ಉಡುಪಿ | ಮಲ್ಪೆ ಫೆಡರೇಷನ್‌ನಲ್ಲಿ ಭೂಗುತ್ತಿಗೆ ವಿವಾದ; ಕೋಟ್ಯಂತರ ಅವ್ಯವಹಾರದ ಆರೋಪ

Date:

ಉಡುಪಿ ಜಿಲ್ಲೆಯ ಮಲ್ಪೆಯ ಹನುಮಾನ್ ನಗರ ಸೀ ವಾಕ್ ಹಾಗೂ ಹನುಮಾನ್ ಭಜನಾ ಮಂದಿರದ ಸುತ್ತಮುತ್ತಲಿನ ಸುಮಾರು 9 ಎಕರೆ ಸರಕಾರಿ ಜಾಗವನ್ನು ದಕ್ಷಿಣ ಕನ್ನಡ–ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್‌ಗೆ ಗುತ್ತಿಗೆ ನೀಡಿರುವ ವಿಷಯ ಸ್ಥಳೀಯರಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅಧ್ಯಕ್ಷರಾಗಿರುವ ಈ ಫೆಡರೇಷನ್‌ಗೆ ಕರ್ನಾಟಕ ಜಲ ಸಾರಿಗೆ ಮಂಡಳಿಯು ಕಳೆದ ಎಪ್ರಿಲ್ ತಿಂಗಳಲ್ಲಿ 15 ವರ್ಷಗಳ ಅವಧಿಗೆ ಗುತ್ತಿಗೆ ಮಂಜೂರು ಮಾಡಿದೆ.

ಪ್ರವಾಸೋದ್ಯಮದ ಪ್ರಮುಖ ಕೇಂದ್ರಗಳಲ್ಲಿ ಒಂದಾದ ಮಲ್ಪೆ ಕಡಲತೀರದ ಪ್ರಕೃತಿ ಸೌಂದರ್ಯ, ಸೀ ವಾಕ್ ಮಾರ್ಗ ಹಾಗೂ ಸ್ಥಳೀಯ ಧಾರ್ಮಿಕ ಕೇಂದ್ರವಾದ ಹನುಮಾನ್ ಭಜನಾ ಮಂದಿರಕ್ಕೆ ಅತ್ಯಂತ ಸಮೀಪದಲ್ಲಿರುವ ಈ ಜಾಗವನ್ನು ಸಹಕಾರಿ ಸಂಸ್ಥೆಗೆ ನೀಡಿರುವುದು ಬಹುತೇಕ ನಾಗರಿಕರಲ್ಲಿ ವಿರೋಧಾಭಿಪ್ರಾಯ ಹುಟ್ಟಿಸಿದೆ.

