ತುಮಕೂರು | ಶೋಷಿತ ಸಮುದಾಯದವರಿಗೆ ಸಹಕಾರ ಸಂಸ್ಥೆಗಳಲ್ಲಿ ಜಾಗವೇ ಇರಲಿಲ್ಲ : ಕೆ. ಎನ್. ರಾಜಣ್ಣ

Date:

ಸಹಕಾರ ಸಂಸ್ಥೆಗಳು ಕೆಲವರ ಹಿಡಿತದಲ್ಲಿದ್ದವು.ಹಳೆ ಮೈಸೂರು ಭಾಗದಲ್ಲಿ, ಚಿತ್ರದುರ್ಗ ಭಾಗದಲ್ಲಿ ಒಂದು ಸಮುದಾಯದವರು ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆಯತಿದ್ದರು, ದಲಿತರು, ಹಿಂದುಳಿದವರು, ಶೋಷಿತರಿಗೆ ಜಾಗವೇ ಇರಲಿಲ್ಲ.ಹಾಗಾಗಿಯೇ ನಾನು ಸಹಕಾರ ಸಚಿವನಾಗಿದ್ದಾಗ, ಹಲವರು ತಿದ್ದುಪಡಿ ಮಾಡಿ, ಎಲ್ಲ ವರ್ಗಗಳಿಗೂ ಅವಕಾಶ ಕಲ್ಪಿಸುವ ಕೆಲಸ ಮಾಡಿದೆ ಎಂದು ಮಾಜಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು

ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಚರಕ ಚಾರಿಟಬಲ್ ಟ್ರಸ್ಟ್ ತುಮಕೂರು ವತಿಯಿಂದ ನಗರದ ನಗರ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ಸಹಕಾರ ಮಂತ್ರಿ ಇದ್ದಾಗ ಒಂದು ಆದೇಶ ಮಾಡಿದರು. ಆ ಆದೇಶವನ್ನು ಉಲ್ಲಂಘನೆ ಮಾಡಿದರೆ ಅಲ್ಲಿನ ಆಡಳಿತ ಮಂಡಳಿಯನ್ನು ಬರಕಾಸ್ತು ಮಾಡಬಹುದು, ಅಷ್ಟೊಂದು ಪವರ್ ಪುಲ್ ಆದೇಶ ಅದು, ಅದನ್ನು ನಮ್ಮ ಖರ್ಗೆ ಅವರ ಮಾಡಿದರು. ಸಾಲ ವಿತರಣೆಯಲ್ಲೂ ಮೀಸಲಾತಿ ಇತ್ತು. 100 ರೂ ಸಾಲ ನೀಡಿದರೆ ಅದರಲ್ಲಿಶೇ. 25ರಷ್ಟು ಸಾಲ ಪರಿಶಿಷ್ಟರಿಗೆ ಇರಬೇಕಿತ್ತು. ಹೀಗಾಗಿ ಬೇರೆಯವರಿಗೆ ಸಾಲ ನೀಡಬೇಕೆಂಬ ಆದೇಶ ಹಿಂದೆಯೇ ಇತ್ತು. ಆದರೆ ಅದು ಜಾರಿಯೇ ಆಗಲಿಲ್ಲ ಎಂದು ತಿಳಿಸಿದರು. 

ಈಗಾಗಲೇ ಗ್ರಾಮ ಪಂಚಾಯ್ತಿಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷರಿಗೆ ಮೀಸಲಾತಿ ಇದೆ. ಅದೇ ಮಾದರಿಯಲ್ಲಿ ಹಾಲು ಉತ್ಪಾದಕರ ಸಂಘಗಳಿರಲಿ ಅಥವಾ ಸಹಕಾರ ಸಂಸ್ಥೆಗಳಿರಲಿ ಸರ್ಕಾರದ ಅನುಕೂಲಗಳನ್ನು ಪಡೆದಿರುತ್ತಾರೆ. ಅಲ್ಲಿ ಮೀಸಲಾತಿ ಪ್ರಕಾರ ಅಧ್ಯಕ್ಷರು, ಉಪಾಧ್ಯಕ್ಷರು ಎಸ್.ಸಿ, ಎಸ್.ಟಿ.ಗಳಿಗೆ ಮೀಸಲಾತಿ ಇರಬೇಕೆಂಬುದನ್ನು ಕಾಯ್ದೆಯಲ್ಲಿ ಉಲ್ಲೇಖಿಸಿದ್ದು ಇಂದು ಜಾರಿಯಲ್ಲಿದೆ. ಇದನ್ನು ಅನುಷ್ಠಾನಗೊಳಿಸುವುದು ಹೆಚ್ಚು ಹೆಚ್ಚು ಆಗಬೇಕು. ಇದು ಆದಾಗ ಸಣ್ಣ ಸಮುದಾಯಗಳಿಗೆ ಮತ್ತು ಸಹಕಾರ ಸಂಘಗಳ ಬಾಗಿಲ ಒಳಗೆ ಹೋಗದಂತ ಸಮುದಾಯಗಳಿಗೆ ಮೀಸಲಾತಿಯಿಂದ ಅನುಕೂಲವಾಗಲಿದೆ ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1002910309

ನಾವು ಕೆಳವರ್ಗ ಮತ್ತು ಮೇಲ್ವರ್ಗ ಅಂತ ಹೇಳಿಕೊಳ್ಳುವುದರ ಬದಲು ಹಿಂದುಳಿದವರು ಮತ್ತು ಮುಂದುವರೆದವರು ಅಂತ ಹೇಳಿಕೊಳ್ಳಲಿ. ನಮಗೆ ನಾವೇ ಕೆಳವರ್ಗ ಅಂತ ಯಾಕೆ ಹೇಳಿಕೊಳ್ಳಬೇಕು. ಈ ವಿಚಾರವನ್ನು ನಾನು ಒಪ್ಪುವುದಿಲ್ಲ. ಯಾರೆಲ್ಲ ಬಡವರು ಇರುತ್ತಾರೆ. ಅಸಹಾಯಕರು ಇರುತ್ತಾರೆ. ದನಿ ಇಲ್ಲದವರು ಇರುತ್ತಾರೆ. ಶೋಷಿತ ಸಮುದಾಯ ಇರುತ್ತದೆ, ಅವರು ಯಾವತ್ತೂ ಕೂಡ ಇನ್ನೊಬ್ಬರಿಗೆ ಮೋಸ ಮಾಡುವಂತಹ, ಅನ್ಯಾಯ ಮಾಡುವಂತಹ, ಸುಳ್ಳು ಹೇಳುವಂತಹ ಕೆಲಸವನ್ನು ಮಾಡುವುದಿಲ್ಲ. ನಾವು ಬೇರೆಯವರಿಗಿಂತ ಬುದ್ದಿವಂತರಿದ್ದೇವೆ. ಹಾಗಾಗಿ ನಾವ್ಯಾಕೆ ಕೆಳವರ್ಗ ಅಂತ ಹೇಳಿಕೊಳ್ಳಬೇಕು ಇದು ಸರಿಯಾದ ಚಿಂತನೆಯಲ್ಲ. ಕೆಳವರ್ಗ ಎನ್ನುವುದನ್ನು ನಾನು ಒಪ್ಪುವುದಿಲ್ಲ.ಮುಂದೆ ಇಂತಹ ಪದಗಳನ್ನು ಬಳಸಬಾರದು ಎಂದು ಕಿವಿಮಾತು ಹೇಳಿದರು.

