ತುಮಕೂರು | ಜಾತಿ ದೌರ್ಜನ್ಯ ಶಿಕ್ಷೆ ಪ್ರಮಾಣ ಹೆಚ್ಚಿಸಲು ಜನರಲ್ಲಿ ಜಾಗೃತಿ ಅಗತ್ಯ : ಡಾ .ಎಸ್ ರಮೇಶ್

Date:

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ 1989 ರಲ್ಲಿ ಪ್ರತಿಬಂಧಿಸಲಾಗಿದೆ.  ಸಂವಿಧಾನದ ಅನುಚ್ಚೇದ 14, 15 ರಲ್ಲಿ ಕಾನೂನಿನ ಮುಂದೆ ಎಲ್ಲರು ಸಮಾನರು, ಅನುಚ್ಚೇದ 17ರಲ್ಲಿ ಅಸ್ಪೃಶ್ಯತೆ ಆಚರಣೆಯನ್ನು ನಿಷೇಧಿಸಲಾಗಿದೆ. ದೌರ್ಜನ್ಯ ತಡೆ ಕಾಯಿದೆ ಜಾರಿಯಾದ ಹಿನ್ನಲೆ ಭಾರತದಲ್ಲಿದ್ದ ಜಾತಿಯತೆಯನ್ನು ಹೋಗಲಾಡಿಸಿ ಜಾತಿ ದೌರ್ಜನ್ಯಕ್ಕೆ ಒಳಗಾದವರಿಗೆ ರಕ್ಷಣೆ ನೀಡುವ ಸಲುವಾಗಿದೆ 2015ರ ತಿದ್ದುಪಡಿ ಮತ್ತು 2018ರ ತಿದ್ದಪಡಿ ಕಾಯಿದೆಯನ್ನು ಬಲಗೊಳಿಸಿದೆ. ಆದ್ದರಿಂದ ಜಾತಿ ದೌರ್ಜನ್ಯ ಮಾಡಿದವರಿಗೆ ಶಿಕ್ಷೆಯ ಪ್ರಮಾಣ ಹೆಚ್ಚಿಸಲು ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಸೂಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ಎಸ್ ರಮೇಶ್  ಅಭಿಪ್ರಾಯಪಟ್ಟರು

ತುಮಕೂರು ನಗರದಲ್ಲಿ ಪರ್ಯಾಯ ಕಾನೂನು ವೇದಿಕೆ ಮತ್ತು ಸ್ಲಂ ಜನಾಂದೋಲನ ಕರ್ನಾಟಕದಿಂದ ವೃತ್ತಿಪರ ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಿಗೆ  ಎಸ್ ಸಿ , ಎಸ್ ಟಿ ದೌರ್ಜನ್ಯ ತಡೆ ಕಾಯಿದೆ ಮತ್ತು ಪಿಟಿಸಿಎಲ್ ಕಾಯಿದೆ ಕುರಿತು ಆಯೋಜಿಸಿದ್ದ ಕಾರ್ಯಗಾರದಲ್ಲಿ ಮಾತನೋಡಿದ ಅವರು, ದೂರು ನೀಡುವ ಸಂದರ್ಭದಲ್ಲೆ ಸಾಕ್ಷಿಗಳನ್ನು ಪುಷ್ಠೀಕರಿಸುವ ಅಂಶಗಳಿರಬೇಕು, ಹಾಗೂ ಸಾಕ್ಷಿಗಳಿಗೆ ಭದ್ರತೆ ನೀಡಬೇಕು. ಐಒಗಳು ಸೇರಿದಂತೆ ಪೋಲಿಸ್ ಇಲಾಖೆ, ಜ್ಯುಡಿಷಿಯಲ್ ಆಫೀಸರ್ ಗಳು, ವಕೀಲರು ಹಾಗೂ ಜಿಲ್ಲಾ ಮೇಲುಸ್ತುವಾರಿ ಸದಸ್ಯರು ಸೇರಿದಂತೆ, ಜಿಲ್ಲಾಡಳಿತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕಾಯಿದೆಯ ಸೂಕ್ಷ್ಮತೆಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

