ತುರುವೇಕೆರೆ | ಕಸದ ರಾಶಿಯಾದ ಮಲ್ಲಾಘಟ್ಟ ಕೆರೆ : ಸ್ವಚ್ಛತೆ ಯಾವಗ ?

Date:

ತುರುವೇಕೆರೆ  ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಮಲ್ಲಾಘಟ್ಟ ಕೆರೆಯನ್ನು ಸ್ವಚ್ಚಗೊಳಿಸಲು ಇದು ಸಕಾಲವಾಗಿದೆ. ಈ ಕೆರೆಯನ್ನು ದೇವಗೆರೆ ಎಂದು ಕರೆಯಲಾಗುತ್ತದೆ. ಇಲ್ಲಿ ಜಿಲ್ಲೆ ಹಾಗೂ ಅಕ್ಕ ಪಕ್ಕದ ಜಿಲ್ಲೆಗಳ ದೇವರುಗಳಿಗೆ ಪುಣ್ಯ ಸ್ನಾನ ಮಾಡಿಸುವ ಸಲುವಾಗಿ ಇಲ್ಲಿಗೆ ಕರೆತರಲಾಗುತ್ತದೆ. ಈ ಕೆರೆಯಲ್ಲಿ ಮಿಂದರೆ (ಸ್ನಾನ) ಮಾಡಿದರೆ ಹಾಗೂ ಕೆರೆಯ ಅಧಿದೇವರಾದ ಗಂಗಾಧರೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿದರೆ ಮಕ್ಕಳಾಗದವರಿಗೆ ಮಕ್ಕಳಾಗುವುದು ಅಲ್ಲದೇ ಅವರ ಇಷ್ಟಾರ್ಥಗಳು ಈಡೇರುವುವು ಎಂಬ ನಂಬಿಕೆಯೂ ಇದೆ. 

 ಈ ಎಲ್ಲಾ ವೈಶಿಷ್ಠ್ಯಗಳಿರುವುದರಿಂದ ಇಲ್ಲಿ ಸ್ನಾನ ಮಾಡುವವರು, ದೇವರಿಗೆ ಪುಣ್ಯ ಸ್ನಾನ ಮಾಡಿಸುವುದು ಸಾಮಾನ್ಯವಾಗಿದೆ. ಸ್ನಾನವಾದ ನಂತರ ದೇವರಿಗೆ ಉಡಿಸಿದ ಬಟ್ಟೆಗಳು, ಅಥವಾ ಸ್ನಾನ ಮಾಡಿದವರ ಬಟ್ಟೆಗಳನ್ನು ಈ ನೀರಿನಲ್ಲಿ ಹರಿಯಬಿಡುವುದು ವಾಡಿಕೆಯಾಗಿದೆ. ಇದರಿಂದಾಗಿ ಕೆರೆಯಲ್ಲಿ ಬಟ್ಟೆಗಳ ರಾಶಿ ಇದೆ. ಅಲ್ಲದೇ ದೇವರಿಗೆ ಕಟ್ಟಲಾಗಿರುವ ಬಾಳೆ ಕಂದು, ಮಾವಿನ ಎಲೆ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳೂ ಸಹ ಈ ಕೆರೆಯ ಪಾಲೇ ಆಗುತ್ತಿದೆ.

