ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಚುನಾವಣಾ ಆಯೋಗ ರಾಜ್ಯದಲ್ಲಿ ಕೈಗೊಂಡಿರುವ ಎಸ್ಐಆರ್ ಅನ್ನು ವಿರೋಧಿಸಿ ರಾಜ್ಯ ಸರ್ಕಾರ ವಿಶೇಷ ಮತದಾರ ತೀವ್ರ ಪರಿಸ್ಕರಣೆ ವಿರುದ್ಧ ನಿರ್ಣಯ ಕೈಗೊಳ್ಳಲು ಅಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕದಿಂದ ಫೆಬ್ರವರಿ 11 ರಂದು ರಾಜ್ಯದ 20 ಜಿಲ್ಲಾ ಕೇಂದ್ರದಲ್ಲಿ ಏಕ ಕಾಲದಲ್ಲಿ ಪ್ರತಿಭಟನೆಯ ಪೋಸ್ಟರ್ ಅನ್ನು ತುಮಕೂರು ಸ್ಲಂ ಭವನದಲ್ಲಿ ಬಿಡುಗಡೆ ಮಾಡಲಾಯಿತು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಪೌರತ್ವ ಮತ್ತು ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಕಸಿಯುವ ಎಸ್ಐಆರ್ ವಿಶೇಷ ಮತ ಪರಿಷ್ಕರಣೆ ಮಾಡುತ್ತಿರುವುದು ಸಂವಿಧಾನ ವಿರೋಧಿ ನಿಲುವು ಎಂದು ಸ್ಲಂ ಜನಾಂದೋಲನ ಸಂಚಾಲಕ ಎ. ನರಸಿಂಹಮೂರ್ತಿ ಹೇಳಿದರು.
ಭಾರತೀಯ ಚುನಾವಣಾ ಆಯೋಗ ಎಸ್ಐಆರ್ ನಡೆಸುತ್ತಿರುವುದೇ ನಗರದ ಹಾಗೂ ಗ್ರಾಮೀಣ ಭಾರತದ ಕೋಟ್ಯಂತರ ಬಡ ಹಿಂದೂಗಳಿಗೆ , ದಲಿತ-ಆದಿವಾಸಿಗಳಿಗೆ ಮತ್ತು ವಿಶೇಷವಾಗಿ ಮುಸ್ಲಿಮರಿಗೆ , ಭಾರತೀಯರ ನಾಗರಿಕತ್ವ ರದ್ದು ಮಾಡಲೆಂದು. ಇದು ಈ ಪ್ರಕ್ರಿಯೆ ಜಾರಿಯಲ್ಲಿರುವ ಪ. ಬಂಗಾಳ ಮತ್ತು ಉ.ಪ್ರದೇಶಗಳಲ್ಲಿ ಚುನಾವಣಾ ಆಯೋಗ ಜಾರಿ ಮಾಡುತ್ತಿರುವ ಹೊಸ ನಿಯಮ, ಹೊಸ ಪ್ರಕ್ರಿಯೆಗಳನ್ನು ಗಮನಿಸಿದರೆ ಸ್ಪಷ್ಟವಾಗುತ್ತದೆ ಎಂದು ಹೇಳಿದರು
ಈಗಾಗಲೇ ಮೊದಲ ಹಂತದ ಪ್ರಕ್ರಿಯೆ ಮುಗಿದಿರುವ ಉತ್ತರ ಪ್ರದೇಶ ಮತ್ತು ಪ. ಬಂಗಾಳದಲ್ಲಿ 2003 ರ ಮತಪಟ್ಟಿಯೊಂದಿಗೆ ಮ್ಯಾಚಿಂಗ್ ಆಗದವರನ್ನು ಹಾಗೂ ಸ್ಥಳೀಯ ಬಿಎಲ್ಒ ಗಳು Absent , Shifted , Dead, Duplicate ಎಂದು ವರ್ಗೀಕರಿಸಿದವರನ್ನು ಮೊದಲ ಕರಡು ಪಟ್ಟಿಯಿಂದ ಹೊರಗಿಡಲಾಗಿದೆ.
ಹೀಗೆ ಹೊರಗಾದವರ ಸಂಖ್ಯೆ ಪ. ಬಂಗಾಳದಲ್ಲಿ 58 ಲಕ್ಷವಾದರೆ , ಉ. ಪ್ರದೇಶದಲ್ಲಿ 2.9 ಕೋಟಿ, ಈಗ ಅವರೆಲ್ಲರೂ ಮತ್ತೊಮೆ Form 6 ಅನ್ನು ಭರ್ತಿ ಮಾಡಿ, ಚುನಾವಣಾ ಆಯೋಗ ನಿಗದಿಪಡಿಸಿರುವ 11 ದಾಖಲೆಗಳಲ್ಲಿ ಒಂದನ್ನು ತೋರಿಸಿ ತಮ್ಮ ನಾಗರಿಕತ್ವ ಸಾಬೀತುಪಡಿಸಬೇಕು ಎಂದರು.

ಕರಡು ಪಟ್ಟಿಯಲ್ಲಿರುವವಾರ ದಾಖಲೆಗಳ ಬಗ್ಗೆ ಯೂ ಹೊಸ ಹೊಸ ತಕರಾರುಗಳನ್ನು ಚು. ಆಯೋಗ ರೂಪಿಸಿ ಕರಡು ಪಟ್ಟಿಯಲ್ಲಿ ಹೆಸರಿರುವವರಿಗೂ ನೋಟೀಸು ಕಳಿಸಿದೆ. ಈ ರೀತಿಯಲ್ಲಿ ಪ. ಬಂಗಾಳದಲ್ಲಿ ಮ್ಯಾಪಿಂಗ್ ಆದರೂ 1.3 ಕೋಟಿ ಜನರಿಗೆ ಮತ್ತು ಉ.ಪ್ರದೇಶದಲ್ಲಿ 3.6 ಕೋಟಿ ಜನರಿಗೆ ಹೊಸ ಶರತ್ತುಗಳನ್ವಯ ನೋಟೀಸು ಕಳಿಸಲಾಗಿದೆ.ಆ ಹೊಸ ನಿಯಮಗಳ ಪ್ರಕಾರ ಈ ಹೊಸ ತಕರಾರುಗಳ ಅನ್ವಯ
ಪ. ಬಂಗಾಳದಲ್ಲಿ 23.6 ಲಕ್ಷ ಜನರಿಗೆ ಆರಕ್ಕಿಂತ ಹೆಚ್ಚು ಮಕ್ಕಳಿರುವ ಕಾರಣಕ್ಕೆ ನೋಟೀಸು ಕೊಡಲಾಗಿದೆ. 11 ಲಕ್ಷ ಜನರಿಗೆ ತಾಯಿ ಮತ್ತು ಮಕ್ಕಳ ಅಂತರ 15 ವರ್ಷಕ್ಕಿಂತ ಕಡಿಮೆ ಇದೆ ಎನ್ನುವ ಕಾರಣಕ್ಕೆ ನೋಟೀಸು ನೀಡಲಾಗಿದೆ. 85 ಲಕ್ಷ ಜನರಿಗೆ ತಂದೆಯ ಹೆಸರಿನ ಸ್ಪೆಲ್ಲಿಂಗ್ ಸರಿಯಿಲ್ಲ ಎನ್ನುವ ಕಾರಣಕ್ಕೆ ಅನುಮಾನಿಸಿ ನೋಟೀಸು ಕೊಡಲಾಗಿದೆ. ಉ.ಪ್ರದೇಶದಲ್ಲಿ
1.04 ಕೋಟಿ ಜನರಿಗೆ ಮ್ಯಾಪಿಂಗ್ ಆಗಲಿಲ್ಲವೆನ್ನುವ ಕಾರಣ ಪಟ್ಟಿಯಿಂದ ಕೈಬಿಡಲಾಗಿದೆ ಎಂದರು ಈ ಪ್ರಕ್ರಿಯೆ ಕರ್ನಾಟಕದಲ್ಲೂ ನಡೆಯಲಿದೆ ಪಕ್ಕದ ರಾಜ್ಯ ಗಳಾದ ತಮಿಳುನಾಡು, ಕೇರಳ, ಸರಕಾರಗಳು ಎಸ್ಐಆರ್ ಖಂಡಿಸಿದರೂ, ಕರ್ನಾಟಕ ಸರ್ಕಾರದ ಮೌನವೇಕೆ?, ಮುಖ್ಯ ಮಂತ್ರಿ ಸಿದ್ದರಾಮಯ್ಯ ಎಸ್ಐಆರ್ ಬಗ್ಗೆ ನಮ್ಮ ತಕರಾರು ಇಲ್ಲ ಎಂದಿದ್ದಾರೆ. ಅಹಿಂದ ನಾಯಕ ಬಡವರ ಬಂಧು ಪ್ರಗತಿಪರ ಆಲೋಚನೆ ಇರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಬಡವರನ್ನು ಕೈಬಿಟ್ಟರೆ ಕಾಂಗ್ರೆಸ್ ಕೈ ಹಿಡಿಯುವವರು ಯಾರು … ? ಹಾಗಾಗಿ ರಾಜ್ಯ ಸರ್ಕಾರ ಎಸ್ಐಆರ್ ವಿರುದ್ಧ ನಿರ್ಣಯ ಕೈಗೊಳ್ಳಬೇಕು ಎಂದು ಅಗ್ರಹಿಸಿ ಮತ್ತೆ ಎಸ್ಐಆರ್ ವಿರೋಧಿಸಿ ಸ್ಲಂ ಜನಾಂದೋಲನ ಕರ್ನಾಟಕ ಸ್ಲಂ ವಾರು ಜಾಗೃತಿ ಮೂಡಿಸಿ, ಇದೇ ಪೆಬ್ರವರಿ 11ರಂದು ರಾಜ್ಯದ 20 ಜಿಲ್ಲಾ ಕೇಂದ್ರಗಳ ಜಿಲ್ಲಾಧಿಕಾರಿ ಕಚೇರಿಗಳ ಎದುರು ಏಕಕಾಲದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ನಮ್ಮ ಸಂವಿಧಾನ ಬದ್ದ ಮತದ ಹಕ್ಕು ರಕ್ಷಣೆಗೆ ಸ್ಲಂ ನಿವಾಸಿಗಳು ಸ್ವಯಂ ಪ್ರೇರಣೆಯಿಂದ ಹೋರಾಟದಲ್ಲಿ ಭಾಗವಹಿಸಬೇಕು ಎಂದು ರಾಜ್ಯ ಸಂಚಾಲಕ ಎ ನರಸಿಂಹಮೂರ್ತಿ ಕರೆ ನೀಡಿದರು.
ಇದೇ ಸಂಧರ್ಭದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ ನರಸಿಂಹಮೂರ್ತಿ. ಪದಾಧಿಕಾರಿಗಳಾದ ಅರುಣ್. ಜಾಬಿರ್ ಖಾನ್. ಮುಬಾರಕ್. ಪುಟ್ಟರಾಜು. ಶಾರದಮ್ಮ. ಗಂಗಾ. ರಂಗನಾಥ್. ಧನಂಜಯ. ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆಯ ಸಂಚಾಲಕಾರದ ಅನುಪಮಾ. ಆದಾದಿಕಾರಿಗಳಾದ ಹನುಮಕ್ಕ. ಕಿರಣ್. ಮುಂತಾದವರು ಪಾಲ್ಗೊಂಡಿದ್ದರು.





