ತುರುವೇಕೆರೆ | ನಾಯಿ ಬೊಗಳಿದ್ದಕ್ಕೆ ಮಾಲೀಕನ ಕೈಯನ್ನೇ ಮುರಿದ ಭೂಪ

Date:

ಸಾಕಿದ್ದ ನಾಯಿ ಬೊಗಳಿದ್ದಕ್ಕೆ ಸಿಟ್ಟುಗೊಂಡ ಪಕ್ಕದ ಮನೆಯಾತ ನಾಯಿ ಸಾಕಿದ ಮಾಲೀಕನ ಕೈ ಯನ್ನೇ ಮುರಿದಿರುವ  ಘಟನೆ ತುರುವೇಕೆರೆ ಸಮೀಪದ ಅಪ್ಪಸಂದ್ರದಲ್ಲಿ ನಡೆದಿದೆ. 

 ಅಪ್ಪಸಂದ್ರದ ವೆಂಕಟೇಶ್ (50) ತನ್ನ ಮನೆಯಲ್ಲಿ (ಗುಡಿಸಲು) ಎರಡು ನಾಯಿಗಳನ್ನು ಸಾಕಿದ್ದಾರೆ. ಬುಧವಾರ ರಾತ್ರಿ ನಾಯಿಗಳಿಗೆ ಅನ್ನ ಹಾಕುವ ವೇಳೆ ನಾಯಿಗಳು ಹೆಚ್ಚಾಗಿ ಬೊಗಳಿವೆ. ಇದರಿಂದ ಕೋಪಗೊಂಡ ಪಕ್ಕದ ಮನೆಯಲ್ಲಿರುವ ಶಿವರಾಜ್ ಎಂಬಾತ ವೆಂಕಟೇಶ್ ನ ಮೇಲೆ ಏಕಾಏಕಿ ದೊಣ್ಣೆಯಿಂದ ಮನಸಾ ಇಚ್ಚೆ ಥಳಿಸಿದ್ದಾನೆ. ವೆಂಕಟೇಶ್ ನ ಎಡಗೈಗೆ ಹೆಚ್ಚು ಪೆಟ್ಟು ಬಿದ್ದ ಪರಿಣಾಮ ಆತನ ಎಡಗೈ ಮೂಳೆ ಮುರಿದಿದ್ದು ಕೈ, ಮಾಂಸ ಖಂಡಗಳ ಸಹಾಯದಿಂದ ನೇತಾಡುತ್ತಿದೆ. 

 ಹೆಂಡತಿ ಮಕ್ಕಳು ಇಲ್ಲದೇ  ಅನಾಥನಂತಿರುವ ವೆಂಕಟೇಶ್ ನನ್ನು ಗ್ರಾಮದ ದಯಾನಂದ್ ಸೇರಿದಂತೆ ಇತರರು ಮಾನವೀಯತೆಯಿಂದ ತುರುವೇಕೆರೆ ಸರ್ಕಾರಿ ಆಸ್ಪತ್ರೆಗೆ ವೆಂಕಟೇಶ್ ನನ್ನು ಕರೆ ತಂದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಎಡಗೈ ಮೂಳೆ ತುಂಡಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗೆ ತುಮಕೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಇಲ್ಲಿನ ವೈದ್ಯರು ಶಿಫಾರಸ್ಸು ಮಾಡಿದ್ದಾರೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

 ಮೊದಲೇ ದುಡಿಯಲೂ ಆಗದ ಸ್ಥಿತಿಯಲ್ಲಿರುವ ಅಸಹಾಯಕನಾಗಿರುವ ಅನಾಥ ವೆಂಕಟೇಶ್ ನ ಸ್ಥಿತಿ ಅತಂತ್ರವಾಗಿದೆ. ಎಡಗೈ ತುಂಡಾಗಿದ್ದು ಚಿಕಿತ್ಸೆ ವೆಚ್ಚವನ್ನೂ ಭರಿಸುವ ಸ್ಥಿತಿಯೂ ಆತನಿಗೆ ಇಲ್ಲ. ಅಲ್ಲದೇ ಅವನ ಚಿಕಿತ್ಸಾ ವೆಚ್ಚವನ್ನು ಭರಿಸಲು ಯಾರೂ ಮುಂದೆ ಬರುತ್ತಿಲ್ಲ.   

 ವೆಂಕಟೇಶ್ ಗೆ ಇರಲು ಸೂರು ಇಲ್ಲ. ಕಟ್ಟಿಕೊಂಡಿರುವ ಗುಡಿಸಲೂ ಸಹ ಇಂದೋ ನಾಳೆಯೋ ಬಿದ್ದು ಹೋಗುವ ಸ್ಥಿತಿಯಲ್ಲಿದೆ. ವೆಂಕಟೇಶ್ ನ ಸಹಾಯಕ್ಕೆ ಯಾರಾದರೂ ಮುಂದೆ ಬರುವರೇ ಕಾದು ನೋಡಬೇಕಿದೆ. 

 ವೆಂಕಟೇಶ್ ನ ಕೈ ಮುರಿದಿರುವ ಶಿವರಾಜ್ ವಿರುದ್ಧ ದಂಡಿನಶಿವರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ಮುಂದುವರೆಸಿದ್ದಾರೆ. 

ವರದಿ – ಎಸ್. ನಾಗಭೂಷಣ್ ತುರುವೇಕೆರೆ

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...