ಕನ್ನಡ ನಾಡಿನ ದಾರ್ಶನಿಕ ಪರಂಪರೆಯ ವಿದ್ವಾಂಸ ಡಾ. ರಹಮತ್ ತರೀಕೆರೆ ಅವರಿಗೆ ಶಿರಾ ಸೀಮೆ ಸಾಂಸ್ಕೃತಿಕ ವೇದಿಕೆಯಿಂದ ‘ಗಣೆ ಗೌರವ’ ನೀಡಿ ಗೌರವಿಸಲಾಗುತ್ತಿದೆ.
ಫೆ.15ರ ಮಹಾಶಿವರಾತ್ರಿ ದಿನದಂದು ಜಾನಪದ ಪುರಾಣ ಪ್ರಸಿದ್ಧ ಜುಂಜಪ್ಪನ ಮೂಲ ನೆಲೆ ಜುಂಜಪ್ಪನ ಗುಡ್ಡೆ ಬಳಿ ನಡೆಯುವ ಅಹೋರಾತ್ರಿ ಸಾಂಸ್ಕೃತಿಕ ಜಾಗರಣೆ ‘ಶಿವೋತ್ಸವ’ ದಲ್ಲಿ ಈ ಗಣೆ ಗೌರವ ನೀಡಲಾಗುತ್ತದೆ.
ಗಣೆ ಗೌರವ ಅಂದರೆ ಆದಿಮ ಸಂಗೀತ ವಾದ್ಯ ಗಣೆ ನೀಡಿ, ಕರಿ ಕಂಬಳಿ ಕೊಟ್ಟು ಮುತ್ತುಗ-ತಂಗ್ಟೆ ಹೂವಿನ ಸಮರ್ಪಣೆಯೊಂದಿಗೆ ಜನಪದ ವಾದ್ಯ ವೇಳದಲ್ಲಿ ಸಲ್ಲಿಸುವ ಗೌರವವಾಗಿದೆ.
ಇದನ್ನೂ ಓದಿ: ತುಮಕೂರು | ಫೆ. 12 ಕ್ಕೆ ಸ್ವಯಂ ಪ್ರೇರಿತ ಬಂದ್ ಗೆ ರೈತ –ಕಾರ್ಮಿಕರ ಸಮಾವೇಶದಲ್ಲಿ ಕರೆ
ಈವರೆಗೆ ಕಡಿದಾಳ್ ಶಾಮಣ್ಣ, ದೇಶಿ ಪ್ರಸನ್ನ, ಕಾಳೇಗೌಡ ನಾಗವಾರ, ವೈ ಎಸ್ ವಿ ದತ್ತ, ಬಿ ಟಿ ಲಲಿತಾ ನಾಯಕ್, ಮೀರಸಾಬಿಹಳ್ಳಿ ಶಿವಣ್ಣ ತೀ.ನಂ. ಶಂಕರನಾರಾಯಣ, ಕೋಟಿಗಾನಹಳ್ಳಿ ರಾಮಯ್ಯರವರಿಗೆ ಈ ಗಣೆ ಗೌರವ ನೀಡಲಾಗಿದೆ.
ಈ ಅಹೋರಾತ್ರಿ ಸಾಂಸ್ಕೃತಿಕ ಜಾಗರಣೆ ‘ಶಿವೋತ್ಸವ’ದಲ್ಲಿ ನಾಟಕ, ಸಂಗೀತ, ಜಾನಪದ ಕಾರ್ಯಕ್ರಮಗಳು ನಡೆಯಲಿದ್ದು, ನಾಡಿನ ಗಮನ ಸೆಳೆಯುವ ಉತ್ಸವ ಇದಾಗಿದೆ.





