ತುಮಕೂರು | ಸಮಾನ ಮನಸ್ಕರಿಂದ ಸೌಹಾರ್ದ ಯುಗಾದಿ ಆಚರಣೆ

Date:

  • ʼಬೇವು-ಬೆಲ್ಲದ ಹಂಚಿಕೆ ಕೇವಲ ಆಚರಣೆಯಲ್ಲʼ
  • ಅಸೂಯೆ ಇಲ್ಲದ ಸಮಾಜ ಕಟ್ಟೋಣ: ಮಹೇಶ್‌

ತುಮಕೂರಿನಲ್ಲಿ ಸಮಾನ ಮನಸ್ಕರು, ಹಲವು ಸಮುದಾಯದ ಮುಖಂಡರು ವಿಶೇಷ ರೀತಿಯಲ್ಲಿ ಯುಗಾದಿ ಹಬ್ಬ ಅಚರಣೆ ಮಾಡಿದ್ದಾರೆ. ನಗರದ ಟೌನ್‌ಹಾಲ್‌ ಮುಂಭಾಗ ‘ಸೌಹಾರ್ದ ಯುಗಾದಿ’ ಕಾರ್ಯಕ್ರಮ ನಡೆಸಿ, ಪರಸ್ಪರ ಬೇವು-ಬೆಲ್ಲ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತರು ತಮ್ಮ ಮನೆಯಲ್ಲಿ ತಯಾರಿಸಿ ತಂದಿದ್ದ ಹೋಳಿಗೆ ಹಾಗೂ ಸಿಹಿ ತಿಂಡಿಯನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಹಂಚಿದ್ದಾರೆ. ”ನಮ್ಮೊಳಗೆ ಯಾವುದೇ ರೀತಿಯ ಬೇದಭಾವ ಇಲ್ಲ. ನಾವು ಸಿಹಿ-ಕಹಿಗಳನ್ನು ಹಂಚಿ ತಿನ್ನುವವರಾಗಿದ್ದೇವೆ. ಈ ಮೂಲಕ ಪ್ರೀತಿಯಿಂದ ಬದುಕಬೇಕು ಎಂಬ ಗುಣವನ್ನು ನಮ್ಮ ಹಿರಿಯರು ಹುಟ್ಟುಹಾಕಿದ್ದಾರೆ. ನಮ್ಮ ಗೆಳೆಯರೆಲ್ಲರೂ ಅದನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ” ಎಂದು ಸಾಮಾಜಿಕ ಕಾರ್ಯಕರ್ತ ಮಹೇಶ್‌ ತಿಳಿಸಿದರು.

“ಬೇವು-ಬೆಲ್ಲದ ಹಂಚಿಕೆ ಕೇವಲ ಆಚರಣೆಯಲ್ಲ, ಈ ಹಬ್ಬ ನಮ್ಮ ಬದುಕಿನ ಭಾಗವಾಗಿದೆ. ಸರ್ವಜನಾಂಗದವರು ಪ್ರೀತಿಯ ಭ್ರಾತೃತ್ವದಿಂದ ಹಾಗೂ ದ್ವೇಷ, ಅಸೂಯೆ ಇಲ್ಲದ ಸಮಾಜ ಕಟ್ಟೋಣ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...