ಮಹಿಳೆಯನ್ನು ಕಲ್ಲಿನಿಂದ ಚಚ್ಚಿ ಕೊಲೆಮಾಡಿರುವ ಘಟನೆ ತುಮಕೂರು ತುರುವೇಕೆರೆ ತಾಲೂಕಿನ ಕೋಡಿಹಳ್ಳಿಯಲ್ಲಿ ಬುಧವಾರ ಸಂಜೆ ನಡೆದಿದೆ. ಹತ್ಯೆಗೈದಿರುವ ಆರೋಪಿ ಪರಾರಿಯಾಗಿದ್ದಾನೆ. 23ವರ್ಷದ ಕಾವ್ಯ ಕೊಲೆಯಾದ ಮಹಿಳೆ.
ಗಿರೀಶ್ ಎಂಬುವವರ ಪತ್ನಿ ಕಾವ್ಯಾ ದನ ಮೇಯಿಸಲು ತೋಟಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿಗೆ ತೆರಳಿರುವ ಆರೋಪಿ ಯುವಕ ಕಲ್ಲಿನಿಂದ ಆಕೆಯ ತಲೆ ಜಜ್ಜಿ ಕೊಲೆಮಾಡಿದ್ದಾನೆ. ಆರೋಪಿ ಕೂಡ ಅದೇ ಗ್ರಾಮದವನು ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೊಲೆಗೆ ನಿಖರ ಕಾರಣ ಏನೆಂಬುವುದು ತಿಳಿದುಬಂದಿಲ್ಲ.
ಸ್ಥಳಕ್ಕೆ ಆಗಮಿಸಿದ್ದ ಸಿಪಿಐ ಲೋಹಿತ್.ಬಿ.ಎನ್, ಪಿಎಸ್ಐ ರಾಮಚಂದ್ರಪ್ಪ ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.




