ತುಮಕೂರು | ‘ಅಂತರ್ಯಾಮಿ’ ಚಿತ್ರ ಇಂದಿನಿಂದ ರಾಜ್ಯಾದ್ಯಂತ ಬಿಡುಗಡೆ

Date:

 ಸ್ಪರ್ಧಾತ್ಮಕ ಯುಗದಲ್ಲಿ ಯುವಕರಿಗೆ ಮಾರಕವಾಗಿರುವ ಆನ್‌ಲೈನ್ ಗೇಮ್, ಸಾಮಾಜಿಕ ಜಾಲತಾಣದ ಪ್ರಸ್ತುತದ ವಸ್ತು ಸ್ಥಿತಿಗಳ ಬಗ್ಗೆ ಅರಿತು ಜೀವನಕ್ಕೆ ಬೆಳಕಾಗುವ ಅಂತರಾಳಕ್ಕೆ ಕರೆದ್ಯೂಯುವ ಚಿತ್ರಕಥೆಯನ್ನಾಧಾರಿತ “ಅಂತರ್ಯಾಮಿ” ಮಾರ್ಚ್ 6.ರಂದು ರಾಜ್ಯಾದ್ಯಂತ ನೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಗೊಳ್ಳುತ್ತಿದೆ ಎಂದು ನಿರ್ದೇಶಕ ಕೆ. ಧನಂಜಯ ತಿಳಿಸಿದರು. 

ತುಮಕೂರು ನಗರದ ಕಾರ್ಯನಿರತ ಪತ್ರಕರ್ತರ ಸಭಾಂಗಣದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಅಂತರ್ಯಾಮಿ ಚಲನಚಿತ್ರದ ಕಥಾ ಹಂದರವಿದ್ದು, ಸಾಮಾಜಿಕ ಜಾಲತಾಣದ ಕರಾಳ ಮುಖವನ್ನು ತೆರದಿಡಲಿದೆ. ಈ ಚಿತ್ರ ಕುಟುಂಬ ಸಮಾಜ ಮತ್ತು ಸ್ನೇಹತ್ವದ ಮಹತ್ವವನ್ನು ತಿಳಿಸುತ್ತದೆ, ಜೀವನದ ಹಾದಿ ಉಜ್ವಲ ಭವಿಷ್ಯಕ್ಕೆ ಕಣ್ಣುತೆರೆಸುವ ಕಥೆಯನ್ನು ಒಳಗೊಂಡಿದೆ. ಮನರಂಜನೆ ಹಾಸ್ಯ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ವಿಷಯಗಳಿದ್ದು ಕುಟುಂಬ ಸಮೇತವಾಗಿ ನೋಡಬಹುದಾದ ಚಿತ್ರವಾಗಿದೆ ಎಂದರು.

ಚಿತ್ರಕ್ಕೆ ಸಾಹಿತ್ಯ ನೀಡಿರುವ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಹಳೆ ವಿದ್ಯಾರ್ಥಿ ವಿನಯ್ ಕಾವ್ಯಕಾಂತಿ ಮಾತನಾಡಿ ಯುವ ಸಮುದಾಯವನ್ನ ಸಾಮಾಜಿ ಜಾಲತಾಣದ ವ್ಯಸನದಿಂದ ಎಚ್ಚರಗೊಳಿಸುವ ಸಾಹಿತ್ಯದ ಹಾಡು ಹಾಗೂ ಚಿತ್ರ ಸಂಭಾಷಣೆ ಮತ್ತು ಸಾಹಿತ್ಯಕ್ಕೆ ಪೂರಕವಾದ ಸಂಗೀತವನ್ನ ನಾದಬ್ರಹ್ಮ ಸಂಗೀತ ದಿಗ್ಗಜ ಹಂಸಲೇಖ ಅವರ ಶಿಷ್ಯ ದೇಸಿ ಮೋಹನ್ ನೀಡಿದ್ದಾರೆ. ಇವರ ಸಂಗೀತ ಪ್ರೇಕ್ಷಕರಿಗೆ ಮುದನೀಡಲಿದೆ ಎಂದರು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1002933582

