ಕೊರಟಗೆರೆ ಪಟ್ಟಣದ 4ನೇ ವಾರ್ಡ್ ನ ಕಾವಲುಬೀಲು ಗ್ರಾಮದಲ್ಲಿ ಪ್ರತ್ಯಕ್ಷವಾದ ಚಿರತೆ, ಏಕಾಏಕಿ ಸಾಕು ನಾಯಿಯ ಮೇಲೆ ಮನೆಯ ಮುಂದೆಯೇ ದಾಳಿ ಮಾಡಿದ್ದು, ಮಕ್ಕಳು, ಮಹಿಳೆಯರು ಸುತ್ತಮುತ್ತಲಿನ ರೈತರು ಆತಂಕದ ಮಡುವಿನಲ್ಲಿ ಬದುಕುವ ಸಮಸ್ಯೆ ಸೃಷ್ಟಿ ಯಾಗಿದೆ. ವಿಷಯ ತಿಳಿದು ತಕ್ಷಣ ಅರಣ್ಯ ಇಲಾಖೆ ಸೂಕ್ತಕ್ರಮ ವಹಿಸಲು ಮುಂದಾದ ಘಟನೆ ಬುಧವಾರ ಸಂಜೆ ನಡೆದಿದೆ.
ಪಟ್ಟಣಕ್ಕೆ ಹೊಂದಕೊಂಡಂತಿರು ಹೀರೆಬೆಟ್ಟ ರಕ್ಷಿತ ಅರಣ್ಯ ಪ್ರದೇದಲ್ಲಿನ ಕಾಡು ಪ್ರಾಣಿಗಳ ಉಪಟಳದಿಂದ ಇಲ್ಲಿನ ಜನತೆ ಭೀತಿಯಿಂದ ತಿರುಗಾಡುವ ಪರಿಸ್ಥಿತಿ ಶೋಚನೀಯ. ಅರಣ್ಯ ಇಲಾಖೆ ಸಿಬ್ಬಂದಿಗಳು ಇನ್ನೂ ಮುಂದಾದರು ತತಕ್ಷಣ ಸೂಕ್ತಕ್ರಮವಹಿಸಿ ಸ್ಥಳೀಯ ನಿವಾಸಿಗಳಿಗೆ ಅನುಕೂಲ ಮಾಡುವಂತೆ ಈ ಮೂಲಕ ಮನವಿ ಮಾಡಿದ್ದಾರೆ.
ಕೇಂದ್ರ ಸ್ಥಾನ ಮರೆತ ಆರ್.ಎಫ್ ಓ ಗಳಿಂದಲೇ ಕಾಡುಪ್ರಾಣಿಗಳ ಹಾವಳಿ ಹೆಚ್ಚುತ್ತಿದ್ದು, ತಾಲ್ಲೂಕಿನಲ್ಲಿ ಕಾಡುಪ್ರಾಣಿಗಳು ಮೇಕೆ, ಕುರಿ, ನಾಯಿ ಸೇರಿದಂತೆ ಮನುಷ್ಯನ ಮೇಲೆ ಎರಗಲು ಮುಖ್ಯ ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆ ಡಿಆರ್ ಎಫ್ ಓ ದಿಲೀಪ್ ಸೇರಿದಂತೆ ಸಿಬ್ಬಂದಿ ಗಳು ಸ್ಥಳಕ್ಕೆ ಬೇಟಿ ಪರೀಶಿಲಿಸಿ ಸ್ಥಳೀಯರಿಗೆ ಸುರಕ್ಷತೆಗಳ ಬಗ್ಗೆ ಸಲಹೆ ಸೂಚನೆ ನೀಡಿದರು.