  ಹೈಕೋರ್ಟ್ ವಕೀಲರಾದ ಶಿವಮಣಿ ಮಾತನಾಡಿ ಕರ್ನಾಟಕದಲ್ಲಿ ದೊಡ್ಡ ಜಿಲ್ಲೆಯಾಗಿರುವ ತುಮಕೂರು ಅಟ್ರಾಸಿಟಿ ನಡೆಯುತ್ತಿರುವ ಕ್ರೌನ್ ಜಿಲ್ಲೆಯಾಗಿದೆ. ಇತ್ತೀಚೆಗೆ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆ ಮಾಡಿರುವ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವ ಜಿಲ್ಲೆಗಳಲ್ಲಿ ತುಮಕೂರು ಎರಡನೇ ಸ್ಥಾನದಲ್ಲಿದೆ. ಆದರೆ ಇದುವರೆಗೂ ಕರ್ನಾಟಕ ಸರ್ಕಾರ ಕ್ರೌನ್ ಜಿಲ್ಲೆಗಳನ್ನು ಘೋಷಣೆ ಮಾಡಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಜಾತಿ ದೌರ್ಜನ್ಯ ಪ್ರಕರಣಗಳಲ್ಲಿ ಸಾಕ್ಷಿಗಳನ್ನು ಒದಗಿಸುವ ಸಂದರ್ಭದಲ್ಲಿ 3(1) ಆರ್ ಎಸ್ ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಿಂಧಿಸಿದಾಗ ಅಥವಾ ಜಾತಿ ದೌರ್ಜನ್ಯವಾದಾಗ ನಾನ್ ಎಸ್ಸಿಗಳು ವಿಟ್ನೆಸ್ ಆಗಬೇಕು ಎಂದು ಕೇಳಲಾಗುತ್ತದೆ. ಕೋರ್ಟ್ ಗಳು ಸಹ ಚಾಪ್ಟರ್ 4(ಎ)ನಲ್ಲಿ ಇರುವ ಅವಕಾಶಗಳನ್ನು ಬಳಸಿಕೊಳ್ಳದಿರುವುದರಿಂದ ಜ್ಯುಡಿಷಿಯಲ್ ಮತ್ತು ಪೋಲಿಸ್ ಇಲಾಖೆಯ ಲ್ಯಾಪ್ಸ್ ಸ್ ಳಿಂದ ಹಾಗೂ ಐಓಗಳ ತನಿಖೆ ಸಮಪರ್ಕವಾಗಿ ಮಾಡದಿರುವುದರಿಂದ ದೂರುದಾರರು ಪ್ರಾರಂಭದಲ್ಲೇ ಸರಿಯಾಗಿ ದೂರು ನೀಡಿದಿರುವುದರಿಂದ ಶಿಕ್ಷೆಯ ಪ್ರಮಾಣ ಕರ್ನಾಟಕದಲ್ಲಿ ಶೇ. 4 ರಷ್ಟಿದ್ದರೆ ತಮಿಳುನಾಡಿನಲ್ಲಿ ಶೇ.14ರಷ್ಟಿದೆ ತುಮಕೂರು ಜಿಲ್ಲೆಯಲ್ಲಿ ಶೇ.2 ರಷ್ಟಿದೆ ಎಂದರು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

