ಗುಬ್ಬಿ | ಮಕ್ಕಳ ಉಜ್ವಲ ಭವಿಷ್ಯಕ್ಕೆ ವಿಜ್ಞಾನ ಅತ್ಯಗತ್ಯ : ಸಿ.ಜಿ.ಲೋಕೇಶ್

Date:

ಕಲಿಕೆಗೆ ವಯಸ್ಸಿಲ್ಲ ಎಂಬ ಮಾತು ಅಕ್ಷರಶಃ ಸತ್ಯ. ಅದರಲ್ಲೂ ವಿಜ್ಞಾನ ಎಂಬುದು ಎಲ್ಲಾ ವಯೋಮಾನದವರು ಕಲಿಯಬೇಕಿದೆ. ಇಂತಹ ವಿಜ್ಞಾನ ವಿಷಯವನ್ನು ಗ್ರಾಮೀಣ ಭಾಗದ ಮಕ್ಕಳಿಗೆ ಉಚಿತವಾಗಿ ತಿಳಿಸುವ ಕೆಲಸ ಶಿಕ್ಷಕ ರವಿ ಹಾಗೂ ಸ್ಥಳೀಯ ಗ್ರಾಮಸ್ಥರು ನಡೆಸಿದ್ದು ಶ್ಲಾಘನೀಯ. ಮಕ್ಕಳ ಉಜ್ವಲ ಭವಿಷ್ಯಕ್ಕೆ ವಿಜ್ಞಾನ ಕಲಿಕೆ ಅತ್ಯಗತ್ಯ ಎಂದು ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ತಿಳಿಸಿದರು.

ಗುಬ್ಬಿ ತಾಲ್ಲೂಕಿನ ಕೋಡಿತೋಟ ಗ್ರಾಮದಲ್ಲಿ ಹಳೆಗುಬ್ಬಿ ಗ್ರಾಮಸ್ಥರು ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಭೂಮಿ ಮೇಲಿನ ಎಲ್ಲಾ ವಿಚಾರದಲ್ಲೂ ವಿಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ. ಕುತೂಹಲ, ಸಂಶೋಧನೆ, ಸತ್ಯಾಸತ್ಯತೆ ಅರಿವು ಹಾಗೂ ವಿಜ್ಞಾನ ಪ್ರಯೋಗ ಎಲ್ಲಾ ವಿಚಾರದಲ್ಲೂ ಇರುವ ಹಿನ್ನಲೆ ವಿಜ್ಞಾನ ವಿಷಯ ಮಕ್ಕಳ ಕಲಿಕೆಗೆ ಬೇಕಿದೆ ಎಂದರು.

ಗ್ರಾಮೀಣ ಮಕ್ಕಳಿಗೆ ವಿಜ್ಞಾನ ಅರಿವು ಮೂಡಿಸಲು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಸಣ್ಣ ಗ್ರಾಮದಲ್ಲಿ ಆಯೋಜನೆ ಮಾಡಿದ ಶಿಕ್ಷಕ ರವಿ ಪ್ರತಿಭಾವಂತ. ಆದರೆ ಶಿಕ್ಷಣ ಇಲಾಖೆ ಇಂತಹ ಪ್ರತಿಭೆಯನ್ನು ಗುರುತಿಸಿಲ್ಲ. ಬದುಕು ಕಟ್ಟಿಕೊಳ್ಳಲು ಕೊನೆ ಪಕ್ಷ ಅತಿಥಿ ಶಿಕ್ಷಕ ಹುದ್ದೆ ನೀಡಬೇಕು ಎಂದು ಆಗ್ರಹಿಸಿದ ಅವರು ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಸುತ್ತಾಡಿ ಮಕ್ಕಳಿಗೆ ಉಚಿತ ಶಿಕ್ಷಣ ಬೋಧನೆ ಮಾಡುತ್ತಿರುವ ರವಿ ಅವರಿಂದ ಮಕ್ಕಳು ಮತ್ತಷ್ಟು ಬೆಳೆಯುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹಳೇಗುಬ್ಬಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಚನ್ನ ಸೋಮಯ್ಯ ಮಾತನಾಡಿ ಪರಿಸರ ವಿಜ್ಞಾನದೊಂದಿಗೆ ಮಾನವ ಅವಿನಾಭಾವ ಸಂಬಂಧ ಹೊಂದಿದ್ದಾನೆ. ಪರಿಸರವನ್ನು ರಕ್ಷಿಸಬೇಕು. ಹಾಗೆಯೇ ಆಹಾರ ಸರಪಣಿಯಲ್ಲಿಯ ಪ್ರತಿಯೊಂದು ಜೀವಿಯ ಕಾರ್ಯ ಹಾಗೂ ಅವುಗಳ ಮಹತ್ವದ ಕುರಿತು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾದ ಅಗತ್ಯವಿದೆ. ಇದು ವಿಜ್ಞಾನಕ್ಕೆ ಪೂರಕ ಎಂದ ಅವರು ಮಾನವನಿಗಾಗಿ ವಿಜ್ಞಾನದ ಮಹತ್ವ, ಅವುಗಳನ್ನು ಧನಾತ್ಮಕವಾಗಿ ಬಳಸಿಕೊಂಡಾಗ ಮಾತ್ರ ಒಳ್ಳೆಯ ಪ್ರಯೋಜನವಾಗುವುದು ಎಂದರು.

ಶಿಕ್ಷಕ ರವಿ ಮಾತನಾಡಿ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಮೂಡಿಸುವ ಕೆಲಸ ವಿಜ್ಞಾನದಿಂದ ಆಗಬೇಕಿದೆ.
ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸಬೇಕು. ಹಾಗೆಯೇ
ಪ್ರಯೋಗಗಳ ಮೂಲಕ ಹೊಸ ಅವಿಷ್ಕಾರಗಳನ್ನು ಮಾಡಲು ವಿದ್ಯಾರ್ಥಿಗಳನ್ನು ಹುರಿದುಂಬಿಸಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಸಕ್ತ ಬೆಳವಣಿಗೆ ಮತ್ತು ಅಭಿವೃದ್ಧಿಯ ಮಹತ್ವದ ಬಗ್ಗೆ ಜಾಗೃತಿ ಮತ್ತು ವಿಜ್ಞಾನ, ತಂತ್ರಜ್ಞಾನ, ಗಣಿತ ಹಾಗೂ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಪ್ರಯೋಗಗಳ ಮೂಲಕ ನಾವೀನ್ಯತೆಯನ್ನು ಮೂಡಿಸಲು ಪ್ರೇರಣೆ ಮಕ್ಕಳಿಗೆ ನೀಡಬೇಕು ಎಂದು ವಿಜ್ಞಾನ ದಿನಾಚರಣೆ ಮತ್ತು ಸಿ.ವಿ.ರಾಮನ್ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ರೈತಸಂಘದ ಉಪಾಧ್ಯಕ್ಷ ಗಂಗರೇವಯ್ಯ, ಸತ್ತಿಗಪ್ಪ, ಸ್ಥಳೀಯರಾದ ನಾಗಣ್ಣ, ಲಕ್ಷ್ಮಣ್, ರೇವಣ್ಣ, ನರಸಿಂಹಮೂರ್ತಿ, ಸಿದ್ಧಲಿಂಗಪ್ಪ, ಮಾರುತಿ, ಗಿರೀಶ್, ಭರತ್, ಮಂಜುನಾಥ್, ಮಹೇಶ್ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಎಲ್ಲಾ ವರ್ಗಕ್ಕೂ ದಕ್ಕಿದ ಬಜೆಟ್ : ಶಾಸಕ ಎಸ್.ಆರ್.ಶ್ರೀನಿವಾಸ್

ಅಹಿಂದ ವರ್ಗ ಸೇರಿದಂತೆ ಎಲ್ಲಾ ವರ್ಗದ ಜನರಿಗೂ ಒಪ್ಪಿಗೆಯಾದ ಬಜೆಟ್ ಈ...

ಗುಬ್ಬಿ ಪಟ್ಟಣ ವ್ಯಾಪ್ತಿಯಲ್ಲಿ ಇ-ಖಾತೆ ಆಂದೋಲನ : ಜಿಲ್ಲಾಧಿಕಾರಿ ಶುಭ ಕಲ್ಯಾಣ್

ಗುಬ್ಬಿ ಪಟ್ಟಣದ ವ್ಯಾಪ್ತಿಯಲ್ಲಿ ವಾರ್ಡ್ ವಾರು ಇ-ಖಾತೆ ಆಂದೋಲನ ನಡೆಸಲು ಪಟ್ಟಣ...

ಗುಬ್ಬಿ | ವಿಜೃಂಭಣೆಯಿಂದ ಜರುಗಿದ ಗುಬ್ಬಿಯಪ್ಪನ ಬೆಳ್ಳಿ ಪಲ್ಲಕ್ಕಿ ಉತ್ಸವ

ಇತಿಹಾಸ ಪ್ರಸಿದ್ಧ ಶ್ರೀ ಗೋಸಲ ಚನ್ನಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ...

ಗುಬ್ಬಿ | ಸರ್ಕಾರಿ ಹುದ್ದೆ ಭರ್ತಿಗೆ ಒತ್ತಾಯಿಸಿದ ಯುವಶಕ್ತಿ ಸಿಡಿಯಲಿದೆ : ನಿಖಿಲ್ ಕುಮಾರಸ್ವಾಮಿ

ಲಕ್ಷಾಂತರ ಸರ್ಕಾರಿ ಹುದ್ದೆ ಭರ್ತಿಗೆ ಸರ್ಕಾರ ಮೀನಾ ಮೇಷ ಎಣಿಸಿದೆ. ಮುಖ್ಯಮಂತ್ರಿಗಳು...