ಉಡುಪಿ | ಪ್ರಿಯಕರನ ಮೋಸದ ಬಲೆಗೆ ಸಿಕ್ಕಿ ಗರ್ಭಿಣಿಯಾದ ಯುವತಿ — ಮಗು ಹೆಡೆದು ದತ್ತು ಕೇಂದ್ರಕ್ಕೆ ಒಪ್ಪಿಸಿದ ಸಂತ್ರಸ್ತೆ

Date:

ಪ್ರೀತಿ ಪ್ರೇಮದ ಬಲೆಗೆ ಬಿದ್ದು ಗರ್ಭಿಣಿಯಾದ ಯುವತಿಗೆ ಸಾಂತ್ವನ ಕೇಂದ್ರದ ಮೂಲಕ ಸೂಕ್ತ ಮಾರ್ಗದರ್ಶನ ನೀಡಿ ಆಕೆಯ ಬದುಕು ದುರಂತವಾಗುವುದನ್ನು ಸಮಾಜ ಸೇವಕ ವಿಶು ಶೆಟ್ಟಿ ತಪ್ಪಿಸಿದ ಘಟನೆ ನಡೆದಿದೆ.
ಹೊರ ರಾಜ್ಯದ ಮಹಾ ನಗರವೊಂದರಲ್ಲಿ ಉದ್ಯೋಗಸ್ಥೆಯಾಗಿದ್ದ ಯುವತಿಗೆ ಪ್ರಿಯಕರ ಗರ್ಭಿಣಿಯಾಗಿಸಿ ಕೈಕೊಟ್ಟಿದ್ದ. ಮದುವೆಯಾಗದೆ ಗರ್ಭಿಣಿಯಾಗಿರುವುದು ಒಂದೆಡೆಯಾದರೆ, ಸಮಾಜಕ್ಕೆ ಹಾಗೂ ತನ್ನ ಹೆತ್ತವರಿಗೆ ವಿಷಯ ತಿಳಿದರೆ ದೊಡ್ಡ ರಾದ್ಧಾಂತವೇ ನಡೆದೀತು ಎಂದು ಯುವತಿ ತೀರಾ ಆತಂಕಕ್ಕೆ ಒಳಗಾಗಿದ್ದಳು. ತನಗಾದ ಮೋಸವನ್ನು ಯಾರಿಗೂ ತಿಳಿಸಲಾಗದೆ ಒದ್ದಾಡುತ್ತಿದ್ದಳು.

ಈ ಸಂದರ್ಭದಲ್ಲಿ ಸಂಪರ್ಕಕ್ಕೆ ಬಂದ ಆಪತ್ಭಾಂಧವ ವಿಶು ಶೆಟ್ಟಿ ಅಂಬಲಪಾಡಿ ಅವರು ಸಾಂತ್ವನ ಕೇಂದ್ರದ ಮೂಲಕ ಯುವತಿಯೊಡನೆ ಸಮಾಲೋಚಿಸಿ ಆಕೆಗೆ ಧೈರ್ಯ ತುಂಬಿ ಸಂಭವನೀಯ ದುರಂತವನ್ನು ತಪ್ಪಿಸಿದ್ದಾರೆ. ಸುಮಾರು ಒಂದು ತಿಂಗಳ ಕಾಲ ಆಕೆಗೆ ಆಶ್ರಯ ಒದಗಿಸಿ ಆಸ್ಪತ್ರೆಯೊಂದರಲ್ಲಿ ಹೆರಿಗೆಯಾಗುವಂತೆ ವ್ಯವಸ್ಥೆ ಮಾಡಿದ್ದಾರೆ. ಯುವತಿ ಕೊನೆಗೆ ತಾನು ಹೆತ್ತ ಮಗುವನ್ನು ನೋಂದಾಯಿತ ದತ್ತು ಕೇಂದ್ರವೊಂದಕ್ಕೆ ನೀಡಿದ್ದಾಳೆ.

ತನ್ನ ಕರುಳ ಕುಡಿಯನ್ನು ಕೇಂದ್ರಕ್ಕೆ ಒಪ್ಪಿಸುವ ಸಂದರ್ಭದಲ್ಲಿ ಆ ಯುವತಿಯ ದು:ಖ, ಸಂಕಟ ಹೇಳತೀರದಾಗಿತ್ತು. ಇಂದಿನ ಪ್ರಜ್ಞಾವಂತ ಯುವತಿಯರು ಮೋಹದ ಬಲೆಗೆ ಬಿದ್ದು ಮೋಸ ಹೋಗಬಾರದು. ಯಾವುದೇ ಕಾರಣಕ್ಕೂ ಪ್ರೀತಿ ಪ್ರೇಮದ ಹೆಸರಲ್ಲಿ ದೈಹಿಕ ಸಂಬಂಧಕ್ಕೆ ಮುಂದಾಗಬಾರದು. ಇಲ್ಲಿ ಎಡವಟ್ಟಾದರೆ ಅದರ ಪರಿಣಾಮವನ್ನು ಯುವಕನಿಗಿಂತಲೂ ಯುವತಿಯರೇ ಹೆಚ್ಚು ಅನುಭವಿಸಬೇಕಾಗುತ್ತದೆ. ಈ ಪ್ರಕರಣದಲ್ಲೂ ಇದೇ ಆಗಿದೆ. ಪ್ರಸ್ತುತ ಈ ಪ್ರಕರಣದಲ್ಲಿ ಸಂತ್ರಸ್ತೆಯ ಬಾಳು ದುರಂತವಾಗುವ ಅಪಾಯವಿತ್ತು. ಗರ್ಭಿಣಿಯಾಗಿದ್ದ ಆಕೆಗೆ ಧೈರ್ಯ ತುಂಬಿ ಹೆರಿಗೆ ಆಗುವಂತೆ ನೋಡಿಕೊಳ್ಳಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಗುವಿಗೆ ಜನ್ಮ ನೀಡಿ 10 ದಿನ ಮಗವಿನೊಂದಿಗೆ ಇದ್ದು, ನಂತರ ಕಾನೂನು ಪ್ರಕಾರ ದತ್ತು ಕೊಡುವ ಪ್ರಕ್ರಿಯೆ ನಡೆಸಲಾಗಿದೆ. ಮಗುವನ್ನು ದತ್ತುಕೇಂದ್ರಕ್ಕೆ ನೀಡುವಾಗ ಮಗುವಿನ ಮೇಲಿನ ಮೋಹದಿಂದ ಆಕೆಯ ಅಳು, ದು:ಖವನ್ನು ಕಂಡಾಗ ಎಂತಹವರಿಗೂ ಈ ಪರಿಸ್ಥಿತಿ ಬರಬಾರದು ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.