WhatsApp Image 2025 11 18 at 10.25.39 PM 1 2

ಮಲ್ಪೆ ಹನುಮಾನ್ ನಗರದ ಶ್ರೀ ಹನುಮಾನ್ ಭಜನಾ ಮಂದಿರದ ಪ್ರಮುಖರಾದ ಧನಂಜಯ ಕಾಂಚನ್ ಸ್ಥಳೀಯರನ್ನು ಸೇರಿಸಿ ಸುದ್ದಿಗೋಷ್ಠಿ ನಡೆಸಿದ್ದು, “ಮೀನು ಮಾರಾಟ ಫೆಡರೇಶನ್ ಗೆ ಗುತ್ತಿಗೆ ಆಧಾರದಲ್ಲಿ ನೀಡಿರುವ ಬಂದರು ಇಲಾಖೆಗೆ ಸಂಬಂಧಿಸಿದ ಮಲ್ಪೆಯ 9 ಎಕರೆ ಜಾಗವನ್ನು ಕೂಡಲೇ ವಾಪಸ್ಸು ಪಡೆಯಬೇಕು. ಮುಂದಿನ ದಿನಗಳಲ್ಲಿ ಇಲ್ಲಿನ ಬೀಚ್ ಚಟುವಟಿಕೆ ವಾಣಿಜ್ಯೀಕರಣವಾಗಿ ಪರಿವರ್ತನೆ ಆಗುತ್ತದೆ. ಇದರಿಂದ ಈ ಜಾಗ ಮುಂದಿನ ಪೀಳಿಗೆಯಿಂದ ಕೈತಪ್ಪಿ ಹೋಗುತ್ತದೆ. ಅಲ್ಲದೆ ಇಲ್ಲಿನ ಸಾಂಪ್ರಾದಾಯಿಕ ಮೀನುಗಾರಿಕೆಗೂ ಹೊಡೆತ ಬೀಳಲಿದೆ” ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಮಲ್ಪೆ ಸೀವಾಕ್ ಜಟ್ಟಿಯಿಂದ ಬಾಲಕರ ಶ್ರೀರಾಮ ಭಜನಾ ಮಂದಿರದವರೆಗೆ 9 ಎಕರೆ ಜಾಗ ಫೆಡರೇಶನ್ಗೆ ಗುತ್ತಿಗೆ ಆಧಾರದಲ್ಲಿ ಮಂಜೂರಾಗಿದೆ. ಫೆಡರೇಶನ್ ತನ್ನ ಆಡಳಿತ ಮಂಡಳಿಯ ಗಮನಕ್ಕೆ ತಾರದೆ, ಯಾವುದೇ ಚರ್ಚೆ ಮಾಡದೆ, ಕೇವಲ ಫೆಡರೇಶನ್ ಅಧ್ಯಕ್ಷರಾಗಿರುವ ಶಾಸಕ ಯಶ್ಪಾಲ್ ಸುವರ್ಣ ಅವರ ಸ್ವಹಿತಾಸಕ್ತಿಯಿಂದ ಮೀನುಗಾರಿಕೆ ಚಟುವಟಿಕೆ ಹೆಸರಿನಲ್ಲಿ ಈ ಜಾಗವನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಂಡಿದ್ದು, ಮುಂದೆ ಇಲ್ಲಿ ಜಲಕ್ರೀಡೆ, ಹೋಮ್ ಸ್ಟೇಯಂತಹ ವಾಣಿಜ್ಯ ಚಟುವಟಿಕೆ ನಡೆಸುವ ಯೋಜನೆ ಹಾಕಿಕೊಂಡಿದ್ದಾರೆ” ಎಂದು ಆರೋಪಿಸಿದ್ದಾರೆ.

WhatsApp Image 2025 11 18 at 10.39.13 PM 1

“ಈ ಸಂಬಂಧ ಇಲ್ಲಿನ ಭಜನಾ ಮಂದಿರದವರಿಂದ ವಿರೋಧ ಇದ್ದು, ಈ ಬಗ್ಗೆ ಶಾಸಕರ ಮನೆಗೆ ಹೋಗಿ ವಿಚಾರಿಸಿದ್ದೇವೆ. ಆಗ ಅವರು ಮಂದಿರಕ್ಕೆ ಸಮಸ್ಯೆ ಆಗುವುದರಿಂದ ಈ ಯೋಜನೆಯನ್ನು ಕೈಬಿಡಲು ಸಿದ್ಧ ಎಂದು ಹೇಳಿಕೆ ನೀಡಿದ್ದರು. ಇದೀಗ ಅವರು ಹನುಮಾನ್ ವಿಠೋಬಾ ಮಂದಿರದ ಎದುರಿನ ಜಾಗ ಬಿಟ್ಟು ಉಳಿದ ಜಾಗವನ್ನು ಪಡೆದುಕೊಳ್ಳುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಆದರೆ ನಮ್ಮ ನಿರ್ಧಾರ ಕೇವಲ ನಮ್ಮ ಮಂದಿರದ ಎದುರಿನ ಜಾಗ ಅಲ್ಲ, ಎಲ್ಲ 9 ಎಕರೆ ಜಾಗದ ಗುತ್ತಿಗೆ ಆದೇಶವನ್ನು ರದ್ದುಗೊಳಿಸಬೇಕು” ಎಂದು ಆಗ್ರಹಿಸಿದ್ದಾರೆ.

“ಶಾಸಕರು ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡದೆ ಗೊಂದಲಮಯ ಹೇಳಿಕೆ ನೀಡುತ್ತಿದ್ದಾರೆ. ಆ ಮೂಲಕ ನಮ್ಮನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಪ್ರಕಾರ ಇಲ್ಲಿ ಮೀನುಗಾರಿಕೆ ಚಟುವಟಿಕೆ ಮಾಡುವುದಾದರೆ ಅದನ್ನು ಮೀನುಗಾರಿಕೆ ಇಲಾಖೆ ಮಾಡಲಿ, ಅದು ಬಿಟ್ಟು ಫೆಡರೇಶನ್ ಯಾಕೆ ಮಾಡಬೇಕು? ಮಂದಿರದ ಎದುರು ಇರುವ ರಂಗ ಮಂಟಪದಲ್ಲಿ ನಿರಂತರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಅಲ್ಲದೆ ಮಂದಿರದ ವತಿಯಿಂದ ಸ್ಪರ್ಧೆಗಳನ್ನು ಇದೇ ಜಾಗದಲ್ಲಿ ಮಾಡುತ್ತ ಬರುತ್ತಿದ್ದೇವೆ. ಈ ಜಾಗ ನಮ್ಮ ಮುಂದಿನ ಪೀಳಿಗೆಗೆ ಉಳಿಯಬೇಕು. ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಇದನ್ನು ನೀಡಬಾರದು” ಎಂದು ಅವರು ಒತ್ತಾಯಿಸಿದ್ದಾರೆ.

“ಈ ಮಂದಿರ ನಿರ್ಮಾಣ ಆಗಲು ನಿಕಟಪೂರ್ವ ಶಾಸಕ ಕೆ ರಘುಪತಿ ಭಟ್ ತುಂಬಾ ಸಹಕಾರ ನೀಡಿದ್ದಾರೆ. ಇಲ್ಲಿನ 550 ಮನೆಗಳಿಗೆ ಹಕ್ಕುಪತ್ರ ಸಿಗಲು ಅವರು ತುಂಬಾ ಶ್ರಮ ಪಟ್ಟಿದ್ದಾರೆ. ಅದು ಬಿಟ್ಟು ನಮ್ಮ ಈ ಹೋರಾಟದ ಹಿಂದೆ ಅವರು ಇಲ್ಲ. ನಮ್ಮ ಹೋರಾಟಕ್ಕೆ ಯಾರು ಕೂಡ ಸಹಕಾರ ನೀಡಿದರೂ ಅವರನ್ನು ನಾವು ಒಪ್ಪಿಕೊಳ್ಳುತ್ತೇವೆ. ಇಲ್ಲಿ ಯಾವುದೇ ರಾಜಕೀಯ ಇಲ್ಲ. ಪಕ್ಷಬೇಧ ಮರೆತು ನಾವು ನಮ್ಮ ಜಾಗಕ್ಕಾಗಿ ಹೋರಾಟ ಮಾಡುತ್ತೇವೆ. ಈ ಹೋರಾಟದಲ್ಲಿ ತೊಡಗಿಸಿಕೊಂಡ ನಮ್ಮ ಸದಸ್ಯರಿಗೆ ಕೆಲವರು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ನಾವು ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ನಾವು ಯಾವುದೇ ಬೆದರಿಕೆಗೂ ಜಗ್ಗುವುದಿಲ್ಲ. ನಾವು ಈ ಹೋರಾಟದಲ್ಲಿ ಜೀವ ಕೊಡಲು ಕೂಡ ಸಿದ್ಧರಿದ್ದೇವೆ” ಎಂದು ಹೇಳಿದ್ದಾರೆ.

ಮಲ್ಪೆ ಹನುಮಾನ್‌ನಗರದ ಸರಕಾರಿ ಜಾಗವನ್ನು ಮೀನು ಮಾರಾಟ ಫೆಡರೇಷನ್‌ಗೆ ಗುತ್ತಿಗೆಯಾಗಿ ನೀಡಿರುವ ಒಪ್ಪಂದವನ್ನು ತಕ್ಷಣವೇ ರದ್ದುಗೊಳಿಸುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಉಡುಪಿ ಜಿಲ್ಲಾಧಿಕಾರಿ ಮುಖಾಂತರ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ನೀಡಿದ್ದರು.

WhatsApp Image 2025 11 19 at 4.09.13 PM

WhatsApp Image 2025 11 19 at 4.09.14 PM

ಈ ದಿನ.ಕಾಮ್‌ ಜೊತೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಕೋಟ ನಾಗೇಂದ್ರ ಪುತ್ರನ್‌, ಮಲ್ಪೆ ಫೆಡರೇಷನ್‌ ಒಳಪಟ್ಟ 7 ರಿಂದ 8 ಎಕರೆ ಭೂಮಿಯನ್ನು ಭಜನಾ ಮಂದಿರವೂ ಸೇರಿ ಬೇರೆ ಯಾರಿಗೋ ಗುತ್ತಿಗೆ ನೀಡುವ ರೀತಿಯಲ್ಲಿ ಒಂದು ವ್ಯವಸ್ಥೆ ನಡೆದಿದೆ ಎನ್ನುವುದು ಆಘಾತಕಾರಿ ವಿಚಾರವಾಗಿದೆ. ಫೆಡರೇಷನ್‌ನಲ್ಲಿ ಈ ಹಿಂದೆ ಇದ್ದ ಹಲವು ನ್ಯೂನ್ಯತೆಗಳ ಬಗ್ಗೆ ಸರ್ಕಾರಿ ಅಧಿಕಾರಿಗಳೇ ಅಲ್ಲಿ ನಡೆದಿರುವ ಅವ್ಯವಹಾರವನ್ನು ದಾಖಲೆ ಸಮೇತವಾಗಿ ನನಗೆ ನೀಡಿದ್ದಾರೆ. ಈ ಹಿಂದೆ ಫೆಡರೇಷನ್‌ನ ಹಂಗಾರಕಟ್ಟೆಯಲ್ಲಿ ದಿವಾಕರ್‌ ಎಂಬವರು ಕೆಲಸ ಮಾಡುತ್ತಿದ್ದರು. ಅವರು 1 ಕೋಟಿ 82 ಲಕ್ಷ ರೂ.ಗಳ ಅವ್ಯವಹಾರ ನಡೆಸಿದ್ದು, ಅದನ್ನು ಸಂಬಂಧಪಟ್ಟ ಇಲಾಖೆಯೇ ದಾಖಲಿಸಿದೆ. ಅವರನ್ನು ಕೆಲಸದಿಂದ ಅಮಾನತು ಮಾಡುವ ಬದಲು, ಇದೇ ಅಧ್ಯಕ್ಷರು ಅವರನ್ನು ಮಲ್ಪೆ ಫೆಡರೇಷನ್‌ ಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಅಲ್ಲಿ ಮತ್ತೊಮ್ಮೆ 3 ಕೋಟಿ 38 ಲಕ್ಷ ರೂ.ಗಳ ಹೆಚ್ಚುವರಿ ಅನಿಯಮಿತ ವ್ಯವಹಾರ ನಡೆದಿದ್ದು, ಅದರ ವಿವರವನ್ನು ಮಹಾಸಭೆಯ ನೋಟಿಸ್‌ನಲ್ಲಿಯೂ ಪ್ರಕಟಿಸಲಾಗಿದೆ. ದಿವಾಕರ್‌ ಎಂಬ ವ್ಯಕ್ತಿಯಿಂದ 3 ಕೋಟಿ 38 ಲಕ್ಷ ರೂ. ಹಗರಣ ನಡೆದಿರುವುದಾಗಿ ಸ್ಪಷ್ಟ ದಾಖಲೆಗಳಿದ್ದರೂ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಫೆಡರೇಷನ್‌ ಅಧ್ಯಕ್ಷರು, ಸದಸ್ಯರು ಇದನ್ನು ನೋಡಿ ಏನು ಮಾಡುತ್ತಿದ್ದಾರೆ? ಈ ಎಲ್ಲದರಲ್ಲಿ ಅವರು ಕೂಡ ಶಾಮಿಲಾಗಿದ್ದಾರೆ ಎಂಬ ಅನುಮಾನ ಮೂಡುವುದು ಸಹಜ”

“ಡೀಸೆಲ್‌ “ಸಬ್ಸಿಡಿಯಲ್ಲಿಯೂ ಗಂಭೀರವಾದ ಹಗರಣ ನಡೆದಿದೆ. ಸಾಮಾನ್ಯವಾಗಿ ಒಂದು ಮೀನುಗಾರಿಕಾ ಬೋಟ್‌ ಗೆ ಒಂದು ತಿಂಗಳಿಗೆ 9,000 ಲೀಟರ್‌—ಅಂದರೆ ದಿನಕ್ಕೆ 300 ಲೀಟರ್‌—ಸಬ್ಸಿಡಿ ನೀಡುವ ವ್ಯವಸ್ಥೆ. ಆದರೆ ಸರ್ಕಾರಿ ವರದಿಯಲ್ಲಿ ಒಂದೇ ಬೋಟ್‌ಗೆ ತಿಂಗಳಿಗೆ 70 ರಿಂದ 80 ಸಾವಿರ ಲೀಟರ್‌ ಡೀಸೆಲ್‌ ಸಬ್ಸಿಡಿ ನೀಡಿರುವ ದಾಖಲಾತಿಗಳು ಕಂಡುಬರುತ್ತಿವೆ. ಇವೆಲ್ಲವನ್ನು ಗಮನಿಸಿದರೆ ಇಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇತ್ತೀಚಿನ ಬೆಳವಣಿಗೆಗಳನ್ನು ನೋಡಿದಾಗ ಮಲ್ಪೆಯ ಜಾಗವನ್ನು ಗುತ್ತಿಗೆಗೆ ನೀಡುವುದು ಮಾತ್ರವಲ್ಲ, ಈ ಸಂಸ್ಥೆಯನ್ನು ಹಿರಿಯ ಮೊಗವೀರರು ಬೆಳೆಸಿ ಇಂದಿನ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಆದರೆ ಇಂದಿನ ದಿನಗಳಲ್ಲಿ ಶಾಸಕರು ಮೊಗವೀರಾ ಸಂಸ್ಥೆಯ ಎರಡೂ ಕಡೆಗಳಲ್ಲಿ ಅಧ್ಯಕ್ಷರು, ಸಂಬಂಧಪಟ್ಟ ಮೀನುಗಾರರ ಸಂಘಗಳಿಗೂ ಇದೇ ಅಧ್ಯಕ್ಷರಾಗಿರುವ ಪರಿಸ್ಥಿತಿಯಲ್ಲಿ ನಮ್ಮ ಉಡುಪಿ ಜಿಲ್ಲೆಗೆ ಶ್ರೇಯಸ್ಸು ಆಗುತ್ತದೆ ಎಂಬ ವಿಶ್ವಾಸ ನನಗಿಲ್ಲ” ಎಂದು ಆತಂಕ ವ್ಯಕ್ತಪಡಿಸಿದರು.

WhatsApp Image 2025 11 19 at 5.14.50 PM
WhatsApp Image 2025 11 19 at 5.14.14 PM
WhatsApp Image 2025 11 19 at 5.17.27 PM

ತಾಕತ್ತಿದ್ದರೆ ಇದನ್ನೂ ಖಂಡಿಸಿ, ಮಲ್ಪೆ ಅಕ್ರಮಗಳ ವಿರುದ್ಧ ದಲಿತ ಮುಖಂಡ ಶೇಖರ್ ಹಾವಂಜೆ ಸವಾಲು
ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಬಂದರು ವ್ಯಾಪ್ತಿಯ 9.50 ಎಕರೆ ಭೂಮಿಯನ್ನು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್‌ಗೆ ಗುತ್ತಿಗೆ ನೀಡಿರುವುದನ್ನು ಹಲವರು ಖಂಡಿಸುತ್ತಿರುವ ಸಂದರ್ಭ, ದಲಿತ ಮುಖಂಡ ಮತ್ತು ಸಾಮಾಜಿಕ ಹೋರಾಟಗಾರ ಶೇಖರ್ ಹಾವಂಜೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸವಾಲು ಹಾಕಿದ್ದಾರೆ.

WhatsApp Image 2025 11 19 at 4.15.19 PM

ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿದ ಅವರು, “ಈ ಭೂಮಿಯನ್ನು ಫೆಡರೇಷನ್‌ಗೆ ನೀಡಿರುವ ವಿಚಾರದ ವಿರುದ್ಧ ನಾನಾ ಪ್ರಜ್ಞಾವಂತರು, ಕೆಲ ರಾಜಕಾರಣಿಗಳು ಜೋರಾಗಿ ಮಾತನಾಡುತ್ತಿದ್ದಾರೆ. ಆದರೆ, ಅದೇ ಮಲ್ಪೆಯಲ್ಲಿ ಮೀನುಗಾರಿಕಾ ಮತ್ತು ಬಂದರು ಇಲಾಖೆಯ ನೂರಾರು ಎಕರೆ ಸರಕಾರಿ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು, ಯಾವುದೇ ಇಲಾಖೆಗಳ ಪರವಾನಿಗೆ ಅಥವಾ ಅನುಮತಿಯಿಲ್ಲದೆ ನಿರ್ಮಿಸಿರುವ ಬೃಹತ್ ಬಹುಮಹಡಿ ವಾಣಿಜ್ಯ ಕಟ್ಟಡಗಳ ಬಗ್ಗೆ ಯಾರೂ ಮಾತಾಡುವುದಿಲ್ಲ” ಎಂದು ಆರೋಪಿಸಿದ್ದಾರೆ.

“ಮಲ್ಪೆ ಫಿಶ್ ಟ್ರೇಡ್ ಸೆಂಟರ್ ಎಂಬ ಹೆಸರಿನಲ್ಲಿ ನಿರ್ಮಿಸಲಾದ ವಾಣಿಜ್ಯ ಕಟ್ಟಡ, ಪಡುಕೆರೆಗೆ ಹೋಗುವ ಮಾರ್ಗದಲ್ಲಿ ಅಯ್ಯಪ್ಪ ಮಂದಿರದ ಹಿಂಭಾಗದಲ್ಲಿ ನಿರ್ಮಿಸಿದ ಮೂರು ಅಂತಸ್ತಿನ ಬೃಹತ್ ವಾಣಿಜ್ಯ ಸಂಕೀರ್ಣ, ಅದೇ ಮಾರ್ಗದಲ್ಲಿ ಜೈ ಸಂತೋಷ್ ಮಾತಾ ಎಂಬ ಹೆಸರಿನ ಇನ್ನೊಂದು ಅಕ್ರಮ ಕಟ್ಟಡ ಸೇರಿದಂತೆ ಅನೇಕ ಅನಧಿಕೃತ ನಿರ್ಮಾಣಗಳು ಸರಕಾರಿ ಭೂಮಿಯಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದು, ಸರ್ಕಾರಕ್ಕೆ ಕೋಟಿಗಟ್ಟಲೆ ನಷ್ಟ ಉಂಟಾಗಿದೆ ಎಂದು ಹೇಳಿದ್ದಾರೆ. ಇಷ್ಟು ದೊಡ್ಡ ಮಟ್ಟದ ಅಕ್ರಮಗಳು ನಡೆದಾಗ ಬಾಯಿ ತೆರೆಯದವರು ಇಂದು ಮಾತ್ರ ಫೆಡರೇಷನ್‌ಗೆ ಭೂಮಿ ನೀಡಿದ ವಿಚಾರವನ್ನು ಹಿಡಿದು ಕೂಗಾಡುತ್ತಿರುವುದು ಜನರನ್ನು ದಾರಿ ತಪ್ಪಿಸುವ ರಾಜಕೀಯ ಆಟವಷ್ಟೆ ಎಂದು ಕಿಡಿಕಾರಿರುವ ಅವರು, ಈ ಅಕ್ರಮಗಳಿಗೆ ಕ್ಷೇತ್ರದ ಶಾಸಕರು ಕೂಡ ಮೌನವಾಗಿರುವುದು ಪ್ರಶ್ನಾರ್ಹ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉಡುಪಿ | ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪೂರಕ ವಾತಾವರಣ ಕಲ್ಪಿಸಿ : ಜಿಲ್ಲಾಧಿಕಾರಿ

“ಮಲ್ಪೆಯ ಅಕ್ರಮ ಫಿಶ್ ಟ್ರೇಡ್ ಸೆಂಟರ್, ಜೈ ಸಂತೋಷ್ ಮಾತಾ ಕಟ್ಟಡ, ಅಯ್ಯಪ್ಪ ಮಂದಿರ ಹಿಂಭಾಗದ ಬಹುಮಹಡಿ ಕಟ್ಟಡ ಮತ್ತು ಇನ್ನಿತರ ಸರಕಾರಿ ಭೂಮಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಮಾತನಾಡುವ ಧೈರ್ಯ ಇದ್ದರೆ ಮಾತನಾಡಿ ನೋಡಲಿ. ಫೆಡರೇಷನ್‌ಗೆ ನೀಡಿದ 9 ಎಕರೆ ಬಗ್ಗೆ ಮಾತ್ರ ಕೂಗಾಡುವ ರಾಜಕೀಯ ನಾಟಕ ಈಗ ಜನತೆಗೆ ತಿಳಿದುಬಂದಿದೆ. ನಿಮಗೆ ತಾಕತ್ತಿದ್ದರೆ ಈ ಅಕ್ರಮಗಳ ಬಗ್ಗೆ ಖಂಡನೆ ಮಾಡಿ. ಇದು ನಿಮ್ಮೆಲ್ಲರಿಗೂ ನನ್ನ ಸವಾಲು” ಎಂದು ಎಚ್ಚರಿಕೆ ನೀಡಿದ್ದಾರೆ.

ಸುಮಾರು 9 ಎಕರೆ ಸರಕಾರಿ ಜಾಗವನ್ನು ದಕ್ಷಿಣ ಕನ್ನಡ–ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್‌ಗೆ ಗುತ್ತಿಗೆ ನೀಡಿರುವ ವಿಷಯ ಸ್ಥಳೀಯರಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳುವರೇ ಕಾದು ನೋಡಬೇಕಿದೆ.

WhatsApp Image 2023 08 22 at 3.23.15 PM
ಶಾರೂಕ್ ತೀರ್ಥಹಳ್ಳಿ
+ posts

ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಶಾರೂಕ್ ತೀರ್ಥಹಳ್ಳಿ
ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...