ತುಮಕೂರು | ಪಾವನಭೂಮಿ ಆಶಯ ಈಡೇರಿಸಲು ಶ್ರಮಿಸೋಣ : ನುಡಿನಮನ

Date:

ತುಮಕೂರು ನಗರದ ವಿಜ್ಞಾನ ಸಭನದಲ್ಲಿ ಪ್ರಗತಿಪರ ಯುವಜನರ ಸ್ನೇಹ ಬಳಗದಿಂದ ಕವಯತ್ರಿ ಪಾವನ. ಎಸ್ (ಪಾವನ ಭೂಮಿ) ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು. ಕವತ್ರಿ ಪಾವನ ಭೂಮಿ ಅವರ ಕವಿತೆಗಳನ್ನು ಓದುವ ಮೂಲಕ ಚಿಕ್ಕ ವಯಸ್ಸಿಗೆ ಅವರಿಗಿದ್ದ ಸಾಮಾಜಿಕ ಕಳಕಳಿ ಕುರಿತು ಸ್ಮರಿಸಲಾಯಿತು.

ಬಿಕಾಂ ಪದವೀಧರರಾದ ಪಾವನ ಭೂಮಿ ಅವರು ಬದುಕು ಕಮ್ಯೂನಿಟಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಡಿಪ್ಲೋಮಾ , ದೃಶ್ಯಕಲಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪತ್ರಕರ್ತೆಯಾಗಿಯೂ ದುಡಿದಿದ್ದರು.

ಇವರಿಗೆ ಭಾರತೀಯ ಯಾತ್ರಾಕೇಂದ್ರ ನಡೆಸುವ ನಾಟಕೋತ್ಸವದಲ್ಲಿ, ನಾಟಕ ವಿಮರ್ಶೆಗಾಗಿ ಪಿ.ಲಂಕೇಶ್ ಪ್ರಶಸ್ತಿಯನ್ನು ಪಡೆದಿದ್ದರು. ಇತ್ತೀಚೆಗೆ ಇವರು ರಚಿಸಿದ ರೇಖಾಚಿತ್ರಕ್ಕಾಗಿ ಉತ್ತರ ಕರ್ನಾಟಕದ ಸಂಸ್ಥೆಯವರು ಪ್ರಶಸ್ತಿ ಮತ್ತು ಹತ್ತು ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಗಿತ್ತು. ಇವರ ಅಲೆಮಾರಿ ಮೀರಾ ಎಂಬ ಕವನ ಸಂಕಲನ ಜನಪ್ರಿಯತೆ ಪಡೆದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮನುಷ್ಯನಿಗೆ ಹುಟ್ಟು ಮತ್ತು ಸಾವು, ಬದುಕಿನ ಅವಿಭಾಜ್ಯ ಅಂಗ. ಹಾಗಾಗಿ ಪಾವನ ಭೂಮಿ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಅವರ ಸ್ನೇಹಿತರಾದ ನಾವುಗಳು ಶ್ರಮಿಸಬೇಕು. ಈ ಮೂಲಕ ಅವರನ್ನು ಅನುದಿನವು ನಮ್ಮ ಜೊತೆ ಇರುವಂತೆ ನೋಡಿಕೊಳ್ಳಬೇಕು ಎಂದು ಸ್ನೇಹಿತರು ಪ್ರತಿಜ್ಞೆ ಮಾಡಿದರು.

ಕಾರ್ಯಕ್ರಮದಲ್ಲಿ ಶಶಿ ದುರ್ಗದಹಳ್ಳಿ, ಪ್ರಮೋದ್ ಬೇಳಗೊಡು, ಅವಿನಾಶ್, ರಂಗಮ್ಮ ಹೋದೇಕಲ್, ದಾದಪೀರ್, ಕಿಶೋರ್, ಬಾಬು ಮನಸೇ ಮತ್ತು ಹತ್ತಾರು ಸ್ನೇಹಿತರು ಮತ್ತು ಅವರ ಕುಟುಂಬಸ್ಥರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಗಣಿತದ ಭಯ ನಿವಾರಣೆಗೆ ಡಾ.ರಾಜಣ್ಣರ ಕೃತಿಗಳು ಸಹಕಾರಿ : ಡಾ.ಪದ್ಮಾವತಿ

 ಡಾ. ರಾಜಣ್ಣನವರು ಈ ಪುಸ್ತಕಗಳಲ್ಲಿ ಗಣಿತವನ್ನು ಒಂದು ವಿಷಯವಾಗಿ ಮತ್ತು ಒಂದು...

ತುಮಕೂರು | ಶೂಟಿಂಗ್ ರೇಂಜ್, ಬ್ಯಾಸ್ಕೆಟ್ ಬಾಲ್ ಅಂಕಣಗಳ ಲೋಕಾರ್ಪಣೆ

ತುಮಕೂರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶೂಟಿಂಗ್ ರೇಂಜ್, ಟೆನಿಸ್, ಬ್ಯಾಸ್ಕೆಟ್ ಬಾಲ್ ಅಂಕಣಗಳು...

ತುಮಕೂರು | ಯುಗಾದಿ, ರಂಜಾನ್ ; ರಂಗೇರಿದ ವಸ್ತ್ರ ವ್ಯಾಪಾರ : ಬಟ್ಟೆ ಜವಳಿ ಅಂಗಡಿಗಳಲ್ಲಿ ಜನಜಾತ್ರೆ

ಮಧ್ಯ ಪ್ರಾಚ್ಯ ದೇಶಗಳಲ್ಲಿ ಯುದ್ಧ ನಡೆದು ಜನತೆ ತತ್ತರಿಸಿರುವುದು ಒಂದು ಕಡೆಯಾದರೆ, ...

ತುಮಕೂರು | ಮಹಿಳಾ ಆಯೋಗದ ಮುಂದೆ ನೂರಾರು ಅಹವಾಲು; ಪೊಲೀಸರಿಗೆ ಲಿಂಗ ಸೂಕ್ಷ್ಮತೆ ಅರಿವಿರಬೇಕು : ಡಾ. ನಾಗಲಕ್ಷ್ಮೀ ಚೌಧರಿ

ತುಮಕೂರು  ಜಿಲ್ಲೆಯಲ್ಲಿರುವ ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ...