ಚಿಕ್ಕನಾಯಕನಹಳ್ಳಿ | ಎಸ್ ಐಆರ್ ಓಟಿನ ಹಕ್ಕು ಕಸಿಯುತ್ತಿದೆ : ಡಾ ಎಚ್ ವಿ ವಾಸು

Date:

ಎಸ್ ಐಆರ್ ನಿಂದ ಬಡವರು ಮತ್ತು ಮಹಿಳೆಯರ ಓಟಿನ ಹಕ್ಕುಗಳನ್ನು ಕಸಿಯಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಚ್. ವಿ. ವಾಸು ಆರೋಪಿಸಿದರು

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನಲ್ಲಿ ಆಯೋಜಿಸಿದ್ದ ಸಂವಿಧಾನ ಅರಿವು ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಎಸ್ ಐಆರ್ ನಿಂದ ಹೆಣ್ಣು ಮಕ್ಕಳು ಮತ್ತು ಬಡವರ ಓಟುಗಳನ್ನು ಹೆಚ್ಚು ಡಿಲೀಟ್ ಮಾಡಲಾಗುತ್ತಿದೆ. ಮತದಾರರ ಪಟ್ಟಿಗೆ ಪ್ರಜೆಗಳ ಹೆಸರು ಸೇರಿಸುವುದು ಸರ್ಕಾರದ ಕೆಲಸ. ಆದರೆ ಮತದಾರರ ಪಟ್ಟಿಯಿಂದ ಹೆಸರು ತೆಗೆಯುವುದು ಸರ್ಕಾರದ ಕೆಲಸ ಎಂದುಕೊಂಡಂತೆ ಕಾಣುತ್ತಿದೆ. ಎಸ್ಐಆರ್ ನಿಂದ ಡಿಲೀಟ್ ಆಗುತ್ತಿರುವ ಮತದಾರರ ಸಂಖ್ಯೆ ನೋಡಿದರೆ ಈ ರೀತಿ ಗೋಚರಿಸುತ್ತದೆ ಎಂದರು

1002743621

ಮತದಾನ ಮೂಲಭೂತ ಹಕ್ಕು. ಅದರೆ ಸಂವಿಧಾನ ಜಾರಿಗೂ ಮುನ್ನ ಎಲ್ಲರಿಗೂ ಮತದಾನ ಮಾಡುವ ಅವಕಾಶ ಇರಲಿಲ್ಲ. ಸೀಮಿತ ವರ್ಗಗಳು ಮಾತ್ರ ಮತದಾನದ ಹಕ್ಕು ಪಡೆದಿದ್ದರು. ಈ ಮತದಾನದ ಹಕ್ಕು ಪಡೆಯಲು ಜಗತ್ತಿನ ಹಲವು ರಾಷ್ಟ್ರದಲ್ಲಿ ಹೋರಾಟಗಳು ನಡೆದಿವೆ. ಅದರೆ ಭಾರತದಲ್ಲಿ ಅಂತಹ ಪ್ರಸಂಗ ಉದ್ಭವಿಸಲಿಲ್ಲ. ಸಂವಿಧಾನ ಎಲ್ಲರಿಗೂ ಸಮಾನ ಮತದಾನದ ಹಕ್ಕು ನೀಡಿದೆ. ಆದರೆ ಈಗ ಸಂವಿಧಾನದ ಆಶಯದ ವಿರುದ್ಧ ಚುನಾವಣಾ ಆಯೋಗ ಕೆಲಸ ಮಾಡುತ್ತಿದೆ. ಇದರ ಬಗ್ಗೆ ಧ್ವನಿ ಎತ್ತಬೇಕು ಎಂದರು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1002743619

ಅನಕ್ಷರಸ್ಥರೇ ಹೆಚ್ಚಾಗಿದ್ದ ಭಾರತದಲ್ಲಿ ದಾಖಲೆ ಒದಗಿಸುವುದೇ ಸಾವಲು ಆಗಿದೆ. ಮನೆಯಲ್ಲಿ ಕರೆಯುವುದು ಒಂದು ರೀತಿಯ ಹೆಸರಾದರೇ, ಶಾಲಾ ದಾಖಲೆಗಳಲ್ಲಿ ಒಂದು ರೀತಿಯ ದಾಖಲೆಗಳಿರುತ್ತವೆ. ಹಾಗಾಗಿ ಪ್ರಸ್ತುತ ಚುನಾವಣೆ ಆಯೋಗ ಎಸ್ ಐಆರ್ ಗೆ ರೂಪಿಸಿರುವ ಮಾನದಂಡಗಳಿಂದ ಮಹಿಳೆಯರು, ಬಡವರು ಮತದಾನದ ಹಕ್ಕು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಚುನಾವಣಾ ಆಯೋಗ ಈ ಮಟ್ಟಿನ ಧೖರ್ಯ ಮಾಡಲು ಕೇಂದ್ರ ಸರ್ಕಾರ ಚುನಾವಣಾ ಆಯುಕ್ತರು ಏನು ಮಾಡಿದರು ಅವರನ್ನು ಶಿಕ್ಷೆಗೆ ಒಳಪಡಿಸುವಂತಿಲ್ಲ ಎಂದು ತಂದಿರುವ ಕಾಯಿದೆಯಿಂದ ಎಸ್ ಐಆರ್ ಅಂತಹ ಹುಚ್ಚಾಟಗಳು ನಡೆಯುತ್ತಿವೆ ಎಂದರು.

1002743620

ಎದ್ದೇಳು ಕರ್ನಾಟಕದ ಮಲ್ಲಿಗೆ ಸಿರಿಮನೆ ಮಾತನಾಡಿ ಎಸ್ ಐಆರ್ ನಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಮತ್ತು ಸಂವಿಧಾನದ ಬಗ್ಗೆ ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಲು ಸಂವಿಧಾನ ರಕ್ಷಣಾ ಪಡೆ ಗಟ್ಟಿಯಾಗಿ ಕಟ್ಟಬೇಕು. ನಾವು ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ. ಸಮಾಜದಲ್ಲಿ ಆಗುವ ಎಲ್ಲ ಅನ್ಯಾಯದ ಬಗ್ಗೆಯೂ ನಾಗರಿಕ ಸಮಾಜ ಮತ್ತು ಸಾಮಾಜಿಕ ಸಂಘಟನೆಗಳು ಹೋರಾಟ ನಡೆಸುತ್ತ ಬಂದಿವೆ. ಎಸ್ಐಆರ್ ನಿಂದ ಓಟಿನ ಹಕ್ಕನ್ನೆ ಕಸಿಯುವ ಹುನ್ನಾರ ನಡೆದಿದೆ. ಇದರ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ. ಸತೀಶ್, ಎದ್ದೇಳು ಕರ್ನಾಟಕದ ಜಿಲ್ಲಾ ಸಂಚಾಲಕಿ ಇಂದಿರಮ್ಮ, ರಾಮಕೃಷ್ಣಪ್ಪ ಸೇರಿದಂತೆ ಅನೇಕರು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಅಂತರ್ಜಾತಿ ವಿವಾಹವಾಗಿರುವ ದಂಪತಿಯ ಕೊಲೆ ಯತ್ನ: ರಕ್ಷಣೆ ಕೋರಿ ಎಸ್‌ಪಿಗೆ ದೂರು

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕಾತ್ರಿಕೆ ಹಾಲ್ ಗ್ರಾಮದಲ್ಲಿ ಅಂತರ್ಜಾತಿ ವಿವಾಹವಾಗಿರುವ...

ತುಮಕೂರು | ಚಿಕ್ಕನಾಯಕನಹಳ್ಳಿಯಲ್ಲಿ ಗ್ಯಾಂಗ್ ರೇಪ್; ಮೂವರು ಕಾಮುಕರ ಬಂಧನ

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಯುವತಿಯೊಬ್ಬಳನ್ನು ಗ್ಯಾಂಗ್ ರೇಪ್ ಮಾಡಿರುವ ಆರೋಪದಲ್ಲಿ...

ಚಿಕ್ಕನಾಯಕನಹಳ್ಳಿ | ತಲ್ಲಣಗಳನ್ನು ನಿರುದ್ವಿಗ್ನತೆಯಲ್ಲಿ ದಾಖಲಿಸುವ ಬರಹಗಾರ, ಗುರುಪ್ರಸಾದ್ ; ಅಗ್ರಹಾರ ಕೃಷ್ಣಮೂರ್ತಿ

ತನ್ನ ಪರಂಪರೆಗಳಿಗೆ ಮತ್ತೆಮತ್ತೆ ಹಿಂದಿರುಗುವ ಬರಹಗಾರ, ಗುರುಪ್ರಸಾದ್ ; ಡಾ  ರವಿಕುಮಾರ್...