ನಾವು ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡೋಣ.ಬೇರೆಯವರಿಗೆ ತೊಂದರೆ ಕೊಡುವುದು ಬೇಡ. ನಮ್ಮ ಮೇಲೆ ಯಾರಾದರೂ ದಬ್ಬಾಳಿಕೆ, ದೌರ್ಜನ್ಯ ಮಾಡುವಂತಹ ಸಂದರ್ಭಗಳು ಬಂದಾಗ ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಹಕ್ಕುಳಗಳಿಗಾಗಿ ಹೋರಾಟ ಮಾಡೋಣ. ಆದರೆ ಕಾನೂನನ್ನು ದುರುಪಯೋಗಪಡಿಸಿಕೊಳ್ಳುವುದು ಬೇಡ. ದಲಿತ ಸಂಘಟನೆಯ ಯುವಕರೇ ಬೇರೆಯವರ ಪರ ಬಂದು ಬಿಡುತ್ತಾರೆ. ಸ್ವಾರ್ಥಕ್ಕೋಸ್ಕರ ಈ ರೀತಿ ಮಾಡುವುದು ಬೇಡ. ಇಂತಹ ಘಟನೆಗಳು ಆಗಬಾರದು. ಅಕ್ಷರ ಜ್ಞಾನದ ಆಧಾರದ ಮೇಲೆ ನಮ್ಮ ಸಮುದಾಯಕ್ಕೆ ನ್ಯಾಯ ಒದಗಿಸುವಂತಹ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು. 

ದಲಿತರಲ್ಲಿ ಹೋಮ-ಹವನ ಮಾಡಿಸುವುದು ಹೆಚ್ಚಾಗಿದೆ.ದೈವಭಕ್ತಿಯ ಜಾಸ್ತಿಯಾಗಿದೆ.ಬ್ರಾಹ್ಮಣರು ಇದರಿಂದ ಲಾಭ ಮಾಡಿಕೊಳ್ಳುತ್ತಾರೆ. ಇದು ಸರಿ-ತಪ್ಪು ಎಂದು ಹೇಳುವುದಲ್ಲ. ಹೋಮ ಮಾಡಿಸುವವರು ನಾವೇ. ಹವನ ಮಾಡಿಸುವವರು ನಾವೇ. ಕಾಣಿಕೆ ಕೊಡುವುದು ನಾವೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ವಾಸ್ತವ ಸತ್ಯವನ್ನು ಜನರಿಗೆ ಅರ್ಥ ಮಾಡಿಸಬೇಕು. ವಾಸ್ತವಿಕತೆಯಿಂದ ದೂರ ಹೋಗಬಾರದು. ವಾಸ್ತವದ ಸತ್ಯ ಸಂಗತಿಗಳನ್ನು ನಿರ್ಭೀತಿಯಿಂದ ಹೇಳಿ ಜನರಲ್ಲಿ ಅರಿವು ಮೂಡಿಸಬೇಕು. ಸತ್ಯ ಹೇಳುವುದನ್ನು ಎಲ್ಲ ಯುವಕರು ಕಲಿಯಬೇಕು. ಇತಿಹಾಸ ಅರಿಯದೆ ಇತಿಹಾಸ ನಿರ್ಮಾಣ ಸಾಧ್ಯವಿಲ್ಲ ಎಂದು ಹೇಳಿದರು.

1002910308

ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ‘ಸಮಕಾಲೀನ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ತಲ್ಲಣಗಳು’ ವಿಷಯದ ಕುರಿತು ಮಾತನಾಡಿದರು. ರವಿಕುಮಾರ್ ಬಾಗಿ ಅವರು ‘ದಲಿತ ಚಳವಳಿಯ ಸವಾಲು ಮತ್ತು ಸಾಧ್ಯತೆಗಳು ಕುರಿತು ಮತ್ತು ವಿ.ಎಲ್.ನರಸಿಂಹಮೂರ್ತಿ ಅವರು, ‘ಸಮಕಾಲೀನ ಕರ್ನಾಟಕ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆ’ ವಿಷಯದ ಕುರಿತು ಮಾತನಾಡಿದರು.

