ಉಡುಪಿ | ಅಪಾಯಕ್ಕೆ ಆಹ್ವಾನಿಸುತ್ತಿದೆ, ತಡೆಬೇಲಿ ಇಲ್ಲದ ಕಾಲುಸೇತುವೆ

Date:

ಉಡುಪಿ ನಗರದ ಮೂಡನಿಡಂಬೂರು ಗ್ರಾಮದ, ಬನ್ನಂಜೆ ವಾರ್ಡಿನ ಬ್ರಹ್ಮಬೈರ್ದಕಳ ಗರಡಿ ರಸ್ತೆಯಲ್ಲಿ ಬರುವ, ಸಾರ್ವಜನಿಕ ನಾಗಬನದ ಹತ್ತಿರ, ನೀರು ಹರಿಯುವ ಕಾಲುವೆಯೊಂದಿದ್ದು, ಈ ಕಾಲುವೆಯು ಗರಡಿ ಸನಿಹ ಹರಿಯುವ ಇಂದ್ರಾಣಿ ನದಿಯನ್ನು ಸಂಪರ್ಕಿಸುತ್ತದೆ. ನಾಗಬನ ಸನಿಹದ ಕಾಲುವೆಗೆ ಕಾಲುಸೇತುವೆಯೊಂದನ್ನು ನಿರ್ಮಿಸಲಾಗಿದೆ. ಇದು ಕಳೆದ ಅರವವತ್ತು‌ ವರ್ಷಗಳ ಹಿಂದೆಯೇ ನಿರ್ಮಿಸಲ್ಪಟ್ಟ ಕಾಲುಸೇತುವೆ ಎಂದು‌ ಹೇಳಲಾಗುತ್ತಿದೆ.

ಕಾಲುಸೇತುವೆಯು ಅಪಾಯ ಆಹ್ವಾನಿಸುವ ಸ್ಥಿತಿಯಲ್ಲಿದೆ. ಸೇತುವೆ ಎರಡೂ ಪಾರ್ಶ್ವಗಳಲ್ಲಿಯೂ ರಕ್ಷಣಾ ಬೇಲಿ ಉರುಳಿಬಿದ್ದು ಹಲವು ವರ್ಷಗಳೇ ಕಳೆದುಹೋಗಿವೆ. ಇಲ್ಲಿ ಪಾದಚಾರಿಗಳು ಆಯತಪ್ಪಿ ಕಾಲುವೆಗೆ ಬೀಳುವ ಘಟನೆಗಳು ಸಂಭವಿಸುತ್ತಲೆ ಇರುತ್ತದೆ. ಅರ್ಕದಕಟ್ಟೆ, ಗರಡಿ, ನಿಟ್ಟೂರು ಭಾಗದ ನಾಗರಿಕರು, ವಲಸೆ ಕಾರ್ಮಿಕರು, ಉದ್ಯೋಗಿಗಳು, ಶಾಲಾ ಕಾಲೇಜುಗಳ‌ ವಿದ್ಯಾರ್ಥಿಗಳು ಉಡುಪಿ ನಗರಕ್ಕೆ ತೆರಳಲು ಈ ಕಾಲುಸೇತುವೆಯನ್ನು ಬಳಸುತ್ತಾರೆ. ಸಂಕದ ಮೇಲೆ, ದಿನವೊಂದರಲ್ಲಿ ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಜನ ಸಂಚರಿಸುವುದು ಕಂಡುಬರುತ್ತದೆ. ಶಾಲಾ ಮಕ್ಕಳು ಕಾಲುಜಾರಿ ಕಾಲುವೆಗೆ ಎಡವಿಬಿದ್ದರೆ ನೀರಲ್ಲಿ ಕೊಚ್ಚಿಹೋಗುವ‌ ಹಾಗೂ ಹಿರಿಯ ನಾಗರಿಕರು ನಡೆದು ಸಾಗುವಾಗ ದೇಹ ನಿಯಂತ್ರಣ ಸಿಗದೆ, ಬೀಳುವ ಸಾಧ್ಯತೆಗಳು ಇಲ್ಲಿ‌ ಹೆಚ್ಚಿದೆ. ಈ ಸ್ಥಳದಲ್ಲಿ ಬೀದಿದೀಪದ ವ್ಯವಸ್ಥೆಯೂ ಇಲ್ಲವಾಗಿದೆ. ವಿಷ ಜಂತುಗಳ‌ ಸಂಚಾರವು ಇಲ್ಲಿದೆ. ಸೇತುವೆ ತಳಭಾಗವು ಶಿಥಿಲವಾಗಿದ್ದು ಸರಳುಗಳು ಕಾಣುತ್ತಿವೆ. ನಗರಾಡಳಿತ, ಜಿಲ್ಲಾಡಳಿತ, ಸ್ಥಳೀಯ ಶಾಸಕರು, ಸಂಸದರು ತುರ್ತಾಗಿ ಈ ಸ್ಥಳದಲ್ಲಿ ಹೊಸದಾದ ಅಗಲವಾದ ಕಾಲುಸೇತುವೆ ನಿರ್ಮಿಸಬೇಕೆಂದು ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ‌ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.

1006029571
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...