ಉಡುಪಿ | ಹಿಂದಕ್ಕೆ ಚಲಿಸಿ ಗ್ಯಾರೇಜಿಗೆ ನುಗ್ಗಿದ ಗ್ರಾನೈಟ್‌ ತುಂಬಿದ್ದ ಲಾರಿ: ಕೂದಲೆಳೆ ಅಂತರದಲ್ಲಿ ಇಬ್ಬರು ಪಾರು!

Date:

ಗ್ರಾನೈಟ್‌ ತುಂಬಿದ್ದ ಲಾರಿಯೊಂದು ಹಿಂದಕ್ಕೆ ಚಲಿಸಿ, ಏಕಾಏಕಿ ಗ್ಯಾರೇಜಿಗೆ ನುಗ್ಗಿದ ವೇಳೆ ಮೆಕ್ಯಾನಿಕ್ ಸಹಿತ ಇಬ್ಬರು ಕೂದಲೆಳೆ ಅಂತರದಲ್ಲಿ ಜೀವಾಪಾಯದಿಂದ ಪಾರಾದ ಘಟನೆ ಉಡುಪಿ ಜಿಲ್ಲೆಯ ಕೆಳಪರ್ಕಲ ರಾಷ್ಟ್ರೀಯ ಹೆದ್ದಾರಿಯ ಬಳಿ ಶನಿವಾರ ನಡೆದಿರುವ ಬಗ್ಗೆ ವರದಿಯಾಗಿದೆ.

ಜೀವಾಪಾಯದಿಂದ ಪಾರಾದ ವ್ಯಕ್ತಿಗಳನ್ನು ಮೆಕ್ಯಾನಿಕ್ ಗಣಪತಿ ನಾಯಕ್ ಹಾಗೂ ವಿಶೇಷ ಚೇತನ ವ್ಯಕ್ತಿ ಸರ್ವೋತ್ತಮ ಎಚ್ ಅಮೀನ್ ಎಂದು ಗುರುತಿಸಲಾಗಿದೆ.

ಕೆಳಪರ್ಕಲ ರಾಷ್ಟ್ರೀಯ ಹೆದ್ದಾರಿಯ ಬಳಿಯ ಹಳೆಯ ರಸ್ತೆಯಲ್ಲಿ ಗಣಪತಿ ನಾಯಕ್ ಎಂಬುವವರಿಗೆ ಸೇರಿದ ಗ್ಯಾರೇಜಿಗೆ ಗ್ರಾನೈಟ್‌ ತುಂಬಿದ್ದ ಲಾರಿ ಏಕಾಏಕಿ ನುಗ್ಗಿದೆ. ಈ ವೇಳೆ ಗ್ಯಾರೇಜಿಗೆ ದುರಸ್ತಿಗೆ ಬಂದಿದ್ದ ನಾಲ್ಕೈದು ವಾಹನ ಲಾರಿ ಅಡಿಗೆ ಸಿಲುಕಿದೆ. ಇದೇ ವೇಳೆ ಗ್ಯಾರೇಜಿನಲ್ಲಿ ತನ್ನ ದ್ವಿಚಕ್ರ ವಾಹನದ ಕೆಲಸ ಮಾಡಿಸಲೆಂದು ಬಂದಿದ್ದ ಗ್ರಾಹಕ ಹೆರ್ಗಾದ ನಿವಾಸಿ, ಸರ್ವೋತ್ತಮ ಎಚ್ ಅಮೀನ್ ಕೂಡ ಜೀವಾಪಾಯದಿಂದ ಪಾರಾಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
WhatsApp Image 2024 11 09 at 2.21.53 PM 1

