ಉಡುಪಿ | ಮನೆಯ ಮೇಲೆ ಬಿದ್ದ ಬೃಹತ್ ಆಲದ ಮರ, ದಂಪತಿಗಳಿಗೆ ಗಾಯ

Date:

ಉಡುಪಿಯಲ್ಲಿ ಇಂದು ಸಂಜೆ ಬೀಸಿದ ವೇಗದ ಗಾಳಿಗೆ ಬೃಹ‌ತ್ತಾದ ಆಲದಮರವೊಂದು, ಮನೆಯ ಮೇಲೆ ಉರುಳಿಬಿದ್ದ ಘಟನೆ ಕಡಿಯಾಳಿ ಕಟ್ಟೆ ಆಚಾರ್ಯ ಮಾರ್ಗ, ಡಾ. ವಿ.ಎಸ್.‌ಆಚಾರ್ಯ ಮನೆಯ‌ ಸನಿಹ ನಡೆದಿದೆ.

ಮನೆಯೊಳಗೆ‌‌ ಸಿಲುಕಿ ಕೊಂಡಿರುವ ದಂಪತಿಗಳನ್ನು ಸಮಾಜಸೇವಕ ನಿತ್ಯಾನಂದ‌ ಒಳಕಾಡುವರು ಸ್ಥಳೀಯರ ಸಹಕಾರದಿಂದ ಹೊರ ತೆಗೆದಿದ್ದಾರೆ. ಇರ್ವರಿಗೂ ಗಂಭೀರ ಸ್ವರೂಪದ ಗಾಯಗಳಾರುವುದರಿಂದ ಖಾಸಗಿ ಆಸ್ಪತ್ರೆಗೆ ದಾಖಲುಪಡಿಸಿದ್ದಾರೆ.

ಬಾಣಸಿಗ ರಾಘವೇಂದ್ರ‌ ಭಟ್ (60ವ) ಪತ್ನಿ ನೀರಜಾ ಭಟ್ (49ವ) ಗಾಯಾಳುಗಳಾಗಿದ್ದಾರೆ. ಮನೆ ಸಂಪೂರ್ಣ ಜಖಂಗೊಂಡಿದ್ದು, ಅಪಾರ‌ ನಷ್ಟ ಸಂಭವಿಸಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು, ಮರ ಕಡಿದು ರಸ್ತೆ ಸಂಚಾರವನ್ನು ಸಂಗಮಗೊಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...