 ಈ ಪ್ರಮಾಣ ಏರಿಕೆಯಾಗಿ ದೌರ್ಜನ್ಯ ಮಾಡುವವರಿಗೆ ಶಿಕ್ಷೆಯಾಗಬೇಕೆಂದರೆ ಜಿಲ್ಲಾ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ರೂಲ್-6 ನಲ್ಲಿರುವ ಪ್ರಾವಿಜನ್ ಮತ್ತು ರೀವ್ಯೂ ಆದಾರಗಳ ಮೇಲೆ ವಿಶ್ಲೇಷಣೆ ಮಾಡಬೇಕು. ಅಂದರೆ ಕಾಯಿದೆಯ ಅನ್ವಯ ರೂಪಿತವಾಗಿರುವ ನಿಯಮ 6 ರಲ್ಲಿ ಐಒಗಳು ಘಟನೆ ನಡೆದ ಸಂದರ್ಭದಲ್ಲಿ ಸ್ಥಳ ಭೇಟಿ ಮಾಡಿ ಜಾತಿ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಮಾಣ ಆಸ್ತಿಗಳ ಹಾನಿ ಮಟ್ಟ ಸಾಕ್ಷಿಗಳ ಕುರಿತು ವರದಿ ಮಾಡಿ ಕೋಟ್ಟು ಸಲ್ಲಿಸಬೇಕು. ಈ ವರದಿ ಆದರಿಸಿ ಎಫ್ಐಆರ್  ದಾಖಲಿಸಬೇಕು  ಈಗಾದಾಗ ಜಿಲ್ಲಾ ಮತ್ತು ಹೈ ಕೋರ್ಟ್ ಗಳಲ್ಲಿ ಕೇಸ್ ಗಳು  ಕ್ವಾಶ್ ಆಗಲು ಸಾಧ್ಯವಿಲ್ಲ ಎಂದರು

ರೂಲ್ 6 ಪ್ರಕಾರ ಘಟನೆ ವರದಿಯನ್ನು ಪೋಲಿಸ್ ಇಲಾಖೆ ನೀಡಬೇಕು ಸೆಕ್ಷನ್ 4 ರ ಪ್ರಕಾರ ಪೋಲಿಸ್ ಇಲಾಖೆ ಇದನ್ನು ಅನುಸರಿಸದಿದ್ದರೆ ಪೋಲಿಸ್ ಇಲಾಖೆ ಮೇಲೆ ದೂರು ದಾಖಲಿಸಬಹುದು.  ಇದರ ಬಗ್ಗೆ ಜಿಲ್ಲಾ ಜಾಗೃತಿ ಸಮಿತಿ ಪರಿಶೀಲನೆ ನಡೆಸಬೇಕು, ಚಾಪ್ಟರ್ 4(ಎ)ನಲ್ಲಿ ದೂರುದಾರರಿಗೆ ಸ್ಥಳದಲ್ಲೇ ದೂರಿನ ಪ್ರತಿಯನ್ನು ನೀಡಬೇಕು, ಇತ್ತೀಚೆಗೆ ರಾಜ್ಯದಲ್ಲಿ ಹೋಮಿನಿ ಬಸ್ ಅಲಿಗೇಷನ್ ಕೇಸ್ಗಳಿಂದ ಶಿಕ್ಷೆ ಪ್ರಮಾಣ ಕಡಿಮೆಯಾಗುತ್ತಿದೆ ಧೌರ್ಜನ್ಯಗಳ ಬಗ್ಗೆ ಮತ್ತು ಜಾತಿ ನಿಂಧನೆಗಳ ಬಗ್ಗೆ ಎಫ್ಐಆರ್ ದಾಖಲಾಗದೆ, ಚಾರ್ಜ್ ಶೀಟ್ ನಿಗದಿತ ಕಾಲಮಿತಿಯಲ್ಲಿ ಜ್ಯುಡಿಷಿಯಲ್ ಪ್ರಕಾರ ನಡೆದಿರುವುದರಿಂದ ಆಕ್ವಿಟ್ ರೇಟ್ ಕಡಿಮೆಯಾಗುತ್ತಿದೆ. ಸಿವಿಲ್ ಡಿಸ್ಬ್ಯೂಟ್ ನಲ್ಲಿ ಈಗಾಗಲೇ ಒಎಸ್ ಸಿವಿಲ್ ದಾವಾಗಳಿದ್ದಲ್ಲಿ ಅಟ್ರಾಸಿಟಿ ಕೇಸ್ ದಾಖಲಿಸಬಾರದೆಂದು ಇತ್ತೀಚೆಗೆ ಸುಪ್ರೀಂ ಕೋಟ್ ಆದೇಶ ಇರುವುದರಿಂದ ಸಾಕಷ್ಟು ಸಿವಿಲ್ ಧೌರ್ಜನ್ಯಗಳನ್ನು ದಾಖಲಿಸುವುದಿಲ್ಲ ಆದರೆ ಸೆಕ್ಷನ್ 18 ರಲ್ಲಿ ಸಿವಿಲ್ ಡಿಸ್ಬ್ಯೂಟ್ ದಾಖಲಿಸಲು ಕಾಯಿದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಈ ವೈರುದ್ಯದಲ್ಲಿ ಕೋರ್ಟ್ ಗಳು ಜಾತಿ ದೌರ್ಜನ್ಯ ನೋಡುತ್ತಿದೆ. ಸೆಕ್ಷನ್ 15 ರಲ್ಲಿ ದೂರುದಾರರ ಪರವಾಗಿ ಎನ್ ಜಿಒ ಅಥವಾ ಸಂಘಟನೆ ಪ್ರತಿನಿಧಿಗಳು ಹಾಜರಿರಲು ಅವಕಾಶ ನೀಡಲಾಗಿದೆ ಎಂದರು

