ತುರುವೇಕೆರೆ | ಸಹಜ ಕೃಷಿಯ ಅಚ್ಚರಿ ನಡಿಗೆ ವಿಷಮುಕ್ತ ಆಹಾರದ ಕಡೆಗೆ

Date:

 ರೈತರು ಸಹಜ ಕೃಷಿಯತ್ತ ಮುಖ ಮಾಡಿ ವಿಷಮುಕ್ತ ತರಕಾರಿ, ಹಣ್ಣು, ಆಹಾರಗಳನ್ನು ಬೆಳೆದು ಸೇವಿಸಬೇಕು ಎಂದು ತುಮಕೂರು ಸಹಜ ಕೃಷಿ ಬಳಗದ ಮುಖ್ಯಸ್ಥ ರವಿವರ್ಮ ಕುಮಾರ್ ತಿಳಿಸಿದರು. 

ತುರುವೇಕೆರೆ ತಾಲ್ಲೂಕಿನ ಕಸಬಾ ಹೋಬಳಿಯ ಮುದ್ಲಾಪುರ ಗ್ರಾಮದ ಶಶಿಕುಮಾರ್ ಅವರ ತೋಟದಲ್ಲಿ ನಡೆದ ಚೌಕಾಬಾರ ಏರುಮಡಿ ಪದ್ದತಿಯ ಅಚ್ಚರಿ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಚೌಕಾಬಾರ ಏರುಮಡಿ ಪದ್ದತಿಯಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸದೆ ತರಕಾರಿಗಳನ್ನು ಸಹಜವಾಗಿ ಬೆಳೆದು ತಮ್ಮ ಆಹಾರವಾಗಿ ಸೇವಿಸಬೇಕು. ಆಗ ಮಾತ್ರ ಆರೋಗ್ಯವಂತ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ರೈತರು ಜಪಾನಿನ ಕೃಷಿ ವಿಜ್ಞಾನಿ ಮಸನೊಬು ಫುಕುವೊಕ ಹಾಗೂ ದಾವಣಗೆರೆ ಐಕಾಂತಿಕ ರಾಘವ ಅವರ ಸಹಜ ಕೃಷಿ ಪದ್ದತಿಯನ್ನು ಅನುಸರಿಸಿದರೆ ಪರಿಪೂರ್ಣ ವಿಷಮುಕ್ತ ಆಹಾರ ಸೇವಿಸಬಹುದು. ತಮ್ಮ ಜಮೀನುಗಳಲ್ಲಿ ಸಹಜವಾಗಿ ಬಹು ಬೆಳೆಗಳನ್ನು ಬೆಳೆಯುವ ಮೂಲಕ ಸಸ್ಯ ವೈವಿಧ್ಯತೆ ಹಾಗೂ ಜೀವ ವೈವಿಧ್ಯತೆ ಕಾಪಾಡಬೇಕು. ಇದರಿಂದ ರೈತರ ಭೂಮಿಯಲ್ಲಿ ಫಲವತ್ತತೆ ಹೆಚ್ಚುತ್ತದೆ ಎಂದು ತಿಳಿಸಿದರು.

ಸಹಜ ಕೃಷಿಕ ತಿಪಟೂರು ಯೋಗಾನಂದಸ್ವಾಮಿ ಮಾತನಾಡಿ ರೈತರು ಸಹಜ ಕೃಷಿಯ ಜೊತೆಗೆ ಸಹಜ ಜೀವನವನ್ನು ಮಾಡುತ್ತಾ ಪ್ರಕೃತಿಯೊಂದಿಗೆ ಬದುಕುವುದನ್ನು ಕಲಿಯಬೇಕು‌. ಚೌಕಾಬಾರ ಏರುಮಡಿ ಪದ್ದತಿಯಲ್ಲಿ 62 ಬಗೆಯ ತರಕಾರಿಗಳನ್ನು ಬೆಳೆಯಬಹುದು ಎಂದ ಅವರು ಸಹಜ ಕೃಷಿಯ ಅಂತಿಮ ಗುರಿ ಕೇವಲ ಆಹಾರ ಪದಾರ್ಥಗಳನ್ನು ಬೆಳೆಯುವುದಲ್ಲ ಮನುಷ್ಯರನ್ನು ಉತ್ತಮರನ್ನಾಗಿ ರೂಪಿಸುವುದಾಗಿದೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

 ಇದೇ ಸಂದರ್ಭದಲ್ಲಿ ಸಹಜ ಕೃಷಿಕರಾದ ರಾಜಶೇಖರ್, ಪುಟ್ಟರಾಜು, ಉಮೇಶ್, ಶಶಿಕುಮಾರ್, ಗಂಗಣ್ಣ, ಮಹಾಂತೇಶ್, ನವೀನ್ ಕುಮಾರ್, ಮಾಲಿಂಗಪ್ಪ, ಪ್ರಸಾದ್, ಜಯರಾಮೇಗೌಡ ಸೇರಿದಂತೆ ಜಿಲ್ಲೆಯ ಸಹಜ ಕೃಷಿಕರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುರುವೇಕೆರೆ | ಚಿರತೆ ದಾಳಿ : ಕುಟುಂಬದವರಿಗೆ ಒಂದು ಲಕ್ಷ ನೀಡಿದ ದೊಡ್ಡಾಘಟ್ಟ ಚಂದ್ರೇಶ್‌

 ಚಿರತೆ ದಾಳಿಯಿಂದ ಮೃತಪಟ್ಟ ಅರೇಮಲ್ಲೇನಹಳ್ಳಿಯ ಸುಜಾಳ ರವರ ಕುಟುಂಬಕ್ಕೆ ರಾಜ್ಯ ಯುವ...

ತುರುವೇಕೆರೆ | ಬೋನಿಗೆ ಬಿದ್ದ ಚಿರತೆ : ಜನ ನಿರಾತಂಕ

ತುರುವೇಕೆರೆ  ತಾಲೂಕಿನ ಅರೇಮಲ್ಲೇನಹಳ್ಳಿಯಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿದೆ. ಭಾನುವಾರವಷ್ಠೇ ಮಹಿಳೆಯೋರ್ವರನ್ನು ಚಿರತೆ...

ತುರುವೇಕೆರೆ | ಚಿರತೆ ದಾಳಿಗೆ ಮಹಿಳೆ ಬಲಿ ; ಸಂತ್ರಸ್ತ ಕುಟುಂಬಕ್ಕೆ 5 ಲಕ್ಷ ರೂ. ತಾತ್ಕಾಲಿಕ ಪರಿಹಾರ ಚೆಕ್ ವಿತರಣೆ : ಎಂ.ಟಿ ಕೃಷ್ಣಪ್ಪ

 ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಅರೇಮಲ್ಲೇನಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ಚಿರತೆ...

ತುರುವೇಕೆರೆ | ನರೇಗಾ ತಿದ್ದುಪಡಿ ಮಸೂದೆ ಹಿಂಪಡೆಯಲು ಕೆಆರ್‌ಎಸ್‌ ಪಕ್ಷದ ಎಲ್ ಜೀವನ್‌ ಆಗ್ರಹ

ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ(ನರೇಗಾ) ಹೆಸರನ್ನು ತಿದ್ದುಪಡಿ ಮಾಡಿರುವ...