾಗಭೂಷಣ್, ಕುಣಿಗಲ್ ನರಸಿಂಹಮೂರ್ತಿ, ಜಿ ಹೆಚ್ ರಾಜು ಹಾಗೂ ಹಿರಿಯ ಸಾಮಾಜಿಕ ಹೋರಾಟಗಾರ ಎಚ್‌ ಎಂ ವೆಂಕಟೇಶ್ ಭೇಟಿ ಮಾಡಿದ ತಂಡದಲ್ಲಿ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...