ತುರುವೇಕೆರೆ | ನೀರಗುಂದ ಗ್ರಾಮದ ಸಮಸ್ಯೆಗಳನ್ನು ಪರಿಹರಿಸುವಂತೆ ಅಲ್ಲಪ್ಪ ಒತ್ತಾಯ

Date:

ತುರುವೇಕೆರೆ ತಾಲೂಕಿನ ನೀರಗುಂದ ಗ್ರಾಮದಲ್ಲಿ ನಾಲ್ಕೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹಲವಾರು ಕಾಮಗಾರಿಗಳನ್ನು ಕೂಡಲೇ ಪರಿಹರಿಸಿ ಎಂದು ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರೂ, ಹಾಲಿ ನೀರಗುಂದ ಹಾಗೂ ಅಜ್ಜೇನಹಳ್ಳಿಯ ಸದಸ್ಯ,  ನಿವೃತ್ತ ಅಪರ ಜಿಲ್ಲಾಧಿಕಾರಿ ಅಲ್ಲಪ್ಪ ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.

 ನೀರಗುಂದ ಗ್ರಾಮದಲ್ಲಿ ಕಳೆದ ಒಂದೆರೆಡು ವರ್ಷಗಳ ಹಿಂದೆ ಪ್ರಾರಂಭಗೊಂಡಿರುವ ಜಲಜೀವನ್‌ ಯೋಜನೆಯ ಮನೆ ಮನೆಗೆ ನೀರು ಹರಿಸುವ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಗ್ರಾಮದ ಬಹುತೇಕ ಕಡೆ ಕಾಮಗಾರಿ ಅರ್ಧಂಬರ್ಧ ಆಗಿದೆ. ಆದರೆ ದಲಿತ ಕಾಲೋನಿಯಲ್ಲಿ ಕಳೆದ ಆರೇಳು ತಿಂಗಳ ಹಿಂದೆಯೇ ಕಾಮಗಾರಿಗಾಗಿ ರಸ್ತೆಯ ಮಧ್ಯ ಭಾಗದಲ್ಲೇ ಪೈಪುಗಳನ್ನು ಅಳವಡಿಸುವ ಸಲುವಾಗಿ ದೊಡ್ಡದಾಗಿ ಸಿಮೆಂಟ್‌ ರಸ್ತೆಯನ್ನೇ ಕತ್ತರಿಸಲಾಗಿದೆ. ಇದುವರೆಗೂ ಕಾಮಗಾರಿ ಮಾಡದೇ ಉದಾಸೀನ ಮಾಡಲಾಗಿದೆ. ಜನರು ಓಡಾಡುವುದೇ ದುಸ್ತರವಾಗಿದೆ. ಹಲವಾರು ಮಂದಿಗೆ ಅಪಘಾತವಾಗಿ ಗಾಯಗೊಂಡಿದ್ದಾರೆ. ಹಲವಾರು ವಾಹನಗಳು ಜಖಂಗೊಂಡಿವೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ವಿಚಾರಿಸಿದರೆ ಉದಾಸೀನದ ಉತ್ತರ ದೊರೆಯುತ್ತಿದೆ ಎಂದು ಅಲ್ಲಪ್ಪ ದೂರಿದ್ದಾರೆ.

1002631087

 ಗ್ರಾಮದ ಮಧ್ಯಭಾಗದಲ್ಲಿ ತಾಲೂಕು ಪಂಚಾಯಿತಿಯಿಂದ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಿರ್ಮಿಸಿರುವ ಕಟ್ಟಡವೊಂದು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಯಾವುದೇ ಕ್ಷಣದಲ್ಲಿ ಬಿದ್ದುಹೋಗುವ ಹಂತದಲ್ಲಿದೆ. ಅದನ್ನು ಕೂಡಲೇ ತೆರವುಗೊಳಿಸಿ ಗ್ರಾಮದ ಜನರು ಶವದ ಸಂಸ್ಕಾರದ ವಿಧಿ ವಿಧಾನಗಳನ್ನು ಮಾಡುವ ಸಲುವಾಗಿ ಸೂಕ್ತ ಕಟ್ಟಡವನ್ನು ನಿರ್ಮಿಸಿಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

