ಉಡುಪಿ ಕರಾವಳಿ ಭಾಗದ ಜನರಬಹು ದಿನಗಳ ಬೇಡಿಕೆ ಹಾಗೂ ಈ ಭಾಗದ ಆಹಾರ ಪದ್ಧತಿಗಳಲ್ಲಿ ಒಂದಾದ ಕುಚ್ಚಲಕ್ಕಿ ಗಂಜಿ, ಊಟದ ಜೊತೆಗೆ ಸಿಗಡಿ ಚಟ್ನಿ, ವಿವಿಧ ಬಗೆಯ ಒಣ ಮೀನಿನ ವಿವಿಧ ಖಾದ್ಯಗಳನ್ನು ಒಳಗೊಂಡ ಕರಾವಳಿ ಭಾಗದ ಅಡುಗೆ ಶೈಲಿಯನ್ನು ಬಿಂಬಿಸುವಂತೆ ಇಂದಿರಾ ಕ್ಯಾಂಟೀನ್‌ನಲ್ಲಿ ಮೀನಿನ ಖಾದ್ಯಗಳ ಮತ್ತೊಂದು ವಿಭಾಗವನ್ನು ಆರಂಭಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳಬೆಟ್ಟು .ಕಾಂಗ್ರೆಸ್ ಮುಖಂಡ ಜಯ್ ಶೆಟ್ಟಿ ಬನ್ನಂಜೆ ಪರ್ಕಳ, ಮೋಹನ್ ದಾಸ್ ನಾಯಕ್. ರಾಜೇಶ್ ಪ್ರಭು ಪರ್ಕಳ. ಹಿರಿಯಡ್ಕ, ಸುಧೀರ್ ಶೆಟ್ಟಿ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ಫೆಡರೇಶನ್ ಅಧ್ಯಕ್ಷರೂ ಅಗಿದ್ದಾರೆ. ಅವರು ಕರಾವಳಿ ಭಾಗದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮೀನಿನ ಖಾದ್ಯಗಳನ್ನು ಪೂರೈಕೆ ಮಾಡುವ ಬಗ್ಗೆ ಮುತುವರ್ಜಿ ವಹಿಸಬೇಕು. ಸಬ್ಸಿಡಿ ದರದಲ್ಲಿ ಮೀನನ್ನು ಒದಗಿಸಲು ಕಾರ್ಯಪ್ರವರ್ತರಾಗಬೇಕು, ಮೀನುಗಾರರ ಉತ್ಪನ್ನವನ್ನು ಉತ್ತೇಜಿಸಬೇಕು. ಕರಾವಳಿ ಭಾಗದ ಜನರ ಆಹಾರ ಪದ್ಧತಿಯನ್ನು ಇಂದಿರಾ ಕ್ಯಾಂಟೀನ್‌ನಲ್ಲಿ ಪ್ರಾರಂಭ ಮಾಡಬೇಕು. ಕೆಲವೊಂದು ಮೀನಿನ ಉತ್ಪನ್ನಗಳಾದ ಸಿಗಡಿ ಹಾಗೂ ಇನ್ನಿತರ ಮಿಕ್ಸೆಡ್ ಉಪ್ಪಿನಕಾಯಿ ಮಾರಾಟ ಮಳಿಗೆ ಸ್ಥಾಪಿಸಬೇಕು” ಎಂದು ಆಗ್ರಹಿಸಿದ್ದಾರೆ.
ಕರಾವಳಿ ಭಾಗದ ಬಹುಜನರ ಆಹಾರ ಪದ್ಧತಿಯನ್ನು ಜಾರಿ ಮಾಡಿದರೆ ಸ್ಥಳೀಯ ತುಳು ಜನರಾದ ಬಡ ಮತ್ತು ಮಧ್ಯಮ ವರ್ಗದವರಿಗೆ, ಹೆಚ್ಚಿನ ಕಾರ್ಮಿಕ ವರ್ಗದವರಿಗೂ ಪ್ರಯೋಜನವಾಗಲಿದೆ ಎಂದಿದ್ದಾರೆ.




