ಅಂಬೇಡ್ಕರ್ ಹೇಳಿದ್ದು ನೀವು ಹುಟ್ಟಿರುವುದೇ ದೇಶ ಆಳುವುದಕ್ಕೆ ಎಂದು ಆದರೆ ದಲಿತ ಸಂಘಟನೆಗಳು ತೀರ್ಮಾನಿಸಿರುವುದು ಈ ದೇಶದಲ್ಲಿ ದಲಿತರು ಆಳುಗಳಾಗಿ ಬದುಕುದಕ್ಕಾಗಿ ತೀರ್ಮಾನಿಸಿ ದಲಿತರಲ್ಲಿ ಬೇಡುವ ಚಳವಳಿ ಬಿಟ್ಟು ನೀಡುವ ಚಳವಳಿಯನ್ನು ಹುಟ್ಟುಹಾಕುತ್ತಿಲ್ಲ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಅವರು ಭಾನುವಾರ ಕುಂದಾಪುರದ ಹಳ್ಳಿಹೊಳೆಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ ಭೀಮ ಶಕ್ತಿ ಐಕ್ಯತಾ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಾ, ಒಕ್ಕೂಟದ ವ್ಯವಸ್ಥೆಯಲ್ಲಿ ಹೋರಾಟ, ಚಳವಳಿ ಎಲ್ಲಾ ಮಾಡಿರುವ ಅಂಬೇಡ್ಕರ್ ಈಗ ನಮಗೆ ಸಂವಿಧಾನದ ಮೂಲಕ ನಮಗೆ ಬೇಕಾಗಿರುವುದನ್ನು ಪಡೆಯುವ ಅವಕಾಶ ನೀಡಿದ್ದಾರೆ. ನಾವು ಶಾಸನಗಳನ್ನು ಜಾರಿಮಾಡುವ ವಿಧಾನಸಭೆ ಮತ್ತು ಲೋಕಸಭೆಗೆ ಪ್ರವೇಶಿಸುವ ರಾಜಕೀಯ
ಶಕ್ತಿಯಾಗಬೇಕು ಎಂದರು.
ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ರಮೇಶ್ ಕುಲಾಲ್ ಮಾತನಾಡಿ ಅಂಬೇಡ್ಕರ್ ಒಬ್ಬ ವಿಶ್ವಮಾನವನಾಗಿ ಈ ದೇಶಕ್ಕೆ ಕೊಡಮಾಡಿದ ಸಂವಿಧಾನ ಇವತ್ತು ಜಗತ್ತೇ
ಕೊಂಡಾಡಿದೆ, ದಲಿತ ಮಹಿಳೆಯರು ತಮ್ಮ ಮಕ್ಕಳ್ಳನ್ನು ವಿದ್ಯಾಭಾಸ ನೀಡಿ ಬೆಳಸಲು ಶ್ರಮಿಸಬೇಕು ಎಂದರು.
ಶಂಕರನಾರಾಯಣ ಪೋಲೀಸ್ ಉಪನಿರೀಕ್ಷಕ ಯೂನುಸ್ ಗಡ್ಡೆಕರ್ ಮಾತನಾಡಿ ದಲಿತರು ಮೀಸಲಾತಿಯ ಸೌಲಭ್ಯಗಳನ್ನು ಪಡೆದು ಅಭಿವೃದ್ಧಿ ಹೊಂದಬೇಕು, ದುಶ್ಚಟಗಳಿಂದ ಮುಕ್ತರಾಗಿ ಸಮಾಜದಲ್ಲಿ ಒಳ್ಳೆಯ ಬದುಕು ಕಟ್ಟಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಗ್ರಾ,ಪಂ.ಅಧ್ಯಕ್ಷ ರಾಮ ನಾಯ್ಕ ಕೆರ್ಕಾಡು ವಹಿಸಿದ್ದರು, ವೇದಿಕೆಯಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋಧಿಸಿದ ದಸಂಸ ಜಿಲ್ಲಾ ನಾಯಕ ವಾಸುದೇವ ಮುದೂರು, ದಲಿತ
ಮುಖಂಡ ಪರಮೇಶ್ವರ ಉಪ್ಪೂರು, ಹಳ್ಳಿಹೊಳೆ ಗ್ರಾ.ಪಂ ಅಧ್ಯಕ್ಷ ಮಂಜುನಾಥ ಶೆಟ್ಟಿ, ದಸಂಸ ಜಿಲ್ಲಾ ನಾಯಕ ಚಂದ್ರ ಹಳಗೇರಿ, ಅಂಬೇಡ್ಕರ್ ಯುಸೇನೆಯ ಗಣೇಶ್ ನೆರ್ಗಿ, ಮುಂದಾದವರು ಮಾತನಾಡಿದರು.
ಸಮಾವೇಶದಲ್ಲಿ ಲಕ್ಷ್ಮಣ ಬೈಂದೂರು, ಹರೀಶ್ ಸಲ್ಯಾನ್ ಮಲ್ಪೆ, ಗಿರಿಜಾಹನ್ಕಿ, ಪ್ರಭಾಕರ ಉಳಾಲುಮಠ, ಭಾಸ್ಕರ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಕುಮಾರದಾಸ್ ಹಾಲಾಡಿ ಸ್ವಾಗತಿಸಿ, ಸುರೇಶ್ ಮೂಡುಬಗೆ ವಂದಿಸಿದರು. ಉದಯ ಹಳ್ಳಿಹೊಳೆ ಕಾರ್ಯಾಕ್ರಮ ನಿರೂಪಿಸಿದರು.





