ಉಡುಪಿ | ಕಾನೂನು ಹೋರಾಟಕ್ಕಿಂತ ರಾಜಿಸಂಧಾನ ಕಷ್ಟದ ಕೆಲಸ: ವಕೀಲರ ಸಂಘದ ಅಧ್ಯಕ್ಷ ಬಿ ನಾಗರಾಜ್

Date:

ಕಾನೂನು ಹೋರಾಟ ನಡೆಸಬಹುದು. ಅದು ವಕೀಲರಿಗೂ ಕಕ್ಷಿದಾರರಿಗೂ ಸುಲಭ. ಆದರೆ, ರಾಜಿ ಸಂಧಾನ ಕಷ್ಟ ಮತ್ತು ಸವಾಲಿನ ಕೆಲಸ ಎಂದು ಉಡುಪಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ ನಾಗರಾಜ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಮೂರನೇ ಲೋಕ ಅದಾಲತ್‌ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಶ್ರೀಕೃಷ್ಣ ಪರಮಾತ್ಮನಿಗೇ ರಾಜಿ ಸಂಧಾನ ಕಷ್ಟವಾಗಿತ್ತು ಎಂಬುದನ್ನು ನಾವೆಲ್ಲ ತಿಳಿದುಕೊಂಡಿದ್ದೇವೆ. ಯಾಕೆಂದರೆ, ಪ್ರತಿಯೊಂದು ಪ್ರಕರಣದಲ್ಲೂ ದುರ್ಯೋದನ ಮತ್ತು ಕೌರವರು ಇರುತ್ತಾರೆ. ಇಂತಹ ಸವಾಲಿನ ಕೆಲಸವನ್ನು ಉಡುಪಿ ನ್ಯಾಯಾಲಯ ಮೆಟ್ಟಿ ನಿಂತು, ಸಹಸ್ರಾರು ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಬಗೆಹರಿಸಿದೆ” ಎಂದರು.

ಲೋಕ ಅದಾಲತ್‌ಅನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನ್ಯಾ. ಶಾಂತವೀರ ಶಿವಪ್ಪ ಉದ್ಘಾಟಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ , ನ್ಯಾ. ದಿನೇಶ್ ಹೆಗ್ಡೆ ನ್ಯಾಯಾಧೀಶರುಗಳು, ವಕೀಲರು ಉಪಸ್ಥಿತರಿದ್ದರು. ಈ ವರ್ಷದ ಲೋಕ ಅದಾಲತ್ ನಲ್ಲಿ ಖಾಸಗಿ ವಿಮಾ ಕಂಪೆನಿಯೊಂದು ರಾಜಿ ಸಂಧಾನದ ಮೂಲಕ ಕಕ್ಷಿದಾರರೊಬ್ಬರಿಗೆ ಸುಮಾರು ತೊಂಬತ್ತು ಲಕ್ಷಕ್ಕೂ ಅಧಿಕ ಮೊತ್ತದ ಪರಿಹಾರ ಹಣ ಪಾವತಿಸಿದೆ. ಇದು ಉಡುಪಿ ನ್ಯಾಯಾಲಯದ ಇತಿಹಾಸದಲ್ಲೇ ಮೊದಲನೆಯ ಪ್ರಕರಣವಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...