ಕರ್ನಾಟಕದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಖಾತೆ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಮಧುಗಿರಿಯ ತನ್ನ ಸಂಬಂಧಿಗಳ ಖಾಸಗಿ ಕಾರ್ಯಕ್ರಮಕ್ಕೆ ತೆರಳುವ ಮಾರ್ಗ ಮಧ್ಯೆ ಕೊರಟಗೆರೆ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಸಚಿವರನ್ನು ಸ್ವಾಗತಿಸಿದ ಮಾದರ ಮಹಾಸಭಾ ಮತ್ತು ಮಾದಿಗ ಸಂಘಟನೆಗಳ ಮುಖಂಡರು ಮುಂದಿನ ದಲಿತ ಮುಖ್ಯಮಂತ್ರಿ ಕೆ.ಎಚ್ ಮುನಿಯಪ್ಪ ಗೆ ಜೈ… ಮುಂದಿನ ದಲಿತ ಮುಖ್ಯಮಂತ್ರಿ ಕೆ.ಎಚ್ ಮುನಿಯಪ್ಪಜಿ ಗೆ ಜೈ.. ಎಂಬ ಏರು ಧ್ವನಿಯ ಘೋಷಣೆಗಳು ಮಾರ್ದನಿಸಿದ ಘಟನೆ ನಡೆಯಿತು.
ಮಧುಗಿರಿ ತಾಲೂಕಿನ ಜಡಗೊಂಡನಹಳ್ಳಿ ಗ್ರಾಮದಲ್ಲಿ ಸಂಬಂಧಿಕರ ಖಾಸಗಿ ಕಾರ್ಯಕ್ರಮದ ನಿಮಿತ್ತ ತೆರಳುತ್ತಿದ್ದ ಸಚಿವರನ್ನ ತುಮಕೂರು ಜಿಲ್ಲೆಯ ಮಾದಿಗ ಸಮುದಾಯದ ಮುಖಂಡರು ಪಟ್ಟಣದ ರಿಂಗ್ ರಸ್ತೆಯಲ್ಲಿ ಜಮಾವಣೆಗೊಂಡು ಮುಂದಿನ ಸಿಎಂ ಮುನಿಯಪ್ಪ ಎಂಬ ಘೋಷಣೆ ಮೊಳಗಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ..
ಇದೇ ಸಂದರ್ಭದಲ್ಲಿ ಸುವರ್ಣಗಿರಿ ಸಂಜೀವಿನಿ ತಪ್ಪೋ ಕ್ಷೇತ್ರ ಸಿದ್ದರಬೆಟ್ಟ ಪ್ರಾಂತ್ಯವನ್ನು ಆಳಿದ ಕುರಂಗರಾಜ ಅಳಿದ ನೆಲವನ್ನ ಗುರುತಿಸಿ ಸಂರಕ್ಷಿಸುವುದರ ಜೊತೆಗೆ ಕುರಂಗರಾಜನ ಪ್ರತಿಷ್ಠಾನದ ಬೆಳವಣಿಗೆಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಬೇಕು ಎಂಬ ಮನವಿಯನ್ನ ಕೊರಟಗೆರೆ ತಾಲೂಕು ಮಾದರ ಮಹಾಸಭಾ ಅಧ್ಯಕ್ಷ ವಿಭೂತಿ ಸಿದ್ದಪ್ಪ, ದಾಡಿ ವೆಂಕಟೇಶ್ ಅವರ ನೇತೃತ್ವದಲ್ಲಿ ಮನವಿ ಸಲ್ಲಿಕೆ ಮಾಡಲಾಯಿತು.
ತುಮಕೂರು ಜಿಲ್ಲಾ ಮಾದರಾ ಮಹಾಸಭಾ ಜಿಲ್ಲಾಧ್ಯಕ್ಷ ಹುಚ್ಚಯ್ಯ ಅವರು ಶತಶತಮಾನಗಳಿಂದ ಶೋಷಣೆ ತುಳಿತ ಕೊಳಗಾದ ಮಾದಿಗ ಸಮುದಾಯದ ಯುವಕರನ್ನ ಸಂಘಟಿಸಿ ಮುನ್ನಡೆಸಬೇಕು ಎಂದು ಸಚಿವರಲ್ಲಿ ಬೇಡಿಕೆ ಇಟ್ಟರು.
ಇದೇ ಸಂದರ್ಭದಲ್ಲಿ ಮಾದರ ಮಹಾಸಭಾದ ಮಾಜಿ ಶಾಸಕ ಗಂಗಾ ಹನುಮಯ್ಯ, ಜಿಲ್ಲಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಉಪಾಧ್ಯಕ್ಷರಾದ ಡಾ. ಎಲ್ ಮುಕುಂದರಾಜ್, ಕೊಟ್ಟ ಶಂಕರ್ , ಗೂಳರಿವೆ ನಾಗರಾಜು, ಕೊರಟಗೆರೆ ತಾಲೂಕು ಮಾದರ ಮಹಾಸಭಾದ ವಿಭೂತಿ ಸಿದ್ದಪ್ಪ ದಾಡಿ ವೆಂಕಟೇಶ್,ಲಕ್ಷ್ಮೀ ನರಸಪ್ಪ, ವೀರ ಕ್ಯಾತರಾಯ, ಟೌನ್ ಮಾರುತಿ, ಗೋಪಿ, ತೋವಿನಕೆರೆಹನುಮಂತರಾಯಪ್ಪ,ಕಾಮರಾಜನಹಳ್ಳಿ ದೊಡ್ಡಯ್ಯ,ಗಂಗಣ್ಣ, ಚಿಂಪುಗಾನಹಳ್ಳಿ ರವಿ,ನೇಗಲಾಲ ಸಿದ್ದೇಶ್ ಸೇರಿದಂತೆ ಮಾದಿಗ ಸಮುದಾಯದ ವಿವಿಧ ಮುಖಂಡರುಗಳು ಹಲವರು ಉಪಸ್ಥಿತರಿದ್ದರು.





