ಬತ್ತುತ್ತಿದೆ ಬಯಲುಸೀಮೆ; ಹರಿಯಬೇಕಿದೆ ಈಗಳ್ಗೆ ಹೇಮೆ

Date:

ತರಾವರಿ ತೊಡಕುಗಳ ನೀರಾವರಿ ಯೋಜನೆಯಾಗಿ ಹದಿನೇಳು ವರ್ಷಗಳಿಂದಲೂ ತೆವಳುತ್ತಿರುವ ಹೇಮಾವತಿ ನಾಲಾ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಲು ಗಡುವು ನೀಡಿರುವ ರೈತರು, ಅಂತರ್ಜಲ ಬತ್ತುತ್ತಿರುವ ಈಗಿನ ಬೇಸಿಗೆಯಲ್ಲಿ ತಮ್ಮ ಕೃಷಿ ಬೆಳೆಗಳು ಮತ್ತು ತೆಂಗು-ಅಡಿಕೆ ತೋಟಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಆತಂಕದಲ್ಲಿದ್ದಾರೆ.

‘ಈ ಬೇಸಿಗೆಗೆ ಹೇಮೆಯ ನೀರನ್ನು ಹರಿಸಿಬಿಡುತ್ತೇವೆ’ ಎಂಬ ಉದ್ರಿ ಭರವಸೆಗಳನ್ನು ಕಳೆದ ಹದಿನೇಳು ವರ್ಷಗಳಿಂದ ಪ್ರತಿ ಬೇಸಿಗೆಯಲ್ಲೂ ನೀಡುತ್ತಲೇ ಬರುತ್ತಿರುವ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ರಾಜಕಾರಣಿಗಳ ಹುಸಿ ಆಶ್ವಾಸನೆಗಳಿಂದ ಕಂಗೆಟ್ಟಿರುವ ರೈತರು, ತಮ್ಮ ನಿರ್ದಾಕ್ಷಿಣ್ಯ ಆಕ್ರೋಶವನ್ನು ಪ್ರಕಟಿಸಿ, ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹೇಮಾವತಿ ನಾಲಾ ಹೋರಾಟ ಸಮಿತಿಯ ಸಂಚಾಲಕ ಮಧು, ರೈತರು ಮತ್ತು ನೀರಾವರಿ ಯೋಜನೆಯ ವಿಚಾರದಲ್ಲಿ ಸಂಪೂರ್ಣ ವೈಫಲ್ಯಗೊಂಡಿರುವ ಚಿಕ್ಕನಾಯಕನ ಹಳ್ಳಿ ತಾಲೂಕು ಆಡಳಿತ ಮತ್ತು ಶಾಸಕರ ಕಾರ್ಯ ವೈಖರಿಯ ಲೋಪಗಳನ್ನು ಸ್ಪಷ್ಟವಾಗಿ ಎತ್ತಿತೋರಿದರು. ರೈತರಿಗೆ ಒದಗಿಸಿಕೊಡಬೇಕಾದ ನೀರಾವರಿ ಯೋಜನೆಗಳು ವಿಳಂಬವಾಗಿ ಕುಂಟುತ್ತಿದ್ದರೂ ಇಂಜಿನಿಯರ್ರು, ಗುತ್ತಿಗೆದಾರರಿಗೆ ಚುರುಕು ಮುಟ್ಟಿಸದ ಶಾಸಕರು, ರೈತರ ಮಕ್ಕಳಿಗೆ ಉಚಿತ ಸಿಇಟಿ ತರಬೇತಿ ಕೊಡಿಸುತ್ತಿದ್ದೇನೆ ಎಂಬ ಪೋಜುಗಾರಿಕೆಯ ರಾಜಕಾರಣ ಮಾಡಬಾರದು. ಇದು ಅನ್ನದಾತರಿಗೆ ಮಾಡುವ ಮೋಸ. ಅನ್ನದಾತರ ಆಮದನಿ ಹೆಚ್ಚಿದರೆ, ಅವರ ಮಕ್ಕಳಿಗೆ ಉಚಿತ ಸಿಇಟಿ ತರಬೇತಿ ಕೊಡಿಸುವ ಅಗತ್ಯ ಬೀಳುವುದಿಲ್ಲ. ರೈತರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವಷ್ಟು ಸಕ್ಷಮರಾಗುವಂತಹ ನೀತಿ ನಿರೂಪಣೆಗಳನ್ನು ರಚಿಸಿ ಅನುಷ್ಠಾನಕ್ಕೆ ತರುವುದು ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸುವವರ ಹೊಣೆಗಾರಿಕೆಯಾಗಿದೆ. ಉಚಿತ ತರಬೇತಿ, ಉದ್ರಿ ಭರವಸೆ ಕೊಡುವುದರ ಬದಲು ಹೇಮಾವತಿ ನಾಲಾ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ರೈತರಿಗೆ ನೀರಾವರಿ ಒದಗಿಸಿಕೊಡಿ ಸಾಕು” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪ್ರದೇಶಾಭಿವೃದ್ಧಿ ಪುನರುಜ್ಜೀವನ ಉದ್ದೇಶಗಳಿಗಷ್ಟೇ CEPMIZ-ನಿಧಿ ಬಳಕೆ?