ಜಿಲ್ಲೆಯ ಪೆದ್ದನಹಳ್ಳಿ, ದಂಡಿನಶಿರ, ಕೆಂಪನಹಳ್ಳಿ, ಕೊಲೆ ಪ್ರಕರಣಗಳಲ್ಲಿ ಪೋಸ್ಟ್ ಮಾಟಂ ರಿಪೋರ್ಟ್ ಗಳನ್ನ ಮೃತರ ಕುಟುಂಬಗಳಿಗೆ ನೀಡಿಲ್ಲ, ಆದರೆ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರವೇ ಪೋಸ್ಟ್ ಮಾಟಂ ರಿಪೋರ್ಟ್ 24 ಗಂಟೆಯೊಳಗೆ ಕುಟುಂಬಕ್ಕೆ ನೀಡಬೇಕು. ಸರಿಯಾದ ರೀತಿಯಲ್ಲಿ ದೂರುದಾರರು ದೂರನ್ನು ರೆಕಾರ್ಡ್ ಮಾಡದಿರುವುದು ಶಿಕ್ಷೆಯ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ. ಇತ್ತೀಚೆಗೆ ಹೈ ಕೋರ್ಟ್ ಪೋಲಿಸ್ ಇಲಾಖೆಗೆ ಎಚ್ಚರಿಕೆ ನೀಡಿದ್ದು ಸೆಕ್ಷನ್ 204 ಪ್ರಕಾರ ಪೋಲಿಸ್ ಅಧಿಕಾರಿ ಪ್ರಶ್ನೆಗಳನ್ನು ಕೇಳಿ ಸ್ಟೇಟ್ಮೆಂಟ್ ರೆಕಾರ್ಡ್ ಮಾಡಬೇಕು. ಈ ರೀತಿ ರೆಕಾರ್ಡ್ ಮಾಡದೇ ಸ್ಟೀರಿಯೋ ಟೈಪ್ನಲ್ಲಿ ಚಾರ್ಜ್ ಶೀಟ್ ಹಾಕುತ್ತಿರುವುದರಿಂದ ಹಾಗೂ ಬಿ ರಿಪೋರ್ಟ್ ಹಾಕುತ್ತಿರುವುದರಿಂದ ಕಾಯಿದೆ ಬಳಕೆ ಬಗ್ಗೆ ವ್ಯವಸ್ಥೆಗೆ ಒಂದು ರೀತಿಯ ಗುಮಾನಿ ಇದೆ. ಇವೆಲ್ಲ ಹಂತಗಳನ್ನು ಜಿಲ್ಲಾ ಜಾಗೃತಿಯ ಸಮಿತಿ ಪ್ರತೀ 3 ತಿಂಗಳಿಗೊಮ್ಮೆ ಪರಿಶೀಲಿಸಿ ತಮ್ಮ ಪರಿಶೀಲನೆಯನ್ನು ರಾಜ್ಯ ಪರಿಷತ್ ಗೆ ಕಳುಹಿಸಬೇಕು ಆದರೆ ಈ ರೀತಿಯಲ್ಲಿ ಕರ್ನಾಟಕದಲ್ಲಿ ಎಲ್ಲಿಯು ಆಗುತ್ತಿಲ್ಲ ಎಂದರು

