ಉಡುಪಿ | ಪ್ರವೀಣ್ ಪೂಜಾರಿಯನ್ನು ಕೊಂದಾಗ ಉಡುಪಿಯ ಘನತೆಗೆ ಧಕ್ಕೆ ಆಗಿಲ್ವಾ ?

Date:

ಅಂದು ಆದಿ ಉಡುಪಿಯಲ್ಲಿ ದನ ಕದ್ದರೆಂಬ ಕ್ಷುಲ್ಲಕ ಕಾರಣನೀಡಿ ಹಾಜಬ್ಬ ಮತ್ತು ಹಸನಬ್ಬರನ್ನು 2004 ರಲ್ಲಿ ಬೆತ್ತಲೆ ಗೊಳಿಸಿ ಥಳಿಸಿದಾಗಲೇ ಬ್ರಾಂಡ್ ಉಡುಪಿಯ ಘನತೆಗೆ ಧಕ್ಕೆ ಆಗಿದೆ. ಆನಂತರ ಸರಣಿ ಕೋಮುವಾದಿ ಘಟನೆಗಳು ಉಡುಪಿಯ ಘನತೆಯನ್ನು ಹರಾಜು ಹಾಕಿದ್ದಾವೆ, ಸರಿಪಡಿಸಲಾಗದ ಧಕ್ಕೆಯನ್ನುಂಟು ಮಾಡಿದ್ದಾವೆ.
ಕೊಕ್ಕರ್ಣೆ ಪಾದೇ ಮಠದಲ್ಲಿ ತಮ್ಮದೇ ಪಕ್ಷದ ಕಾರ್ಯಕರ್ತ ಪ್ರವೀಣ ಪೂಜಾರಿಯನ್ನು ಟೆಂಪೋದಲ್ಲಿ ದನಗಳನ್ನು ಬಾಡಿಗೆ ಮಾಡುವಾಗ ನಿಮ್ಮದೇ ಪಕ್ಷದ ಕಾರ್ಯಕರ್ತರು ಹೊಡೆದು ಕೊಂದರಲ್ಲಾ ಆಗ ಉಡುಪಿಯ ಘನತೆಗೆ ಧಕ್ಕೆ ಆಗಲಿಲ್ಲವೇ , ಒಂದು ಧರ್ಮದ ಸಂಪ್ರದಾಯ, ಆಚರಣೆಗೆ ಅಡ್ಡಿಪಡಿಸಿ ಹಿಜಾಬ್ ಧರಿಸಿ ಕಾಲೇಜಿಗೆ ಬರುವ ಹಾಗಿಲ್ಲಾ ಎಂದು ಹುಯಿಲೆಬ್ಬಿಸಿ ಇಡೀ ವಿಶ್ವದಲ್ಲೇ ಉಡುಪಿ ತಲೆ ತಗ್ಗಿಸುವಂತೆ ಮಾಡಿ, ಆ ವಿದ್ಯಾರ್ಥಿಗಳ ಭವಿಷ್ಯಕ್ಕೇ ಕೊಳ್ಳಿ ಇಟ್ಟೀರಲ್ಲಾ ಆಗ ಉಡುಪಿಯ ಘನತೆಗೆ ಧಕ್ಕೆ ಆಗಲಿಲ್ಲವೇ? ಮೊನ್ನೆ ಮೊನ್ನೆಯಷ್ಟೇ ಮೀನು ಕದ್ದರೆಂಬ ಸಣ್ಣ ಕಾರಣಕ್ಕೆ ಒಬ್ಬ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿ ಸಾರ್ವಜನಿಕವಾಗಿ ವಿಡಿಯೋ ಮಾಡುತ್ತಾ ಹೊಡೆದರಲ್ಲಾ ಆಗ ಉಡುಪಿಯ ಘನತೆಗೆ ಧಕ್ಕೆ ಬರಲಿಲ್ಲವೇ? ಅದೂ ಇರಲೀ ಒಬ್ಬ ಜನ ಪ್ರತಿನಿಧಿಯಾಗಿ ಅದೇ ಹಲ್ಲೆಗೊಳಗಾದ ಮಹಿಳೆಯನ್ನು ಕೇಸ್ ವಾಪಾಸು ಪಡೆಯುವಂತೆ ಒತ್ತಾಯಿಸಿ ಇಡೀ ಸಮೂದಾಯವನ್ನೇ ಎತ್ತಿಕಟ್ಟಿ ಉಡುಪಿ ಜಿಲ್ಲಾಧಿಕಾರಿಯವರ ಕಛೇರಿ ಎದುರು ಮೆರವಣಿಗೆ ನಡೆಸಿ ಸಂತ್ರಸ್ತ ಮಹಿಳೆಯಿಂದಲೇ ಕೇಸು ವಾಪಾಸು ಪಡೆಯುವ ಮನವಿ ಕೊಡಿಸಿದಿರಲ್ಲಾ ಆಗ ಅಷ್ಟ ಮಠಗಳ ತವರೂರಾದಾ ಕನಕದಾಸರ ಭಕ್ತಿಗೆ ಮೆಚ್ಚಿ ತಿರುಗಿ ನಿಂತ ಕ್ರಷ್ಣ ನೆಲೆನಿಂತಿರುವ ಉಡುಪಿಯ ಘನತೆಗೆ ಧಕ್ಕೆ ಆಗಲಿಲ್ಲವೇ. ಈಗ ಹೇಳಿ ಉಡುಪಿಯ ಘನತೆಗೆ ಧಕ್ಕೆ ತಂದವರು ಯಾರು? ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇದರ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿಯವರು ಪ್ರಶ್ನಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...