ತಿಪಟೂರು | ರಾಜ್ಯಪಾಲರ ಸಂವಿಧಾನ ವಿರೋಧಿ ನಡೆ ಖಂಡಿಸಿ ಸಿಬಿ ಶಶಿಧರ್ ಏಕವ್ಯಕ್ತಿ ಪ್ರತಿಭಟನೆ

Date:

ರಾಜ್ಯಪಾಲರು ಕರ್ನಾಟಕ ವಿಧಾನಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ನಿರಾಕರಿಸಿರುವುದು ಪ್ರಜಾಪ್ರಭುತ್ವದ ಮೇಲೆ ನಡೆದಿರುವ ಗಂಭೀರ ದಾಳಿ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಬಿ. ಶಶಿಧರ್ ಟೂಡಾ   ಖಂಡಿಸಿದರು.

ತಿಪಟೂರು ನಗರಸಭೆ ವೃತ್ತದ ಎದುರು ಯಾವುದೇ ಪಕ್ಷದ ಧ್ವಜ, ವೇದಿಕೆ ಅಥವಾ ಮೈಕ್ ಇಲ್ಲದೆ, ಒಬ್ಬರೇ ಭಿತ್ತಿ ಪತ್ರ ಹಿಡಿದು ನಡೆಸಿದ ಏಕವ್ಯಕ್ತಿ ಪ್ರತಿಭಟನೆ ನಡೆಸಿ  ಮಾತನಾಡಿದ ಅವರು, ನಾನು ಇಂದು ಇಲ್ಲಿ ಒಬ್ಬನೇ ನಿಂತಿದ್ದೇನೆ. ಆದರೆ ನನ್ನ ಹಿಂದೆ ಕರ್ನಾಟಕದ ಜನತೆಯ ಧ್ವನಿ ಇದೆ. ಇದು ಯಾವುದೇ ವ್ಯಕ್ತಿಯ ವಿರುದ್ಧದ ಹೋರಾಟವಲ್ಲ, ಯಾವುದೇ ಹುದ್ದೆಯ ವಿರುದ್ಧದ ಆಕ್ರೋಶವಲ್ಲ. ಇದು ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ಅಕ್ರಮಣದ ವಿರುದ್ಧದ ಹೋರಾಟ” ಎಂದು ಹೇಳಿದರು.

ರಾಜ್ಯಪಾಲರು ವಿಧಾನಸಭೆಯಲ್ಲಿ ಮಾತನಾಡಲು ನಿರಾಕರಿಸಿರುವುದು ಸಣ್ಣ ಅಥವಾ ತಾಂತ್ರಿಕ ವಿಚಾರವಲ್ಲ. ಅದು ಜನರಿಂದ ಆಯ್ಕೆಯಾದ ಸರ್ಕಾರದ ಧ್ವನಿಯನ್ನು ಮೌನಗೊಳಿಸುವ ಪ್ರಯತ್ನವಾಗಿದೆ. ಇದು ವಿಧಾನಸಭೆಯ ಗೌರವವನ್ನು ತುಳಿಯುವ ನಡೆ ಮತ್ತು ಪ್ರಜಾಪ್ರಭುತ್ವದ ಮೇಲೆ ನೇರ ದಾಳಿ ಎಂದು ಸಿ.ಬಿ. ಶಶಿಧರ್ ಕಿಡಿಕಾರಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
IMG 20260124 WA0324

“ರಾಜ್ಯಪಾಲರು ಮಾತನಾಡುವುದು ಅವರ ಆಯ್ಕೆಯಲ್ಲ. ಅದು ಅವರ ಸಂವಿಧಾನಾತ್ಮಕ ಕರ್ತವ್ಯ. ಆ ಕರ್ತವ್ಯವನ್ನು ನಿರಾಕರಿಸುವ ಹಕ್ಕು ಯಾರಿಗೂ ಇಲ್ಲ. ಈ ಸರ್ಕಾರವನ್ನು ದಿಲ್ಲಿ ನೇಮಿಸಿಲ್ಲ, ರಾಜಭವನ ನೇಮಿಸಿಲ್ಲ. ಈ ಸರ್ಕಾರವನ್ನು ಕನ್ನಡಿಗರು ತಮ್ಮ ಮತದ ಮೂಲಕ ಆಯ್ಕೆ ಮಾಡಿದ್ದಾರೆ. ಕೋಟ್ಯಾಂತರ ಜನರ ಮತದಿಂದ ಬಂದ ಸರ್ಕಾರದ ಮಾತನ್ನು ಒಂದು ಹುದ್ದೆ ತಳ್ಳಿಹಾಕಿದರೆ, ಅದು ಸರ್ಕಾರದ ಅವಮಾನವಲ್ಲ – ಜನತೆಯ ಅವಮಾನ” ಎಂದು ಅವರು ಹೇಳಿದರು.

ಇಂದು ಮಾತನಾಡಲು ನಿರಾಕರಿಸಿದವರು ನಾಳೆ ಸರ್ಕಾರದ ತೀರ್ಮಾನಗಳಿಗೆ ಅಡ್ಡಿ ಮಾಡಬಹುದು, ಮುಂದಿನ ದಿನಗಳಲ್ಲಿ ವಿಧಾನಸಭೆಯನ್ನೇ ಅರ್ಥಹೀನಗೊಳಿಸುವ ಅಪಾಯಕಾರಿ ದಾರಿಯಿದು. ಇದು ಪ್ರಜಾಪ್ರಭುತ್ವವನ್ನು ನಿಧಾನವಾಗಿ ಕೊಲ್ಲುವ ದಾರಿ ಎಂದು ಎಚ್ಚರಿಸಿದರು.

“ನಾನು ಇಲ್ಲಿ ನಿಂತಿರುವುದು ಗಲಾಟೆ ಮಾಡಲು ಅಲ್ಲ, ಯಾರನ್ನೂ ಕೆರಳಿಸಲು ಅಲ್ಲ. ಎಚ್ಚರಿಕೆ ನೀಡಲು. ನಾವು ಮೌನವಾಗಿದ್ದರೆ ಇದು ರೂಢಿಯಾಗುತ್ತದೆ. ನಾವು ಒಪ್ಪಿಕೊಂಡರೆ ಇದು ಕಾನೂನಾಗುತ್ತದೆ. ನಾನು ಒಬ್ಬನೇ ನಿಂತಿದ್ದೇನೆ ಅನ್ನಬಹುದು, ಆದರೆ ನನ್ನ ಜೊತೆ ಮತ ಹಾಕಿದ ರೈತ ಇದ್ದಾನೆ, ತೆರಿಗೆ ಕೊಡುವ ಕಾರ್ಮಿಕ ಇದ್ದಾನೆ, ಭವಿಷ್ಯ ಕನಸು ಕಟ್ಟಿದ ಯುವಕ ಇದ್ದಾನೆ, ಗೌರವದ ಬದುಕು ಬಯಸುವ ಮಹಿಳೆ ಇದ್ದಾಳೆ. ಇದು ಅವರ ಧ್ವನಿ” ಎಂದು ಹೇಳಿದರು.

ರಾಜ್ಯಪಾಲರ ಹುದ್ದೆಗೆ ಅವಮಾನ ಮಾಡುವ ಉದ್ದೇಶ ನನಗಿಲ್ಲ. ಆದರೆ ಸಂವಿಧಾನ ಮೀರಿದ ನಡೆ. ಯಾರಿಂದ ಬಂದರೂ ಅದು ತಪ್ಪೇ. ಇದು ಪಕ್ಷ ರಾಜಕಾರಣದ ಪ್ರಶ್ನೆಯಲ್ಲ, ಅಧಿಕಾರದ ಪ್ರಶ್ನೆಯಲ್ಲ. ಇದು ನಮ್ಮ ಹಕ್ಕಿನ ಪ್ರಶ್ನೆ, ನಮ್ಮ ಪ್ರಜಾಪ್ರಭುತ್ವದ ಪ್ರಶ್ನೆ ಎಂದು ಸಿ.ಬಿ. ಶಶಿಧರ್ ಸ್ಪಷ್ಟಪಡಿಸಿದರು.

ಪ್ರತಿಭಟನೆಯ ಅಂತ್ಯದಲ್ಲಿ ಅವರು,“ಪ್ರಜಾಪ್ರಭುತ್ವ ಭಿಕ್ಷೆಯಲ್ಲ. ಅದು ಜನರ ಹಕ್ಕು. ಆ ಹಕ್ಕಿನ ಮೇಲೆ ಯಾರೇ ಕೈ ಹಾಕಿದರು ನಾವು ಮೌನವಾಗಿರುವುದಿಲ್ಲ ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...