ಕಾರ್ಯಾಗಾರದಲ್ಲಿ ಜಿಲ್ಲಾ ಜಾಗೃತಿ ಸಮಿತಿಯ ನಿಕಟಪೂರ್ವ ಸದಸ್ಯರಾದ ಎ.ನರಸಿಂಹಮೂರ್ತಿ, ರಂಗಯ್ಯ, ತಮ್ಮ ಅನುಭವಗಳನ್ನು ಹಂಚಿಕೊಂಡರು.

 ವೇದಿಕೆಯಲ್ಲಿ ಪರ್ಯಾಯ ಕಾನೂನು ವೇದಿಕೆಯ ನರಸಿಂಹಪ್ಪ, ಪೂರ್ಣ, ವಿನಯ್ಶ್ರೀನಿವಾಸ್, ಚೈತ್ರಾ, ಮನೋಜ್ ಕುಮಾರ್, ಶಿವಣ್ಣ, ಮತ್ತು ತುಮಕೂರು ಸ್ಲಂ ಸಮಿತಿಯ ತಿರುಮಲಯ್ಯ, ಅರುಣ್, ಶಂಕ್ರಯ್ಯ ಹಾಗೂ ವೃತ್ತಿಪರ ವಕೀಲರು, ಸೂಫಿಯ ಕಾನೂನು ಕಾಲೇಜಿನ ಪ್ರಾಧ್ಯಾಪಕರಾದ ಮಮತಾ ಹಾಗೂ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಗಣಿತದ ಭಯ ನಿವಾರಣೆಗೆ ಡಾ.ರಾಜಣ್ಣರ ಕೃತಿಗಳು ಸಹಕಾರಿ : ಡಾ.ಪದ್ಮಾವತಿ

 ಡಾ. ರಾಜಣ್ಣನವರು ಈ ಪುಸ್ತಕಗಳಲ್ಲಿ ಗಣಿತವನ್ನು ಒಂದು ವಿಷಯವಾಗಿ ಮತ್ತು ಒಂದು...

ತುಮಕೂರು | ಶೂಟಿಂಗ್ ರೇಂಜ್, ಬ್ಯಾಸ್ಕೆಟ್ ಬಾಲ್ ಅಂಕಣಗಳ ಲೋಕಾರ್ಪಣೆ

ತುಮಕೂರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶೂಟಿಂಗ್ ರೇಂಜ್, ಟೆನಿಸ್, ಬ್ಯಾಸ್ಕೆಟ್ ಬಾಲ್ ಅಂಕಣಗಳು...

ತುಮಕೂರು | ಯುಗಾದಿ, ರಂಜಾನ್ ; ರಂಗೇರಿದ ವಸ್ತ್ರ ವ್ಯಾಪಾರ : ಬಟ್ಟೆ ಜವಳಿ ಅಂಗಡಿಗಳಲ್ಲಿ ಜನಜಾತ್ರೆ

ಮಧ್ಯ ಪ್ರಾಚ್ಯ ದೇಶಗಳಲ್ಲಿ ಯುದ್ಧ ನಡೆದು ಜನತೆ ತತ್ತರಿಸಿರುವುದು ಒಂದು ಕಡೆಯಾದರೆ, ...

ತುಮಕೂರು | ಮಹಿಳಾ ಆಯೋಗದ ಮುಂದೆ ನೂರಾರು ಅಹವಾಲು; ಪೊಲೀಸರಿಗೆ ಲಿಂಗ ಸೂಕ್ಷ್ಮತೆ ಅರಿವಿರಬೇಕು : ಡಾ. ನಾಗಲಕ್ಷ್ಮೀ ಚೌಧರಿ

ತುಮಕೂರು  ಜಿಲ್ಲೆಯಲ್ಲಿರುವ ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ...