ಗುಬ್ಬಿ ತಾಲ್ಲೂಕಿನ ಚೇಳೂರು ಸಮೀಪದ ಕೋಡಿಪಾಳ್ಯ ಗ್ರಾಮದ ಗೇಟ್ ಬಳಿಯ ತುಮಕೂರು ರಸ್ತೆಯಲ್ಲಿ ಕಾರು ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ನಡೆದಿದೆ.
ಡಾಬಸ್ ಪೇಟೆ ಬಳಿಯ ತ್ಯಾಮಗೊಂಡ್ಲು ಗ್ರಾಮದ ವಸಿಂಪಾಷ (25) ಎಂಬ ವ್ಯಕ್ತಿ ಅಪಘಾತಕ್ಕಿಡಾಗಿ ಮೃತಪಟ್ಟ ದುರ್ದೈವಿ.
ಚೇಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕೋಡಿಪಾಳ್ಯ ಗೇಟ್ ಬಳಿ ತುಮಕೂರು ಕಡೆಯಿಂದ ಬಂದ ಮಾರುತಿ ಸುಜುಕಿ ಕಂಪನಿಯ ಕಾರು ವೇಗವಾಗಿ ಚಾಲನೆ ಮಾಡಿಕೊಂಡು ದ್ವಿಚಕ್ರ ವಾಹನ ಸವಾರನಿಗೆ ಗುದ್ದಿದ ಪರಿಣಾಮ ಬೈಕ್ ಸವಾರ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಚೇಳೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.