ಮರ್ಯಾದೆಗೆ ಅಂಜಿ ಯುವತಿ ತನಗೆ ಮೋಸ ಮಾಡಿ ತನ್ನನ್ನು ಈ ದುರಂತ ಸ್ಥಿತಿಗೆ ದೂಡಿದ ಪ್ರಿಯಕರನ ವಿರುದ್ಧ ಪೊಲೀಸರಿಗೆ ದೂರು ಕೂಡಾ ನೀಡಿಲ್ಲ. ಅಲ್ಲದೆ ಈ ವಿಷಯವನ್ನು ಹೆತ್ತವರಿಗೂ ಹೇಳಲು ಕೂಡಾ ಆಕೆಗೆ ಸಾಧ್ಯವಾಗಿಲ್ಲ. ಸಮಾಜಕ್ಕೆ ಈ ವಿಷಯ ಗೊತ್ತಾದರೆ ತನ್ನ ಭವಿಷ್ಯ ಎನಾಗಬಹುದು ? ತನ್ನ ಕುಟುಂಬದ ಮರ್ಯಾದೆ ಬೀದಿ ಪಾಲಾಗುತ್ತದೆ ಅಲ್ಲದೆ ಅವಮಾನ ತಾಳಲಾರದೆ ಹೆತ್ತವರು ಆತ್ಮಹತ್ಯೆಗೆ ಕೂಡಾ ಶರಣಾಗ ಬಹುದು ಎಂಬ ಚಿಂತೆಯೇ ಆಕೆಯನ್ನು ಅಧೀರಳನ್ನಾಗಿಸಿತ್ತು.

ಈ ಬಗ್ಗೆ ಮಾಧ್ಯಮದ ಜೊತೆ ಅನುಭವ ಹಂಚಿಕೊಂಡ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ತಪ್ಪು ಯಾರದ್ದೇ ಇರಲಿ. ನೋವು ಅನುಭವಿಸುವುದು ಹೆಣ್ಣೇ. ತಾನು ಹೆತ್ತ ಮಗುವನ್ನು ದತ್ತು ಕೇಂದ್ರಕ್ಕೆ ನೀಡುವಾಗ ಆಕೆ ಅನುಭವಿಸಿದ ಆ ಸಂಕಟ, ದು:ಖವನ್ನು ಇಲ್ಲಿ ವಿವರಿಸಲು ಸಾಧ್ಯವಿಲ್ಲ. ಮಗುವನ್ನು ಕಳೆದುಕೊಂಡ ನೋವು ಜೀವನವಿಡೀ ಕಾಡುವಂತಹುದು. ಆದ್ದರಿಂದ ಹೆಣ್ಮಕ್ಕಳು ಜಾಗರೂಕರಾಗಿರಬೇಕು. ಮದುವೆಯ ಮುಂಚೆ ಯಾವುದೇ ಕಾರಣಕ್ಕೂ ದೈಹಿಕ ಸಂಬಂಧ ಬೆಳೆಸಬೇಡಿ. ತಂದೆ ತಾಯಂದಿರು ಕೂಡಾ ದೂರದ ಊರಲ್ಲಿ ತಮ್ಮ ಮಗಳು ಉದ್ಯೋಗದಲ್ಲಿದ್ದಾಳೆ, ಆಕೆ ಕಳುಹಿಸಿದ ಹಣವನ್ನು ಪಡೆದುಕೊಂಡು ಸುಮ್ಮನಿರುವುದಲ್ಲ. ಆಕೆಯ ಬದುಕು ಅಲ್ಲಿ ಹೇಗೆ ನಡೆಯುತ್ತಿದೆ ಎಂಬ ಬಗ್ಗೆಯೂ ನಿಗಾ ಇರಿಸಬೇಕು. ಇಲ್ಲವಾದಲ್ಲಿ ಇಂತಹ ದುರಂತಗಳು ಸಂಭವಿಸುತ್ತವೆ. ಈ ಪ್ರಕರಣದಲ್ಲಿ ಯುವತಿಯ ಭವಿಷ್ಯದ ದೃಷ್ಟಿಯಿಂದ ಆಕೆಯ ಮಾನಕ್ಕೆ ಕುಂದು ಬಾರದಂತೆ ಗೌಪ್ಯವಾಗಿ ಕಾನೂನು ಪ್ರಕ್ರಿಯೆ ನಡೆಸಲಾಗಿದೆ. ಓರ್ವ ಸಹೋದರನಾಗಿ ಆಕೆಯ ಸಂಕಷ್ಟಕ್ಕೆ ನೆರವಾಗಿದ್ದೇನೆ. ಇಲ್ಲಿ ಸಾಂತ್ವನ ಕೇಂದ್ರದ ಸಿಬಂದಿಗಳ ನೆರವು ಸ್ಮರಣೀಯ ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...