ಉಡುಪಿ | ಬೈಂದೂರಿನ ಮಸೀದಿಯಲ್ಲಿ ಹಿಂದೂ-ಮುಸ್ಲಿಂ-ಕ್ರೈಸ್ತರ ಸಮ್ಮಿಲನ

Date:

  • ನಮ್ಮೂರ ಮಸೀದಿ ನೋಡ ಬನ್ನಿ ವಿನೂತನ ಕಾರ್ಯಕ್ರಮ
  • ಬೈಬಲ್‌ನಲ್ಲಿ ಇದ್ದ ಹಾಗೆಯೇ ಕುರಾನ್‌ನಲ್ಲಿಯೂ ಇದೆ

ಧರ್ಮ ಧರ್ಮಗಳ ನಡುವೆ ಎತ್ತಿಕಟ್ಟಿ ರಾಜಕೀಯವಾಗಿ ನಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಪ್ರಸ್ತುತ ಸಮಾಜದಲ್ಲಿ ನಮ್ಮ ನಡುವೆ ಯಾವುದೇ ಗೋಡೆಗಳು ಇರಬಾರದು. ನಾವು ಪರಸ್ಪರ ಸಹೋದರರು ಎಂದು ಮನಗಂಡು, ಧರ್ಮಗಳು, ಧರ್ಮಗ್ರಂಥಗಳು, ಆರಾಧನಾಲಯಗಳು ನಿಗೂಢವಾಗಿದ್ದರೆ ಮಾತ್ರ ಕೋಮು ಶಕ್ತಿಗಳಿಗೆ ತಮ್ಮ ಪಟ್ಟಬದ್ಧ ಹಿತಾಸಕ್ತಿಯನ್ನು ಸಾಧಿಸಲು ಸಾಧ್ಯ ಎಂದರಿತ ಉಡುಪಿ ಜಿಲ್ಲೆಯ ಬೈಂದೂರಿನ ಮುಸ್ಲಿಂ ಬಾಂಧವರು ಕೋಮುವಾದಿ ಶಕ್ತಿಗಳಿಗೆ ಸೌಹಾರ್ದತೆಯ ಪಾಠ ಕಲಿಸಿದ್ದಾರೆ.

ಬೈಂದೂರಿನ ಖತೀಜತುಲ್‌ ಖುಬ್ರ ಜಾಮಿಯಾ ಮಸೀದಿಯಲ್ಲಿ ನಮ್ಮೂರ ಮಸೀದಿ ನೋಡ ಬನ್ನಿ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಜೊತೆಗೆ ಸಮಾಜದ ಹಿಂದೂ, ಕ್ರೈಸ್ತ ಬಾಂಧವರಿಗೆ ಮುಕ್ತವಾಗಿ ಮಸೀದಿಯನ್ನು ಸಂದರ್ಶಿಸುವ ಅವಕಾಶವನ್ನು ಮಾಡಿಕೊಟ್ಟಿದ್ದಾರೆ. ಜಮೀಯ್ಯತುಲ್‌ ಫಲಾಹ್‌ ಬೈಂದೂರು ಘಟಕ, ಖತೀಜತುಲ್‌ ಖುಬ್ರ ಮಸೀದಿ ಆಡಳಿತ ಸಮಿತಿ ಮತ್ತು ಸ್ಟೂಡೆಂಟ್ಸ್‌ ಇಸ್ಲಾಮಿಕ್‌ ಆರ್ಗನೈಸೇಷನ್‌ ಉಡುಪಿ ಜಿಲ್ಲೆಯ ವತಿಯಿಂದ ಹಮ್ಮಿಕೊಂಡ ನಮ್ಮೂರ ಮಸೀದಿ ನೋಡ ಬನ್ನಿ ಕಾರ್ಯಕ್ರಮದಲ್ಲಿ ಬೈಂದೂರಿನ ನೂರಾರು ಸಂಖ್ಯೆಯ ಹಿಂದು ಮತ್ತು ಕ್ರೈಸ್ತ ಬಾಂಧವರು ಮಸೀದಿಯನ್ನು ಸಂದರ್ಶಿಸಿ, ಮಸೀದಿ ಒಳಗೆ ನಡೆಯುವ ಪ್ರಾರ್ಥನೆ ಮತ್ತು ಅಲ್ಲಿ ನಡೆಯುವ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಬಗ್ಗೆ ಮುಕ್ತವಾಗಿ ನೋಡಲು ಮತ್ತು ತಿಳಿದುಕೊಳ್ಳಲು ಅನುವು ಮಾಡಿಕೊಟ್ಟು ಸೌಹಾರ್ದತೆಯನ್ನು ಮೆರೆದಿದ್ದಾರೆ.

