ತುಮಕೂರಿನಲ್ಲಿ ಸೌಹಾರ್ದ ಸಂಕ್ರಾಂತಿ ಆಚರಣೆ

Date:

ತುಮಕೂರು ನಗರದ ಟೌನ್ ಹಾಲ್ ಮುಂಭಾಗದಲ್ಲಿ ಸೌಹಾರ್ದ ಕರ್ನಾಟಕದ ವತಿಯಿಂದ ಸೌಹಾರ್ದ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು.

 ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕ ಪ್ರೊ. ಕೆ ದೊರೆರಾಜ್ ಮಾತನಾಡಿ  ಮಕರ ಸಂಕ್ರಾಂತಿ ಭಾರತದಲ್ಲಿ ಸಂತೋಷ ಮತ್ತು ಸಂಭ್ರಮದಿಂದ ಆಚರಿಸುವ ಪ್ರಮುಖ ಸುಗ್ಗಿಯ ಹಬ್ಬವಾಗಿದೆ. ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಈ ದಿನವನ್ನು ಉತ್ತರಾಯಣ ಎಂದು ಕರೆಯಲಾಗುತ್ತದೆ. ಚಳಿಗಾಲ ನಿಧಾನವಾಗಿ ಮುಕ್ತಾಯಗೊಂಡು ಹೊಸ ಕೃಷಿ ಋತು ಆರಂಭವಾಗುವುದನ್ನು ಈ ಹಬ್ಬ ಸೂಚಿಸುತ್ತದೆ. 2026 ರಲ್ಲಿ ಮಕರ ಸಂಕ್ರಾಂತಿ ಜನವರಿ 14ರಂದು ಆಚರಿಸಲಾಗುತ್ತದೆ. ಈ ದಿನವು ಹೊಸ ಆರಂಭ, ಭರವಸೆ ಮತ್ತು ಸಕಾರಾತ್ಮಕತೆಯ ಸಂಕೇತವಾಗಿದೆ ಎಂದು ತಿಳಿಸಿದರು.

ರಂಗಭೂಮಿ ಕಲಾವಿದರಾದ ಡಾ.ಲಕ್ಷ್ಮಣ್‌ದಾಸ್ ಮಾತನಾಡಿ ಹಿಂದೂ, ಮುಸ್ಲಿಂ, ಕ್ರೈಸ್ತ ಭಾವೈಕ್ಯತೆಯನ್ನ ಮತ್ತು ಸಾಮರಸ್ಯದ ಸಂದೇಶವನ್ನು ಸಾರುವ ಈ ಸೌಹಾರ್ದ ಸಂಕ್ರಾಂತಿಯನ್ನು ಸಂತೋಷ ಮತ್ತು ಸಂಭ್ರಮದಿಂದ ಸ್ವಾಗತಿಸೋಣ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

 ಸಾಹಿತಿ ಗೋವಿಂದರಾಜು, ಕೊಳಗೇರಿ ನಿವಾಸಿಗಳ ಹಿತರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕರು ಎ ನರಸಿಂಹಮೂರ್ತಿ ಸಾಮಾಜಿಕ ಹೋರಾಟಗಾರರಾದಂತಹ ಅಸಾದುಲ ಖಾನ್, ತಾಜುದ್ದೀನ್, ಅಫ್ಸರ್, ಜವಾರ್, ಉಪನ್ಯಾಸಕರಾದಂತಹ ರಾಮಚಂದ್ರಪ್ಪ ಎ, ಅಶ್ವಥ್ ನಾರಾಯಣ ಗುಟ್ಟೆ, ನಾಗೇಂದ್ರಪ್ಪ, ಅನಂತ್ ಮೂರ್ತಿ, ಕಾರ್ಮಿಕ ಸಂಘಟನೆಗಳ ಮುಂಖಡರು ಸಯ್ಯದ್ ಮುಜೀಬ್, ಕಂಬೇಗೌಡ್ರು, ಬಿ.ಉಮೇಶ್, ಎ ಲೋಕೇಶ್, ತುಮಕೂರು ವಿಜ್ಞಾನಕೇಂದ್ರ ಅಧ್ಯಕ್ಷರು ಅಕ್ಕಮ, ಸಿಪಿಐಎಂ ಕಾರ್ಯದರ್ಶಿ ಎನ್ ಕೆ ಸುಬ್ರಹ್ಮಣ್ಯ, ರಾಘವೇಂದ್ರ, ಇಂತಿಯಾಜ್ ಪಾಷಾ, ಸಾವಿತ್ರಿಬಾಯಿ ಪೋಲೆ ಜಿಲ್ಲಾ ಸಂಚಾಲಕಿ ಅನುಪಮ, ಮತ್ತು ಕಲ್ಪನಾ ಟಿ ಆರ್ ಭಾಗವಹಿಸಿದ್ದರು

ಅರಂಭದಲ್ಲಿ ಸುಜಿತ್ ನಾಯಕ ಸ್ವಾಗತಕೋರಿದರೆ, ವಸೀಂ ಅಕ್ರಮ್ ವಂದನಾರ್ಪಣೆ ತಿಳಿಸಿದರು. 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಗಣಿತದ ಭಯ ನಿವಾರಣೆಗೆ ಡಾ.ರಾಜಣ್ಣರ ಕೃತಿಗಳು ಸಹಕಾರಿ : ಡಾ.ಪದ್ಮಾವತಿ

 ಡಾ. ರಾಜಣ್ಣನವರು ಈ ಪುಸ್ತಕಗಳಲ್ಲಿ ಗಣಿತವನ್ನು ಒಂದು ವಿಷಯವಾಗಿ ಮತ್ತು ಒಂದು...

ತುಮಕೂರು | ಶೂಟಿಂಗ್ ರೇಂಜ್, ಬ್ಯಾಸ್ಕೆಟ್ ಬಾಲ್ ಅಂಕಣಗಳ ಲೋಕಾರ್ಪಣೆ

ತುಮಕೂರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶೂಟಿಂಗ್ ರೇಂಜ್, ಟೆನಿಸ್, ಬ್ಯಾಸ್ಕೆಟ್ ಬಾಲ್ ಅಂಕಣಗಳು...

ತುಮಕೂರು | ಯುಗಾದಿ, ರಂಜಾನ್ ; ರಂಗೇರಿದ ವಸ್ತ್ರ ವ್ಯಾಪಾರ : ಬಟ್ಟೆ ಜವಳಿ ಅಂಗಡಿಗಳಲ್ಲಿ ಜನಜಾತ್ರೆ

ಮಧ್ಯ ಪ್ರಾಚ್ಯ ದೇಶಗಳಲ್ಲಿ ಯುದ್ಧ ನಡೆದು ಜನತೆ ತತ್ತರಿಸಿರುವುದು ಒಂದು ಕಡೆಯಾದರೆ, ...

ತುಮಕೂರು | ಮಹಿಳಾ ಆಯೋಗದ ಮುಂದೆ ನೂರಾರು ಅಹವಾಲು; ಪೊಲೀಸರಿಗೆ ಲಿಂಗ ಸೂಕ್ಷ್ಮತೆ ಅರಿವಿರಬೇಕು : ಡಾ. ನಾಗಲಕ್ಷ್ಮೀ ಚೌಧರಿ

ತುಮಕೂರು  ಜಿಲ್ಲೆಯಲ್ಲಿರುವ ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ...