ಉಡುಪಿ | ಸ್ವಾತಂತ್ರ್ಯ ನಂತರವೂ ಅಸ್ತಿತ್ವ ಕಾಪಾಡಿಕೊಂಡ “ಬಾಬು ಸಂಸ್ಕೃತಿ” !

Date:

ಮನೆ ಕಟ್ಟಲು ಅವಶ್ಯವಿರುವ ತನ್ನ ನಿವೇಶನದ ದಾಖಲೆ (9/IIA) ಯೊಂದನ್ನು ಪಡೆಯಲು ಕಳೆದ ನಾಲ್ಕು ವರ್ಷಗಳಿಂದ ಪಂಚಾಯತ್ ಕಚೇರಿಗೆ ಪ್ರದಕ್ಷಿಣೆ ಹಾಕಿ ಸೋತು ಹೋಗಿರುವ ನಾಗರಿಕರೊಬ್ಬರು ಇದೀಗ ‘ಬಾಬು ಸಂಸ್ಕೃತಿ’ಯ ಕಿರುಕುಳದಿಂದ ರಕ್ಷಣೆ ಕೋರಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಆಶ್ರಯಿಸಿದ್ದಾರೆ. ಉಡುಪಿ ಜಿಲ್ಲೆಯ ಉದ್ಯಾವರ ಪಂಚಾಯತ್ ಕಚೇರಿಯಲ್ಲಿ ನಡೆಯುತ್ತಿರುವ ಈ ಪ್ರಕರಣದಲ್ಲಿ ಮೇಲಧಿಕಾರಿಗಳು ಒಟ್ಟು ಆರು ಬಾರಿ ಸ್ಪಷ್ಟ ಆದೇಶ ನೀಡಿದರೂ ಪಂಚಾಯತ್ ಅಧಿಕಾರಿ(ಪಿ.ಡಿ.ಓ) ಅವೆಲ್ಲವನ್ನೂ ನಿರ್ಲಕ್ಷಿಸಿ ದರ್ಪ ಮೆರೆದಿದ್ದಾರೆ.

ಪ್ರಕರಣದ ವಿವರ ವಿಮಾ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವ ವಸಂತ್ ಶೇರಿಗಾರರು ತನಗೆ ಹಿರಿಯರಿಂದ ಬಂದ ಉದ್ಯಾವರ ಪಂಚಾಯತ್ ವ್ಯಾಪ್ತಿಯಲ್ಲಿ ಸ.ನಂಬ್ರ 147/27ಗೆ ಸೇರಿದ 9 ಸೆಂಟ್ಸ್ ಜಮೀನಿನಲ್ಲಿ ಮನೆ ಕಟ್ಟಲು ನಿಯಮ ಪ್ರಕಾರ ಅರ್ಜಿ ಸಲ್ಲಿಸಿ ಜಿಲ್ಲಾಧಿಕಾರಿಗಳಿಂದ ಭೂಪರಿವರ್ತನೆಯನ್ನು ಮಾಡಿಸಿದರು. 2021ನೇ ಜುಲೈ ತಿಂಗಳಲ್ಲಿ ಉಡುಪಿ ನಗರಪ್ರಾಧಿಕಾರದಿಂದ ಏಕವಿನ್ಯಾಸದ ಅನುಮೋದನೆಯನ್ನೂ ಪಡೆದರು. ಆ ಕೂಡಲೇ ಗ್ರಾಮ ಪಂಚಾಯತ್ ನಿಂದ 9/11A ಪ್ರಮಾಣಪತ್ರಕ್ಕಾಗಿ ಅರ್ಜಿಯನ್ನು ಸಲ್ಲಿಸಿದರು.

ದಿನಾಂಕ 29,7.2021ರಂದು ಉದ್ಯಾವರ ಪಂಚಾಯತ್‌ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ದಾಖಲೆಯನ್ನು ನೀಡುವಂತೆ ನಿರ್ಣಯಿಸಲಾಯಿತು. ತಿಂಗಳೆರಡು ಕಳೆದರೂ ಪಂಚಾಯತ್ ಕಚೇರಿಯವರು ದಾಖಲೆ ನೀಡಲಿಲ್ಲ. ಬದಲಾಗಿ 27.9.2021ರಂದು ಹಿಂಬರಹವೊಂದನ್ನು ನೀಡಿದ ಪಿ.ಡಿ.ಓ ಸಾರ್ವಜನಿಕ ರಸ್ತೆಗಾಗಿ ಅಗತ್ಯವಿರುವ 10 ಅಡಿ ಅಗಲದ ಜಮೀನನ್ನು ದಾನ ಪತ್ರದ ಮೂಲಕ ಬಿಟ್ಟುಕೊಟ್ಟ ನಂತರವೇ 9/11A ದಾಖಲೆಯನ್ನು ನೀಡಲಾಗುವುದೆಂದು ತಿಳಿಸಿದರು. ಆದರೆ, ಉಡುಪಿ ನಗರದ ಪ್ರಾಧಿಕಾರಿಯವರು ನೀಡಿದ್ದ ಏಕವಿನ್ಯಾಸ ಅನುಮೋದನೆಯಲ್ಲಿ 10ಅಡಿ ಅಗಲದ ರಸ್ತೆಯ ಪ್ರಸ್ತಾವನೆ ಅಥವಾ ಶರತ್ತು ಇಲ್ಲದಿದ್ದುದರಿಂದ ಇನ್ಯಾವುದೇ ಸಬೂತು ನೀಡದೆ ತನ್ನ ನಿವೇಶನದ 9/11A ದಾಖಲೆ ನೀಡುವಂತೆ ವಿನಂತಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸ್ಪಷ್ಟಿಕರಣ ಕೇಳಿದ ಪಂಚಾಯತ್ : ಇದೇ ವೇಳೆ ದಿನಾಂಕ 14.9.2021ರಂದು ಪಿ.ಡಿ.ಓರವರು ಉಡುಪಿ ನಗರಪ್ರಾಧಿಕಾರಕ್ಕೆ ಪತ್ರ ಬರೆದು, ಮುಂದೆ ರಚಿಸಲಾಗುವ ಯಾವುದೇ ರಸ್ತೆ ಶೇರಿಗಾರರ ನಿವೇಶನದಿಂದ ಹಾದು ಹೋಗುತ್ತದೆಯೋ ಇಲ್ಲವೋ ಎಂದು ಸ್ಪಷ್ಟಿಕರಣ ಕೇಳಿದರು.

ಕೂಡಲೇ ಈ ಪತ್ರಕ್ಕೆ ಉತ್ತರಿಸಿದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರವು ‘ವಸಂತ್ ಶೇರಿಗಾರರ ಜಮೀನಿನಲ್ಲಿ ಯಾವುದೇ ರಸ್ತೆ ಪ್ರಸ್ತಾಪ ಇರುವುದಿಲ್ಲ” ಎಂದು ಸ್ಪಷ್ಟವಾಗಿ ತಿಳಿಸಿತು. ಅಷ್ಟರಲ್ಲಿ, ಶೇರಿಗಾರರ ಸ.ನಂಬ್ರಕ್ಕೆ ಯಾವುದೇ ಸಂಬಂಧವಿಲ್ಲದ ಪದ್ಮಾವತಿ ಎಂಬುವವರೊಬ್ಬರು ನೀಡಿರುವ ದೂರನ್ನು ಆದರಿಸಿ ನಗರಪ್ರಾಧಿಕಾರಕ್ಕೆ ಪತ್ರ ಬರೆದ ಪಿ.ಡಿ.ಓ ಏಕವಿನ್ಯಾಸ ಅನುಮೋದನೆಗೆ ತಡೆಯನ್ನೂ ತಂದರು. ಇಷ್ಟೆಲ್ಲ ನಡೆಯುವಾಗ ಇನ್ನೂ 18 ತಿಂಗಳುಗಳು ಕಳೆದವು. ಪಂಚಾಯತ್ ಹಾಗೂ ನಗರಪ್ರಾಧಿಕಾರದ ಕಛೇರಿಗಳಿಗೆ ಸುತ್ತು ಹೊಡೆಯುವುದೇ ಶೇರಿಗಾರರ ದಿನಚರಿಯಾಗಿತ್ತು ಅಂತೂ 28.03.2023ರಂದು ಈ ಪ್ರಕರಣದ ಅಂತಿಮ ತೀರ್ಪು ನೀಡಿದ ನಗರಪ್ರಾಧಿಕಾರವು ಏಕವಿನ್ಯಾಸ ಅನುಮೋದನೆಗೆ ತಾನೇ ನೀಡಿದ್ದ ತಡೆಯನ್ನು ತೆರವುಗೊಳಿಸಿತು. ಈ ಮೇಲಿನ ತೀರ್ಪಿನ ಆಧಾರದಲ್ಲಿ 8.05.2023ರಂದು ಶೇರಿಗಾರರಿಗೆ ಉದ್ಯಾವರ ಪಂಚಾಯತ್ ಕಚೇರಿಯಿಂದ 9/11ಎ ಪ್ರಮಾಣ ಪತ್ರ ಹಾಗೂ ನಗರಪ್ರಾಧಿಕಾರದಿಂದ ಪ್ರಾರಂಭಿಕ ಪ್ರಮಾಣ ಪತ್ರವೂ ದೊರಕಿದವು. ಆ ಕೂಡಲೇ, ಶೇರಿಗಾರರು ಕಟ್ಟಡ ಪರವಾನಿಗೆಗೂ ಅರ್ಜಿ ಸಲ್ಲಿಸಿ ಇಂದಿಗೆ 25 ತಿಂಗಳು ಕಳೆದರೂ ಪಂಚಾಯತ್ ಕಚೇರಿಯಿಂದ ಕಟ್ಟಡ ಪರವಾನಿಗೆ ಸಿಕ್ಕಿಲ್ಲ. (ಅರ್ಜಿ ಸಲ್ಲಿಸಿ 60 ದಿನಗಳೊಳಗೆ ಪರವಾನಿಗೆ/ಹಿಂಬರಹ ಸಿಗದಿದ್ದಲ್ಲಿ ಪರವಾನಿಗೆ ಇದೆ ಎಂದು ಭಾವಿಸಿ ಕಟ್ಟಡ ನಿರ್ಮಾಣ ಮಾಡಬಹುದು ಎಂದು ನಿಯಮವಿದೆ) ಈ ನಿಯಮದ ಆಧಾರದಲ್ಲಿ ಶೇರಿಗಾರರು ಮನೆ ನಿರ್ಮಾಣ ಮುಂದುವರಿಸಿದರು.

ಆನಂತರದಲ್ಲಿ ಡೋರ್ ನಂಬರ್ ಪಡೆಯಲು ಅರ್ಜಿಸಲ್ಲಿಸಲು ಹೋದಾಗ ಆಶ್ಚರ್ಯಕರ ಮಾಹಿತಿಯೊಂದು ದೊರೆಯಿತು. ದಿ:15.02.2024ರಂದು ಶೇರಿಗಾರರಿಗೆ ಯಾವುದೇ ಮಾಹಿತಿಯನ್ನು ನೀಡದೇ ಹಾಗೂ ಮೇಲಾಧಿಕಾರಿಗಳ ಒಪ್ಪಿಗೆ ಪಡೆಯದೇ ಪಿ.ಡಿ.ಓರವರು ಏಕಪಕ್ಷೀಯವಾಗಿ ತಾನೇ ನೀಡಿದ 9/11ಎ ಅನ್ನು ರದ್ದುಪಡಿಸಿದರು. ಈ ಹಂತದಲ್ಲಿ ಶೇರಿಗಾರರು ಕಾನೂನು ಮಾರ್ಗದರ್ಶನಕ್ಕಾಗಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಆಶ್ರಯಿಸಿದರು.

WhatsApp Image 2025 12 15 at 5.09.16 PM 1

ಪ್ರತಿಷ್ಠಾನದಿಂದ ಈ ಪ್ರಕರಣದ ಸಂಪೂರ್ಣ ತನಿಖೆ : ಶೇರಿಗಾರರಿಂದ ಈ ಪ್ರಕರಣಕ್ಕೆ ಸಂಬಂಧಿಸಿದ 34 ದಾಖಲೆಗಳನ್ನು ಪರೀಶಿಲಿಸಿ ತಯಾರಿಸಿದ ಪ್ರತಿಷ್ಠಾನದ ವರದಿಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ.

ಇದೀಗ ಶೇರಿಗಾರರಿಗೆ ಬೇಕಾಗಿರುವುದು ಪಂಚಾಯಿತ್ ನಿಂದ 9-11ಎ ಹಾಗೂ ಡೋರ್ ನಂಬರ್ – ನಿಯಮ ಪ್ರಕಾರ ಅರ್ಜಿಸಲ್ಲಿಸಿದ 45 ದಿನದೊಳಗೆ ಬೇಕಾಗಿರುವ ದಾಖಲೆಗಳನ್ನು ನೀಡಲೇಬೇಕು. ಆದರೆ ಅರ್ಜಿ ಸಲ್ಲಿಸಿ 24ತಿಂಗಳುಗಳು ಕಳೆದರೂ ಪಂಚಾಯತ್ ಅಧಿಕಾರಿ ಇದುವರೆಗೂ ಡೋರ್ ನಂಬರ್ ನೀಡಿಲ್ಲ! (ಡೋರ್ ನಂಬರ್ ನೀಡದಿರುವ ಕಾರಣ ಸರಕಾರದ ಬೊಕ್ಕಸಕ್ಕೆ ಮನೆ ತೆರಿಗೆಯಿಂದ ಬರುವ ಹಣದಿಂದಲೂ ನಷ್ಟವಾಗುತ್ತಿದೆ).

WhatsApp Image 2025 12 15 at 5.14.44 PM

ಈ ಅವಧಿಯಲ್ಲಿ ಉದ್ಯಾವರ ಪಂಚಾಯತ್ ನಲ್ಲಿ ಇಬ್ಬರು ಅಧಿಕಾರಿಗಳು ರಾಜ್ಯಭಾರ ಮಾಡಿದ್ದಾರೆ. ಪ್ರಕರಣ ನಡೆದ ಪ್ರಾರಂಭದಲ್ಲಿ ಉದ್ಯಾವರ ಪಿ.ಡಿ.ಓ ಆಗಿದ್ದ ಅಶೋಕ್ ಕುಮಾರ್ ಎಂಬುವವರು ಶೇರಿಗಾರರಿಗೆ 9/11ಎ ಪ್ರಮಾಣ ಪತ್ರ ನೀಡಲು 135 ದಿನಗಳ ಕಾಲ ಸತಾಯಿಸಿ ಕೊನೆಗೂ ದಾಖಲೆ ನೀಡದೆ ಬೇರೆಡೆಗೆ ವರ್ಗವಾದರು. ಎರಡನೆ ಅಧಿಕಾರಿ ಹೆಚ್. ಆರ್. ರಮೇಶ್ ಎಂಬುವವರು ಅಧಿಕಾರ ವಹಿಸಿಕೊಂಡ ಅನಂತರ 16 ತಿಂಗಳ ಕಾಲ ಸತಾಯಿಸಿ 8.05.2023ರಂದು ಪ್ರಮಾಣ ಪತ್ರ ನೀಡಿದರು. ಆಶ್ಚರ್ಯವೆಂದರೆ ಅದೇ ಅಧಿಕಾರಿ 9 ತಿಂಗಳ ಅನಂತರ ತಾನೇ ನೀಡಿದ ಪ್ರಮಾಣ ಪತ್ರವನ್ನು ರದ್ದು ಪಡಿಸಿದ್ದರು!

ಈ ಪ್ರಕರಣದಲ್ಲಿ ಶೇರಿಗಾರರು ತನ್ನ ದಾಖಲೆಗಳನ್ನು ಪಡೆಯಲು ವಿವಿಧ ಹಂತದ ಅಧಿಕಾರಿಗಳಿಗೆ ಒಟ್ಟು 23 ಬಾರಿ ಅರ್ಜಿ ಸಲ್ಲಿಸಿದ್ದಾರೆ. ಶೇರಿಗಾರರಿಗೆ ಮನೆ ಕಟ್ಟಲು ಅವಶ್ಯವಿರುವ ದಾಖಲೆಗಳನ್ನು ನೀಡುವಂತೆ ಮೇಲ್ಮನವಿ ಸಕ್ಷಮ ನ್ಯಾಯಾಲಯ ತೀರ್ಮ ನೀಡಿದ್ದರೂ, ಹಿರಿಯ ಅಧಿಕಾರಿಗಳು 8 ಬಾರಿ ಪಂಚಾಯತ್ ಅಧಿಕಾರಿಗೆ ಸ್ಪಷ್ಟ ಆದೇಶ ನೀಡಿದ್ದರೂ ಇನ್ನೂ ಈ ಆದೇಶಗಳ ಪಾಲನೆಯಾಗಿಲ್ಲ!

ಸರಿಯಾಗಿ ಗಮನಿಸಿದ್ದಲ್ಲಿ ಇಲ್ಲಿ ಸೋತದ್ದು ಶೇರಿಗಾರರಲ್ಲ, ಮಾನ ಹರಾಜು ಆಗಿದ್ದು 4 ಬಾರಿ ಆದೇಶ ನೀಡಿದ್ದ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ವಿಜಯಾ ಹಾಗೂ 2 ಬಾರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಶ್ರೀ. ಪ್ರತೀಕ್ ಬಾಯಲ್ ಅವರದ್ದು,

ದಿನಾಂಕ 22.08.2025ರಂದು ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ. ಪ್ರತೀಕ್ ಬಾಯಲ್‌ರವರು. ಗ್ರಾಮ ಪಂಚಾಯತಗೆ ಕಳುಹಿಸಿದ ಆದೇಶ ಪತ್ರದಲ್ಲಿ ಈ ಕೆಳಗಿನ ವಾಕ್ಯಗಳಿರುವುದನ್ನು ಗಮನಿಸಿರಿ. “….. ಸದರಿ ಪ್ರಕರಣದಲ್ಲಿ ಸೂಕ್ತ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸದೇ ಇರುವುದು ಹಾಗೂ “ ಆದೇಶವನ್ನು ಜಾರಿಗೋಳಿಸಲು ಮತ್ತು ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವುದು ಕಂಡು ಬರುತ್ತಿದೆ” ಹಾಗೂ ” ಮಾಲಕರಿಗೆ ನೋಟಿಸು ನೀಡದೇ ರದ್ದು ಪಡಿಸಲು ಗ್ರಾಮ ಪಂಚಾಯತ್ ಕೈಗೊಡ ನಿರ್ಣಯದ ಮೇಲೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಯಾವುದೇ ಷರ/ಟಿಪ್ಪಣಿ ದಾಖಲಿಸದೇ ಇರುವುದರಿಂದ ಮತ್ತು ಮೇಲ್ಮನವಿ ಪ್ರಾಧಿಕಾರದ ಆದೇಶವನ್ನು ಸಕಾಲದಲ್ಲಿ ಜಾರಿಗೋಳಿಸಲು ವಿಳಂಬ ಧೋರಣೆ ಅನುಸರಿಸುತ್ತಿದ್ದು ಇದರಿಂದಾಗಿ ಗ್ರಾಮ ಪಂಚಾಯತ್ ಆದಾಯಕ್ಕೆ ನಷ್ಟ ಉಂಟಾಗುತ್ತಿರುವುದನ್ನು ಕರ್ತವ್ಯ ಲೋಪವೆಂದು ಪರಿಗಣಸಿ ಶಿಸ್ತುಕ್ರಮ ವಹಿಸಬೇಕಾಗಿರುತ್ತದೆ.”

ಹಿರಿಯ ಅಧಿಕಾರಿಗಳು ಕೆ.ಎ.ಎಸ್. ಅಥವಾ ಐ.ಎ.ಎಸ್. ಡಿಗ್ರಿಧಾರಿಗಳಾಗಿದ್ದರೇನು? ನಿಯಮಗಳನ್ನೆಲ್ಲಾ ಗಾಳಿಗೆ ತೂರಿಸಿ ಅವರನ್ನು ಸೋಲಿಸುವುದು ಹೇಗೆ ಎಂಬುದನ್ನು ಈ ಪ್ರಕರಣದಲ್ಲಿ ಯಕಶ್ಚಿತ್ ಪಂಚಾಯತ್ ಅಧಿಕಾರಿಯೋರ್ವರು ಸಾಧಿಸಿ ತೋರಿಸಿದ್ದಾರೆ !

ಶೇರಿಗಾರರಿಗೆ ಆಗಿರುವ ಅನ್ಯಾಯದ ವಿರುದ್ಧ ಸಾರ್ವಜನಿಕ ಅಭಿಪ್ರಾಯ ರೂಪಿಸಲು ಹಾಗೂ ಅನ್ಯಾಯವೆಸಗಿದ ಅಧಿಕಾರಿಯ ವಿರುದ್ಧ ನ್ಯಾಯಾಲಯವನ್ನು ಸಂಪರ್ಕಿಸಲು ಎಲ್ಲಾ ಬೆಂಬಲವನ್ನು ನೀಡಲು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಬದ್ಧವಾಗಿದೆ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷರಾದ ರವೀಂದ್ರನಾಥ ಶ್ಯಾನುಭಾಗ್ ಈದಿನ.ಕಾಮ್‌ ಗೆ ತಿಳಿಸಿದ್ದಾರೆ.

ಏನಿದು ಪಂಚಾಯತಿ ರಾಜ್ ವ್ಯವಸ್ಥೆ?
ಭಾರತದಲ್ಲಿ ಪಂಚಾಯತಿ ರಾಜ್ ವ್ಯವಸ್ಥೆಯನ್ನು 1992ರ 73ನೇ ಸಂವಿಧಾನ ತಿದ್ದುಪಡಿ ಕಾಯ್ದೆಯ ಮೂಲಕ ಗ್ರಾಮೀಣ ಸಮುದಾಯಗಳಿಗೆ ತ್ವರಿತ ನ್ಯಾಯದಾನ ವ್ಯವಸ್ಥೆ ಹಾಗೂ ಹಳ್ಳಿಯ ಮಟ್ಟದಲ್ಲಿ ಸ್ವ-ಆಡಳಿತ ಸಶಕ್ತಗೊಳಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು. ಇದರ ಮುಖ್ಯ ಉದ್ದೇಶ ಅಧಿಕಾರ ವಿಕೇಂದ್ರೀಕರಣ, ಜನತಾಂತ್ರಿಕ ಭಾಗವಹಿಸುವಿಕೆ ಹಾಗೂ ಅಭಿವೃದ್ಧಿ ಸಂಬಂಧಿತ ನಿರ್ಧಾರಗಳನ್ನು ಗ್ರಾಮ ಮಟ್ಟದಲ್ಲೇ ಕೈಗೊಳ್ಳುವ ವ್ಯವಸ್ಥೆಯನ್ನು ನಿರ್ಮಿಸುವುದಾಗಿತ್ತು. ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲೆ ಪಂಚಾಯತ್ ಎಂಬ ಮೂರು ಹಂತಗಳಲ್ಲೂ ಸಕ್ಷಮ ನ್ಯಾಯಾಲಯಗಳನ್ನು ಸ್ಥಾಪಿಸಲಾಯಿತು. ಆದರೆ ಕಾಲಕ್ರಮೇಣ ರಾಜಕೀಯ ಹಸ್ತಕ್ಷೇಪ ಮತ್ತು ಸರ್ಕಾರಿ ನೌಕರರ ‘ಬಾಬುಸಂಸ್ಕೃತಿ’ಯ ಕಪಿಮುಷ್ಟಿಯಿಂದ ಪಂಚಾಯತ್‌ಗಳ ಪರಿಣಾಮಕಾರಿತ್ವ ಕುಗ್ಗಿದ್ದು, ಉಡುಪಿ ಜಿಲ್ಲೆಯ ಪ್ರಸ್ತುತ ಪ್ರಕರಣದಲ್ಲಿ ನಾಗರಿಕನೊಬ್ಬರಿಗೆ ಕೇವಲ 9/11ಎ ದಾಖಲೆ ಪಡೆಯಲು ನಡೆಸುತ್ತಿರುವ ಹೋರಾಟ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಭ್ರಷ್ಟಾಚಾರ, ಅಧಿಕಾರದ ದುರುಪಯೋಗ, ಈಗಾಗಲೇ ನೀಡಿದ್ದ ದಾಖಲೆಗಳನ್ನು ಆಕಾರಣವಾಗಿ ರದ್ದುಪಡಿಸುವುದು ಹಾಗೂ ಮೇಲಧಿಕಾರಿಗಳ ಆದೇಶಗಳನ್ನು ನಿರ್ಲಕ್ಷಿಸುವುದು ಪಂಚಾಯತಿ ರಾಜ್ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೀನಗೊಳಿಸಿದೆ. ಇದರ ಪರಿಣಾಮವಾಗಿ, ಸಾಮಾನ್ಯ ನಾಗರಿಕರನ್ನು ಸಬಲಗೊಳಿಸಬೇಕಾಗಿದ್ದ ಪಂಚಾಯತಿ ರಾಜ್ ವ್ಯವಸ್ಥೆ ಇದೀಗ ಅಸಹನೀಯ ಕಿರುಕುಳದ ವ್ಯವಸ್ಥೆಯಾಗುತ್ತಿದೆ.

WhatsApp Image 2025 12 15 at 5.09.16 PM
WhatsApp Image 2025 12 15 at 5.09.17 PM
WhatsApp Image 2023 08 22 at 3.23.15 PM
ಶಾರೂಕ್ ತೀರ್ಥಹಳ್ಳಿ
+ posts

ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಶಾರೂಕ್ ತೀರ್ಥಹಳ್ಳಿ
ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...