ರನ್ನರ್ಸ್‌ ಕ್ಲಬ್ ನಿಂದ ಫೆ.1 ರಂದು ‘ತುಮಕೂರು ಮ್ಯಾರಥಾನ್’ ; 1800 ಓಟಗಾರರು ನೋಂದಣಿ : ಡಾ.ರವಿ.ಸಿ.ಎಂ

Date:

ತುಮಕೂರು ರನ್ನರ್ಸ್‌  ಕ್ಲಬ್ ಟ್ರಸ್ಟ್ ವತಿಯಿಂದ ‘ಸೇ ನೋ ಡ್ರಗ್ಸ್ ಯೂತ್ ಟೂ ಸ್ಪೋರ್ಟ್ಸ್’ (“Say no Drugs-youths to sports.”) ಎಂಬ ಘೋಷ ವಾಕ್ಯದೊಂದಿಗೆ 2026ನೇ ಫೆಬ್ರವರಿ 01 ರಂದು 5 ಕಿ.ಮಿ.,10 ಕಿ.ಮಿ ಹಾಗೂ 21 ಕಿ.ಮಿ.ಗಳ ಎರಡನೇ ವರ್ಷದ ‘ತುಮಕೂರು ಮ್ಯಾರಥಾನ್’ ಆಯೋಜಿಸಲಾಗಿದೆ ಎಂದು ತುಮಕೂರು ರನ್ನರ್ಸ್‌  ಕ್ಲಬ್ ಟ್ರಸ್ಟ್ ಅಧ್ಯಕ್ಷ ಡಾ.ರವಿ.ಸಿ.ಎಂ ತಿಳಿಸಿದರು.

ತುಮಕೂರು ನಗರದ ಪತ್ರಿಕಾ ಭವನದಲ್ಲಿ ನಡೆದ  ಸುದ್ದಿಗೋಷ್ಠಿಯಲ್ಲಿ ಎರಡನೇ ವರ್ಷದ ‘ತುಮಕೂರು ಮ್ಯಾರಥಾನ್‌’ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, 2026ರ ಫೆಬ್ರವರಿ 01 ರಂದು ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರಗೆ 2ನೇ ತುಮಕೂರು ಮ್ಯಾರಥಾನ್ ಓಟ ಆಯೋಜಿಸಲಾಗಿದೆ. ಈಗಾಗಲೇ 1800 ಓಟಗಾರರು ತಮ್ಮ ಹೆಸರು ನೊಂದಾಯಿಸಿದ್ದು, ಜನವರಿ 18ಕ್ಕೆ ಹೆಸರು ನೋಂದಾವಣಿಯ ನೀಡಿದ್ದ ಅವಧಿ ಪೂರ್ಣಗೊಳ್ಳಲಿದೆ. 5,10 ಮತ್ತು 21 ಕಿಮಿ ಓಟದ ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಪಡೆಯುವ ಓಟಗಾರರಿಗೆ ಐವತ್ತು ಸಾವಿರ ರೂಗಳ ಬಹುಮಾನವನ್ನು ಹಂಚಿಕೆ ಮಾಡಲಾಗುವುದು ಎಂದರು.

ನಾನು ಒಬ್ಬ ಮ್ಯಾರಥಾನ್ ಓಟಗಾರರನಾಗಿದ್ದು, ಅಭ್ಯಾಸಕ್ಕೆಂದು ತುಮಕೂರು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಬರುವ ವೇಳೆ ನನ್ನಂತೆಯೇ ಅಭ್ಯಾಸ ನಿರತರಾಗಿದ್ದ ಕೆಲ ಓಟಗಾರರು ಸೇರಿ  ತುಮಕೂರು ರನ್ನರ್ಸ್‌  ಕ್ಲಬ್ ಟ್ರಸ್ಟ್ ರಚಿಸಲಾಯಿತು.ಇಂದು ತುಮಕೂರು ಜಿಲ್ಲೆಯ ಸುಮಾರು 89ಕ್ಕೂ ಹೆಚ್ಚು ಓಟಗಾರರು ತಮ್ಮ ಕ್ಲಬ್‌ನ ಸದಸ್ಯರಾಗಿದ್ದು,ರಾಜ್ಯ,ರಾಷ್ಟ್ರೀಯ, ಅಂತಾರಾಷ್ಟ್ರೀಯ ಮ್ಯಾರಥಾನ್ ಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ನಾವುಗಳು ಬೇರೆ ಊರುಗಳಲ್ಲಿ ಆಯೋಜನೆಯಾಗುವ ಮ್ಯಾರಥಾನ್‌ಗಳಲ್ಲಿ ಭಾಗವಹಿಸಲು ತೆರಳುತಿದ್ದ ಸಂದರ್ಭದಲ್ಲಿ ಆ ಊರಿನ ಹೆಸರು,ಸಿಗುವ ಪ್ರೋತ್ಸಾಹ ಇವುಗಳೆಲ್ಲವನ್ನು ನೋಡಿ,ತುಮಕೂರು ರನ್ನರ್ಸ್‌  ಕ್ಲಬ್ ಟ್ರಸ್ಟ್ ಹುಟ್ಟು ಹಾಕಲಾಯಿತು ಎಂದು ಡಾ.ರವಿ.ಸಿ.ಎಂ. ವಿವವರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1002695281