ಕಾಂಕ್ರೀಟ್ ಕಾಮಗಾರಿಗಳೇ ಅಭಿವೃದ್ಧಿಯ ಮಾನದಂಡ ಎಂದು ನಂಬಿದಂತಿರುವ ಜನಪ್ರತಿನಿಧಿಗಳು, ಜನ ಹಾಗೂ ಅಧಿಕಾರಿಗಳಿಗೂ ಅದನ್ನೇ ನಂಬಿಸಿ, ಒಪ್ಪಿಸಿಬಿಟ್ಟಿದ್ದಾರೆ. ಸಾವಿರಾರು ಕೋಟಿ ರುಪಾಯಿಗಳ ಗಣಿಬಾಧಿತ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಜನಪರವಾದ ಜೀವಪರವಾದ ಕೆಲಸಗಳನ್ನು ಅನುಷ್ಟಾನಗೊಳಿಸಬೇಕಿತ್ತು. ಆದರೆ ಈ ತಾಲೂಕಿನಾದ್ಯಂತ ಕೇವಲ ಕಾಂಕ್ರೀಟ್ ರಸ್ತೆ, ಕಾಂಕ್ರೀಟ್ ಕಟ್ಟಡ, ಕಾಂಕ್ರೀಟ್ ಬೀದಿ, ಕಾಂಕ್ರೀಟ್ ಗಲ್ಲಿ, ತರ ತರದ ಕಾಂಕ್ರೀಟ್ ಕಾಮಗಾರಿಗಳು ಮಾತ್ರ ನಡೆಯುತ್ತಿರುವಂತಿದೆ. ಜನ-ಜಾನುವಾರು-ಜೀವನಕ್ಕೆ ಮೂಲಾಧಾರವಾದ ನೀರು-ನೀರಾವರಿ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿ ಎಳ್ಳಷ್ಟೂ ಪರಿಜ್ಞಾನವಿದ್ದಂತೆ ಕಾಣುತ್ತಿಲ್ಲ. ಜಲವೇ ಜೀವಾಧಾರ. ಗಣಿಗಾರಿಕೆಯಿಂದಾಗಿ ತಾಲೂಕಿನ ಪಶುಪಾಲನೆ ಮತ್ತು ಪಶುಸಂಪತ್ತು ಬಾಧಿತಗೊಂಡಿದೆ. ಅಂತರ್ಜಲ ಕುಸಿತದಿಂದ ರೈತ ಕಂಗೆಟ್ಟಿದ್ದಾನೆ. ಮತ್ತೆ, ಭೂಮಿಯ ಚೈತನ್ಯ ಮರಳಿ ಸಂಪಾದಿಸಿಕೊಳ್ಳಬೇಕಿದೆ. ಇಂತಹ ರಚನಾತ್ಮಕ ಕಾರ್ಯ ಕೆಲಸಗಳನ್ನು ಅನುಷ್ಟಾನಗೊಳಿಸಲು CEPMIZ-ನಿಧಿ ಮೀಸಲಿಡಲಾಗಿದೆ. ಆದರೆ, ತಾಲೂಕಿನಾದ್ಯಂತ ಪ್ರದೇಶಾಭಿವೃದ್ಧಿ ಪುನರುಜ್ಜೀವನ ಕೆಲಸಗಳು ಏನೇನಾಗಿವೆ, ಎಲ್ಲೆಲ್ಲಿ ಅನುಷ್ಟಾನಗೊಂಡಿವೆ ಎಂಬ ಸ್ಪಷ್ಟ ಚಿತ್ರಣ ಯಾರಲ್ಲೂ ಇದ್ದಂತಿಲ್ಲ. ಗಣಿಬಾಧಿತ ಪ್ರದೇಶಾಭಿವೃದ್ಧಿ ನಿಧಿಯ ಹಣ ಕಾಂಕ್ರೀಟ್ ಕಾಮಗಾರಿಗಳಿಗೆ ವಿನಿಯೋಗವಾಗುವುದಾದರೆ, ಪ್ರದೇಶಾಭಿವೃದ್ಧಿ ಪುನರುಜ್ಜೀವನ ಕಾರ್ಯಕೆಲಸಗಳ ಕತೆಯೇನು!? ಹಾಗಾಗಿ, ಹೇಮಾವತಿ ನಾಲಾ ಕಾಮಗಾರಿ ಕೆಲಸಗಳನ್ನು ತ್ವರಿತಗೊಳಿಸಿ, ತಾಲ್ಲೂಕಿನ ರೈತರು ಮತ್ತು ನೀರಾವರಿ ಕಾರ್ಯಕರ್ತರ ಬಹುದಿನಗಳ ಆಗ್ರಹವಾಗಿರುವ ನೀರಾವರಿ ಸೌಲಭ್ಯವನ್ನು ಕಲ್ಪಿಸುವುದು ಮೊದಲ ಆದ್ಯತೆಯಾಗಬೇಕು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಾಂಕ್ರೀಟ್ ಬೆಂಗಾಡನ್ನು ನಿರ್ಮಿಸುವ ಯೋಜನೆಗಳನ್ನು ಕೈಬಿಟ್ಟು, ಪರಿಸರ ಪುನರುಜ್ಜೀವನ ಪ್ರದೇಶಾಭಿವೃದ್ಧಿ ತರಹದ ಸುಸ್ಥಿರ ಅಭಿವೃದ್ಧಿಯ ಪರಿಸರ ಸ್ನೇಹಿ ಮಾದರಿಗಳನ್ನು ಅನುಸರಿಸಬೇಕಿದೆ” ಎಂದರು.

ನಂತರ, ಉಪವಿಭಾಗಾಧಿಕಾರಿಗಳನ್ನು ಭೆಟ್ಟಿಯಾದ ರೈತರು, ಅವರ ಮುಂದೆ ತಮ್ಮ ಅಸಮಾಧಾನ ವ್ಯಕ್ತಪಡಿಸಿ ನಾಲಾಕಾಮಗಾರಿ ಕೆಲಸಗಳನ್ನು ತ್ವರಿತಗೊಳಿಸಿ ಶೀಘ್ರ ಪೂರ್ಣಗೊಳಿಸದಿದ್ದಲ್ಲಿ, ತಾಲ್ಲೂಕಿನಲ್ಲಿ ಮತ್ತಿನ್ಯಾವುದೇ ಸರ್ಕಾರಿ ಕಾಮಗಾರಿ ಕೆಲಸಗಳೂ ನಡೆಯದಂತೆ ಕಾಮಗಾರಿ-ಸ್ಥಳಗಳಿಗೆ ರೈತರು ಮುತ್ತಿಗೆ ಹಾಕಲಿದ್ದಾರೆ ಎಂಬ ಎಚ್ಚರಿಕೆ ನೀಡಿ, ಗಡುವು ಕೊಟ್ಟ ನಂತರ, ಉಪವಿಭಾಗಾಧಿಕಾರಿ ಸಪ್ತಶ್ರೀಯವರು ಹೇಮಾವತಿ ನಾಲಾ ಕಾಮಗಾರಿ ಇಂಜಿನಿಯರ್ ಹಾಗೂ ತಹಸೀಲ್ದಾರ್ ಮಮತರವರ ಜೊತೆಗೂಡಿ ಕಾಮಗಾರಿ ವಿಳಂಬಗೊಳ್ಳುತ್ತಿರುವ ಸ್ಥಳಗಳಿಗೆ ರೈತರೊಂದಿಗೆ ಭೇಟಿನೀಡಿ ಪರಿಶೀಲನೆ ನಡೆಸಿದರು. ಹೆಚ್ಚು ಯಂತ್ರೋಪಕರಣಗಳನ್ನು ಬಳಸಿ ಕಾಮಗಾರಿಯನ್ನು ತ್ವರಿತಗೊಳಿಸಿ ಏಪ್ರಿಲ್.31ರ ಒಳಗೆ ಕೆಲಸ ಪೂರ್ಣಗೊಳಿಸುವಂತೆ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಪ್ರತಿವಾರ ಕಾಮಗಾರಿ ಪ್ರಗತಿ ಪರಿಶೀಲನೆಯನ್ನೂ ನಡೆಸುವುದಾಗಿ ತಿಳಿಸಿದರು.

WhatsApp Image 2026 02 25 at 12.38.55 PM

ಇದನ್ನೂ ಓದಿ: ತುಮಕೂರು | ನಂದಿಹಳ್ಳಿ, ಮಲ್ಲಸಂದ್ರ, ವಸಂತನರಸಾಪುರ ಔಟರ್‌ ರಿಂಗ್ ರಸ್ತೆ ಡಿಪಿಆರ್ ರೈತ ವಿರೋಧಿ : ಡಿ.ಸಿ.ಗೌರಿಶಂಕರ್

ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಭಟ್ರಳ್ಳಿ, ಹೇಮಾವತಿ ಹೋರಾಟ ಸಮಿತಿ ಸಂಚಾಲಕ ಮಧುಸೂದನ್, ಮಧು ಶ್ಯಾವಿಗೆಹಳ್ಳಿ, ಜೋಡಿಕಲ್ಲೇನಳ್ಳಿ ರಾಮದಾಸ್, ಯೋಗೇಶ್ ಕೊಡಲಾಗರ, ನವಿಲೆಗಂಗಾಧರ, ನವಿಲೆ-ವೀರಭದ್ರಸ್ವಾಮಿ, ಹೊನ್ನೇಬಾಗಿ ಪ್ರಸನ್ನಕುಮಾರ್, ಆಟೋಮಂಜು ಸೇರಿದಂತೆ, ಹೇಮಾವತಿ ಹೋರಾಟ ಸಮಿತಿಯ ಸಂಚಾಲಕರು ಹಾಗೂ ಗ್ರಾಪಂ ಮಾಜಿ ಅಧ್ಯಕ್ಷರುಗಳು, ನೀರಾವರಿ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ಪ್ರಾಜ್ಞ ನಾಗರಿಕರು ಅಲ್ಲಿ ಸಮಾವೇಶಿತರಾಗಿದ್ದರು.

ವರದಿ: ಸಂಚಲನ
ಚಿಕ್ಕನಾಯಕನ ಸೀಮೆಯಿಂದ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕನಾಯಕನಹಳ್ಳಿ | ರಾಮನಹಳ್ಳಿ ಶಾಲೆಯಲ್ಲಿ ವಿಜ್ಞಾನ ವಸ್ತುಗಳ ಪ್ರದರ್ಶನ

ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ರಾಮನಹಳ್ಳಿ ಶಾಲೆಯಲ್ಲಿ ಖ್ಯಾತ ಭೌತ ವಿಜ್ಞಾನಿ...

ದಲಿತರ ಭಕ್ತಿಯಿಂದ ಬ್ರಾಹ್ಮಣರಿಗೆ ಲಾಭ: ಕೆ.ಎನ್ ರಾಜಣ್ಣ

ದಲಿತರಲ್ಲಿ ದೈವಭಕ್ತಿ, ಹೋಮ-ಹವನ ಮಾಡಿಸುವುದು ಹೆಚ್ಚಾಗಿದೆ. ಇದರಿಂದ ಬ್ರಾಹ್ಮಣರು ಲಾಭ ಮಾಡಿಕೊಳ್ಳುತ್ತಾರೆ....

ತುಮಕೂರು | ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ : ಆರೋಪಿ ಎಡೆಮುರಿ ಕಟ್ಟಿದ ಪೊಲೀಸರು

 ಅಪ್ರಾಪ್ತ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ತಾನು ಹೋದ ಕಡೆಯಲ್ಲೆಲ್ಲ ಉದ್ದೇಶ ಪೂರ್ವಕವಾಗಿ...

ತುಮಕೂರು | ನುಡಿದಂತೆ ನಡೆದ ಜಿಲ್ಲಾಡಳಿತ : ಮೆದುಳು ಕ್ಯಾನ್ಸರ್ ಬಾಲಕಿಗೆ ಆಧಾರ್ ಮತ್ತು ಬಿಪಿಎಲ್ ಕಾರ್ಡ್

 ಆಧಾರ್ ಕಾರ್ಡ್ ತಿದ್ದುಪಡಿ ತಾಂತ್ರಿಕ ಸಮಸ್ಯೆಯಿಂದ ಪರದಾಡಿದ್ದ ಮೆದುಳು ಕ್ಯಾನ್ಸರ್ ಪೀಡಿತ...