ಜನಸಂಪರ್ಕ ಸಭೆ ನಡೆಸುತ್ತಿದ್ದ ಜಿಲ್ಲಾಧಿಕಾರಿ ಶುಭಾಕಲ್ಯಾಣ್ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹೊರಗಡೆ ಕಾಯುತ್ತಿರುವ ವಿಚಾರ ತಿಳಿದು ಸಭೆಯಿಂದ ಹೊರನಡೆದು ರೈತರ ಬಳಿ ಬಂದು ಅವರ ಮನವಿ ಸ್ವೀಕರಿಸಿ ಸಕಾರಾತ್ಮಕವಾಗಿ ಸ್ಪಂದಿಸಿ ಸಮಸ್ಯೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು.
ಮಧುಗಿರಿ ತಾಲೂಕು ಕಚೇರಿಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜೆ.ಸಿ.ಶಂಕರಪ್ಪ ಮಾತನಾಡಿ, ತಾಲೂಕಿನ ಹತ್ತಿ ಹಾಗೂ ಹುಣಸೆ ಬೆಳೆಗಾರರು ಹೆಚ್ಚು ನಷ್ಟವನ್ನು ಅನುಭವಿಸುತ್ತಿದ್ದಾರೆ. ಹತ್ತಿ ಬೆಳೆಯುವ ರೈತರಿಗೆ ಮಧ್ಯವರ್ತಿಗಳ ತಪ್ಪಿಸಲು ಮನವಿ ಮಾಡಿ, ಹುಣಸೆ ಬೆಳೆಗಾರರಿಗೆ ಸಹಕಾರ ಸಂಘ ಸ್ಥಾಪನೆ ಅಥವಾ ಸಂಸ್ಕರಣಾ ಘಟಕ ನಿರ್ಮಿಸಲು ಒತ್ತಾಯಿಸಿದರು. ಹಾಗೂ ಮಳೆಯ ಆಭಾವದಿಂದ ಶೇಂಗಾ, ಜೋಳ, ದ್ವಿದಳ ಧಾನ್ಯಗಳ ಉತ್ಪಾದನೆ ನಿಂತಿದ್ದು ಶೀಘ್ರ ಎತ್ತಿನಹೊಳೆ ನೀರು ಕರೆಗಳಿಗೆ ಹರಿಸಬೇಕೆಂದರು. ಕೊಳವೆ ಬಾವಿಯ ಆಕ್ರಮ-ಸಕ್ರಮ ಯೋಜನೆ ಮುಂದುವರಿಕೆ ಸೇರಿ 30 ವರ್ಷದಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡಿಲ್ಲ ಅರಣ್ಯ ಇಲಾಖೆಯ ಕಾಟ ತಪ್ಪಿಸಿ ದಾಖಲೆ ನೀಡಬೇಕು. ಕಂದಾಯ ಇಲಾಖೆಯಲ್ಲಿ ಗುತ್ತಿಗೆ ಆಧಾರಿತ ಕೆಲಸಗಳು ಮಾತ್ರ ನಡೆಯುತ್ತಿದ್ದು ಭ್ರಷ್ಟಾಚಾರ ಮಿತಿಮೀರಿದೆ. ಹಾಗೂ ಗ್ರಾ.ಪಂ.ಗಳಲ್ಲಿ ನರೇಗಾ ಯೋಜನೆ ಹಳ್ಳಹಿಡಿದ ವಾಹನವಾಗಿದೆ ಎಂದರಲ್ಲದೆ ಕೊಳವೆ ಬಾವಿ ಕೊರೆಯುವ ಲಾರಿ ಮಾಲೀಕರಿಗೆ ನಿರ್ದಿಷ್ಟ ದರ ಪಡೆಯುವಂತೆ ಸೂಚಿಸಲು ಒತ್ತಾಯಿಸಿದರು
ಸ್ವತ್ತು ಸಮಸ್ಯೆಗೆ ಶೀಘ್ರ ಪರಿಹಾರ ರೈತರ ಮನವಿ ಆಲಿಸಿ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ , ಈ ಭಾಗದ ಹುಣಸೆ ಬೆಳೆಗೆ ಸಂಸ್ಕರಣಾ ಘಟಕ ಇಲ್ಲದೆ ಸಹಕಾರ ಮಂಡಳಿಯನ್ನು ಸ್ಥಾಪಿಸಲು ಗಂಭೀರವಾಗಿ ಚಿಂತಿಸಿದ್ದೇವೆ. ಕೇಂದ್ರ ಅಥವಾ ರಾಜ್ಯ ಸರ್ಕಾರದ ಅನುದಾನ ತಂದು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಚರ್ಚಿಸುತ್ತೇನೆ.ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಹತ್ತಿ ಬೆಳೆಗಾರರಿಗೆ ಕಂಪನಿಯವರಿಂದ ತೊಂದರೆಯಾಗದಂತೆ ಕ್ರಮವಹಿಸುತ್ತೇನೆ ಕೊಳವೆ ಬಾವಿ ಕೊರೆಯುವಲ್ಲಿ ರೈತರಿಗೆ ನ್ಯಾಯ ಕೊಡಿಸುತ್ತೇವೆ ಎತ್ತಿನಹೊಳೆ ಯೋಜನೆ ತ್ವಂತವಾಗಿ ನಡೆಯುತ್ತಿದ್ದು ಶೀಘ್ರವಾಗಿ ಕರೆಗಳಿಗೆ ನೀರು ಹರಿಯುತ್ತದೆ. ಕಂದಾಯ ಇಲಾಖೆಯ ವಿಳಂಬಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಇ-ಸ್ವತ್ತು ಸಮಸ್ಯೆಗೆ ಆನ್ ಲೈನ್ ಸಮಸ್ಯೆಯಿದ್ದು ಹಂತ ಹಂತವಾಗಿ ಬಗೆಹರಿಯಲಿದೆ.
ಈ ಸಂದರ್ಭದಲ್ಲಿ ಎಸಿ ಗೊಟೂರು ಶಿವಪ್ಪ ತಹಶೀಲ್ದಾರ್ ಶ್ರೀನಿವಾಸ್ , ಇಓ ಲಕ್ಷ್ಮಣ್, ರೈತ ಸಂಘದ ರಾಜ್ಯ ವಿಭಾಗೀಯ ಕಾರ್ಯದರ್ಶಿ ದೊಡ್ಡಮಾಳಯ್ಯ, ಮಹಿಳಾಧ್ಯಕ್ಷೆ ನಾಗರತ್ನಮ್ಮ, ನಾಗರಾಜು, ನರಸಿಂಹಮೂರ್ತಿ ಇತರರಿದ್ದರು.