ತುಮಕೂರು ರನ್ನರ್ಸ್‌  ಕ್ಲಬ್ ಟ್ರಸ್ಟ್ ಅನ್ನು ಸ್ವಾಮಿ ವಿವೇಕಾನಂದರ ಜನ್ಮ ದಿನವಾದ 12-01-2025ರ ಮೊದಲನೇ ತುಮಕೂರು ಮ್ಯಾರಥಾನ್ ಆಯೋಜಿಸಿದ್ದು,ಧಾನಿಗಳು, ಕ್ರೀಡಾ ಪ್ರೋತ್ಸಾಹಕರು, ಸಾರ್ವಜನಿಕರ ಸಹಕಾರದಿಂದ,ಮೊದಲನೇ ತುಮಕೂರು ಮ್ಯಾರಥಾನ್ ಸಂಪೂರ್ಣವಾಗಿ ಯಶಸ್ವಿಯಾಗಿ,ತುಮಕೂರು ರನ್ನರ್ಸ್‌  ಕ್ಲಬ್ ಟ್ರಸ್ಟ್ ಹೆಸರು ತಂದು ಕೊಟ್ಟಿತ್ತು.ಅದೇ ಹುಮ್ಮಸ್ಸಿನಲ್ಲಿ 2026ರ ಫೆಬ್ರವರಿ 01 ರಂದು ಅರ್ಬನ್ ರೇಸಾರ್ಟ್, ಸಿದ್ದಿ ಬಯೋ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಎರಡನೇ ತುಮಕೂರು ಮ್ಯಾರಥಾನ್ ಆಯೋಜಿಸಲಾಗಿದೆ.ಉದಯೋನ್ಮುಖ ಕ್ರೀಡಾಪುಟಗಳ ಪ್ರೋತ್ಸಾಹಕ್ಕೆ ತುಮಕೂರು ಮ್ಯಾರಥಾನ್ ಒಳ್ಳೆಯ ವೇದಿಕೆಯಾಗಿದೆ.5 ಕಿ.ಮಿ.ಓಟಗಾರರಿಗೆ 599 ರೂ, 10 ಕಿ.ಮಿ.ಓಟಗಾರರಿಗೆ 799 ರೂ,21 ಕಿ.ಮಿ. ಓಟಗಾರರಿಗೆ 899 ರೂ ಪ್ರವೇಶ ಶುಲ್ಕ ನಿಗಧಿ ಪಡಿಸಲಾಗಿದೆ.ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ ಗೆಲುವು ಸಾಧಿಸಿದ ಓಟಗಾರರಿಗೆ ನೀಡುವ ನಗದು ಬಹುಮಾನವನ್ನು ಮಾಜಿ ಸಂಸದರ ಕೆ.ಮಲ್ಲಣ್ಣ ಅವರ ಪುತ್ರರಾದ ಸತೀಶ್ ಕೆ.ಮಲ್ಲಣ್ಣ ಪ್ರಯೋಜಿಸಿದ್ದಾರೆ ಎಂದರು.

ಓಟಗಾರರ ಸುರಕ್ಷತೆ ಮತ್ತು ರಕ್ಷಣೆಯ ದೃಷ್ಟಿಯಿಂದ ಸುಮಾರು 200 ಜನ ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್ ಕೇಡಟ್‌ಗಳನ್ನು ಸ್ವಯಂ ಸೇವಕರಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.ಸಿದ್ದಗಂಗಾ ತ್ರಾಂತಿಕ ವಿದ್ಯಾಲಯದ 50, ವಿದ್ಯಾವಾಹಿನಿಯ 50, ತುಮಕೂರು ವಿವಿ ಸರಕಾರಿ ಆರ್ಟ್ಸ್ ಕಾಲೇಜಿನ 50 ಜನರು ಜೊತೆಗೆ, ನಮ್ಮ ಸಂಸ್ಥೆಯ ಓಟಗಾರರು ಸಹ ಸಹಕಾರ ನೀಡಲಿದ್ದಾರೆ.ಈ ಸಂಬಂಧ ಜನವರಿ 30-31 ರಂದು ಲೋಗೋ ಬಿಡುಗಡೆ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದೆ ಎಂದು ಡಾ.ರವಿ ಸಿ.ಎಂ. ತಿಳಿಸಿದರು.