 ಸುಮಾರು ನೂರು ವರ್ಷದ ಹಿಂದೆ ನಿರ್ಮಾಣ ಮಾಡಿರುವ ಹಳೆಯ ಪೋಸ್ಟ್‌ ಆಫೀಸ್‌ ಸಹ ಸಂಪೂರ್ಣ ಹಾಳಾಗಿದೆ. ಈ ಕಟ್ಟಡವನ್ನೂ ಸಹ ತೆರವುಗೊಳಿಸಿ ಸಾರ್ವಜನಿಕರ ಅನುಕೂಲಕ್ಕೆ ಅಗತ್ಯವಿರುವ ಕಟ್ಟಡವೊಂದನ್ನು ನಿರ್ಮಿಸುವಂತೆ ಅಲ್ಲಪ್ಪ ಒತ್ತಾಯಿಸಿದ್ದಾರೆ. ನೀರಗುಂದಕ್ಕೆ ಜಲಜೀವನ್‌ ಯೋಜನೆಯಡಿ ಮನೆ ಮನೆಗೆ ನೀರು ಕೊಡುವ ಸಲುವಾಗಿ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಿಸಿದ್ದಾರೆ. ಇದನ್ನೂ ಸಹ ಸರಿಯಾದ ರೀತಿ ನಿರ್ಮಿಸಿಲ್ಲ. ಕಾಮಾಗಾರಿ ಅರ್ಧಂಬರ್ಧ ಆಗಿದೆ. ಸರಿಯಾಗಿ ಕ್ಯೂರಿಂಗ್‌ ಸಹ ಮಾಡಿಲ್ಲ ಎಂದು ಅಲ್ಲಪ್ಪ ದೂರಿದರು. 

1002631088

ನೀರಗುಂದದಲ್ಲಿ ಇತ್ತೀಚೆಗೆ ನಿರ್ಮಿಸಿರುವ ಕೋಡಿಯ ಮೇಲಿನ ಸೇತುವೆ ಕಾಮಗಾರಿಯಲ್ಲಿ ಇನ್ನೂ ಕೆಲವು ಕೆಲಸ ಬಾಕಿ ಇದೆ. ನೀರಗುಂದದಿಂದ ವೈಟಿ ರಸ್ತೆಯವರೆಗಿನ ರಸ್ತೆ ಸಂಪೂರ್ಣ ಹಾಳಾಗಿದೆ. ಅಂಬೇಡ್ಕರ್‌ ಭವನ ಕಾಮಗಾರಿ ಸ್ಥಗಿತಗೊಂಡಿದೆ. ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ಅಳವಡಿಸಲಾಗಿದ್ದ ಹೈಮಾಸ್‌ ಲೈಟ್‌ ಗಳು ಕೆಟ್ಟು ಹೋಗಿ ಹಲವಾರು ತಿಂಗಳುಗಳೇ ಕಳೆದಿವೆ. ಆದರೂ ಸಹ ಅದನ್ನು ರಿಪೇರಿ ಮಾಡಿಸುವ ಮನಸ್ಸನ್ನು ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಓ ಮಾಡಿಲ್ಲ ಎಂದು ಅಲ್ಲಪ್ಪ ಆಕ್ಷೇಪಿಸಿದರು.

 ಅಜ್ಜೇನಹಳ್ಳಿಯಲ್ಲಿರುವ ಮಂಟಪಕ್ಕೂ ಹೈಮಾಸ್‌ ಲೈಟ್‌ ನ್ನು ಅಳವಡಿಸಬೇಕು, ಅಜ್ಜೇನಹಳ್ಳಿಯಿಂದ ನೀರಗುಂದ ರಸ್ತೆಯವರೆಗೆ ಸುಸಜ್ಜಿತವಾದ ಸಿಮೆಂಟ್‌ ರಸ್ತೆ ಮತ್ತು, ಚರಂಡಿಯನ್ನು ನಿರ್ಮಿಸಬೇಕು. ನೀರಗುಂದ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕವನ್ನು ನೀಡಬೇಕು. ಈ ಎಲ್ಲಾ ಸಮಸ್ಯೆಗಳನ್ನು ಕೂಡಲೇ ಬಗೆಹರಿಸದಿದ್ದಲ್ಲಿ ಗ್ರಾಮಸ್ಥರೊಡನೆ ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಅಲ್ಲಪ್ಪ ಎಚ್ಚರಿಕೆ ನೀಡಿದ್ದಾರೆ.  

 ನೀರುಗುಂದದಲ್ಲಿರುವ ಕೆರೆ ತುಂಬಿದೆ. ಕೆರೆಯ ದಡದಲ್ಲಿ ಸೂಕ್ತ ರಕ್ಷಣಾ ವ್ಯವಸ್ಥೆ ಇಲ್ಲದಿರುವ ಕಾರಣ ಸಾವು ನೋವು ಸಂಭವಿಸುತ್ತಿದೆ. ಆದ್ದರಿಂದ ಕೆರೆಯ ದಡದುದ್ದಕ್ಕೂ ಬೇಲಿ ನಿರ್ಮಾಣ ಮಾಡಬೇಕು. ಕೆರೆಯ ಏರಿಯ ಮೇಲೆ ದೊಡ್ಡ ಗಾತ್ರದಲ್ಲಿ ಗಿಡಮರಗಳು ಬೆಳೆದಿದೆ. ಇದರಿಂದ ಕೆರೆಯ ಏರಿಗೆ ತೊಂದರೆಯಾಗುವ ಎಲ್ಲಾ ಸಾಧ್ಯತೆಗಳು ಇವೆ ಅಲ್ಲದೇ ಕಾಡು ಪ್ರಾಣಿಗಳ ವಾಸಸ್ಥಾನವಾಗಿದೆ. ಆದುದರಿಂದ ಕೂಡಲೇ ಕೆರೆಯ ಮೇಲಿರುವ ಗಿಡಗಂಟೆಗಳನ್ನು ತೆರವುಗೊಳಿಸಬೇಕೆಂದು ಅಲ್ಲಪ್ಪ ಆಗ್ರಹಿಸಿದರು. 

ವರದಿ – ಎಸ್ ನಾಗಭೂಷಣ್

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುರುವೇಕೆರೆ | ಚಿರತೆ ದಾಳಿ : ಕುಟುಂಬದವರಿಗೆ ಒಂದು ಲಕ್ಷ ನೀಡಿದ ದೊಡ್ಡಾಘಟ್ಟ ಚಂದ್ರೇಶ್‌

 ಚಿರತೆ ದಾಳಿಯಿಂದ ಮೃತಪಟ್ಟ ಅರೇಮಲ್ಲೇನಹಳ್ಳಿಯ ಸುಜಾಳ ರವರ ಕುಟುಂಬಕ್ಕೆ ರಾಜ್ಯ ಯುವ...

ತುರುವೇಕೆರೆ | ಬೋನಿಗೆ ಬಿದ್ದ ಚಿರತೆ : ಜನ ನಿರಾತಂಕ

ತುರುವೇಕೆರೆ  ತಾಲೂಕಿನ ಅರೇಮಲ್ಲೇನಹಳ್ಳಿಯಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿದೆ. ಭಾನುವಾರವಷ್ಠೇ ಮಹಿಳೆಯೋರ್ವರನ್ನು ಚಿರತೆ...

ತುರುವೇಕೆರೆ | ಚಿರತೆ ದಾಳಿಗೆ ಮಹಿಳೆ ಬಲಿ ; ಸಂತ್ರಸ್ತ ಕುಟುಂಬಕ್ಕೆ 5 ಲಕ್ಷ ರೂ. ತಾತ್ಕಾಲಿಕ ಪರಿಹಾರ ಚೆಕ್ ವಿತರಣೆ : ಎಂ.ಟಿ ಕೃಷ್ಣಪ್ಪ

 ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಅರೇಮಲ್ಲೇನಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ಚಿರತೆ...

ತುರುವೇಕೆರೆ | ನರೇಗಾ ತಿದ್ದುಪಡಿ ಮಸೂದೆ ಹಿಂಪಡೆಯಲು ಕೆಆರ್‌ಎಸ್‌ ಪಕ್ಷದ ಎಲ್ ಜೀವನ್‌ ಆಗ್ರಹ

ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ(ನರೇಗಾ) ಹೆಸರನ್ನು ತಿದ್ದುಪಡಿ ಮಾಡಿರುವ...