WhatsApp Image 2024 01 29 at 11.57.43 AM

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಸೀದಿ ಸಂದರ್ಶಿಸಿದ ಬಳಿಕ ಬೈಂದೂರಿನ ಗಾಣಿಗ ಸಮಾಜದ ಅಧ್ಯಕ್ಷ ವೀರಭದ್ರ ಗಾಣಿಗ ಈ ದಿನ.ಕಾಮ್‌ ಜೊತೆ ಮಾತನಾಡಿ, “ನಾವು ಹೊರಗಡೆಯಿಂದ ಮಸೀದಿಯನ್ನು ನೋಡುತ್ತಿದ್ದೆವು. ಇಂದು ಒಳಗೆ ಬಂದು ನೋಡುವಂತಹ ಅವಕಾಶವನ್ನು ಸಂಘಟಕರು ಮಾಡಿಕೊಟ್ಟಿದ್ದಾರೆ. ಮಸೀದಿಯೊಳಗೆ ಯಾವ ರೀತಿ ಪ್ರಾರ್ಥನೆ ಮಾಡುತ್ತಾರೆ, ಮಸೀದಿಯಲ್ಲಿ ಯಾವ ರೀತಿಯ ಸಂದೇಶವನ್ನು ಸಮಾಜಕ್ಕೆ ನೀಡುತ್ತಾರೆಂಬ ಬಗ್ಗೆ ಹಲವು ರೀತಿಯ ಸಂಶಯಗಳು ನಮ್ಮ ತಲೆಯಲ್ಲಿ ಓಡುತ್ತಿದ್ದವು. ಬೈಂದೂರಿನಲ್ಲಿ ಹಿಂದು ಮುಸ್ಲಿಂ ಕ್ರೈಸ್ತರು ಸೌಹಾರ್ದಯುತವಾಗಿ ಜೀವನ ಮಾಡಿದವರು, ಮುಂದೆಯೂ ಕೂಡ ಸೌಹಾರ್ದತೆಯಿಂದಲೇ ಬದುಕುತ್ತೇವೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಹೇಳಿದಂತಹ ಮಾತುಗಳೂ ಕೂಡ ನಮ್ಮ ಮನಸ್ಸನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿತು. ನಮ್ಮ ಧರ್ಮಗಳು ಯಾವುದೇ ಆಗಿದ್ದರೂ ಕೂಡ ಬದುಕು ಕಟ್ಟಿಕೊಳ್ಳುವಾಗ ನಾವೆಲ್ಲರೂ ಒಂದೇ ರೀತಿಯಲ್ಲಿ ಬದುಕಬೇಕೆಂಬ ಸಂದೇಶವನ್ನು ಸಾರಿದರು” ಎಂದರು.

ನಮ್ಮೂರ ಮಸೀದಿ 1

ಕ್ಯಾಥೋಲಿಕ್‌ ಸಭಾದ ಬೈಂದೂರು ಅಧ್ಯಕ್ಷ ಜೋಸ್ಪಿನ್‌ ರೋಡ್ರಿಗಸ್‌ ಈ ದಿನ.ಕಾಮ್‌ ಜೊತೆ ಮಾತನಾಡಿ, “ನಮ್ಮೂರ ಮಸೀದಿ ನೋಡ ಬನ್ನಿ ಕಾರ್ಯಕ್ರಮ ನೋಡಿ ತುಂಬಾ ಸಂತೋಷವಾಯಿತು. ಒಳ್ಳೆಯ ಕಾರ್ಯಕ್ರಮ ಎಂದೇ ಹೇಳಬಹುದು. ಏಕೆಂದರೆ ಎಲ್ಲರಿಗೂ ಕೂಡ ಖುಷಿಯನ್ನು ಕೊಟ್ಟಿದೆ. ಮಸೀದಿಯೊಳಗೆ ಏನಿದೆ ಎಂಬುದು ನಮಗೆ ಗೊತ್ತಿರಲಿಲ್ಲ. ಈಗ ನೋಡಿದ ನಂತರ ಎಲ್ಲವೂ ತಿಳಿಯಿತು. ಬೈಬಲ್‌ನಲ್ಲಿ ಇದ್ದ ಹಾಗೇಯೇ ಕುರಾನ್‌ನಲ್ಲಿಯೂ ಇದೆ. ಕುರಾನ್‌ನಲ್ಲಿ ಏನಿದೆ ಎಂಬುದನ್ನೂ ಕೂಡ ಕೇಳಿದೆ. ಈ ರೀತೀಯ ಕಾರ್ಯಕ್ರಮಗಳು ಮುಂದುವರೆಯಬೇಕು” ಎಂದು ಹೇಳಿದರು.

ನಮ್ಮೂರ ಮಸೀದಿ 2

ದಲಿತ ಸಂಘರ್ಷ ಸಮಿತಿ ಬೈಂದೂರು ಮಹಿಳಾ ಘಟಕದ ಕಾರ್ಯದರ್ಶಿ, ಶಿಕ್ಷಕಿ ಜೈತ್ರ ಎಡ್ತರೆ ಈ ದಿನ.ಕಾಮ್‌ ಜೊತೆ ಮಾತನಾಡಿ, “ನಮ್ಮೂರ ಮಸೀದಿ ನೋಡ ಬನ್ನಿ ಕಾರ್ಯಕ್ರಮದ ಕರೆಯೋಲೆ ಬಂದಾಗ ಏನೋ ಒಂದು ಹೊಸತರ ಅನ್ನಿಸಿತು. ಪ್ರತಿನಿತ್ಯ ಮಸೀದಿಯನ್ನು ನೋಡುತ್ತಲೇ ತಿರುಗುತ್ತಿದ್ದೇವೆ. ಆದರೆ ಇದರೊಳಗಡೆ ಏನಿದೆ ಎಂಬುದು ಗೊತ್ತಿರಲಿಲ್ಲ. ಈಗ ಇಲ್ಲಿಯ ಕಾರ್ಯಚಟುವಟಿಕೆಗಳು, ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ನಾನು ಮೊದಲ ಬಾರಿಗೆ ಮಸೀದಿಯೊಳಗೆ ಪ್ರವೇಶಿಸಿದೆ. ಅಲ್ಲಿ ನಮಾಜ಼್ ಮಾಡುವುದನ್ನು ನೋಡಲು ಅವಕಾಶ ಸಿಕ್ಕಿತು. ಮುಸ್ಲಿಮರ ಸಂಸ್ಕೃತಿ ನೋಡಿ ತಿಳಿಯಲು ಸಾಧ್ಯವಾಯಿತು” ಎಂದು ಹೇಳಿದರು.

ಸಾಲಿಹಾತ್ ಶಿಕ್ಷಣ ಸಂಸ್ಥೆಯ ಇದೀಸ್‌ ಹೂಡೆ ಈ ದಿನ.ಕಾಮ್‌ ಜೊತೆ ಮಾತನಾಡಿ, “ಕರಾವಳಿಯಲ್ಲಿ ಮಸೀದಿಯಿಂದಲೇ ಇಸ್ಲಾಮಿ ಸಂಸ್ಕೃತಿ ಆರಂಭಗೊಂಡಿತು. 648ರಲ್ಲಿ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಮಸೀದಿ ಬಾರ್ಕೂರಿನಲ್ಲಿ ನಿರ್ಮಿಸಿದ ದಾಖಲೆ ಕೂಡ ಇತಿಹಾಸ ಪುಟಗಳಲ್ಲಿದೆ. ಅದಕ್ಕಿಂತ ಮುಂಚೆಯೂ ಕೂಡ ತೆಂಗಿನ ಸೋಗೆಗಳ ಮೂಲಕ ಅರಬ್‌ ವ್ಯಾಪಾರಿಗಳು ಮಸೀದಿ ನಿರ್ಮಿಸಿ ನಮಾಜ್‌ ಮಾಡುತ್ತಾ ಬಂದಿದ್ದಾರೆ ಮತ್ತು ಸಾವಿರಾರು ವರ್ಷಗಳ ಹಳೆಯ ಮಸೀದಿಗಳನ್ನೂ ಕೂಡ ಉಡುಪಿ ಜಿಲ್ಲೆಯಾದ್ಯಂತ ನಾವು ಕಾಣಬಹುದು” ಎಂದು ಹೇಳಿದರು.

ನಮ್ಮೂರ ಮಸೀದಿ 3

ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದ ಶೇಕ್‌ ಫಯಾಜ್‌ ಅಲಿ ಈ ದಿನ.ಕಾಮ್‌ ಜೊತೆ ಮಾತನಾಡಿ, “ನಾವು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಮತ್ತು ಎಲ್ಲರಿಗೂ ಮಸೀದಿ ಸಂದರ್ಶನದ ಉದ್ದೇಶವಾಗಿತ್ತು. ಮಸೀದಿ ಬಗ್ಗೆ ಮಸೀದಿಯಲ್ಲಿ ನಡೆಯುವ ಆಚರಣೆ ಬಗ್ಗೆ ನಿಗೂಢವಾಗಿರಬಾರದು, ಅದು ಎಲ್ಲರಿಗೂ ತೆರೆದುಕೊಂಡಿರಬೇಕು. ಇನ್ನೂ ಧರ್ಮ ಧರ್ಮಗಳು ನಿಗೂಢವಾಗುತ್ತಿರುವ ಸಂದರ್ಭದಲ್ಲಿ ಎಲ್ಲ ಧರ್ಮಗಳು ತಮ್ಮನ್ನು ತಾವು ಬೇರೆಯವರೊಂದಿಗೆ ಬೆರೆಯುವಂತಹ ಮುಕ್ತ ಅವಕಾಶಗಳನ್ನು ಸೃಷ್ಟಿಸಬೇಕು. ಅದಕ್ಕೋಸ್ಕರ ಈ ಕಾರ್ಯಕ್ರಮವನ್ನು ಮಾಡಲಾಗಿದೆ. ನಾವು ಎಷ್ಟು ಜನರನ್ನು ಆಹ್ವಾನಿಸಿದ್ದೇವೆಯೋ ಅವರೆಲ್ಲರೂ ನಮ್ಮ ಆಹ್ವಾನವನ್ನು ಸ್ವೀಕರಿಸಿ ಬಹಳ ಗೌರವಯುತವಾಗಿ ಬಂದಿದಾರೆ. ಇಂತಹ ಕಾರ್ಯಕ್ರಮ ಎಲ್ಲಡೆಯೂ ನಡೆಯಬೇಕು. ಆ ಮೂಲಕ ನಮ್ಮ ನಡುವೆ ಸೌಹಾರ್ದತೆಯನ್ನು ಗಟ್ಟಿಗೊಳಿಸಬಹುದು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಮನುಷ್ಯರನ್ನು ಮೃಗಗಳನ್ನಾಗಿಸುವ ಹುನ್ನಾರ ನಡೆಯುತ್ತಿದೆ: ಪತ್ರಕರ್ತ ನವೀನ್ ಕುಮಾರ್

ಒಟ್ಟಿನಲ್ಲಿ ಕಾಲದ ಬೇಡಿಕೆ ಎಂಬಂತೆ ಸೌಹಾರ್ದತೆಯನ್ನು ಸಾರಲು ಪರಸ್ಪರ ಸಂಬಂಧಗಳನ್ನು ಬಲಿಷ್ಠಪಡಿಸಲು ನಮ್ಮೂರ ಮಸೀದಿ ನೋಡ ಬನ್ನಿಯಂತಹ ಕಾರ್ಯಕ್ರಮಗಳನ್ನು ಎಲ್ಲ ಮಸೀದಿಗಳಲ್ಲಿ ನಡೆಸಬೇಕು. ಅದರ ಜೊತೆಗೆ ಮಂದಿರ ಮತ್ತು ಚರ್ಚ್‌ಗಳಲ್ಲಿಯೂ ಕೂಡ ಇತರೆ ಧರ್ಮಗಳಿಗ ಆಹ್ವಾನಿಸಿ ಅಲ್ಲಿಯೂ ಕೂಡ ಇಂತಹ ಕಾರ್ಯಕ್ರಮ ದಿನನಿತ್ಯ ನಡೆಯುತ್ತಿದ್ದರೆ ಮುಂದೊಂದು ದಿನ ಈ ದೇಶದ ಚಿತ್ರಣವೇ ಬದಲಾಗಬಹುದು. ಮಹತ್ಮಾ ಗಾಂಧೀಜಿ ಕಂಡ ರಾಮ ರಾಜ್ಯದ ಕನಸು ನನಸಾಗಬಹುದು. ಸಂವಿಧಾನದ ಆಶಯಗಳು ಎಲ್ಲರಲ್ಲೂ ಮೂಡಬಹುದು ಎಂಬುದು ಸ್ಥಳೀಯರ ಅಭಿಪ್ರಾಯ.

WhatsApp Image 2023 08 22 at 3.23.15 PM
ಶಾರೂಕ್ ತೀರ್ಥಹಳ್ಳಿ
+ posts

ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಶಾರೂಕ್ ತೀರ್ಥಹಳ್ಳಿ
ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...