ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಆಶ್ರಯದಲ್ಲಿ ನಾಳೆ (ಅ.11) ಉಚಿತ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಯುವ ಸಮುದಾಯ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಾರ್ಕಳ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ಮನವಿ ಮಾಡಿದ್ದಾರೆ.
ಶಿಕ್ಷಣದ ಬಳಿಕ ಉದ್ಯೋಗ ಪಡೆಯುವುದು ಇಂದಿನ ಯುವ ಜನತೆಯ ಮುಂದಿರುವ ದೊಡ್ಡ ಸವಾಲು. ಯುವ ಜನತೆಯ ಉದ್ಯೋಗದ ಸಮಸ್ಯೆಯನ್ನು ಮನಗಂಡು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಅವರ ಮುಂದಾಳತ್ವದಲ್ಲಿ ಎಲ್ಲಾ ಕಾಂಗ್ರೆಸ್ ಪ್ರಮುಖರ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ಪ್ರಚಾರ ಸಮಿತಿಯ ಆಶ್ರಯದಲ್ಲಿ ಕಾಪು ತಾಲೂಕಿನ ದಂಡತೀರ್ಥ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಟೋಬರ್ 11 ರಂದು ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಬೃಹತ್ ಉಚಿತ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಇದನ್ನೂ ಓದಿ: ಉಡುಪಿ | ಮಲ್ಪೆ ಮೀನುಗಾರಿಕೆ ಬಂದರು ಆಧುನೀಕರಣ, ಜಿಲ್ಲೆಯ ಆರ್ಥಿಕ ಪುನರುಜ್ಜೀವನಕ್ಕೆ ಹೊಸ ರೂಪ
ಯುವ ಸಮುದಾಯವು ಉದ್ಯೋಗಕ್ಕಾಗಿ ಕಂಪನಿಗಳನ್ನು ಹುಡುಕುತ್ತಾ ದೂರದ ಊರುಗಳನ್ನು ಅಲೆಯುವ ಸಂಕಷ್ಟವನ್ನು ತಪ್ಪಿಸಿ ಒಂದೇ ಕೇಂದ್ರದಲ್ಲಿ ಉದ್ಯೋಗದಾತ ಕಂಪನಿಗಳನ್ನು ಬರಮಾಡಿಕೊಂಡು ಬೃಹತ್ತಾದ ಉಚಿತ ಉದ್ಯೋಗ ಮೇಳವನ್ನು ಸಂಘಟಿಸಲಾಗಿದ್ದು, ಉದ್ಯೋಗಾಕಾಂಕ್ಷಿ ಯುವಕ ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.





