ತುರುವೇಕೆರೆ | ಹೊಣಕೆರೆ ಗೊಲ್ಲರಹಟ್ಟಿಯಲ್ಲಿ ಚಿರತೆ ಪ್ರತ್ಯಕ್ಷ

Date:

ತುರುವೇಕೆರೆ ತಾಲೂಕಿನ ಹೊಣಕೆರೆ ಗೊಲ್ಲರಹಟ್ಟಿಯ ತೋಟದ ಸಾಲಿನಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಇದರಿಂದಾಗಿ ಗ್ರಾಮಸ್ಥರು ಕಂಗಾಲಾಗಿ ಅರಣ್ಯ ಇಲಾಖಾ ಅಧಿಕಾರಿಗಳ ಮೊರೆ ಹೋಗಿದ್ದಾರೆ. 

 ಶುಕ್ರವಾರ ಸಾಯಂಕಾಲ ಹೊಣಕೆರೆ ಗೊಲ್ಲರಹಟ್ಟಿಯ ರವಿಯಣ್ಣ ಎಂಬುವವರು ತಮ್ಮ ತೋಟದಲ್ಲಿ ನೀರು ಹಾಯಿಸುತ್ತಿದ್ದ ಸಂದರ್ಭದಲ್ಲಿ ಗಿಡದ ಪೊದೆಯಿಂದ ಚಿರತೆ ಹೊರಬಂದಿದೆ. ಕೆಲವೇ ಅಂತರದಿಂದ ಗಮನಿಸಿದ ರವಿಯಣ್ಣ ಜೀವ ಭಯದಿಂದ ತಮ್ಮ ಮನೆಯತ್ತ ತೆರಳಿದ್ದಾರೆ. ಶನಿವಾರ ಬೆಳಗ್ಗೆ ಕೆಲ ಗ್ರಾಮಸ್ಥರ ಸಹಕಾರದಿಂದ ತಮ್ಮ ತೋಟದತ್ತ ತೆರಳಿ ಚಿರತೆ ಬಂದಿದ್ದ ಸ್ಥಳವನ್ನು ಪರಿಶೀಲಿಸಲಾಗಿ ಚಿರತೆಯ ಹೆಜ್ಜೆ ಗುರುತು ಕಂಡುಬಂದಿದೆ.

  ಕಳೆದ ಐದಾರು ದಿನಗಳ ಹಿಂದೆ ಇದೇ ಗ್ರಾಮದ ಹೊರವಲಯದಲ್ಲಿ ನರಿಯನ್ನು ತಿಂದಿದ್ದ ಚಿರತೆ, ನರಿಯ ದೇಹವನ್ನೆಲ್ಲಾ ತಿಂದು ನರಿಯ ತಲೆ ಬುರುಡೆಯನ್ನು ಬಿಟ್ಟು ಹೋಗಿದ್ದ ದೃಶ್ಯವನ್ನು ದನಗಾಹಿಗಳು ನೋಡಿದ್ದಾರೆ. ಅಲ್ಲದೇ ಪದೇ ಪದೇ ಗ್ರಾಮದಲ್ಲಿರುವ ಬೀದಿ ನಾಯಿಗಳನ್ನೂ ಸಹ ಚಿರತೆ ಬಲಿ ತೆಗೆದುಕೊಂಡಿದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಚಿರತೆ ಸೆರೆಹಿಡಿಯಲು ಬೋನಿನ ವ್ಯವಸ್ಥೆ ಮಾಡಬೇಕೆಂದು ಗ್ರಾಮದ ಮುಖಂಡರಾದ ರವಿಯಣ್ಣ ಮತ್ತು ಚಂದ್ರ ಪ್ರಸಾದ್‌ ಅರಣ್ಯ ಇಲಾಖಾ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುರುವೇಕೆರೆ | ಚಿರತೆ ದಾಳಿ : ಕುಟುಂಬದವರಿಗೆ ಒಂದು ಲಕ್ಷ ನೀಡಿದ ದೊಡ್ಡಾಘಟ್ಟ ಚಂದ್ರೇಶ್‌

 ಚಿರತೆ ದಾಳಿಯಿಂದ ಮೃತಪಟ್ಟ ಅರೇಮಲ್ಲೇನಹಳ್ಳಿಯ ಸುಜಾಳ ರವರ ಕುಟುಂಬಕ್ಕೆ ರಾಜ್ಯ ಯುವ...

ತುರುವೇಕೆರೆ | ಬೋನಿಗೆ ಬಿದ್ದ ಚಿರತೆ : ಜನ ನಿರಾತಂಕ

ತುರುವೇಕೆರೆ  ತಾಲೂಕಿನ ಅರೇಮಲ್ಲೇನಹಳ್ಳಿಯಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿದೆ. ಭಾನುವಾರವಷ್ಠೇ ಮಹಿಳೆಯೋರ್ವರನ್ನು ಚಿರತೆ...

ತುರುವೇಕೆರೆ | ಚಿರತೆ ದಾಳಿಗೆ ಮಹಿಳೆ ಬಲಿ ; ಸಂತ್ರಸ್ತ ಕುಟುಂಬಕ್ಕೆ 5 ಲಕ್ಷ ರೂ. ತಾತ್ಕಾಲಿಕ ಪರಿಹಾರ ಚೆಕ್ ವಿತರಣೆ : ಎಂ.ಟಿ ಕೃಷ್ಣಪ್ಪ

 ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಅರೇಮಲ್ಲೇನಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ಚಿರತೆ...

ತುರುವೇಕೆರೆ | ನರೇಗಾ ತಿದ್ದುಪಡಿ ಮಸೂದೆ ಹಿಂಪಡೆಯಲು ಕೆಆರ್‌ಎಸ್‌ ಪಕ್ಷದ ಎಲ್ ಜೀವನ್‌ ಆಗ್ರಹ

ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ(ನರೇಗಾ) ಹೆಸರನ್ನು ತಿದ್ದುಪಡಿ ಮಾಡಿರುವ...