ಇದರಿಂದಾಗಿ ಕೆರೆ ಕಲುಷಿತಗೊಂಡಿದೆ.  ಈಗಾಗಲೇ ಕೆರೆಯಲ್ಲಿ ನೀರು ಕಡಿಮೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಹೇಮಾವತಿ ನೀರಿನ ಹರಿವು ಹೆಚ್ಚಾಗಿ ಈ ಕೆರೆಗೆ ಹೆಚ್ಚು ನೀರು ಬಿಡಲಾಗುತ್ತದೆ. ಅಲ್ಲದೇ ಮಳೆಗಾಲ ಪ್ರಾರಂಭವಾದರೆ ಈ ಕೆರೆಗೆ ಸಹಜವಾಗಿ ನೀರಿನ ಹರಿವು ಹೆಚ್ಚಿ ಕೋಡಿ ಬೀಳುವ ಸಾಧ್ಯತೆ ಇದೆ. ಆದ್ದರಿಂದ ಈಗಾಗಲೇ ಕೆರೆಯ ಒಳಗಿರುವ ಬಂಡೆಗಳ ಮೇಲೆ ನಿಂತಿರುವ ಸಾಕಷ್ಟು ಕಲ್ಮಷಗಳನ್ನು, ಕಸಗಳನ್ನು ಈಗ ತೆಗೆಯಲು ಸಕಾಲವಾಗಿದೆ. ಈಗ ಅ ಕಷ್ಮಲಗಳೆಲ್ಲಾ ಕಣ್ಣಿಗೆ ಕಾಣುತ್ತಿವೆ. ಇನ್ನು ಕೆಲವೇ ದಿನಗಳಲ್ಲಿ ನೀರು ಹರಿದರೆ ಈ ಎಲ್ಲಾ ಕಷ್ಮಲಗಳು ನೀರಿನೊಳಗೆ ಹುದಗಿ ಹೋಗುತ್ತದೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

  ಈಗಲೇ ಈ ಕೆರೆಗೆ ಆನೇಕೆರೆ ಗ್ರಾಮ ಪಂಚಾಯಿತಿ ಕೆರೆಗೆ ಯಾವುದೇ ಕಷ್ಮಲಗಳನ್ನು ಹಾಕಬಾರದು ಹಾಗೂ ಕೆರೆಯಲ್ಲಿ ಯಾರೂ ಈಜಬಾರದು ಎಂದು ಸೂಚನಾ ಫಲಕ ಹಾಕಿಸುವುದು ಉತ್ತಮ. ಕೆರೆ ಕೋಡಿ ಆದ ವೇಳೆ ಸಾವಿರಾರು ಮಂದಿ ಇಲ್ಲಿ ರುದ್ರ ರಮಣೀಯ ದೃಶ್ಯ ನೋಡಲು ಆಗಮಿಸುವರು. ಈ ವೇಳೆ ಹಲವಾರು ಮಂದಿ ಮಹಿಳೆಯರು, ಮಕ್ಕಳು ಪುರುಷರು ಎಂಬ ಭೇಧಭೇವವಿಲ್ಲದೇ ಕೆರೆಯೊಳಗೆ ಈಜುತ್ತಾರೆ. ಈ ವೇಳೆ ಹಲವಾರು ಮಂದಿ ಕೆರೆಯ ಒಳಗಿರುವ ಹೂಳಿನಲ್ಲಿ ಹೂತು, ಬಟ್ಟೆಗಳಿಗೆ ದೇಹ ಸುತ್ತಿಕೊಂಡು ಮೃತಪಟ್ಟಿರುವ ಘಟನೆಗಳು ನಡೆದಿವೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸುವ ಸಲುವಾಗಿ ಎಚ್ಚರಿಕೆಯ ಫಲಕವನ್ನು ಆನೇಕರೆ ಗ್ರಾಮ ಪಂಚಾಯಿತಿ ಅಳವಡಿಸುವುದು ಉತ್ತಮವಾಗಿದೆ. 

ಕಸ ವಿಲೇವಾರಿ ಮಾಡಲು ಮತ್ತು ಸೂಚನಾ ಫಲಕಗಳನ್ನು ಅಳವಡಿಸಲು ಇದು ಸಕಾಲವಾಗಿದೆ. ಮೈ ಮರೆತರೆ ನೀರು ಕಲುಷಿತಗೊಳ್ಳಲಿದೆ. ಇತ್ತ ಅಮಾಯಕರು ಪ್ರಾಣ ಕಳೆದುಕೊಳ್ಳುವುದು ಅನಿವಾರ್ಯವಾಗಲಿದೆ. ಕೂಡಲೇ ಆನೇಕೆರೆ ಗ್ರಾಮ ಪಂಚಾಯಿತಿ ಕಾರ್ಯೋನ್ಮುಖವಾಗಲಿ ಎಂದು ಸಾರ್ವಜನಿಕರ ಆಗ್ರಹವಾಗಿದೆ. 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...