ಹೆರ್ಗಾದಲ್ಲಿರುವ ಮನೆಯೊಂದರ ಕಾಮಗಾರಿಗಾಗಿ ಬೆಂಗಳೂರಿನಿಂದ ಗ್ರಾನೆಟ್ ತುಂಬಿಕೊಂಡು ಲಾರಿ ಹೆರ್ಗಾದ ಕಡೆಗೆ ಸಾಗುತ್ತಿತ್ತು. ಈ ವೇಳೆ ಕೆಳಪರ್ಕಲ ರಾಷ್ಟ್ರೀಯ ಹೆದ್ದಾರಿಯ ಬಳಿಯಲ್ಲಿದ್ದ ರಸ್ತೆಯ ದಿಣ್ಣೆಯನ್ನು ಏರಲಾಗದೆ ಲಾರಿಯು ಏಕಾಎಕಿ ಹಿಂದಕ್ಕೆ ಲಾರಿ ಚಲಿಸಿ, ಗ್ಯಾರೇಜಿಗೆ ನುಗ್ಗಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಸರ್ವೋತ್ತಮ ಅಮೀನ್ ಹಾಗೂ ಗಣಪತಿ ನಾಯಕ್ ಅವರಿಗೆ ಅಲ್ಪಸ್ವಲ್ಪ ಗಾಯವಾಗಿದ್ದು, ಜೀವಾಪಾಯದಿಂದ ಪಾರಾಗಿದ್ದಾರೆ. ವಾಹನ ಸೇರಿದಂತೆ ಗ್ಯಾರೇಜಿಗೆ ಹಾನಿಯುಂಟಾಗಿದೆ. ಅಲ್ಲದೇ, ಲಾರಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಗ್ರಾನೈಟ್‌ ಕೂಡ ಹಾನಿಗೊಳಗಾಗಿದೆ.

ಅವೈಜ್ಞಾನಿಕ ಏರುದಿಣ್ಣೆ ರಾಷ್ಟ್ರೀಯ ಹೆದ್ದಾರಿ 169Aನಲ್ಲಿದ್ದು, ಹೆಚ್ಚಿನ ಘನವಾಹನಗಳು ಹಿಂದಕ್ಕೆ ಚಲಿಸಿದ ಉದಾಹರಣೆಗಳಿವೆ. ಈ ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.

ನಾಲ್ಕೈದು ತಿಂಗಳ ಹಿಂದೆ ಉಡುಪಿಯ ಸಿಟಿ ಬಸ್ ಒಂದು ಕೂಡ ಹಿಂದಕ್ಕೆ ಚಲಿಸಿ ಅಪಾಯ ತಪ್ಪಿತ್ತು. ಇಲ್ಲಿ ವಾಹನ ಏರಲಾಗದೆ ಕ್ರೇನ್ ಮೂಲಕ ಅರ್ಧದಲ್ಲಿ ನಿಂತ ಲಾರಿಯನ್ನು ಮೇಲಕ್ಕೆ ಎತ್ತುವ ಪ್ರಕ್ರಿಯೆ ದಿನನಿತ್ಯ ನಡೆಯುತ್ತದೆ. ಈ ರಸ್ತೆಯಲ್ಲಿ ರೆಡಿ ಮಿಕ್ಸ್ ವಾಹನದಿಂದ ಹೊರಚಿಮ್ಮಿದ ಸಿಮೆಂಟ್ ಮಿಶ್ರಣ ಇಲ್ಲಿ ರಸ್ತೆ ಉದ್ದಕ್ಕೂ ಬಿದ್ದಿರುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.

ಉಡುಪಿ ನಗರಸಭೆಯ ನಿವೃತ್ತ ಪೌರಾಯುಕ್ತರು ಈ ರಸ್ತೆಯನ್ನ ಸ್ವಲ್ಪಮಟ್ಟಿಗೆ ಅವರೇ ಅಲ್ಲಿ ನಿಂತು ಸ್ವಚ್ಛಗೊಳಿಸುವಲ್ಲಿ ಸಹಕರಿಸಿದ್ದರು. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮಾತ್ರ ತಮಗೆ ಸಂಬಂಧ ಇಲ್ಲವೇ ಎಂಬಂತೆ ವರ್ತಿಸುತ್ತಿದ್ದಾರೆ. ಒಂದು ನಗರಸಭೆಯ ಪಂಪ್‌ಹೌಸಿನ ಬಳಿ ಪ್ರತಿನಿತ್ಯ ವಾಹನ ಅಪಘಾತವಾಗುತ್ತದೆ. ಅದೇ ರೀತಿ ಇನ್ನೊಂದು ಮಗ್ಗಿಲಿನಲ್ಲಿ ಇದೇ ರೀತಿ ವಾಹನ ಏರಲಿ ವಾಪಸ್ ಬರುವ ಪ್ರಕ್ರಿಯೆ ಹೆಚ್ಚಾಗಿದೆ. ಇದಕ್ಕೊಂದು ಪೂರ್ಣ ಪ್ರಮಾಣದ ಕಾಮಗಾರಿ ನಡೆಯಬೇಕಾಗಿದೆ ಎಂದು ಕೆಳಪರ್ಕಲದ ನಿವಾಸಿಗಳು ಒತ್ತಾಯಿಸಿದ್ದಾರೆ.

ಉಡುಪಿ 23
WhatsApp Image 2024 11 09 at 2.21.54 PM
WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...