ತುಮಕೂರು ನಗರದ ಕ್ಯಾಲ್ಸಿ ಅಬಾಕಸ್ ಶಾಲೆಯಲ್ಲಿ ಅಧ್ಯಯನ ಮಾಡಿದ ಮಕ್ಕಳು, ಹುಬ್ಬಳ್ಳಿಯಲ್ಲಿ ನಡೆದ ರಾಜ್ಯ ಮಟ್ಟದ ಅಬ್ಯಾಕಸ್ ಸ್ಪರ್ಧೆ-2026ರಲ್ಲಿ ಒರ್ವ ಪ್ರಥಮ ಸ್ಥಾನ ಗಳಿಸಿದರೆ, ಮತ್ತೊಬ್ಬರು ದ್ವಿತೀಯ ಸ್ಥಾನ ಗಳಿಸಿದರು. ಅಲ್ಲದೆ 26 ವಿದ್ಯಾರ್ಥಿಗಳು ಅಬಾಕಸ್ ನಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ.
ತುಮಕೂರು ನಗರದ ಮಾರುತಿ ನಗರದ ತುಮಕೂರು ಜಿಲ್ಲಾ ಶ್ರೀ ವೈಷ್ಣವ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಪ್ರಶಸ್ತಿ ವಿತರಣೆ ಮತ್ತು ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಶೇಷಾದ್ರಿಪುರಂ ಶಾಲೆಯ ಪ್ರಾಂಶುಪಾಲ ನಂದಾ ಹೆಚ್.ಎನ್, ಗಣಿತ ಎನ್ನುವುದು ಸೊನ್ನೆಯಿಂದ ಆರಂಭಗೊಂಡು ಅನಂತ ಸಂಖ್ಯೆಗಳವರೆಗೆ ಮುಂದುವರೆಯುತ್ತದೆ. ಈ ಗಣಿತವನ್ನು ತುಂಬಾ ಏಕಾಗ್ರತೆಯಿಂದ ಮಕ್ಕಳು ಕಲಿಯಬೇಕು. ಇದು ಕಲಿಕೆಯಲ್ಲಿನ ಆಸಕ್ತಿ ಮತ್ತು ಕ್ರಿಯಾಶೀಲತೆಯನ್ನು ಬೆಳಸುತ್ತದೆ ಎಂದು ಹೇಳಿದರು.
ಅಬಾಕಸ್ ಕಲಿಯುವುದರಿಂದ ಮಕ್ಕಳ ವಿದ್ಯಾಬ್ಯಾಸದಲ್ಲಿಯೂ ಉತ್ತಮ ಬೆಳವಣಿಗೆಯಾಗುತ್ತದೆ. ಗುಣಾಕಾರ ಹಾಗೂ ಭಾಗಾಕಾರದಂತಹ ಲೆಕ್ಕಗಳನ್ನು ವೇಗವಾಗಿ ಮಾಡಲು ಸಹಕಾರಿಯಾಗುತ್ತದೆ ಎಂದರು.
ತುಮಕೂರಿನ ಡಯಟ್ ನ ಅಧಿಕಾರಿ ಶ್ರೀರಂಗರಾಜು ಮಾತನಾಡಿ, ಮಕ್ಕಳಿಗೆ ಸರಿಯಾದ ರೀತಿಯಲ್ಲಿ ವಿದ್ಯಾಭ್ಯಾಸ ನೀಡುವುದರ ಜೊತೆಗೆ, ಬೇರೆ ಚಟುವಟಿಕೆಗಳಲ್ಲಿ ಬೇರೆ ಮಾಡಬೇಕು. ಟೇಬಲ್ ಟೆಲ್ಲಿಂಗ್ ಪ್ರಕ್ರಿಯೆಯನ್ನು ಕಲಿಯವುದರಿಂದ ಮಕ್ಕಳ ಮೆದುಳಿನ ಪ್ರಕ್ರಿಯೆ ವೇಗಗೊಳ್ಳುತ್ತದೆ. ಗಣಿತಶಾಸ್ತ್ರದಲ್ಲಿ ಹೆಚ್ಚು ಪರಿಣಿತಿ ಸಾಧಿಸುತ್ತಾರೆಂದು ಎಂದು ಹೇಳಿದರು.
ಅಬಾಕಸ್‌ನಲ್ಲಿ ಪದವಿ ಗಳಿಸಿದವರಿಗೆ ಪದವಿ ಪತ್ರ ವಿತರಿಸಿದ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ,ಬಿ.ಟಿ.ಮುದ್ದೇಶ್ ಮಾತನಾಡಿ, ಈಗಿನ ಪ್ರಪಂಚಕ್ಕೆ ಅನುಗುಣವಾಗಿ ನಮ್ಮ ಮಕ್ಕಳನ್ನು ಸಿದ್ದಪಡಿಸಬೇಕು. ಅವರಿಗೆ ಗುಣಮಟ್ಟದ ಶಿಕ್ಷಣ ಮತ್ತು ಜ್ಞಾನದ ಅರಿವನ್ನು ನೀಡಬೇಕು. ಇಲ್ಲದಿದ್ದರೆ ಮುಂದೆ ಅವರ ಜೀವನದಲ್ಲಿ ಈ ಪ್ರಪಂಚವನ್ನು ಎದುರಿಸಲು ಆಗುವುದಿಲ್ಲ ಎಂದು ಹೇಳಿದರು.
ಅಬಾಕಸ್‌ನಲ್ಲಿ ಶಿಕ್ಷಣ ಪಡೆಯುವುದರಿಂದ ಮಕ್ಕಳು ಕ್ಯಾಲ್ಕುಲೇಟರ್‌ಗಿಂತಲೂ ವೇಗವಾಗಿ ಲೆಕ್ಕ ಮಾಡುವುದನ್ನು ಕಲಿಯಬಹುದು. ಮಕ್ಕಳಲ್ಲಿ ಗಣಿತದ ಮೇಲಿನ ಭಯ ಹೋಗಲಾಡಿಸಿ ಆತ್ಮವಿಶ್ವಾಸ ಬೆಳೆಸುವಲ್ಲಿ ಅಬಾಕಸ್ ಒಂದು ಉತ್ತಮವಾದ ಸಾಧನವಾಗಿದೆ ಎಂದು ತಿಳಿಸಿದರು.
‘ಕಾರ್ಯಕ್ರಮದಲ್ಲಿ ಅಬಾಕಸ್ ಶಾಲೆಯ ಪ್ರಾಂಶುಪಾಲರಾದ ಸೌಮ್ಯ ಎಸ್ ಶಿರೂರ್, ನಗರ ಶಾಖೆಯ ಮುಖ್ಯಸ್ಥ ಸಂತೋಷ್ ಪಿ ಶಿರೂರ್, ಶಿಕ್ಷಕಿ ಚೇತನ ಬೋಧಕ ಸಿಬ್ಬಂದಿ ಮತ್ತು ಮಕ್ಕಳು ಪಾಲಕರು ಭಾಗವಹಿಸಿದ್ದರು. ಶಿಕ್ಷಕಿ ನಾಗರತ್ನಮ್ಮ ಕಾರ್ಯಕ್ರಮ ನಿರೂಪಿಸಿದರು.
ಪ್ರಶಸ್ತಿ :
ಹುಬ್ಬಳ್ಳಿಯಲ್ಲಿ ನಡೆದ ರಾಜ್ಯಮಟ್ಟದ 10 ವಿಭಾಗಗಳ ಸ್ಪರ್ಧೆಯಲ್ಲಿ 1750 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದ ತುರುಸಿನ ಅಬಾಕಸ್ ಸ್ಪರ್ಧೆಯಲ್ಲಿ ತುಮಕೂರಿನ ಕ್ಯಾಲ್ಸಿ ಅಬ್ಯಾಕಸ್ ಅಕಾಡೆಮಿ ಎಲ್. ಆದ್ಯಗೌಡ-ಪ್ರಥಮ ಬಹುಮಾನ ಹಾಗೂ ಪಿ. ಎಂ. ಸಮರ್ಥ್ ದ್ವಿತೀಯ ಬಹುಮಾನ ಪಡೆದರೆ, 17 ಸಮಾಧಾನಕರ ಪ್ರಶಸ್ತಿಗೆ ಪಾತ್ರರಾದರು.ಇದೆ ಸಂದರ್ಭದಲ್ಲಿ ಅಬಾಕಸ್‌ನಲ್ಲಿ 26 ವಿದ್ಯಾರ್ಥಿಗಳು ತಮ್ಮ ಅಧ್ಯಯನ ಪೂರ್ಣಗೊಳಿಸಿಪ ದವಿ ಪ್ರಮಾಣ ಪತ್ರ ಪಡೆದರು.





