ಶಿರಾ | ವೈಜ್ಞಾನಿಕ ಮನೋಭಾವಕ್ಕಾಗಿ ವಿಜ್ಞಾನ ನಡಿಗೆ

Date:

 ಚಿಗುರು ಯುವಜನ ಸಂಘ, ಅಮಲಗೊಂದಿ ಹಾಗೂ ಅಖಿಲ ಭಾರತ ವಿಚಾರವಾದಿಗಳ ಒಕ್ಕೂಟ-ಕರ್ನಾಟಕ ಸಹಯೋಗದಲ್ಲಿ ಆಯೋಜಿಸಿದ್ದ ವೈಜ್ಞಾನಿಕ ಮನೋಭಾವಕ್ಕಾಗಿ ವಿಜ್ಞಾನದ ನಡಿಗೆ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಶ್ರೀಯುತ ಪ್ರೊ.ನರೇಂದ್ರ ನಾಯಕ್  ಶಾಲಾ ಮಕ್ಕಳಿಗೆ ವಿಡಿಯೋ ಪ್ರದರ್ಶನ – ಪ್ರಾಯೋಗಿಕವಾಗಿ ಮಾಡಿ ತೋರಿಸುತ್ತಾ ಸಂವಾದವನ್ನು ನಡೆಸಿದರು.

1000956823

 ಮಕ್ಕಳು ಶಿಕ್ಷಣ ಕಲಿಯುವಾಗ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದರ ಜೊತೆ ಪ್ರಶ್ನಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಸಮುದಾಯದಲ್ಲಿ ನಡೆಯುವ ಅನೇಕ ದುರ್ಘಟನೆಗಳು ನಾವು ಪ್ರಶ್ನೆಸದೆ ಇದ್ದ ಪರಿಣಾಮದಿಂದಲೂ ಸಹ ಘಟಿಸುತ್ತವೆ. ಹಾಗಾಗಿ ಪ್ರಜ್ಞಾವಂತರಾದ ಎಲ್ಲರೂ ಸಹ ತಮ್ಮ ದಿನನಿತ್ಯದ ಜೀವನದಲ್ಲಿ ಧೈರ್ಯದಿಂದ ಪ್ರಶ್ನೆ ಮಾಡುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕಿದೆ. ಪ್ರಶ್ನಿಸದೆ ಯಾವುದನ್ನು ಸಹ ಒಪ್ಪಿಕೊಳ್ಳಬಾರದು. ತಮ್ಮ ಶಿಕ್ಷಕರು ಹೇಳಿದರು ಸಹ ಅದನ್ನು ವಿಮರ್ಶಾತ್ಮಕವಾಗಿ ಆಲೋಚಿಸಬೇಕು. ಸಮುದಾಯದಲ್ಲಿ ಮುಗ್ಧ ಜನರು ಅನೇಕ ಮೋಸಗಾರರಿಂದ ಮೋಸ ಹೋಗುವಂತಹ ಸಂದರ್ಭಗಳನ್ನು ನಾವು ನೋಡಿದ್ದೇವೆ. ಪವಾಡಗಳ ಮೂಲಕ ವಂಚನೆ ಮಾಡುವ ಜನರನ್ನು ವೈಜ್ಞಾನಿಕವಾಗಿ ಪ್ರಶ್ನಿಸಿ ಇಂಥವರಿಂದ ಜನಸಾಮಾನ್ಯರನ್ನು ರಕ್ಷಿಸಬೇಕಿದೆ. ಮಕ್ಕಳಾದ ತಾವುಗಳೆಲ್ಲರೂ ವಿಜ್ಞಾನವನ್ನು ಕಲಿಯುವುದರ ಜೊತೆ ವೈಜ್ಞಾನಿಕ ಮನೋಭಾವನೆಯನ್ನು ರೂಡಿಸಿಕೊಳ್ಳಬೇಕಿದೆ ಎಂದು ಅಂತರಾಷ್ಟ್ರೀಯ ಖ್ಯಾತಿಯ ಶ್ರೀಯುತ ನರೇಂದ್ರ ನಾಯಕ್ ತಿಳಿಸಿದರು.

1000956822

 ಕಾರ್ಯಕ್ರಮದಲ್ಲಿ ಚಿಗುರು ಯುವಜನ ಸಂಘದ ಮಂಜುನಾಥ್ ಆಮಲಗೊಂದಿ ಮಾತನಾಡಿ  ಪ್ರಸ್ತುತ ಸಮಾಜದಲ್ಲಿ ತಪ್ಪುಗಳು ನಡೆಯುತ್ತಿದ್ದರು ನೋಡಿಕೊಂಡು ಸುಮ್ಮನಿರುವವರ ಸಂಖ್ಯೆ ಹೆಚ್ಚಿದೆ. ಮಕ್ಕಳು ಕಲಿಕೆಯ ಜೊತೆ ವೈಜ್ಞಾನಿಕವಾಗಿ ಆಲೋಚಿಸುವುದನ್ನು ಕಲಿಯಬೇಕಿದೆ. ಮಕ್ಕಳು ತಮ್ಮ ದಿನ ನಿತ್ಯದ ಬದುಕಿನಲ್ಲಿ ವಿಜ್ಞಾನವನ್ನು ಅಳವಡಿಸಿಕೊಳ್ಳುವುದರ ಜೊತೆ ಬೇರೆಯವರಿಗೂ ಸಹ ಅದರ ಅರಿವನ್ನು ಮೂಡಿಸಬೇಕಿದೆ. ಮೌಡ್ಯತೆಯನ್ನು ಅಳಿಸಿ ವೈಜ್ಞಾನಿಕತೆಯನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ. ಇಂತಹ ವಿಚಾರಗಳನ್ನು ಮಕ್ಕಳಿಗೆ ತಿಳಿಸುತ್ತಿರುವ ಅಖಿಲ ಭಾರತ ವಿಚಾರವಾದಿಗಳ ಒಕ್ಕೂಟದ ಕಾರ್ಯವು ಶ್ಲಾಘನೀಯವಾದದ್ದು. ಭಾರತದ ಸಂವಿಧಾನದಲ್ಲಿ 51A(h) ಪ್ರಕಾರ ಮೂಲಭೂತ ಕರ್ತವ್ಯಗಳ ಅಡಿಯಲ್ಲಿ, “ವೈಜ್ಞಾನಿಕ ಮನೋಭಾವ, ಮಾನವತಾವಾದ ಮತ್ತು ವಿಚಾರಣೆ ಮತ್ತು ಸುಧಾರಣೆಯ ಮನೋಭಾವವನ್ನು ಬೆಳೆಸುವುದು ಭಾರತದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ”. ಅದ್ದರಿಂದ ಎಲ್ಲರೂ ಸಹ ಈ ಮೂಲಭೂತ ಕರ್ತವ್ಯವನ್ನು ಮಾಡಬೇಕೆಂದು ಅಭಿಪ್ರಾಯಪಟ್ಟರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1000956817

  ತಾಲ್ಲೂಕಿನ ಆಯ್ದ ಐದು ಶಾಲೆಗಳಾದ ಅಮಲಗೊಂದಿ ಪ್ರೌಢಶಾಲೆ, ಸಿರಾ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ), ಮಂಜುಶ್ರೀ ಆಂಗ್ಲಶಾಲೆ, ಎಪಿಜೆ ಅಬ್ದುಲ್ ಕಲಾಂ ಶಾಲೆ ಮತ್ತು ಚಿಕ್ಕನಹಳ್ಳಿಯ ಮುರಾರ್ಜಿ ಶಾಲೆಯ ಮಕ್ಕಳಿಗೆ ಮೌಡ್ಯಗಳನ್ನು ಬಯಲು ಮಾಡುವ ವಿಡಿಯೋಗಳನ್ನು, ಕೆಲವು ಮೌಡ್ಯಗಳನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿದರು.

 ಈ ಕಾರ್ಯಕ್ರಮದಲ್ಲಿ ಚಿಗುರು ಯುವಜನ ಸಂಘದ ಅಂಬಿಕಾ, ಯಶೋಧ, ಮಧು, ಮಂಜುನಾಥ್ ಆಲದಮರ, ಸ್ವಯಂಸೇವಕರಾದ ಸಾಜಿ, ಶಾಲೆಗಳ ಎಲ್ಲಾ ಶಿಕ್ಷಕರು ಮತ್ತು ಮಕ್ಕಳು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ನೇಮಕಾತಿಯಲ್ಲಿ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

ತುಮಕೂರು ನಗರದ ಪಾಲಿಕೆ ಆವರಣದಲ್ಲಿರುವ ಅಂಬೇಡ್ಕ‌ರ್ ಪ್ರತಿಮೆ ಎದುರು ಒಳಮೀಸಲಾತಿ ಹೋರಾಟ...

ತುಮಕೂರು ಜಿಲ್ಲಾಸ್ಪತ್ರೆ ಶಿಶು ಆರೈಕೆ ಘಟಕದಲ್ಲಿ ಅವ್ಯವಸ್ಥೆ : ಆಯೋಗದ ಅಧ್ಯಕ್ಷರ ತೀವ್ರ ಅಸಮಾಧಾನ

ನವಜಾತ ಶಿಶುಗಳ ತೀವ್ರ ಆರೈಕೆ ಘಟಕದಲ್ಲಿ ಹವಾ ನಿಯಂತ್ರಿತ ವ್ಯವಸ್ಥೆಯಿಲ್ಲದೆ ಮಕ್ಕಳ...

ಶಿರಾ | ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಪರಿಶೀಲಿಸಿದ ಬಿಇಒ ಕೃಷ್ಣಪ್ಪ : ಹಾಲೇನಹಳ್ಳಿ ಗ್ರಾಮಕ್ಕೆ ಭೇಟಿ

ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸುವ ಉದ್ದೇಶದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ಕೃಷ್ಣಪ್ಪ, ...

ದಲಿತರ ಭಕ್ತಿಯಿಂದ ಬ್ರಾಹ್ಮಣರಿಗೆ ಲಾಭ: ಕೆ.ಎನ್ ರಾಜಣ್ಣ

ದಲಿತರಲ್ಲಿ ದೈವಭಕ್ತಿ, ಹೋಮ-ಹವನ ಮಾಡಿಸುವುದು ಹೆಚ್ಚಾಗಿದೆ. ಇದರಿಂದ ಬ್ರಾಹ್ಮಣರು ಲಾಭ ಮಾಡಿಕೊಳ್ಳುತ್ತಾರೆ....