ಮಲ್ಪೆ ಸೀ ವಾಕ್ ಬಳಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿರುವ ಘಟನೆ ಬುಧವಾರ ನಡೆದಿದೆ.
ಮಲ್ಪೆ ಪೊಲೀಸರು ಸಮಾಜಸೇವಕ ನಿತ್ಯಾನಂದ ಒಳಕಾಡುವರ ನೆರವುಪಡೆದು, ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಟ್ಟಿದ್ದು, ಮೃತನ ವಾರಸುದಾರರು ಮಲ್ಪೆ ಪೋಲಿಸ್ ಠಾಣೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಮಲ್ಪೆ ಪೋಲಿಸ್ ಠಾಣೆಯ ಮುಖ್ಯಆರಕ್ಷಕ ಅನಿಲ್ ಕುಮಾರ್, ನಾಗೇಶ್ ಘಟನಾ ಸ್ಥಳದಲ್ಲಿದ್ದುಕೊಂಡು, ಕಾನೂನು ಪ್ರಕ್ರಿಯೆ ನಡೆಸಿದರು. ಮೃತ ವ್ಯಕ್ತಿ ಮಹೇಶ್ ನಾಯ್ಕ್, ಬಂದರಿನಲ್ಲಿ ಮೀನು ಹೊರುವ ಕೆಲಸಗಾರನೆಂದು ತಿಳಿದು ಬಂದಿದೆ.





