ಸಾಹಿತ್ಯ ಪರಂಪರೆ, ರಂಗ ಚಟುವಟಿಕೆ ಉಳಿಸಿ ಬೆಳಸುವ ನಿಟ್ಟಿನಲ್ಲಿ ಡಾ.ಗುಬ್ಬಿ ವೀರಣ್ಣ ಟ್ರಸ್ಟ್, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹನಿ ನಿಧಿ ಸಾಹಿತ್ಯ ಸಾಂಸ್ಕೃತಿಕ ಕಲಾ ಟ್ರಸ್ಟ್ ಸಹಯೋಗದಲ್ಲಿ ಫೆಬ್ರವರಿ 1 ಭಾನುವಾರ ಸಂಜೆ 3.30 ಕ್ಕೆ ಹುಣ್ಣಿಮೆ ಸಂಪದ, ರಂಗಗೀತೆಗಳು ಕವಿಗೋಷ್ಠಿ ಕಾರ್ಯಕ್ರಮವನ್ನು ಪಟ್ಟಣದ ಗುಬ್ಬಿ ವೀರಣ್ಣ ರಂಗಮಂದಿರದ ಅಂಗಳದಲ್ಲಿ ಮೆಟ್ಟಿಲು ಕಾರ್ಯಕ್ರಮವಾಗಿ ಆಯೋಜಿಸಲಾಗಿದೆ.
ಹಾಸ್ಯ ಕಲಾವಿದ ರಿಚರ್ಡ್ ಲೂಯಿಸ್ ನೇತೃತ್ವದ ತಂಡದಿಂದ ಹಾಸ್ಯ ಲೇಪಿತ ರಂಗಗೀತೆಗಳ ಗಾಯನ ಕಾರ್ಯಕ್ರಮ ತದ ನಂತರ ಈಗಾಗಲೇ ಆಯ್ಕೆಯಾದ ಸಾಹಿತಿಗಳ ಕವಿಗೋಷ್ಠಿ ನಡೆಯಲಿದೆ. ಸಾಹಿತ್ಯಾಸಕ್ತರು, ರಂಗಾಸಕ್ತರು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಟ್ರಸ್ಟ್ ಮನವಿ ಮಾಡಿದೆ.





