ಉಡುಪಿ | ನೆರೆಹೊರೆಯ ಬಾಂಧವ್ಯ ಬಲಪಡಿಸಲು “ಆದರ್ಶ ನೆರೆಹೊರೆ, ಆದರ್ಶ ಸಮಾಜ” ಅಭಿಯಾನ

Date:

ನೆರೆಹೊರೆಯವರೊಂದಿಗೆ ಸದ್ವರ್ತನೆ ಮತ್ತು ಸದ್ಭಾವನೆಯ ಮನೋಭಾವವನ್ನು ಪುನರುಜ್ಜೀವಗೊಳಿಸಿ, ಪರಸ್ಪರ ಸಂಬಂಧಗಳನ್ನು ಮತ್ತಷ್ಟು ಸುಧೃಡಗೊಳಿಸುವ ಸಲುವಾಗಿ ಜಮಾಅತ್ ಇಸ್ಲಾಮೀ ಹಿಂದ್ ವತಿಯಿಂದ ದೇಶಾದ್ಯಂತ “ನೆರೆಹೊರೆಯವರ ಹಕ್ಕುಗಳು” ಎಂಬ ಶೀರ್ಷಿಕೆಯಡಿಯಲ್ಲಿ ಹತ್ತು ದಿನಗಳ ಅಭಿಯಾನವನ್ನು ಹಮ್ಮಿಕೊಂಡಿದೆ. “ಆದರ್ಶ ನೆರೆಹೊರೆ, ಆದರ್ಶ ಸಮಾಜ” ಎಂಬ ಘೋಷ ವಾಕ್ಯದಡಿ ಈ ಅಭಿಯಾನವು 2025 ರ ನವೆಂಬರ್ 21 ರಿಂದ 30 ರವರೆಗೆ ನಡೆಯಲಿದೆ.

ನಗರಗಳಲ್ಲಿ ಹೆಚ್ಚುತ್ತಿರುವ ವ್ಯಕ್ತಿ ಕೇಂದ್ರಿತ ಪ್ರವೃತ್ತಿಯಿಂದ ನೆರೆಹೊರೆ ಸಂಬಂಧಗಳು ಕ್ಷೀಣಿಸುತ್ತಿದೆ. ಪರಸ್ಪರ ಕರುಣೆ, ಸಹಕಾರ, ಸ್ವಚ್ಛತೆ ಮತ್ತು ಸಂಚಾರ ಶಿಸ್ತನ್ನು ಪಾಲುಸುವುದು ಇಸ್ಲಾಮಿನಲ್ಲಿ ಸಾಮಾಜಿಕ ಜವಾಬ್ದಾರಿಯ ಭಾಗವಾಗಿದೆ.
ಅಭಿಯಾನದಲ್ಲಿ ಎಲ್ಲಾ ಧರ್ಮಗಳ ನೆರೆಹೊರೆಯವರೊಂದಿಗೆ ಸಭೆಗಳು, ಚಹಾ ಕೂಟಗಳು, ಮಹಿಳೆಯರು, ಮಕ್ಕಳು, ಯುವಜನರಿಗೆ ವಿಶೇಷ ಕಾರ್ಯಕ್ರಮಗಳು, ಸಮುದಾಯ ಸ್ವಚ್ಛತಾ ಕಾರ್ಯಗಳು, ರಸ್ತೆ ಹಕ್ಕುಗಳ ಜಾಗೃತಿ ರ್ಯಾಲಿಗಳು, ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ ಇಸ್ಲಾಮ್ ಬಗ್ಗೆ ತಪ್ಪು ಕಲ್ಪನೆಗಳನ್ನು ದೂರ ಮಾಡಲು ಮತ್ತು ಅಂತರ್ಧರ್ಮೀಯ ಸಾಮರಸ್ಯವನ್ನು ಬಲಪಡಿಸಲು ದೇಶ ಬಾಂಧವರೊಂದಿಗೆ ಜೊತೆಗೂಡಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುವುದು. ‘ನಿಮ್ಮ ನೆರೆಹೊರೆಯವರನ್ನು ತಿಳಿಯಿರಿ’ ಕಾರ್ಯಕ್ರಮ, ನೆರೆಹೊರೆ ಸಾಂಸ್ಕೃತಿಕ ಸಮಾವೇಶಗಳು ಮತ್ತು ಅಭಿಯಾನದ ನಂತರವೂ ನಿರಂತರ ಸಂಪರ್ಕಕ್ಕಾಗಿ ಸ್ಥಳೀಯ ಸಮಿತಿಗಳನ್ನು ರಚಿಸಲಾಗುವುದು. ಇದರೊಂದಿಗೆ ಮುಖ್ಯವಾಗಿ ಉಡುಪಿಯಲ್ಲಿ ಪರಿಸರ ಜಾಗೃತಿ ಸಂವಾದ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಇಸ್ಲಾಂ ಧರ್ಮದಲ್ಲಿ ನೆರೆಹೊರೆಯವರ ಹಕ್ಕುಗಳಿಗೆ ಅಪಾರ ಮಹತ್ವ ನೀಡುತ್ತದೆ. ನಾವು ವಾಸಿಸುವ ಸ್ಥಳದ ಸಮೀಪ ವಾಸಿಸುವವರಷ್ಟೇ ಅಲ್ಲದೆ, ಪ್ರತಿದಿನ ನಮ್ಮೊಂದಿಗಿರುವ ಕಚೇರಿ ಸಹೋದ್ಯೋಗಿಗಳು, ಸಹಪ್ರಯಾಣಿಕರು, ಪ್ರತಿದಿನ ಎದುರಾಗುವ ಪಾದಚಾರಿಗಳು ಕೂಡ ” ನೆರೆಹೊರೆ” ಯಾಗಿದ್ದಾರೆ ಎಂದು ಕುರ್‌ಆನ್ ಸ್ಪಷ್ಟವಾಗಿ ತಿಳಿಸುತ್ತದೆ. ಈ ಅಭಿಯಾನದ ಮೂಲಕ ಮುಸ್ಲಿಮರಿಗೆ ಈ ಪ್ರಮುಖ ಬೋಧನೆಗಳನ್ನು ನೆನಪಿಸಿ, ಆದರ್ಶ ನೆರೆಹೊರೆಯಾಗಲು ಪ್ರೇರೇಪಿಸಿ ಸಮಾಜಕ್ಕೆ ಇಸ್ಲಾಮಿನ ಮೌಲ್ಯಗಳನ್ನು ತಿಳಿಯಪಡಿಸುವುದು ಈ ಅಭಿಯಾನದ ಗುರಿಯಾಗಿದೆ‌. ಒಳ್ಳೆಯ ನೆರೆಹೊರೆ ಸಂಬಂಧಗಳ ಮೇಲೆ ನಿಂತ ಸಮಾಜ ಸ್ವಾಭಾವಿಕವಾಗಿ ಆದರ್ಶ ಸಮಾಜವಾಗುತ್ತದೆ. ಕ್ಷಮೆ, ನ್ಯಾಯ, ದಯೆಯಿಂದ ನೆರೆಹೊರೆಯವರು ಪರಸ್ಪರ ಒಬ್ಬರಿಗೊಬ್ವರು ಸಹಕರಿಸಿದರೆ ಅದು ಮಾದರಿ ಸಮಾಜ ನಿರ್ಮಾಣಕ್ಕೆ ಹೇತುವಾಗುತ್ತದೆ. ಈ ಅಭಿಯಾನದಿಂದ ನೆರೆಹೊರೆಯವರ ನಡುವಿನ ಜಗಳಗಳು ದೂರವಾಗಲಿ ಮತ್ತು ಇಸ್ಲಾಮಿನ ಕರುಣೆ ಹಾಗೂ ಸಾಮಾಜಿಕ ಜವಾಬ್ದಾರಿಯ ಮೌಲ್ಯಗಳು ಎದ್ದು ಕಾಣಲಿ ಎಂಬುದು ನಮ್ಮ ಅಭಿಯಾನದ ಆಶಯ ಎಂದು ಸಂಘಟಕರು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
WhatsApp Image 2025 11 22 at 12.42.39 PM 1

ಈ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಅಭಿಯಾನದ ಉಡುಪಿ ಜಿಲ್ಲಾ ಸಂಚಾಲಕರಾದ ನಿಹಾಲ್ ಕಿದಿಯೂರು, ನೆರೆಹೊರೆಯವರ ಜೊತೆಗಿನ ಸಂಬಂಧವನ್ನು ಸಧೃಡಗೊಳಿಸುವ ಉದ್ದೇಶದಿಂದ ಈ ಅಭಿಯಾನವನ್ನು ನಡೆಸಲಾಗುತ್ತಿದೆ. ದೇಶದಾದ್ಯಂತ ಅಭಿಯಾನ ನಡೆಯುತ್ತಿರುವ ಅಂಗವಾಗಿ ಉಡುಪಿ ಜಿಲ್ಲೆಯಲ್ಲೂ ಪತ್ರಿಕಾಗೋಷ್ಠಿ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ಪ್ರಸ್ತುತ ಸಮಾಜದಲ್ಲಿ ಅನೇಕರು ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ನೆರೆಹೊರೆಯವರ ನಡುವೆ ಸಂಪರ್ಕ ಕಡಿಮೆಯಾಗಿರುವುದರಿಂದ ದ್ವೇಷ, ಅಸಂಬಂಧಗಳಂತಹ ಸಮಸ್ಯೆಗಳು ಹೆಚ್ಚುತ್ತಿವೆ. ಸಮಾಜದಲ್ಲಿ ಸುಧಾರಣೆ ತರಬೇಕಾದರೆ ಮೊದಲು ನಾವು ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು. ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದ ನಂತರ ನೆರೆಮನೆಯವರ ಪರಿಚಯವೇ ಇಲ್ಲದಂತಾಗಿದೆ, ಯಾರು ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಯಾರಿಗೆ ಸಹಾಯ ಬೇಕಿದೆ ಎಂಬುದು ನಮಗೆ ಗೊತ್ತಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭಗಳಲ್ಲಿ ಒಬ್ಬರೊಂದಿಗೆ ಒಬ್ಬರು ಸಂಪರ್ಕ ಬೆಳೆಸಿಕೊಳ್ಳಬೇಕೆಂಬ ಸಂದೇಶವನ್ನು ಈ ಅಭಿಯಾನದ ಮೂಲಕ ಪಸರಿಸಲಾಗುತ್ತಿದೆ.

ಉಡುಪಿ ಜಿಲ್ಲೆಯ ವಿವಿಧ ಶಾಖೆಗಳಲ್ಲಿ ಕಾಪು, ಮಲ್ಪೆ, ಹೂಡೆ, ಕಾರ್ಕಳ, ಕುಂದಾಪುರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನೆರೆಮನೆಯ ಭೇಟಿ, ಶಾಲೆಗಳಲ್ಲಿ ಸ್ಪರ್ಧೆಗಳು, ಜಾಗೃತಿ ಕಾರ್ಯಕ್ರಮಗಳು ಮೊದಲಾದವುಗಳನ್ನು ಆಯೋಜಿಸಲಾಗಿದೆ. ಜೊತೆಗೆ ಪರಿಸರ ಸಂಬಂಧಿತ ಗಂಭೀರ ಸಮಸ್ಯೆಗಳನ್ನೂ ನಾವು ಗುರುತಿಸಿದ್ದು, ಉಡುಪಿಯಲ್ಲಿ ಕಸ ವಿಲೇವಾರಿ ಸಮಸ್ಯೆ, ಕಡಲ ತೀರದಲ್ಲಿ ಮೀನುಗಾರಿಕೆಗೆ ಎದುರಾಗುತ್ತಿರುವ ಸವಾಲುಗಳು, ಪಡುಬಿದ್ರೆಯಲ್ಲಿ ಪವರ್ ಪ್ಲಾಂಟ್‌ನ ಪರಿಣಾಮಗಳಂತಹ ವಿಷಯಗಳನ್ನು ಗುರುತಿಸಬೇಕಿದೆ. ದೆಹಲಿಯಲ್ಲಿ ಇಂದು ಕಾಣುತ್ತಿರುವ ವಾಯು ಮಾಲಿನ್ಯದ ಮಟ್ಟವು ನಾಳೆ ಉಡುಪಿಗೂ ತಲುಪುವ ಸಾಧ್ಯತೆಯಿದೆ. ಅದಕ್ಕಿಂತ ಮುಂಚೇ ನಾವು ಎಚ್ಚರದಿಂದ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಪರಿಸರ ತಜ್ಞರು, ಪರಿಸರ ಹೋರಾಟಗಾರರು, ದಾರ್ಶನಿಕರು ಪಾಲ್ಗೊಳ್ಳುವ ದುಂಡುಮೇಜಿನ ಸಭೆಯನ್ನು ಆಯೋಜಿಸಲಾಗಿದೆ. ಅಲ್ಲದೆ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನ ಸಮಾಜದ ಎಲ್ಲಾ ವರ್ಗದವರಿಗಾಗಿ, ಸರ್ವಧರ್ಮಿಯರಿಗಾಗಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

WhatsApp Image 2025 11 22 at 12.42.38 PM
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...