ಠಾಣೆಯ ವಶದಲ್ಲಿದ್ದ ವಾಹನ ಬಿಡುಗಡೆಗೆ 40 ಸಾವಿರ ಲಂಚ ಪಡೆಯುವಾಗ ತುಮಕೂರು ಗ್ರಾಮಾಂತರ ಠಾಣೆಯ ಪಿಎಸ್ಐ ಚೇತನ್ ಅನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬೆಳಗಿನ ಜಾವ ಬಂಧಿಸಿದ್ದಾರೆ.
ವಾಹನ ಬಿಡುಗಡೆ ಮಾಡಲು ಒಂದು ಲಕ್ಷಕ್ಕೆ ಪಿಎಸ್ಐ ಚೇತನ್ ಬೇಡಿಕೆ ಇಟ್ಟಿದ್ದರು. 40 ಸಾವಿರ ಹಣವನ್ನು ಕ್ಯಾತ್ಸಂದ್ರ ಬಳಿಯ ಹೋಟೆಲ್ ಸಿಬ್ಬಂದಿಯೊಬ್ಬರಿಗೆ ನೀಡಲು ಸೂಚನೆ ನೀಡಿದ್ದರು. ಈ ಕುರಿತು
ವಾಹನದ ಮಾಲೀಕರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಶುಕ್ರವಾರ ರಾತ್ರಿ ಕ್ಯಾತ್ಸಂದ್ರದ ಹೋಟೆಲ್ ಸಿಬ್ಬಂದಿ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಶನಿವಾರ ಬೆಳಗಿನ ಜಾವ ಲೋಕಾಯುಕ್ತ ಪೊಲೀಸರಿಂದ ಚೇತನ್ ಬಂಧಿಸಿದ್ದಾರೆ.