1002695280

ತುಮಕೂರು ರನ್ನರ್ಸ್‌  ಕ್ಲಬ್ ಟ್ರಸ್ಟ್ ನ   ಸುಹಾಸ್ ಮಾತನಾಡಿ, 2026ರ ಫೆ.01 ರಂದು ಬೆಳ್ಳಗೆ 6 ಗಂಟೆಗೆ 21 ಕಿ.ಮಿ. ಓಟ, 6:30 ಗಂಟೆ 10 ಕಿ.ಮಿ. ಓಟ ಮತ್ತು 7 ಗಂಟೆಗೆ 5 ಕಿ.ಮಿ. ತುಮಕೂರು ಮ್ಯಾರಥಾನ್ ಆರಂಭವಾಗಲಿದೆ.ತುಮಕೂರು ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಿಂದ ಆರಂಭವಾಗುವ ತುಮಕೂರು ಮ್ಯಾರಥಾನ್ ಓಟ ಬೆಳಗುಂಬ ತಲುಪಿ,ಮಾರುತಿ ಇಂಟರ್ ನ್ಯಾಷನಲ್ ಶಾಲೆಯ ಬಳಿ ಎಡಕ್ಕೆ ತಿರುಗಿ,ವಡ್ಡರಹಳ್ಳಿ ಮೂಲಕ ಸ್ವಾಂದೇನಹಳ್ಳಿ, ಅಜ್ಜಪ್ಪನಹಳ್ಳಿಗೆ ತಲುಪಿ, ಅದೇ ಮಾರ್ಗದಲ್ಲಿ ವಾಪಸ್ಸಾಗಿ,ಮಹಾತ್ಮಗಾಂಧಿ ಕ್ರೀಡಾಂಗಣದ ಬಳಿ ಮುಕ್ತಾಯವಾಗಲಿದೆ.ಓಟದಲ್ಲಿ ಭಾಗವಹಿಸಿ,ಓಟವನ್ನು ಸಂಪೂರ್ಣ ಗೊಳಿಸುವ ಎಲ್ಲರಿಗೂ ತುಮಕೂರಿನ ವಿಶೇಷತೆಗಳಾದ ತೆಂಗು,ಸಿದ್ದಗಂಗಾ ಮಠ, ಏಕಶಿಲಾ ಬೆಟ್ಟ ಇವುಗಳನ್ನು ಒಳಗೊಂಡ ಲೋಗೋ ಇರುವ ವಿಶೇಷ ಪದಕವನ್ನು ನೀಡಲಾಗುವುದು.ತುಮಕೂರಿನ ಕ್ರೀಡಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ,2ನೇ ತುಮಕೂರು ಮ್ಯಾರಥಾನ್ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ತುಮಕೂರು ತುಮಕೂರು ರನ್ನರ್ಸ್‌  ಕ್ಲಬ್ ಟ್ರಸ್ಟ್ ನ ದರ್ಶನ್, ಸತೀಶ್.ಕೆ.ಮಲ್ಲಣ್ಣ,  ಸುನೀತ, ರವೀಶ್, ಸಂಜೀತ್ ಮಲ್ಲಣ್ಣ, ಸುಹಾಸ್,ಕೋರ್ ಕಮಿಟಿ ಸದಸ್ಯರಾದ ನಂದೀಶ್ ಮತ್ತಿತರರು ಉಪಸ್ಥಿತರಿದ್ದರು. 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಗಣಿತದ ಭಯ ನಿವಾರಣೆಗೆ ಡಾ.ರಾಜಣ್ಣರ ಕೃತಿಗಳು ಸಹಕಾರಿ : ಡಾ.ಪದ್ಮಾವತಿ

 ಡಾ. ರಾಜಣ್ಣನವರು ಈ ಪುಸ್ತಕಗಳಲ್ಲಿ ಗಣಿತವನ್ನು ಒಂದು ವಿಷಯವಾಗಿ ಮತ್ತು ಒಂದು...

ತುಮಕೂರು | ಶೂಟಿಂಗ್ ರೇಂಜ್, ಬ್ಯಾಸ್ಕೆಟ್ ಬಾಲ್ ಅಂಕಣಗಳ ಲೋಕಾರ್ಪಣೆ

ತುಮಕೂರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶೂಟಿಂಗ್ ರೇಂಜ್, ಟೆನಿಸ್, ಬ್ಯಾಸ್ಕೆಟ್ ಬಾಲ್ ಅಂಕಣಗಳು...

ತುಮಕೂರು | ಯುಗಾದಿ, ರಂಜಾನ್ ; ರಂಗೇರಿದ ವಸ್ತ್ರ ವ್ಯಾಪಾರ : ಬಟ್ಟೆ ಜವಳಿ ಅಂಗಡಿಗಳಲ್ಲಿ ಜನಜಾತ್ರೆ

ಮಧ್ಯ ಪ್ರಾಚ್ಯ ದೇಶಗಳಲ್ಲಿ ಯುದ್ಧ ನಡೆದು ಜನತೆ ತತ್ತರಿಸಿರುವುದು ಒಂದು ಕಡೆಯಾದರೆ, ...

ತುಮಕೂರು | ಮಹಿಳಾ ಆಯೋಗದ ಮುಂದೆ ನೂರಾರು ಅಹವಾಲು; ಪೊಲೀಸರಿಗೆ ಲಿಂಗ ಸೂಕ್ಷ್ಮತೆ ಅರಿವಿರಬೇಕು : ಡಾ. ನಾಗಲಕ್ಷ್ಮೀ ಚೌಧರಿ

ತುಮಕೂರು  ಜಿಲ್ಲೆಯಲ್ಲಿರುವ ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ...