ತುಮಕೂರು | ಮೌಲ್ಯಾತ್ಮಕ ವ್ಯಕ್ತಿಗಳು ನಮ್ಮ ನಡುವೆ ಸದಾ ಜೀವಂತ: ಪ್ರೊ ಬಸವರಾಜ ಕಲ್ಗುಡಿ

Date:

ಸೃಜನಶೀಲ ವ್ಯಕ್ತಿಯಾಗಿ ಬದುಕಿದವರ ಹೆಸರಿನ ಪ್ರಶಸ್ತಿಯನ್ನು ಅದೇ ಮಾದರಿಯಲ್ಲಿ ನಡೆಯುವವರಿಗೆ ನೀಡುವ ಮೂಲಕ ಈ ನೆಲದ ಬದುಕನ್ನು ಹೇಗೆ ಕ್ರಿಯಾಶೀಲವಾಗಿ ಬದುಕಬೇಕು ಎಂಬುದಕ್ಕೆ ಪ್ರೇರಣೆಯಾಗುತ್ತದೆ ಎಂದು ಹೆಸರಾಂತ ವಿಮರ್ಶಕ ಪ್ರೊ.ಬಸವರಾಜ ಕಲ್ಗುಡಿ ಹೇಳಿದರು.

ತುಮಕೂರು ನಗರದ ರವೀಂದ್ರ ಕಲಾನಿಕೇತನ ಸಭಾಂಗಣದಲ್ಲಿ ಶನಿವಾರ ನಡೆದ ಪ್ರೊ ಎಚ್ ಜಿ ಸಣ್ಣಗುಡ್ಡಯ್ಯ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

“ನೇರನಿಷ್ಟುರದ ಬರವಣಿಗೆ, ಬದುಕು ನಡೆಸಿದ ಪ್ರೊ ಎಚ್ ಜಿ ಸಣ್ಣಗುಡ್ಡಯ್ಯ ಅವರು ಸೃಜನಶೀಲ
ಬರಹಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರ ಬರವಣಿಗೆಯಲ್ಲಿನ ಬದ್ಧತೆ, ಸಾಮಾಜಿಕ ಕಳಕಳಿ ಪ್ರಮುಖವಾಗಿ ಕಾಣುತ್ತದೆ. ಇಂತಹ ಮೌಲ್ಯಾತ್ಮಕ ವ್ಯಕ್ತಿಗಳು ನಮ್ಮ ನಡುವೆ ಸದಾ ಉಳಿಯುತ್ತಾರೆ.ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಮೂಲಕ ಅವರ ಕೊಡುಗೆ, ವ್ಯಕ್ತಿತ್ವವನ್ನು ಹೊಸ ತಲೆಮಾರಿನವರಿಗೆ ತಿಳಿಸುವ ಸಾರ್ಥಕ ಪ್ರಯತ್ನ ನಡೆದಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಪ್ರೊ.ರಹಮತ್ ತರೀಕೆರೆ ಅವರು ಅಲೆಮಾರಿಯಾಗಿ, ಅವದೂತರಾಗಿ ರಾಜ್ಯ ಸುತ್ತಿ ವಿವಿಧ ಬಗೆಯ ಸಾಮಗ್ರಿಗಳನ್ನು ಹುಡುಕಿ ತಂದು ಬರಹಗಳಲ್ಲಿ ದಾಖಲಿಸಿದ್ದಾರೆ. ಸೂಫಿ ಪರಂಪರೆ, ನಾಥ ಪರಂಪರೆ, ಭಕ್ತಿ ಪರಂಪರೆಯನ್ನು ವರ್ತಮಾನದ ದೃಷ್ಟಿಕೋನದಲ್ಲಿ ಕಂಡಿದ್ದಾರೆ ಎಂದು ಹೇಳಿದ ಪ್ರೊ.ಬಸವರಾಜ ಕಲ್ಗುಡಿ, ಬಾ.ಹ.ರಮಾಕುಮಾರಿಯವರು ಸರ್ಕಾರಿ ಹುದ್ದೆಯಲ್ಲಿದ್ದು ಸಾಮಾಜಿಕ ಹೋರಾಟ, ಸಾಹಿತ್ಯದ ಮೂಲಕ ಗಮನ ಸೆಳೆದರು, ಕ್ರಿಯಾಶೀಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ
ತೊಡಗಿಕೊಂಡವರು” ಎಂದು ಶ್ಲಾಘಿಸಿ ಅಭಿನಂದಿಸಿದರು.

ಅನಾರೋಗ್ಯದ ಕಾರಣ ಕಾರ್ಯಕ್ರಮಕ್ಕೆ ಬರಲಾಗದ ಪ್ರತಿಷ್ಠಾನದ ಗೌರವಾಧ್ಯಕ್ಷರೂ ಆದ ಹಿರಿಯ ಸಾಹಿತಿ ಪ್ರೊ ಬರಗೂರು ರಾಮಚಂದ್ರಪ್ಪ ಅವರು ಬರೆದು ಕಳಿಸಿದ್ದ ಪತ್ರವನ್ನು ಪ್ರತಿಷ್ಠಾನದ ಕಾರ್ಯದರ್ಶಿ ಡಾ.ನಾಗಭೂಷಣ ಬಗ್ಗನಡು ಓದಿದರು.

“ಪ್ರೊ. ಸಣ್ಣಗುಡ್ಡಯ್ಯ, ವೀಚಿ, ಕೆ ಆರ್ ನಾಯಕ್ ಅವರು ತುಮಕೂರಿನಲ್ಲಿ ನನ್ನಂತಹ ಅನೇಕರನ್ನು ಪ್ರೆರೇಪಿಸುತ್ತಿದ್ದರು. ಪ್ರೊ ಸಣ್ಣಗುಡ್ಡಯ್ಯ ಅವರ ಬೆರಗುಗೊಳಿಸುವ ಲಲಿತ ಪ್ರಬಂಧಗಳು, ಅವರ
ಪ್ರಜಾಪ್ರಭುತ್ವವಾದ ಹಲವರಿಗೆ ಪ್ರೇರಣೆಯಾಗಿತ್ತು. ಯಾರಾದರು ಇಷ್ಟಪಡದಿದ್ದರೂ ಹೇಳಬೇಕಾದನ್ನು ಅವರು ಹೇಳಿಯೇ ಹೇಳುತ್ತಿದ್ದರು. ಮುಖ್ಯವಾಗಿ ಅವರು ಕೇಳಿಸಿಕೊಳ್ಳುವ ಸ್ವಭಾವದವರಾಗಿದ್ದರು” ಎಂದ ಬರಗೂರರು ತಮ್ಮ ಪತ್ರದಲ್ಲಿ ಪ್ರೊ.ಸಣ್ಣಗುಡ್ಡಯ್ಯ ಅವರನ್ನು ಕುರಿತು ಹೇಳಿದ್ದರು.

ಈ ವೇಳೆ ಪ್ರಬಂಧಕಾರ ಪ್ರೊ ರಹಮತ್ ತರೀಕೆರೆ ಹಾಗೂ ಕವಿ ಬಾ ಹ ರಮಾಕುಮಾರಿ ಅವರಿಗೆ ಪ್ರೊ ಎಚ್ ಜಿ ಸಣ್ಣಗುಡ್ಡಯ್ಯ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಪ್ರಶಸ್ತಿ ಸ್ವೀಕರಿಸಿದ ಪ್ರೊ.ರಹಮತ್ ತರೀಕೆರೆ ಮಾತನಾಡಿ, “ಒಂದು ಊರು ಸ್ಮಾರ್ಟ್ ಸಿಟಿಯಾಗುವುದೆಂದರೆ ಸುಸಜ್ಜಿತ ರಸ್ತೆ, ನಾಗರಿಕ ಸೌಲಭ್ಯಗಳು ಮಾತ್ರವಲ್ಲ, ಅಲ್ಲಿನ ಜನರೂ ಸಾಂಸ್ಕೃತಿಕವಾಗಿ ಸ್ಮಾರ್ಟ್ ಆಗಬೇಕು. ಸಂಘ ಸಂಸ್ಥೆಗಳೂ ಮಾಡಲಾಗದಂತಹ ಕ್ರೀಯಾಶೀಲ  ಕಾರ್ಯಗಳನ್ನು ಕ್ರಿಯಾಶೀಲ ವ್ಯಕ್ತಿ ಮಾಡಿ ಇಡೀ ಊರನ್ನು ಕ್ರಿಯಾಶೀಲಗೊಳಿಸಿದ ಉದಾಹರಣೆಗೆಳು ನಮ್ಮಲ್ಲಿ ಬಹಳಷ್ಟಿವೆ” ಎಂದರು.

“ಲಲಿತ ಪ್ರಬಂಧ ಕನ್ನಡದ ವಿಶಿಷ್ಟ ಪ್ರಾಕಾರ. ಲೋಕದ ಕಣ್ಣಿಗೆ ಬೀಳದೆ ಅಲಕ್ಷಿತವಾಗಿದ್ದ ವಸ್ತವನ್ನು ಆರಿಸಿಕೊಂಡು, ಓದುಗರಲ್ಲಿ ಮಂದಹಾಸ ಮೂಡಿಸುವಂತಹ ಶೈಲಿಯ ಪ್ರಬಂಧ ರಚನೆ
ಯಾರಿಗಾದರೂ ಆಕರ್ಷಕವಾಗಿರುತ್ತವೆೆ. ಇಂತಹ ಬರಹಗಳು ಹೆಚ್ಚಲಿ” ಎಂದು ಆಶಿಸಿದರು.

ಪ್ರತಿಷ್ಠಾನದ ಉಪಾಧ್ಯಕ್ಷ, ಪ್ರಜಾಪ್ರಗತಿ ಸಂಪಾದಕ ಎಸ್ ನಾಗಣ್ಣ ಅವರು ಪ್ರೊ ಸಣ್ಣಗುಡ್ಡಯ್ಯ ಅವರೊಂದಿಗಿನ ತಮ್ಮ ಒಡನಾಟ ಸ್ಮರಿಸಿಕೊಂಡರು.

“ಸಣ್ಣಗುಡ್ಡಯ್ಯ, ಕವಿ ವೀ ಚಿಕ್ಕವೀರಯ್ಯ, ಹೋರಾಟಗಾರ ಕೆ.ಆರ್.ನಾಯಕ್ ಅವರ ಗೆಳೆತನ ನೆನಪಿಸಿಕೊಂಡರು. ಸಾಹಿತ್ಯ ಕ್ಷೇತ್ರದಲ್ಲಿ ಇಂತಹವರ ನೆನೆಪು ಸದಾ ಇರಬೇಕೆಂಬ ಕಾರಣಕ್ಕೆ ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ ಪ್ರಶಸ್ತಿ ನಿಡುವ ಮೂಲಕ ಮುಂದಿನ ತಲೆಮಾರಿಗೆ ಅವರನ್ನು ತಿಳಿಸುವ ಪ್ರಯತ್ನ ಇದಾಗಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಗೋಮಾಳ ಜಮೀನು ವಿವಾದ; ಚುನಾವಣೆ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ

ಪ್ರತಿಷ್ಠಾನದ ಅಧ್ಯಕ್ಷ ಎಂ.ಬಸವಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಸಣ್ಣಗುಡ್ಡಯ್ಯ ಅವರ ಪತ್ನಿ ಶಾಂತಾ ಸಣ್ಣಗುಡ್ಡಯ್ಯ, ನಿವೃತ್ತ ಪ್ರಾಚಾರ್ಯ ಪ್ರೊ. ಕೆ ಚಂದ್ರಣ್ಣ, ಎಂ ಎಚ್ ನಾಗರಾಜು, ಶ್ರೀತೀರ್ಥ, ಮಿರ್ಜಾ ಬಷೀರ್ ಸೇರಿದಂತೆ ಇತರರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...