ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 3 ರಿಂದ ಶೇ7 ಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಮೀಸಲಾತಿ ಹೆಚ್ಚಿಸಿದ್ದು ಆದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಂವಿಧಾನದ 9ನೇ ಅನುಸೂಚನೆಗೆ (ಷೆಡ್ಯೂಲ್) ಸೇರಿಸದೆ ನಿರ್ಲಕ್ಷತೆ ತೋರಿರುವುದರಿಂದ ಅದು ಜಾರಿಯಾಗುತ್ತಿಲ್ಲ. ಆದ್ದರಿಂದ ಇದನ್ನು ಅತೀ ಜರೂರಾಗಿ ಎರಡು ಸರ್ಕಾರಗಳು ಸಂವಿಧಾನದ 9ನೇ ಅನುಸೂಚಿಗೆ (ಷೆಡ್ಯೂಲ್) ಸೇರಿಸಬೇಕು ಎಂದು ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಧರಣಿ ಕುಮಾರ್ ಒತ್ತಾಯಿಸಿದರು.
ಶಿರಾ ತಾಲ್ಲೂಕು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ ಹಾಗೂ ಮಾನವ ಬಂಧುತ್ವ ವೇದಿಕೆ ವತಿಯಿಂದ ಕರ್ನಾಟಕ ರಾಜ್ಯ ಎಸ್.ಸಿ ಹಾಗೂ ಎಸ್.ಟಿ ಸಮುದಾಯಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶಿರಾ ತಹಶೀಲ್ದಾರ್ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮಂಗಳವಾರ ಮನವಿ ಸಲ್ಲಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸರ್ಕಾರ 2022 ರಲ್ಲಿ ಪರಿಶಿಷ್ಠ ಜಾತಿಗೆ ಮೀಸಲಾತಿ ಶೇ 15 ರಿಂದ ಶೇ 17 ಕ್ಕೆ ಹಾಗೂ
ಕರ್ನಾಟಕ ರಾಜ್ಯ ಸರ್ಕಾರ ಸುಮಾರು 56437 ಖಾಲಿ ಹುದ್ದೆ ಭರ್ತಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ಆದರೆ 2022 ರಲ್ಲಿ ಎಸ್.ಸಿ ಮತ್ತು ಎಸ್.ಟಿ ಸಮುದಾಯಗಳಿಗೆ ಮೀಸಲಾತಿಯನ್ನು ಹೆಚ್ಚಿಸಿರುವುದನ್ನು ಕೈಬಿಟ್ಟು ಹಳೆಯ ಮೀಸಲಾತಿಯಂತೆ ಎಸ್.ಸಿ. 15 ಮತ್ತು ಎಸ್.ಟಿ ಶೇ3 ರಂತೆ ರಾಜ್ಯ ಸರ್ಕಾರವು ಮೇಲ್ಕಂಡ ಹುದ್ದೆಗಳನ್ನು ಭರ್ತಿ ಮಾಡಲು ಪ್ರಕ್ರಿಯನ್ನು ಪ್ರಾರಂಭಿಸಿದ್ದು ಹಳೆ ಮೀಸಲಾತಿಯ ಪದ್ಧತಿಯಂತೆ ಹುದ್ದೆಗಳನ್ನು ಭರ್ತಿ ಮಾಡದಂತೆ 2022ರ ಹೊಸ ಮೀಸಲಾತಿಯಂತೆ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಶಿರಾ ತಾಲ್ಲೂಕು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ ಸದಸ್ಯ ಎಸ್.ರಂಗರಾಜು ಮಾತನಾಡಿ ಎಸ್.ಸಿ.ಪಿ, ಟಿ.ಎಸ್.ಪಿ. ಯೋಜನೆಯ ಹಣವನ್ನು ಸರ್ಕಾರ ಬೇರೆ ಬೇರೆ ಯೋಜನೆಗಳಿಗೆ ಬಳಸುತ್ತಿದ್ದು ಬೇರೆ ಯೋಜನೆಗಳಿಗೆ ಬಳಸದೇ ನಮ್ಮ ಎಸ್.ಸಿ ಮತ್ತು ಎಸ್.ಟಿ ಜಾತಿಗಳ ಅಭಿವೃದ್ಧಿ ಯೋಜನೆಗಳಿಗೆ ಕಡ್ಡಾಯವಾಗಿ ಮೀಸಲಿಡಬೇಕೆಂದು ಮತ್ತು ಶಿರಾ ತಾಲ್ಲೂಕಿನಲ್ಲಿ ಅತೀ ಹೆಚ್ಚು ಜನ ಸಂಖ್ಯೆ ಎಸ್.ಸಿ ಮತ್ತು ಎಸ್.ಟಿಗಳಿಗೆ ಅನುದಾನ ನೀಡಬೇಕು. ಎಸ್.ಸಿ ಮತ್ತು ಎಸ್.ಟಿ ಜಾತಿಗಳಿಗೆ ಶೇಕಡ 56% ರಷ್ಟು ಮೀಸಲಾತಿ ಪ್ರಮಾಣ ಆಗುವವರೆಗೂ ಯಾವುದೇ ನೇಮಕಾತಿ ಮಾಡಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣವೇ ನಮ್ಮ ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟಗಳನ್ನು ಹಮ್ಮಿಕೊಳ್ಳಲಾಗುತ್ತದೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಿರಾ ತಾಲ್ಲೂಕು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ ಎಸ್ ಆರ್ ರಂಗನಾಥ್, ಗುಮ್ಮನಹಳ್ಳಿ ಮಂಜುನಾಥ್, ಗಂಗಾಧರ್ ಕುಂಬಾರಹಳ್ಳಿ, ದಯಾನಂದ ಹೊಸಪಾಳ್ಯ, ಶ್ರೀನಿವಾಸ್, ಹೇಂಜಾರಪ್ಪ, ಲಿಂಗೇಗೌಡ ಶಾಗದಡು, ವಿಜಯ್ ಶಂಕರ್ ನಾಯಕ, ಲೋಕೇಶ್ ಗಾಣದಹುಣಸೆ ಸೇರಿದಂತೆ ಹಲವರು ಹಾಜರಿದ್ದರು.