ಇದೇ ವೇಳೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಸಾಹಿತಿ ತುಂಬಾಡಿ ರಾಮಯ್ಯ, ಬಾಬು ಜಗಜೀವನ್ ರಾಮ್ ರಾಜ್ಯ ಪ್ರಶಸ್ತಿ ಪುರಸ್ಕೃತ ಹೋರಾಟಗಾರರಾದ ಕುಂದೂರು ತಿಮ್ಮಯ್ಯ ಮತ್ತು ಕೆ.ದೊರೈರಾಜ್ ಅವರನ್ನು ಅಭಿನಂದಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಚರಕ ಚಾರಿಟಬಲ್ ಮುಖ್ಯಸ್ಥ ಡಾ.ಬಸವರಾಜು ವಹಿಸಿ ಮಾತನಾಡಿದರು.ಎ.ರಾಮಚಂದ್ರ ಪ್ರಾಸ್ತಾವಿಕ ಮಾತನಾಡಿದರು. ಕುಂದೂರು ಮುರಳಿ ಸ್ವಾಗತಿಸಿದರು.  ಅಧ್ಯಾಪಕ ಡಾ.ಶಿವಣ್ಣ ತಿಮ್ಲಾಪುರ ಕಾರ್ಯಕ್ರಮ ನಿರೂಪಿಸಿದರು. 

ತುಮಕೂರು ಉಪ ವಿಭಾಗಾಧಿಕಾರಿ ನಾಹಿದಾ ಜಮ್ ಜಮ್, ಸಾಮಾಜಿಕ ಹೋರಾಟಗಾರ ಶ್ರೀಪಾದ ಭಟ್, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಡಾ.ಆಶಾ ಬಗ್ಗನಡು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಗಣಿತದ ಭಯ ನಿವಾರಣೆಗೆ ಡಾ.ರಾಜಣ್ಣರ ಕೃತಿಗಳು ಸಹಕಾರಿ : ಡಾ.ಪದ್ಮಾವತಿ

 ಡಾ. ರಾಜಣ್ಣನವರು ಈ ಪುಸ್ತಕಗಳಲ್ಲಿ ಗಣಿತವನ್ನು ಒಂದು ವಿಷಯವಾಗಿ ಮತ್ತು ಒಂದು...

ತುಮಕೂರು | ಶೂಟಿಂಗ್ ರೇಂಜ್, ಬ್ಯಾಸ್ಕೆಟ್ ಬಾಲ್ ಅಂಕಣಗಳ ಲೋಕಾರ್ಪಣೆ

ತುಮಕೂರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶೂಟಿಂಗ್ ರೇಂಜ್, ಟೆನಿಸ್, ಬ್ಯಾಸ್ಕೆಟ್ ಬಾಲ್ ಅಂಕಣಗಳು...

ತುಮಕೂರು | ಯುಗಾದಿ, ರಂಜಾನ್ ; ರಂಗೇರಿದ ವಸ್ತ್ರ ವ್ಯಾಪಾರ : ಬಟ್ಟೆ ಜವಳಿ ಅಂಗಡಿಗಳಲ್ಲಿ ಜನಜಾತ್ರೆ

ಮಧ್ಯ ಪ್ರಾಚ್ಯ ದೇಶಗಳಲ್ಲಿ ಯುದ್ಧ ನಡೆದು ಜನತೆ ತತ್ತರಿಸಿರುವುದು ಒಂದು ಕಡೆಯಾದರೆ, ...

ತುಮಕೂರು | ಮಹಿಳಾ ಆಯೋಗದ ಮುಂದೆ ನೂರಾರು ಅಹವಾಲು; ಪೊಲೀಸರಿಗೆ ಲಿಂಗ ಸೂಕ್ಷ್ಮತೆ ಅರಿವಿರಬೇಕು : ಡಾ. ನಾಗಲಕ್ಷ್ಮೀ ಚೌಧರಿ

ತುಮಕೂರು  ಜಿಲ್ಲೆಯಲ್ಲಿರುವ ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ...