ತುರುವೇಕೆರೆ | ಹೆತ್ತಮ್ಮನಿಗೇ ತುತ್ತು ಅನ್ನ ಹಾಕದವನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಏನು ಬೋಧನೆ ಮಾಡ್ತಾನೆ : ಸಣ್ಣಮ್ಮ

Date:

ಹೆತ್ತಮ್ಮ ನಾನು. ನನಗೇ ಒಂದು ತುತ್ತು ಅನ್ನ ಹಾಕದೇ, ನನ್ನನ್ನು ಮನೆಯಿಂದ ಹೊರಗೆ ಹಾಕಿದವನು ಅವನು. ನನ್ನ ಕತ್ತು ಹಿಡಿದು ಮನೆಯಿಂದ ಆಚೆ ಹಾಕಿದವನು ಅವನು. ನೀನು ತಾಯಿ ಅಲ್ಲ. ನಾಯಿ ಅಂದವನು ಅವನು. ಆಸ್ತಿ ವ್ಯಾಮೋಹಕ್ಕಾಗಿ ರಕ್ತ ಸಂಬಂಧಗಳನ್ನೇ ಕಳೆದುಕೊಂಡವನು. ಕಾಲು ಕತ್ತರಿಸಿ ಹಾಕ್ತೀನಿ ಅಂದವನು. ನೀನು ಯಾವತ್ತು ಸಾಯುತ್ತೀಯೇ ಎಂದು ಕೇಳಿದವನು. ಇಂತಹ ಮನುಷ್ಯ ಕನ್ನಡಮ್ಮನ ಉದ್ದಾರ ಮಾಡ್ತಾನಂತೆ. ಹೆತ್ತಮ್ಮನ ಹೊಟ್ಟೆ ಉರಿಸಿದವನು ವೇದಿಕೆಯಲ್ಲಿ ಏನು ಬೋಧನೆ ಮಾಡ್ತಾನೋ ನಾ ಕಾಣೆ. – ಇದು ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕು ದಬ್ಬೇಘಟ್ಟ ಹೋಬಳಿಯಲ್ಲಿ ನಡೆಯಲಿರುವ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ವಿಶ್ರಾಂತ ಅಧ್ಯಾಪಕ ಎಲ್ ಮಂಜಯ್ಯಗೌಡರ ತಾಯಿ ಸಣ್ಣಮ್ಮನವರ ಆಕ್ರೋಶದ ನುಡಿಗಳು.

ತುರುವೇಕೆರೆಯ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ಹೆತ್ತು ಹೊತ್ತು ಹೊಟ್ಟೆ ಬಟ್ಟೆ ಕಟ್ಟಿ ಸಾಕಿ ಸಲುಹಿದ ನನ್ನ ಮಗ ಮಂಜಯ್ಯಗೌಡ ಇಂದು ನನ್ನನ್ನು ಬೀದಿಗೆ ಹಾಕಿದ್ದಾನೆ. ಮತ್ತೊಬ್ಬ ಮಗ ನನ್ನನ್ನು ನೋಡಿಕೊಳ್ಳದೇ ಹೋಗಿದ್ದರೆ ನಾನು ಕೆರೆ ಕಟ್ಟೆ ಪಾಲು ಆಗಬೇಕಿತ್ತು ಎಂದು ಅಲವತ್ತುಗೊಂಡರು.

 ಹೆತ್ತ ತಾಯಿಗೆ ಗೌರವ ನೀಡದ ಅವನು ಕನ್ನಡ ಸಾಹಿತ್ಯ ಪರಿಷತ್‌ನ ಸಮ್ಮೇಳನದ ಅಧ್ಯಕ್ಷನಾಗಲು ನಾಲಾಯಕ್. ಆ ಸ್ಥಾನಕ್ಕೆ ಚ್ಯುತಿ ತಂದಿದ್ದಾನೆ. ಆಸ್ತಿ ಹಂಚಿಕೆ ಸಂಬಂಧ ಗ್ರಾಮದ ಹಿರಿಯರು ನನ್ನ ಪಾಲಿಗೆಂದು ಒಂದಿಷ್ಟು ಜಮೀನು ಬಿಡಿಸಿದ್ದರು. ಅದನ್ನೂ ಅವನೇ ಸ್ವಾಹಾ ಮಾಡಿದ. ಪ್ರತಿ ತಿಂಗಳು 5 ಸಾವಿರ ರೂ ಕೊಡಬೇಕೆಂದು ಹಿರಿಯರು ಹೇಳಿದ್ದರು. ಅದನ್ನೂ ಕೊಡುತ್ತಿಲ್ಲ. ಹಿರಿಯರ ಮಾತಿಗೆ ಬೆಲೆ ನೀಡದ ಆತ ನಮಗಾಗಿ ಬಿಟ್ಟಿದ್ದ ತೆಂಗಿನ ಮರದಲ್ಲೂ ಫಸಲನ್ನು ಕದ್ದು ಕಿತ್ತ. ಕೇಳಲು ಹೋದಾಗ ತಾಯಿ ಎಂಬ ಮಮಕಾರವೂ ಇಲ್ಲದೇ ಮನಸಾ ಇಚ್ಚೆ ಬೈದ. ನಾನು ಮತ್ತು ನನ್ನ ಗಂಡ ಕಷ್ಟಪಟ್ಟು ಕಟ್ಟಿದ್ದ ಮನೆಯಿಂದ ಆಚೆ ಹೋಗುವಂತೆ ಗದರಿದ. ಇಂತಹ ಕೀಳು ಸ್ವಭಾವದವನಿಂದ ಜನರು ಏನು ಮಾತನ್ನು ನಿರೀಕ್ಷಿಸಲು ಸಾಧ್ಯ. ಈತ ಸಮಾಜಕ್ಕೆ ಏನು ಸಂದೇಶ ನೀಡಿಯಾನು ಎಂದು ಸಣ್ಣಮ್ಮ ಪ್ರಶ್ನಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಂಜಯ್ಯಗೌಡನಿಗೆ ಮತ್ತೋರ್ವ ಸಹೋದರನಿದ್ದರೂ ಸಹ ಪಿತ್ರಾರ್ಜಿತ ಆಸ್ತಿಯನ್ನು ಸಮಪಾಲು ಮಾಡದೇ ವಂಚಿಸಿದ್ದಾನೆ. ರಕ್ತ ಸಂಬಂಧಕ್ಕಿಂತ ಅವನಿಗೆ ಆಸ್ತಿಯೇ ಮುಖ್ಯವಾಯಿತು. ಕನ್ನಡ ಭಾಷಾ ಭೋಧಕನಾಗಿರುವ ಮಗ ಮಂಜಯ್ಯಗೌಡನ ಬಾಯಿಯಲ್ಲಿ ತೀರಾ ಕೆಟ್ಟ ಕೆಟ್ಟ ಶಬ್ದಗಳು ಬರುತ್ತವೆ. ನಿನ್ನ ಕಾಲು ಕತ್ತರಿಸ್ತೀನಿ, ನೀನು ಯಾವತ್ತು ಸಾಯ್ತಾ ಅಂತ ಕಾಯ್ತಾ ಇದ್ದೀನಿ ಕಣೇ ಅಂತ ಹೆತ್ತ ತಾಯಿಯನ್ನು ನಿಂದಿಸಿದ. ಇದು ಸರಿನಾ?. ಇದು ತಾಯಿಗೆ ಕೊಡುವ ಗೌರವವಾ? ಮೊದಲು ತನ್ನ ತಾಯಿಗೆ ಗೌರವ ಕೊಡುವುದನ್ನು ಕಲಿಯಲಿ. ನಂತರ ಕನ್ನಡಮ್ಮನಿಗೆ ಗೌರವ ಕೊಡಲಿ ಎಂದು ಸಣ್ಣಮ್ಮ ವಿಷಾದದ ಮಾತು ಹೇಳಿದರು.

 ಈತ ಒಂದು ಹಿಂಸೆ ಕೊಟ್ಟಿಲ್ಲ. ಮಗ ಅಂತ ಹೇಳಿಕೊಳ್ಳಲು ನಾಚಿಕೆ ಆಗುತ್ತೆ. ಆತ ಇದ್ದರೂ ಒಂದೇ ಹೋದರೂ ಒಂದೇ. ಅವನಿಗೆ ಸಂಬಂಧಗಳಿಗಿಂತ ಆಸ್ತಿಯೇ ಮುಖ್ಯವಾಯಿತು. ಹೆತ್ತಮ್ಮನಿಗೆ ಒಂದು ತುತ್ತು ಅನ್ನ ಹಾಕದವನು ಈಗ ಬೋಧನೆ ಮಾಡಕ್ಕೆ ಹೋಗ್ತಾವ್ನೆ. ಹೆತ್ತಮ್ಮನ್ನನ್ನು ಬೀದಿ ಪಾಲು ಮಾಡಿದ ಅವನು ನಾನು ಸತ್ತ ಮೇಲೆ ನನ್ನ ಹೆಣ ನೋಡಲೂ ಬರಬಾರದು. ನನ್ನ ಮುಖ ನೋಡಲೂ ಬರಬಾರದು ಎಂದು ಸಣ್ಣಮ್ಮ ಖಡಾಖಂಡಿತವಾಗಿ ಹೇಳಿದರು.

 ಇಂತಹ ನೀತಿಗೆಟ್ಟವನಿಂದ ಮಕ್ಕಳು ಏನನ್ನು ಕಲಿಯಲು ಸಾಧ್ಯ. ಯಾವ ಭೋಧನೆ ಮಾಡಲು ಸಾಧ್ಯ. ಶನಿವಾರ ನಡೆಯಲಿರುವ ದಬ್ಬೇಘಟ್ಟ ಹೋಬಳಿ ಸಮ್ಮೇಳನಾಧ್ಯಕ್ಷನಾಗಿ ಏನು ಸಂದೇಶ ನೀಡಲಿದ್ದಾನೆ. ಇವನಿಗೆ ಯಾವ ನೈತಿಕತೆ ಇದೆ ಎಂದು ಸಣ್ಣಮ್ಮ ಮಂಜಯ್ಯಗೌಡರ ವಿರುದ್ಧ ಕಿಡಿಕಾರಿದರು. 

 ನಾಲ್ಕು ಜನರಿಗೆ ಬುದ್ದಿ ಹೇಳಬೇಕಿದ್ದ ಈ ಮನುಷ್ಯ ಹೆತ್ತಮ್ಮನನ್ನು ನಿಕೃಷ್ಟವಾಗಿ ಕಾಣುತ್ತಿದ್ದಾನೆ. ನನಗೆ ಮೋಸ ಮಾಡಿ ಆಸ್ತಿ ಬರೆಸಿಕೊಂಡಿದ್ದಾನೆ. ಎಲ್ಲಾ ಆಸ್ತಿಯೂ ಇವನಿಗೇ ಬೇಕು ಎಂಬ ದುರಾಸೆ ಇದೆ. ಕಾರ್ಯಕ್ರಮದಲ್ಲಿ ಅವನಿಗೆ ರ‍್ಯಾದೆ ಹೋಗಲಿ ಅಂತಲೇ ಈಗ ಪತ್ರಿಕಾಗೋಷ್ಠಿ ನಡೆಸುತ್ತಿದ್ದೇನೆ. ಇಂತಹ ವ್ಯಕ್ತಿಯ ಮುಖ ಜನರಿಗೆ ಗೊತ್ತಾಗಲಿ ಅಂತಲೇ ಈಗ ಹೇಳಿಕೆ ನೀಡುತ್ತಿದ್ದೇನೆ ಎಂದು ಮಂಜಯ್ಯಗೌಡರ ತಾಯಿ ಸಣ್ಣಮ್ಮ ಸ್ಪಷ್ಟಪಡಿಸಿದರು.

ವರದಿ – ಎಸ್. ನಾಗಭೂಷಣ್

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...