ನಿರ್ಮಾಪಕ ನವೀನ್ ಎನ್.ಜಿ ಮಾತನಾಡಿ ಈ ಚಿತ್ರವನ್ನು 25 ದಿನಗಳಲ್ಲಿ ತುಮಕೂರಿನ ಸಿದ್ದಗಂಗಾ ಮಠ , ಎಸ್‌ಎಸ್‌ಐಟಿ ಕಾಲೇಜು, ಬಂಡೆಮಠ, ಸೋಮವಾರಪೇಟೆ, ಮಾದಾಪುರ ಸೇರಿದಂತೆ ರಾಜ್ಯದ ಇತರೆ ನಿಸರ್ಗದ ತವರಿನಲ್ಲಿ ಚಿತ್ರಿಕರಿಸಲಾಗಿದೆ. ಇದು ಗುರು ರೇಣುಕಾ ಪ್ರೊಡಕ್ಷನ್‌ನ ನಿರ್ಮಾಣದ ಚೊಚ್ಚಲ ಚಿತ್ರವಾಗಿದೆ ಎಂದು ಹೇಳಿದರು.  

ಅರವಿಂದ್ ರಾಜ್ ಅವರ ಸಂಕಲನದೊಂದಿಗೆ ಬಾಲು ಮಾಸ್ಟರ್ ಅವರ ನೃತ್ಯ ಸಂಯೋಜನೆ ಇದೆ. ಪೃಥ್ವಿ ಭಟ್ ಮೇಘನಾ ಕುಲಕರ್ಣಿ ಅವರು ದೇಸಿ ಮೋಹನ್ ರವರ ಸಂಗೀತಕ್ಕೆ ಧ್ವನಿಯಾಗಿದ್ದಾರೆ. ಚೊಚ್ಚಲ ಬಾರಿಗೆ ನಿಭಾಯಿಸಿದ್ದು ಚಿತ್ರಕ್ಕೆ ಎಸ್ ಬಾಲು ಅವರ ಛಾಯಾಗ್ರಹಣವಿದೆ. ಶ್ರೀ ಸಿದ್ಧಾರ್ಥ ಮಾಧ್ಯಮ ಕೇಂದ್ರದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದು ವಿವರಿಸಿದರು. 

ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದ ಸಮಷ್ಠಿ ಗ್ಲೋಬಲ್ ಫೌಂಡೇಶನ್ ಗುರುಕುಲ ಮಿಷನ್‌ನ ಶ್ರೀಮತಿ ವಾಣಿ ಮಾತನಾಡಿ ಯುವಕರನ್ನು ಜಾಗೃತಗೊಳಿಸುವ ಸಾಮಾಜಿಕ ಕಳಕಳಿಯ ಕಥಾವಸ್ತು ಚಿತ್ರವಾಗಿ ಅಂತರ್ಯಾಮಿ ರೂಪಗೊಂಡಿರುವುದರಿಂದ ರಾಜ್ಯವ್ಯಾಪ್ತಿ ಶಾಲಾ ಕಾಲೇಜುಗಳಲ್ಲಿ ಈ ಚಿತ್ರದ ಪ್ರದರ್ಶನವನ್ನ ತಮ್ಮ ಸಂಸ್ಥೆಯ ವತಿಯಿಂದ ಮಾಡುವುದಾಗಿ ತಿಳಿಸಿದರು. 

ಚಿತ್ರದ ನಾಯಕಿ ಮೊಹಿರಾ ಆಚಾರ್ಯ, ನಟಿ ಬೇಬಿ ಹಾನ್ಸಿ, ನಾಯಕ ನಟ ಮತ್ತು ನಿರ್ಮಾಪಕರಾದ ಪ್ರಣವ್. ಸಹ ನಿರ್ಮಾಪಕರಾದ ಡಾ.ಕಮಲಾನರಸಿಂಹನ್, ಕರ್ನಾಟಕ ಸಂಸ್ಕೃತಿ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ನಟರಾಜ್, ಕಲಾವಿದ ತುಮಕೂರು ಕಿಟ್ಟಿ ಪತ್ರಿಕಾಗೋಷ್ಠಿಯಲ್ಲಿ ಚಲನಚಿತ್ರದ ಅನುಭವವನ್ನ ಹಂಚಿಕೊಂಡರು. ಶ್ರೀ ಸಿದ್ಧಾರ್ಥ ಮಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಬಿ.ಟಿ. ಮುದ್ದೇಶ್ ಚಿತ್ರ ತಂಡವನ್ನ ಪರಿಚಯಿಸಿದರು. 

ಗುರುರೇಣುಕಾ ಪ್ರೊಡಕ್ಷನ್ಸ್ ನಿರ್ಮಾಣ ಚಿತ್ರ ಡಾ. ಲೀಲಾವತಿ ಕಂಬೈನ್ಸ್ ವತಿಯಿಂದ ಆಂತರ್ಯಾಮಿ ತುಮಕೂರು, ಬೆಂಗಳೂರು ಹಾಗೂ ಕರ್ನಾಟಕ ರಾಜ್ಯಾದಂತ್ಯ ಪ್ರದರ್ಶನಗೊಳ್ಳಲಿದೆ. 

ಇದೇ ಸಂದರ್ಭದಲ್ಲಿ ಅಂತರ್ಯಾಮಿ ಚಿತ್ರದ ಹಾಡನ್ನು ಬಿಡುಗಡೆಮಾಡಲಾಯಿತು. 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಗಣಿತದ ಭಯ ನಿವಾರಣೆಗೆ ಡಾ.ರಾಜಣ್ಣರ ಕೃತಿಗಳು ಸಹಕಾರಿ : ಡಾ.ಪದ್ಮಾವತಿ

 ಡಾ. ರಾಜಣ್ಣನವರು ಈ ಪುಸ್ತಕಗಳಲ್ಲಿ ಗಣಿತವನ್ನು ಒಂದು ವಿಷಯವಾಗಿ ಮತ್ತು ಒಂದು...

ತುಮಕೂರು | ಶೂಟಿಂಗ್ ರೇಂಜ್, ಬ್ಯಾಸ್ಕೆಟ್ ಬಾಲ್ ಅಂಕಣಗಳ ಲೋಕಾರ್ಪಣೆ

ತುಮಕೂರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶೂಟಿಂಗ್ ರೇಂಜ್, ಟೆನಿಸ್, ಬ್ಯಾಸ್ಕೆಟ್ ಬಾಲ್ ಅಂಕಣಗಳು...

ತುಮಕೂರು | ಯುಗಾದಿ, ರಂಜಾನ್ ; ರಂಗೇರಿದ ವಸ್ತ್ರ ವ್ಯಾಪಾರ : ಬಟ್ಟೆ ಜವಳಿ ಅಂಗಡಿಗಳಲ್ಲಿ ಜನಜಾತ್ರೆ

ಮಧ್ಯ ಪ್ರಾಚ್ಯ ದೇಶಗಳಲ್ಲಿ ಯುದ್ಧ ನಡೆದು ಜನತೆ ತತ್ತರಿಸಿರುವುದು ಒಂದು ಕಡೆಯಾದರೆ, ...

ತುಮಕೂರು | ಮಹಿಳಾ ಆಯೋಗದ ಮುಂದೆ ನೂರಾರು ಅಹವಾಲು; ಪೊಲೀಸರಿಗೆ ಲಿಂಗ ಸೂಕ್ಷ್ಮತೆ ಅರಿವಿರಬೇಕು : ಡಾ. ನಾಗಲಕ್ಷ್ಮೀ ಚೌಧರಿ

ತುಮಕೂರು  ಜಿಲ್ಲೆಯಲ್ಲಿರುವ ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ...